ಟಿ20 ವಿಶ್ವಕಪ್‌ಗೆ ಭಾರತದ ಈ 5 ನಗರಗಳ ಆತಿಥ್ಯ; ಫೈನಲ್ ಪಂದ್ಯಕ್ಕೂ ಸ್ಥಳ ನಿಗದಿ
2026 T20 World Cup host cities 2026ರ ಪುರುಷರ ಟಿ20 ವಿಶ್ವಕಪ್‌ಗೆ ಭಾರತ ಹಾಗೂ ಶ್ರೀಲಂಕಾ ಆತಿಥ್ಯ ವಹಿಸಲಿವೆ. ಭಾರತದಲ್ಲಿ ಅಹಮದಾಬಾದ್, ದೆಹಲಿ, ಕೋಲ್ಕತ್ತಾ, ಚೆನ್ನೈ, ಮುಂಬೈ ಸೇರಿದಂತೆ 5 ನಗರಗಳು ಪಂದ್ಯಗಳಿಗೆ ಆತಿಥ್ಯ ನೀಡಲಿವೆ. ಶ್ರೀಲಂಕಾದಲ್ಲಿ 3 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. ಭಾರತ-ಪಾಕಿಸ್ತಾನ ಪಂದ್ಯವು ಶ್ರೀಲಂಕಾದ ತಟಸ್ಥ ಸ್ಥಳದಲ್ಲಿ ನಡೆಯಲಿದೆ. ಐಸಿಸಿ ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟವಾಗಲಿದೆ.

10 ನೇ ಆವೃತ್ತಿಯ ಪುರುಷರ ಟಿ20 ವಿಶ್ವಕಪ್ ( T20 World Cup 2026) ಮುಂದಿನ ವರ್ಷ ಅಂದರೆ 2026 ರಲ್ಲಿ ಭಾರತ ಹಾಗೂ ಶ್ರೀಲಂಕಾದ ( India-Sri Lanka ) ಆತಿಥ್ಯದಲ್ಲಿ ನಡೆಯಲಿದೆ. ಈ ಪಂದ್ಯಾವಳಿಗೆ ಇನ್ನು ವೇಳಾಪಟ್ಟಿ ಪ್ರಕಟವಾಗಿಲ್ಲದಿದ್ದರೂ, ಇಷ್ಟರಲ್ಲೇ ಐಸಿಸಿ (ICC) ವೇಳಾಪಟ್ಟಿಯನ್ನು ಬಹಿರಂಗಪಡಿಸಲಾಗಿದೆ. ಆದಾಗ್ಯೂ ಈ ಪಂದ್ಯಾವಳಿಗೆ ಭಾರತದ ಯಾವ ನಗರಗಳು ಆತಿಥ್ಯವಹಿಸಲಿವೆ ಎಂಬುದನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ವರದಿಯ ಪ್ರಕಾರ 2026 ರ ಟಿ20 ವಿಶ್ವಕಪ್ ಪಂದ್ಯಗಳು ಭಾರತದ ಐದು ನಗರಗಳಲ್ಲಿ ನಡೆಯಲಿವೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಬಿಸಿಸಿಐ ಅಧಿಕಾರಿಗಳು ಈ ಬಗ್ಗೆ ಸಭೆ ನಡೆಸಿದ್ದು, ಇದರಲ್ಲಿ 2023 ರ ಏಕದಿನ ವಿಶ್ವಕಪ್‌ಗಿಂತ ಕಡಿಮೆ ನಗರಗಳಲ್ಲಿ 2026 ರ ಟಿ20 ವಿಶ್ವಕಪ್ ಅನ್ನು ಆಯೋಜಿಸಲು ನಿರ್ಧರಿಸಲಾಗಿದೆ.
5 ನಗರಗಳಲ್ಲಿ ಪಂದ್ಯಗಳು
ವರದಿಯ ಪ್ರಕಾರ ಆತಿಥ್ಯವಹಿಸುತ್ತಿರುವ 5 ನಗರಗಳ ಪ್ರತಿ ಸ್ಥಳದಲ್ಲಿಯೂ ಆರು ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ. ಹಾಗೆಯೇ ಭಾರತದ ಐದು ನಗರಗಳಾದ ಅಹಮದಾಬಾದ್, ದೆಹಲಿ, ಕೋಲ್ಕತ್ತಾ, ಚೆನ್ನೈ ಮತ್ತು ಮುಂಬೈ ಟಿ20 ವಿಶ್ವಕಪ್‌ಗೆ ಆತಿಥ್ಯವಹಿಸಲು ಶಾರ್ಟ್‌ಲಿಸ್ಟ್ ಮಾಡಲಾಗಿದೆ.
ಶ್ರೀಲಂಕಾದ 3 ಸ್ಥಳಗಳಲ್ಲಿ ಪಂದ್ಯಗಳು
ಭಾರತದ ಜೊತೆಗೆ, ಶ್ರೀಲಂಕಾ ಕೂಡ 2026 ರ ಟಿ20 ವಿಶ್ವಕಪ್ ಆಯೋಜಕತ್ವದ ಹಕ್ಕು ಪಡೆದುಕೊಂಡಿದೆ. ಅದರಂತೆ ಶ್ರೀಲಂಕಾದ ಮೂರು ಕ್ರೀಡಾಂಗಣಗಳು ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುತ್ತವೆ ಎಂದು ನಂಬಲಾಗಿದೆ. ಆದಾಗ್ಯೂ, ಯಾವ ಮೂರು ಸ್ಥಳಗಳು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಸ್ಥಳಗಳಿಗೆ ಆಯೋಜಕತ್ವದ ಹಕ್ಕಿಲ್ಲ
ವರದಿ ಪ್ರಕಾರ, 2023 ರ ಏಕದಿನ ವಿಶ್ವಕಪ್‌ಗೆ ಆತಿಥ್ಯ ನೀಡಿದ್ದ ಧರ್ಮಶಾಲಾ, ಪುಣೆ, ಬೆಂಗಳೂರು ಮತ್ತು ಲಕ್ನೋ ಹಾಗೆಯೇ ಇತ್ತೀಚೆಗೆ 2025 ರ ಮಹಿಳಾ ಏಕದಿನ ವಿಶ್ವಕಪ್ ಅನ್ನು ಆಯೋಜಿಸಿದ್ದ ಸ್ಥಳಗಳಾದ ಗುವಾಹಟಿ, ವಿಶಾಖಪಟ್ಟಣಂ, ಇಂದೋರ್ ಮತ್ತು ನವಿ ಮುಂಬೈನಲ್ಲಿ 2026 ರ ಟಿ20 ವಿಶ್ವಕಪ್ ನಡೆಸದಿರಲು ಬಿಸಿಸಿಐ ತೀರ್ಮಾನಿಸಿದೆ.
ವಿಶ್ವಕಪ್ ಮುಗಿದ ಬೆನ್ನಲ್ಲೇ 8 ಲೆಜೆಂಡರಿ ಆಟಗಾರ್ತಿಯರ ವೃತ್ತಿ ಬದುಕಿಗೆ ಫುಲ್ ಸ್ಟಾಪ್
ತಟಸ್ಥ ಸ್ಥಳದಲ್ಲಿ ಭಾರತ- ಪಾಕ್ ಪಂದ್ಯ
ಈ ಮುಂಚೆಯೇ ಆಗಿರುವ ಒಪ್ಪಂದದ ಪ್ರಕಾರ ಟಿ20 ವಿಶ್ವಕಪ್ ಆಡಲು ಪಾಕಿಸ್ತಾನ ತಂಡ ಭಾರತಕ್ಕೆ ಬರುವುದಿಲ್ಲ. ಹೀಗಾಗಿ ಉಭಯ ತಂಡಗಳ ಈ ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ. ಒಂದು ವೇಳೆ ಪಾಕಿಸ್ತಾನ ತಂಡ ನಾಕೌಟ್ ಸುತ್ತಿಗೆ ಅಂದರೆ ಸೆಮಿಫೈನಲ್ ಹಾಗೂ ಫೈನಲ್ಗೆ ಅರ್ಹತೆ ಪಡೆದರೆ, ಆ ಪಂದ್ಯಗಳನ್ನು ಸಹ ಶ್ರೀಲಂಕಾದಲ್ಲಿ ನಡೆಸಲಾಗುವುದು. ಈಗಾಗಲೇ ಈ ಟೂರ್ನಿಗೆ 20 ತಂಡಗಳು ಅರ್ಹತೆ ಪಡೆದಿದ್ದು, ಈ ಪಂದ್ಯಾವಳಿಯು ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Thu, 6 November 25
