Team India: ಟೀಮ್ ಇಂಡಿಯಾಗೆ ಮತ್ತಿಬ್ಬರು ಆಟಗಾರರ ಆಯ್ಕೆ

| Updated By: ಝಾಹಿರ್ ಯೂಸುಫ್

Updated on: Jul 26, 2021 | 3:15 PM

ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್)

Team India: ಟೀಮ್ ಇಂಡಿಯಾಗೆ ಮತ್ತಿಬ್ಬರು ಆಟಗಾರರ ಆಯ್ಕೆ
Team India
Follow us on

ಆಗಸ್ಟ್ 4 ರಿಂದ ಇಂಗ್ಲೆಂಡ್​ ವಿರುದ್ದ ಶುರುವಾಗಲಿರುವ ಟೆಸ್ಟ್​ ಸರಣಿಗೂ ಮುನ್ನ ಟೀಮ್ ಇಂಡಿಯಾದ ಮೂವರು ಆಟಗಾರರು ಗಾಯಗೊಂಡಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಬೆನ್ನಲ್ಲೇ ಆರಂಭಿಕ ಆಟಗಾರ ಶುಭ್​ಮನ್​ ಗಿಲ್ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದರು. ಆ ಬಳಿಕ ಅಭ್ಯಾಸ ಪಂದ್ಯದ ವೇಳೆ ಆಲ್​ರೌಂಡರ್ ವಾಷಿಂಗ್ಟನ್ ಸುಂದರ್ ಹಾಗೂ ಹೆಚ್ಚುವರಿ ಬೌಲರ್ ಅವೇಶ್ ಖಾನ್ ಬೆರಳಿಗೆ ಗಾಯ ಮಾಡಿಕೊಂಡು ಸರಣಿಯಿಂದ ಹೊರಗುಳಿದಿದ್ದರು. ಹೀಗಾಗಿ ಇವರ ಸ್ಥಾನದಲ್ಲಿ ಬದಲಿ ಆಟಗಾರರನ್ನು ಕಳುಹಿಸಿ ಕೊಡುವಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಬಿಸಿಸಿಐಗೆ ಮನವಿ ಸಲ್ಲಿಸಿತು.

ಈ ಮನವಿ ಸ್ಪಂದಿಸಿರುವ ಬಿಸಿಸಿಐ ಇದೀಗ ಇಂಗ್ಲೆಂಡ್​ ವಿರುದ್ದದ 5 ಪಂದ್ಯಗಳ ಸರಣಿಗಾಗಿ ಮತ್ತಿಬ್ಬರು ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಶ್ರೀಲಂಕಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆಟಗಾರರಾದ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್ ಶೀಘ್ರದಲ್ಲೇ ಇಂಗ್ಲೆಂಡ್​ನತ್ತ ಪ್ರಯಾಣ ಬೆಳೆಸಲಿದ್ದಾರೆ. ಹಾಗೆಯೇ ಹೆಚ್ಚುವರಿ ಆಟಗಾರನಾಗಿ ಇಂಗ್ಲೆಂಡ್​ನಲ್ಲಿದ್ದ ಅಭಿಮನ್ಯು ಈಶ್ವರನ್​ ಅವರನ್ನು ಕೂಡ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ತಂಡದಿಂದ ಹೊರಬಿದ್ದಿದ್ದ ವಾಷಿಂಗ್ಟನ್ ಸುಂದರ್, ಶುಭ್​ಮನ್ ಗಿಲ್ ಹಾಗೂ ಅವೇಶ್ ಖಾನ್ ಸ್ಥಾನದಲ್ಲಿ ಟೀಮ್ ಇಂಡಿಯಾದಲ್ಲಿ ಪೃಥ್ವಿ ಶಾ, ಸೂರ್ಯಕುಮಾರ್ ಹಾಗೂ ಅಭಿಮನ್ಯು ಈಶ್ವರನ್ ಸ್ಥಾನ ಪಡೆದಿದ್ದಾರೆ.

ಭಾರತ-ಶ್ರೀಲಂಕಾ ನಡುವಣ ಟಿ20 ಸರಣಿ ಜುಲೈ 29ಕ್ಕೆ ಮುಕ್ತಾಯವಾಗಲಿದ್ದು, ಆ ಬಳಿಕ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್​ನತ್ತ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ. ಇಂಗ್ಲೆಂಡ್​ನಲ್ಲಿ ಒಂದು ವಾರಗಳ ಕ್ವಾರಂಟೈನ್ ಇರಲಿದ್ದು, ಈ ಇಬ್ಬರು ಆಟಗಾರರು 2ನೇ ಪಂದ್ಯದ ವೇಳೆಗೆ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

ಭಾರತ-ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ಆಗಸ್ಟ್ 4 ರಿಂದ ಪ್ರಾರಂಭವಾಗಲಿದೆ. 2ನೇ ಟೆಸ್ಟ್ ಪಂದ್ಯವು ಆಗಸ್ಟ್ 12 ರಿಂದ 16ರವರೆಗೆ ನಡೆಯಲಿದೆ. ಹಾಗೆಯೇ ಮೂರನೇ ಪಂದ್ಯವು 25 ರಿಂದ ಪ್ರಾರಂಭವಾಗಲಿದ್ದು, 4ನೇ ಟೆಸ್ಟ್​ ಸೆಪ್ಟೆಂಬರ್ 2 ಕ್ಕೆ ಶುರುವಾಗಿ ಸೆ.6 ರವರೆಗೆ ನಡೆಯಲಿದೆ. ಇನ್ನು ಅಂತಿಮ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 10 ರಿಂದ ಸೆ.14ರವರೆಗೆ ಜರುಗಲಿದೆ.

ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್, ಕೆ.ಎಲ್. ರಾಹುಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್

ಹೆಚ್ಚುವರಿ ಆಟಗಾರರು: ಪ್ರಸಿದ್ಧ್ ಕೃಷ್ಣ, ಅರ್ಝಾನ್ ನಾಗ್ವಾಸ್ವಾಲಾ

ಇದನ್ನೂ ಓದಿ: ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಭುವನೇಶ್ವರ್ ಆಯ್ಕೆಯಾಗದಿರಲು ಇದುವೇ ಅಸಲಿ ಕಾರಣ

ಇದನ್ನೂ ಓದಿ: ಕೊಹ್ಲಿ ಪಡೆಯ ಎದುರಾಳಿಗಳು ಯಾರು? ಇಲ್ಲಿದೆ RCBಯ ಸಂಪೂರ್ಣ ವೇಳಾಪಟ್ಟಿ

(Team India replacement updates Tour of England)