AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Team India: ಹೊಸ ವರ್ಷದಲ್ಲಿ ಟೀಮ್ ಇಂಡಿಯಾ ಮುಂದಿದೆ 2 ಬಿಗ್ ಟಾರ್ಗೆಟ್

Team India: ಈ ವರ್ಷ ಟೀಮ್ ಇಂಡಿಯಾ ಮುಂದಿರುವ ದೊಡ್ಡ ಗುರಿಯೆಂದರೆ ಏಕದಿನ ವಿಶ್ವಕಪ್. ಅಕ್ಟೋಬರ್​ನಲ್ಲಿ ಭಾರತದಲ್ಲಿ ನಡೆಯಲಿರುವ ಈ ವಿಶ್ವಕಪ್​ ಅನ್ನು ಗೆಲ್ಲುವ ಮೂಲಕ 3ನೇ ಬಾರಿ ಏಕದಿನ ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ.

Team India: ಹೊಸ ವರ್ಷದಲ್ಲಿ ಟೀಮ್ ಇಂಡಿಯಾ ಮುಂದಿದೆ 2 ಬಿಗ್ ಟಾರ್ಗೆಟ್
Team India
TV9 Web
| Edited By: |

Updated on: Jan 01, 2023 | 7:31 PM

Share

ಭಾರತ ತಂಡ (Indian Team) ಐಸಿಸಿ (ICC) ಟ್ರೋಫಿ  ಗೆದ್ದು ಬರೋಬ್ಬರಿ 9 ವರ್ಷಗಳು ಕಳೆದಿವೆ. 2013 ರಲ್ಲಿ ಕೊನೆಯ ಬಾರಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದ ಟೀಮ್ ಇಂಡಿಯಾ (Team India) ಆ ಬಳಿಕ ಐಸಿಸಿ ಪ್ರಶಸ್ತಿಗೆ ಮುತ್ತಿಕ್ಕಿಲ್ಲ. ಅದರಲ್ಲೂ ಕಳೆದ ಎರಡು ವರ್ಷಗಳಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಟಿ20 ವಿಶ್ವಕಪ್ ಆಡಿದರೂ ಪ್ರಶಸ್ತಿ ಕನಸು ಮಾತ್ರ ಕನಸಾಗಿಯೇ ಉಳಿಯಿತು. ಇದೀಗ ಹೊಸ ವರ್ಷದೊಂದಿಗೆ ಹೊಸ ಅಭಿಯಾನ ಆರಂಭಿಸಲಿರುವ ಟೀಮ್ ಇಂಡಿಯಾ ಮುಂದೆ ಎರಡು ಐಸಿಸಿ ಟೂರ್ನಿಗಳಿವೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್:

ಇಂಗ್ಲೆಂಡ್​ನ ಓವಲ್​ ಮೈದಾನದಲ್ಲಿ ಜೂನ್ ತಿಂಗಳಲ್ಲಿ ವಿಶ್ವ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ನಡೆಯಲಿದೆ. ಈಗಾಗಲೇ ಆಸ್ಟ್ರೇಲಿಯಾ ತಂಡವು ಫೈನಲ್ ಪ್ರವೇಶಿಸಿದ್ದು, ಇದೀಗ 2ನೇ ಫೈನಲಿಸ್ಟ್​ ಆಗುವ ಅವಕಾಶ ಟೀಮ್ ಇಂಡಿಯಾ ಮುಂದಿದೆ. ಅಂದರೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಪಾಯಿಂಟ್ ಟೇಬಲ್​ನಲ್ಲಿ ಭಾರತ ತಂಡವು 2ನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯನ್ನು 4-0,3-1 ಅಥವಾ 3-0 ಅಂತರದಿಂದ ಗೆದ್ದುಕೊಂಡರೆ ಟೀಮ್ ಇಂಡಿಯಾ ಫೈನಲ್​ಗೇರಲಿದೆ. ಈ ಮೂಲಕ 2023 ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಗೆದ್ದು ಟೀಮ್ ಇಂಡಿಯಾ ಐಸಿಸಿ ಟ್ರೋಫಿಯ ಬರ ನೀಗಿಸುವ ವಿಶ್ವಾಸದಲ್ಲಿದೆ.

ಇದನ್ನೂ ಓದಿ
Image
IPL 2023: 2 ದೇಶಗಳಿಂದ ಐಪಿಎಲ್​ಗೆ ಆಯ್ಕೆಯಾದ ಏಕೈಕ ಕ್ರಿಕೆಟಿಗ
Image
IPL 2023: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…
Image
IPL 2023: ಐಪಿಎಲ್​ಗೆ ನಮೀಬಿಯಾ, ಐರ್ಲೆಂಡ್, ಜಿಂಬಾಬ್ವೆ ಆಟಗಾರರು ಎಂಟ್ರಿ
Image
IPL 2023 RCB Team: RCB ಹೊಸ ತಂಡ ಹೀಗಿದೆ

ಏಕದಿನ ವಿಶ್ವಕಪ್:

ಈ ವರ್ಷ ಟೀಮ್ ಇಂಡಿಯಾ ಮುಂದಿರುವ ದೊಡ್ಡ ಗುರಿಯೆಂದರೆ ಏಕದಿನ ವಿಶ್ವಕಪ್. ಅಕ್ಟೋಬರ್​ನಲ್ಲಿ ಭಾರತದಲ್ಲಿ ನಡೆಯಲಿರುವ ಈ ವಿಶ್ವಕಪ್​ ಅನ್ನು ಗೆಲ್ಲುವ ಮೂಲಕ 3ನೇ ಬಾರಿ ಏಕದಿನ ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ. ಕೊನೆಯ ಬಾರಿ ಭಾರತ ತಂಡವು 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ವಿಶೇಷ ಎಂದರೆ ಅಂದು ಭಾರತದಲ್ಲೇ ಟೂರ್ನಿ ನಡೆದಿತ್ತು. ಇದೀಗ 11 ವರ್ಷಗಳ ಬಳಿಕ ಮತ್ತೊಮ್ಮೆ ಬಿಸಿಸಿಐ ಏಕದಿನ ವಿಶ್ವಕಪ್ ಆಯೋಜಿಸುತ್ತಿದೆ. ಹೀಗಾಗಿಯೇ ಈ ಬಾರಿಯ ವಿಶ್ವಕಪ್​ ಮೇಲೆ ಮತ್ತಷ್ಟು ನಿರೀಕ್ಷೆಗಳು ಮೂಡಿವೆ.

ಇದನ್ನೂ ಓದಿ: IPL 2023: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…

ಇನ್ನು ಈ ಎರಡು ಐಸಿಸಿ ಟೂರ್ನಿಗಳನ್ನು ಹೊರತುಪಡಿಸಿ ಭಾರತ ತಂಡವು ಏಷ್ಯಾಕಪ್ ಹಾಗೂ ಹಲವು ಸರಣಿಗಳನ್ನು ಸಹ ಆಡಲಿದೆ. ಆದರೆ ಟೀಮ್ ಇಂಡಿಯಾದ ಮುಂದಿರುವ ಗುರಿಯೆಂದರೆ ಐಸಿಸಿ ಟ್ರೋಫಿ ಗೆಲ್ಲುವುದು. ಹೀಗಾಗಿಯೇ ಹೊಸ ವರ್ಷದಿಂದಲೇ ಹೊಸ ಅಭಿಯಾನದ ಮೂಲಕ ಟೀಮ್ ಇಂಡಿಯಾ ಐಸಿಸಿ ಟೂರ್ನಿಗಳಿಗೆ ಸಜ್ಜಾಗಲಿದೆ.