‘ನನ್ನನ್ನು ಕಾಪಾಡಿದಕ್ಕೆ ಥ್ಯಾಂಕ್ಸ್ ಬ್ರೋ, ಇಲ್ಲದಿದ್ದರೆ ಫ್ಯಾನ್ಸ್ ನನ್ನ ಉಳಿಸುತ್ತಿರಲಿಲ್ಲ’; ಡಿಕೆ ವಿಡಿಯೋ ಸಖತ್ ವೈರಲ್

T20 World Cup 2022: ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದ್ದರೆ ದಿನೇಶ್ ಕಾರ್ತಿಕ್ ಟೀಕೆಗೆ ಗುರಿಯಾಗುತ್ತಿದ್ದರು. ಅಲ್ಲದೆ ಈ ಪಂದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ಇದ್ದಿದ್ದರಿಂದ ದಿನೇಶ್ ಕಾರ್ತಿಕ್ ಟ್ರೋಲ್ ಆಗುವ ಸಾಧ್ಯತೆಯೂ ಇತ್ತು.

‘ನನ್ನನ್ನು ಕಾಪಾಡಿದಕ್ಕೆ ಥ್ಯಾಂಕ್ಸ್ ಬ್ರೋ, ಇಲ್ಲದಿದ್ದರೆ ಫ್ಯಾನ್ಸ್ ನನ್ನ ಉಳಿಸುತ್ತಿರಲಿಲ್ಲ’; ಡಿಕೆ ವಿಡಿಯೋ ಸಖತ್ ವೈರಲ್
ಕಾರ್ತಿಕ್. ಅಶ್ವಿನ್
Updated By: ಪೃಥ್ವಿಶಂಕರ

Updated on: Oct 26, 2022 | 12:20 PM

ಭಾನುವಾರ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ (T20 World Cup 2022) ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸಿತ್ತು. ಅತ್ಯಂತ ರೋಚಕವಾದ ಈ ಪಂದ್ಯದಲ್ಲಿ ಆರ್.ಅಶ್ವಿನ್ (Ashwin) ಕೊನೆಯ ಎಸೆತದಲ್ಲಿ ರನ್ ಗಳಿಸಿ ಪಂದ್ಯವನ್ನು ಟೀಂ ಇಂಡಿಯಾ (Team India) ಖಾತೆಗೆ ಹಾಕಿದ್ದರು. ಆದರೆ ಪಂದ್ಯ ಮುಗಿದ ಎರಡು ದಿನಗಳ ನಂತರ ಟೀಂ ಇಂಡಿಯಾದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ (Dinesh Karthik), ಪಂದ್ಯ ಗೆಲ್ಲಿಸಿದ ಅಶ್ವಿನ್​ಗೆ ಧನ್ಯವಾದ ಹೇಳಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೊನೆಯ ಓವರ್ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿತು.

ಬೌಲರ್ ಅಶ್ವಿನ್ ಅವರಿಗೆ ದಿನೇಶ್ ಕಾರ್ತಿಕ್ ಧನ್ಯವಾದ ಹೇಳುವುದಕ್ಕೂ ಇಲ್ಲೊಂದು ವಿಶೇಷ ಕಾರಣವಿದೆ. ವಾಸ್ತವವಾಗಿ, ಭಾರತಕ್ಕೆ ಗೆಲ್ಲಲು ಕೊನೆಯ ಎರಡು ಎಸೆತಗಳಲ್ಲಿ ಎರಡು ರನ್ ಬೇಕಿತ್ತು. ಆದರೆ, 20ನೇ ಓವರ್‌ನ ಐದನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಔಟಾದರು. ಕಾರ್ತಿಕ್ ಔಟಾದ ಕೂಡಲೇ ಪಾಕಿಸ್ತಾನ ಮತ್ತೊಮ್ಮೆ ಜಯದ ಟ್ರ್ಯಾಕ್​ಗೆ ಮರಳಿತ್ತು. ಆದರೆ ಕೊನೆಯ ಎಸೆತದಲ್ಲಿ ಬ್ಯಾಟಿಂಗ್‌ಗೆ ಬಂದ ಅಶ್ವಿನ್ ಸಿಂಗಲ್ ರನ್ ಕದಿಯುವುದರೊಂದಿಗೆ ಪಂದ್ಯವನ್ನು ಟೀಂ ಇಂಡಿಯಾ ಕಡೆ ತಿರುಗಿಸಿದರು.

ಇದನ್ನೂ ಓದಿ: T20 World Cup 2022: ಪವರ್‌ಪ್ಲೇನಲ್ಲಿ ಪವರ್ ಇಲ್ಲ..! ಲಂಕಾ ಎದುರು ಕಳಪೆ ದಾಖಲೆ ಬರೆದ ಆಸ್ಟ್ರೇಲಿಯಾ

ಟೀಕೆಗೆ ಗುರಿಯಾಗುತ್ತಿದ್ದ ಕಾರ್ತಿಕ್

ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದ್ದರೆ ದಿನೇಶ್ ಕಾರ್ತಿಕ್ ಟೀಕೆಗೆ ಗುರಿಯಾಗುತ್ತಿದ್ದರು. ಅಲ್ಲದೆ ಈ ಪಂದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ಇದ್ದಿದ್ದರಿಂದ ದಿನೇಶ್ ಕಾರ್ತಿಕ್ ಟ್ರೋಲ್ ಆಗುವ ಸಾಧ್ಯತೆಯೂ ಇತ್ತು. ಹೀಗಾಗಿ ಇದೆಲ್ಲದರಿಂದ ತನ್ನನ್ನು ಪಾರು ಮಾಡಿದ ಅಶ್ವಿನ್​ಗೆ ದಿನೇಶ್ ಕಾರ್ತಿಕ್ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಬಿಸಿಸಿಐ ವಿಡಿಯೋ ಶೇರ್ ಮಾಡಿದ್ದು, ಭಾರತ ತಂಡದ ಆಟಗಾರರು ಸಿಡ್ನಿ ತಲುಪಿರುವುದನ್ನು ಆ ವಿಡಿಯೋದಲ್ಲಿ ನೋಡಬಹುದು. ಅದೇ ವೀಡಿಯೊದಲ್ಲಿ, ದಿನೇಶ್ ಕಾರ್ತಿಕ್ ಅಶ್ವಿನ್ ಅವರಿಗೆ ಧನ್ಯವಾದ ಹೇಳುವುದನ್ನು ಸಹ ನಾವು ಕಾಣಬಹುದಾಗಿದೆ.

ಕಳೆದ ವರ್ಷ ಟ್ರೋಲ್ ಆಗಿದ್ದ ಶಮಿ

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ನಂತರ ಸೋತ ತಂಡದ ಆಟಗಾರರು ಟ್ರೋಲ್ ಆಗುವುದು ಸಾಮಾನ್ಯ. ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸಿದಾಗ ವೇಗದ ಬೌಲರ್ ಮೊಹಮ್ಮದ್ ಶಮಿ ಟ್ರೋಲ್ ಆಗಿದ್ದರು. ಆದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಬೌಲರ್ ಗಳನ್ನು ಸಮರ್ಥಿಸಿಕೊಂಡಿದ್ದರು.

ಈಗ ಈ ಬಾರಿಯ ಟಿ20 ವಿಶ್ವಕಪ್ ಬಗ್ಗೆ ಮಾತನಾಡುವುದಾದರೆ, ಟೀಮ್ ಇಂಡಿಯಾಕ್ಕೆ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಆಗಿ ದಿನೇಶ್ ಕಾರ್ತಿಕ್ ಮೊದಲ ಆಯ್ಕೆಯಾಗಿದ್ದಾರೆ. ಟೀಂ ಇಂಡಿಯಾದಲ್ಲಿ ದಿನೇಶ್ ಕಾರ್ತಿಕ್​ಗೆ ಫಿನಿಶರ್ ಪಾತ್ರವನ್ನು ವಹಿಸಲಾಗಿದೆ. ಈ ಬಾರಿಯ ವಿಶ್ವಕಪ್ ಬಳಿಕ ದಿನೇಶ್ ಕಾರ್ತಿಕ್ ಕೂಡ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುವ ಸಾಧ್ಯತೆ ಇದೆಯಂತೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Wed, 26 October 22