AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

The 6ixty: ಕ್ರಿಸ್ ಗೇಲ್ ರಿ ಎಂಟ್ರಿ: ದಿ ಸಿಕ್ಸ್ಟಿ ಲೀಗ್​ನ​ ತಂಡಗಳು ಪ್ರಕಟ

The 6ixty Teams: ಆಗಸ್ಟ್ 24 ರಿಂದ ಆಗಸ್ಟ್ 28 ರವರೆಗೆ ನಡೆಯಲಿರುವ ಈ ಟೂರ್ನಿಗಾಗಿ ಇದೀಗ 6 ತಂಡಗಳನ್ನು ಘೋಷಿಸಲಾಗಿದೆ.  ಈ ತಂಡಗಳಲ್ಲಿ ಸೌತ್ ಆಫ್ರಿಕಾದ ಯುವ ಬ್ಯಾಟ್ಸ್​ಮನ್ ಡೆವಾಲ್ಡ್ ಬ್ರೆವಿಸ್, ಐರ್ಲೆಂಡ್​ನ ಸ್ಪೋಟಕ ದಾಂಡಿಗ ಹ್ಯಾರಿ ಟೆಕ್ಟರ್ ಕೂಡ ಸ್ಥಾನ ಪಡೆದಿದ್ದಾರೆ.

The 6ixty: ಕ್ರಿಸ್ ಗೇಲ್ ರಿ ಎಂಟ್ರಿ: ದಿ ಸಿಕ್ಸ್ಟಿ ಲೀಗ್​ನ​ ತಂಡಗಳು ಪ್ರಕಟ
ಕ್ರಿಸ್ ಗೇಲ್
TV9 Web
| Updated By: ಝಾಹಿರ್ ಯೂಸುಫ್|

Updated on: Aug 01, 2022 | 12:00 PM

Share

ಏಕದಿನ, ಟಿ20, ಟಿ10 ಕ್ರಿಕೆಟ್ ಲೀಗ್ ಬಂದಾಯ್ತು…ಮುಂದೇನು ಎಂಬ ಪ್ರಶ್ನೆಗೆ ಉತ್ತರ ನೀಡಲು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹಾಗೂ ಕೆರಿಬಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳು ಇದೀಗ ದಿ ಸಿಕ್ಸ್ಟಿ (‘THE 6IXTY’) ಕ್ರಿಕೆಟ್ ಟೂರ್ನಿಯನ್ನು ಪರಿಚಯಿಸುತ್ತಿದೆ. ಅಂದರೆ 60 ಬಾಲ್​ ಕ್ರಿಕೆಟ್​. ಆದರೆ ಇದು ಟಿ10 ಲೀಗ್ ಅಲ್ಲ ಎಂಬುದೇ ಇಲ್ಲಿ ವಿಶೇಷ. ಆಗಸ್ಟ್ 24 ರಿಂದ ಆಗಸ್ಟ್ 28 ರವರೆಗೆ ನಡೆಯಲಿರುವ ಈ ಟೂರ್ನಿಗಾಗಿ ಇದೀಗ 6 ತಂಡಗಳನ್ನು ಘೋಷಿಸಲಾಗಿದೆ.  ಈ ತಂಡಗಳಲ್ಲಿ ಸೌತ್ ಆಫ್ರಿಕಾದ ಯುವ ಬ್ಯಾಟ್ಸ್​ಮನ್ ಡೆವಾಲ್ಡ್ ಬ್ರೆವಿಸ್, ಐರ್ಲೆಂಡ್​ನ ಸ್ಪೋಟಕ ದಾಂಡಿಗ ಹ್ಯಾರಿ ಟೆಕ್ಟರ್ ಕೂಡ ಸ್ಥಾನ ಪಡೆದಿದ್ದಾರೆ.

ಹಾಗೆಯೇ ನಿವೃತ್ತಿ ಅಂಚಿನಲ್ಲಿರುವ ಕ್ರಿಸ್ ಗೇಲ್​ ಹೊಸ ಲೀಗ್ ಮೂಲಕ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದರೆ ಗೇಲ್ ಕಳೆದ ಐಪಿಎಲ್​ನಿಂದ ಹೊರಗುಳಿದಿದ್ದರು. ಇದಾದ ಬಳಿಕ ಅವರು ಯಾವುದೇ ಲೀಗ್ ಆಡಿರಲಿಲ್ಲ. ಇದೀಗ ಸಿಕ್ಸ್ಟಿ ಲೀಗ್​ ಮೂಲಕ ಯುನಿವರ್ಸ್ ಬಾಸ್ ಮತ್ತೆ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ. ಅದರಂತೆ ದಿ ಸಿಕ್ಸ್ಟಿ ಲೀಗ್​ಗೆ ಆಯ್ಕೆಯಾದ 6 ತಂಡಗಳ ಆಟಗಾರರ ಪಟ್ಟಿ ಹೀಗಿದೆ…

ಟ್ರಿನಿಡಾಡ್ ನೈಟ್ ರೈಡರ್ಸ್: ಕೀರನ್ ಪೊಲಾರ್ಡ್, ಆಂಡ್ರೆ ರಸೆಲ್, ಸುನಿಲ್ ನರೈನ್, ನಿಕೋಲಸ್ ಪೂರನ್, ಅಕೇಲ್ ಹೊಸೈನ್, ರವಿ ರಾಂಪಾಲ್, ಟಿಮ್ ಸೀಫರ್ಟ್, ಸೀಕುಗೆ ಪ್ರಸನ್ನ, ಜೇಡನ್ ಸೀಲ್ಸ್, ಟಿಯಾನ್ ವೆಬ್‌ಸ್ಟರ್, ಖಾರಿ ಪಿಯರ್, ಆಂಡರ್ಸನ್ ಫಿಲಿಪ್, ಟೆರೆನ್ಸ್ ಹಿಂಡ್ಸ್, ಲಿಯೊನಾರ್ಡೊ ಜೂಲಿಯನ್ ಮತ್ತು ಶಾರಾನ್ ಲೀವಿಸ್.

ಇದನ್ನೂ ಓದಿ
Image
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
Image
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Image
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಸೇಂಟ್ ಲೂಸಿಯಾ ಕಿಂಗ್ಸ್: ರೋಸ್ಟನ್ ಚೇಸ್, ಜಾನ್ಸನ್ ಚಾರ್ಲ್ಸ್, ಕೆಸ್ರಿಕ್ ವಿಲಿಯಮ್ಸ್, ಮೆಕೆನ್ನಿ ಕ್ಲಾರ್ಕ್, ಅಲ್ಜಾರಿ ಜೋಸೆಫ್, ಸ್ಕಾಟ್ ಕುಗ್ಗೆಲಿನ್, ಮಾರ್ಕ್ ಡೆಯಲ್, ಜೆವರ್ ರಾಯಲ್, ಮ್ಯಾಥ್ಯೂ ಫೋರ್ಡ್, ಲೆರಾಯ್ ಲಗ್ಗ್, ಪ್ರೆಸ್ಟನ್ ಮೆಕ್ಸ್ವೀನ್. ಲ್ಯಾರಿ ಎಡ್ವರ್ಡ್ಸ್, ಅಕೀಮ್ ಆಗಸ್ಟೆ, ರಿವಾಲ್ಡೊ ಕ್ಲಾರ್ಕ್, ರೋಶನ್ ಪ್ರಿಮಸ್, ರವೇಂದ್ರ ಪರ್ಸೌಡ್ ಮತ್ತು ಜೀಸ್ ಬೂಟನ್.

ಸೇಂಟ್ ಕಿಟ್ಸ್ & ನೆವಿಸ್ ಪೇಟ್ರಿಯಾಟ್ಸ್: ಕ್ರಿಸ್ ಗೇಲ್ , ಎವಿನ್ ಲೂಯಿಸ್, ಆಂಡ್ರೆ ಫ್ಲೆಚರ್, ಖಾಸಿಮ್ ಅಕ್ರಮ್, ಶೆಫೇನ್ ರುದರ್‌ಫೋರ್ಡ್, ಡ್ವೇನ್ ಪ್ರಿಟೋರಿಯಸ್, ಡ್ಯಾರೆನ್ ಬ್ರಾವೋ, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್, ಡೆವಾಲ್ಡ್ ಬ್ರೂಯಿಸ್, ಇಝರುಲ್ಹಕ್ ನವೀದ್, ಜೋಶುವಾ ಡಿ ಸಿಲ್ವಾ, ಜೋನ್-ರಸ್, ಕೆಸಿ ಕಾರ್ಟಿ, ಕೆಲ್ವಿನ್ ಪಿಟ್​ಮನ್ ಮತ್ತು ಕಾರ್​​ಮೈಕಲ್

ಗಯಾನಾ ಅಮೆಜಾನ್ ವಾರಿಯರ್ಸ್: ಶಿಮ್ರಾನ್ ಹೆಟ್ಮೆಯರ್, ಓಡಿಯನ್ ಸ್ಮಿತ್, ರೊಮಾರಿಯೋ ಶೆಫರ್ಡ್, ಕಾಲಿನ್ ಇಂಗ್ರಾಮ್, ಚಂದ್ರಪಾಲ್ ಹೇಮ್ರಾಜ್, ಶಾಯ್ ಹೋಪ್, ಪಾಲ್ ಸ್ಟಿರ್ಲಿಂಗ್, ಹೆನ್ರಿಕ್ ಕ್ಲಾಸೆನ್, ಕೀಮೋ ಪಾಲ್, ಜಾನ್ ಕ್ಯಾಂಪ್ಬೆಲ್, ಜೆರ್ಮೈನ್ ಬ್ಲಾಕ್ವುಡ್, ಗುಡಾಕೇಶ್ ಮೋಟಿ, ವೀರಸಾಮಿ ಪೆರುಮಾಳ್, ರಾನ್ಸ್‌ಫೋರ್ಡ್ ಬೀಟನ್, ಶೆರ್ಮನ್ ಲೆವಿಸ್, ಮ್ಯಾಥ್ಯೂ ನಂದು ಮತ್ತು ಜೂನಿಯರ್ ಸಿಂಕ್ಲೇರ್.

ಜಮೈಕಾ ತಲ್ಲವಾಸ್: ರೋವ್‌ಮನ್ ಪೊವೆಲ್, ಸಂದೀಪ್ ಲಾಮಿಚಾನೆ, ಫ್ಯಾಬಿಯನ್ ಅಲೆನ್, ಇಮಾದ್ ವಾಸಿಮ್, ಬ್ರಾಂಡನ್ ಕಿಂಗ್, ಕೆನ್ನಾರ್ ಲೂಯಿಸ್, ಮೊಹಮ್ಮದ್ ಅಮೀರ್, ಶಮರಾ ಬ್ರೂಕ್ಸ್, ಮಿಗೇಲ್ ಪ್ರಿಟೋರಿಯಸ್, ಕ್ರಿಸ್ ಗ್ರೀನ್, ರೇಮನ್ ರೀಫರ್. ಜೇಮೀ ಮರ್ಚೆಂಟ್, ಅಮೀರ್ ಜಂಗೂ, ಶಮರ್ ಸ್ಪ್ರಿಂಗರ್, ನಿಕೋಲ್ಸನ್ ಗಾರ್ಡನ್, ಕಿರ್ಕ್ ಮೆಕೆಂಜಿ ಮತ್ತು ಜೋಶುವಾ ಜೇಮ್ಸ್.

ಬಾರ್ಬಡೋಸ್ ರಾಯಲ್ಸ್: ಜೇಸನ್ ಹೋಲ್ಡರ್ , ಒಬೆಡ್ ಮೆಕಾಯ್, ಕೈಲ್ ಮೇಯರ್ಸ್, ಅಜಮ್ ಖಾನ್, ಹೇಡನ್ ವಾಲ್ಷ್ ಜೂನಿಯರ್ ಒಶೇನ್ ಥಾಮಸ್, ರಹಕೀಮ್ ಕಾರ್ನ್‌ವಾಲ್, ಡೆವೊನ್ ಥಾಮಸ್, ಜೋಶುವಾ ಬಿಷಪ್, ಜಸ್ಟಿನ್ ಗ್ರೀವ್ಸ್, ಕಾರ್ಬಿನ್ ಬಾಷ್, ನೈಮ್ ಯಂಗ್, ಟೆಡ್ಡಿ ಬಿಷಪ್, ರಾಮನ್ ಸಿಮೊನೋಸ್, ಹ್ಯಾರಿ ಟೆಕ್ಟರ್.

ದಿ ಸಿಕ್ಸ್ಟಿ (‘THE 6IXTY’) ಲೀಗ್​ನ ನಿಯಮಗಳೇನು?

  • ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿದೆ. ಆದರೆ ಇಲ್ಲಿ 6 ಬ್ಯಾಟ್ಸ್​ಮನ್​ಗಳಿಗೆ ಮಾತ್ರ ಅವಕಾಶ ಇರಲಿದೆ ಎಂಬುದು ವಿಶೇಷ. ಅಂದರೆ ಪ್ರತಿ ಬ್ಯಾಟಿಂಗ್ ತಂಡವು ಆರು ವಿಕೆಟ್‌ಗಳನ್ನು ಹೊಂದಿರುತ್ತದೆ. 6ನೇ ವಿಕೆಟ್‌ ಪತನದೊಂದಿಗೆ ಆಲೌಟ್ ಎಂದು ಪರಿಗಣಿಸಲಾಗುತ್ತದೆ.
  • ಹಾಗೆಯೇ ಬೌಲಿಂಗ್​ಗೂ ಹೊಸ ನಿಯಮ ಪರಿಚಯಿಸಲಾಗಿದೆ. ಇಲ್ಲಿ ಒಟ್ಟು 10 ಓವರ್​ಗಳನ್ನು ಎರಡು ತುದಿಯಿಂದ ಎಸೆಯುವಂತಹ ನಿಯಮ ರೂಪಿಸಲಾಗಿದೆ. ಅಂದರೆ 5 ಓವರ್​ ಪಿಚ್​ನ ಒಂದು ತುದಿಯಿಂದ ಎಸೆದರೆ, ಮತ್ತೆ ಐದು ಓವರ್​ಗಳನ್ನು ಇನ್ನೊಂದು ತುದಿಯಿಂದ ಎಸೆಯಬೇಕಾಗುತ್ತದೆ. ಇದರಿಂದ ಪಿಚ್​​ ಮೇಲ್ಮೈ ಕೂಡ ಬದಲಾಗಲಿದೆ. ಹೀಗಾಗಿ ಪಂದ್ಯವು ಯಾವುದೇ ತಿರುವನ್ನು ಕೂಡ ಪಡೆಯಬಹುದು.
  • ಇನ್ನು ಪ್ರತಿ ತಂಡವು 45 ನಿಮಿಷಗಳಲ್ಲಿ 10 ಓವರ್‌ಗಳನ್ನು ಪೂರ್ಣಗೊಳಿಸಬೇಕು. ಈ ಸಮಯದೊಳಗೆ 10 ಓವರ್​ ಪೂರ್ಣಗೊಳಿಸಲು ವಿಫಲವಾದರೆ ಕೊನೆಯ 6 ಎಸೆತಗಳ ವೇಳೆ ಫೀಲ್ಡರ್ ಅನ್ನು ಕಡಿತ ಮಾಡಲಾಗುತ್ತದೆ.
  • ಹಾಗೆಯೇ ಒಬ್ಬ ಬೌಲರ್​ಗೆ ಕೇವಲ 2 ಓವರ್​ ಮಾತ್ರ ಇರಲಿದೆ. ಅದರಂತೆ ಒಂದು ತಂಡದಲ್ಲಿ ಐವರು ಬೌಲರ್​ಗಳು ಇರಲೇಬೇಕಾಗುತ್ತದೆ.
  • ಈ ಪಂದ್ಯದಲ್ಲಿ ಎರಡು ಪವರ್ ಪ್ಲೇ ಓವರ್‌ಗಳು ಇರಲಿದೆ. ಇಲ್ಲಿ ಮೊದಲ ಎರಡು ಪವರ್​ಪ್ಲೇನಲ್ಲಿ ಬ್ಯಾಟ್ಸ್​ಮನ್​ಗಳು ಎರಡು ಸಿಕ್ಸರ್‌ಗಳನ್ನು ಬಾರಿಸಿದರೆ, ಮೂರನೆ ಪವರ್​ಪ್ಲೇ ಅನ್ಲಾಕ್ ಆಗುತ್ತದೆ. ಅಂದರೆ ಮೊದಲೆರಡು ಓವರ್​ಗಳಲ್ಲಿ 2 ಸಿಕ್ಸ್ ಬಾರಿಸಿದರೆ ಮಾತ್ರ 3ನೇ ಪವರ್​ಪ್ಲೇ ಸಿಗಲಿದೆ. ಈ ಪವರ್​ಪ್ಲೇ ಅನ್ನು 3 ರಿಂದ 9 ಓವರ್​ಗಳ ನಡುವೆ ತೆಗೆದುಕೊಳ್ಳಬಹುದು.
  • ವೆಸ್ಟ್ ಇಂಡೀಸ್ ಕ್ರಿಕೆಟ್​ ಮಂಡಳಿ-ಕೆರಿಬಿಯನ್ ಪ್ರೀಮಿಯರ್ ಲೀಗ್ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿ ವರ್ಷಕ್ಕೆ 4 ಬಾರಿ ನಡೆಯಲಿದೆ. ಅಂದರೆ ಪ್ರತಿ 3 ತಿಂಗಳಿಗೊಮ್ಮೆ ಟೂರ್ನಿಯನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಇದರ ಮೊದಲ ಸೀಸನ್​  ಆಗಸ್ಟ್ 24 ರಿಂದ 28 ರವರೆಗೆ ನಡೆಯಲಿದೆ.
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ