VIDEO: ನಾಟೌಟ್ ಅನ್ನು ಔಟ್ ಎಂದ ಮೂರನೇ ಅಂಪೈರ್..!
Melbourne Stars vs Sydney Sixers: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್ ಸ್ಟಾರ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 156 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಸಿಡ್ನಿ ಸಿಕ್ಸರ್ಸ್ ಪರ ನಾಯಕ ಜೇಮ್ಸ್ ವಿನ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನಲ್ಲಿ (BBL 2024) ಅಂಪೈರ್ ನೀಡಿದ ತೀರ್ಪೊಂದು ಇದೀಗ ನಗೆಪಾಟಲಿಗೀಡಾಗಿದೆ. ಅದು ಕೂಡ ಟಿವಿ ರಿಪ್ಲೇ ಅನ್ನು ಪರಿಶೀಲಿಸಿದ ಬಳಿಕ ನೀಡಿದ ತೀರ್ಪು ಎಂಬುದು ವಿಶೇಷ. ಬಿಬಿಎಲ್ನ 28ನೇ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ಮುಖಾಮುಖಿಯಾಗಿತ್ತು.
ಇಮಾದ್ ವಾಸಿಂ ಎಸೆದ ಈ ಪಂದ್ಯದ ಮೂರನೇ ಓವರ್ನ 4ನೇ ಎಸೆತದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡದ ಬ್ಯಾಟರ್ ಜೇಮ್ಸ್ ವಿನ್ಸ್ ಬೌಲರ್ನತ್ತ ನೇರವಾಗಿ ಬಾರಿಸಿದರು. ಚೆಂಡು ಇಮಾದ್ ಕೈ ತಾಗಿ ವಿಕೆಟ್ಗೆ ಬಡಿದಿದೆ. ಮೆಲ್ಬೋರ್ನ್ ಸ್ಟಾರ್ಸ್ ತಂಡದ ಆಟಗಾರರು ಮನವಿ ಸಲ್ಲಿಸುತ್ತಿದ್ದಂತೆ ಫೀಲ್ಡ್ ಅಂಪೈರ್ ಮೂರನೇ ಅಂಪೈರ್ಗೆ ಮನವಿ ಮಾಡಿದರು.
ಈ ವೇಳೆ ಥರ್ಡ್ ಅಂಪೈರ್ ರಿಪ್ಲೇ ಪರಿಶೀಲಿಸುತ್ತಿರುವುದನ್ನು ಮೈದಾನದ ಬಿಗ್ ಸ್ಕ್ರೀನ್ನಲ್ಲಿ ಪ್ರದರ್ಶಿಸಲಾಗಿತ್ತು. ಇದೇ ವೇಳೆ ಚೆಂಡು ವಿಕೆಟ್ಗೆ ಬಡಿಯುವ ಮುನ್ನವೇ ಜೋಶ್ ಫಿಲಿಪ್ ಬ್ಯಾಟ್ ಕ್ರೀಸ್ನಲ್ಲಿಟ್ಟಿರುವುದು ಸ್ಪಷ್ಟವಾಗಿತ್ತು.
ಆದರೆ ಮೂರನೇ ಅಂಪೈರ್ ಬಿಗ್ ಸ್ಕ್ರೀನ್ನಲ್ಲಿ ಔಟ್ ಎಂದು ತೀರ್ಪು ನೀಡುವ ಮೂಲಕ ಎಲ್ಲರನ್ನು ಚಕಿತಗೊಳಿಸಿದರು. ತಕ್ಷಣವೇ ಫೀಲ್ಡ್ ಅಂಪೈರ್ ಥರ್ಡ್ ಅಂಪೈರ್ಗೆ ಅದು ನಾಟೌಟ್ ಎಂದು ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಥರ್ಡ್ ಅಂಪೈರ್ ಬಿಗ್ ಸ್ಕ್ರೀನ್ನಲ್ಲಿ ನಾಟೌಟ್ ಎಂದು ಪ್ರದರ್ಶಿಸಿದರು. ಇದೀಗ ಥರ್ಡ್ ಅಂಪೈರ್ ಮಾಡಿದ ಎಡವಟ್ಟಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
He’s pressed the wrong button! 🙈@KFCAustralia #BucketMoment #BBL13 pic.twitter.com/yxY1qfijuQ
— KFC Big Bash League (@BBL) January 6, 2024
ಸಿಡ್ನಿ ಸಿಕ್ಸರ್ಸ್ಗೆ ಭರ್ಜರಿ ಜಯ:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್ ಸ್ಟಾರ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 156 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಸಿಡ್ನಿ ಸಿಕ್ಸರ್ಸ್ ಪರ ನಾಯಕ ಜೇಮ್ಸ್ ವಿನ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
57 ಎಸೆತಗಳನ್ನು ಎದುರಿಸಿದ ವಿನ್ಸ್ 12 ಫೋರ್ಗಳೊಂದಿಗೆ 79 ರನ್ ಬಾರಿಸಿದರು. ಈ ಮೂಲಕ ಸಿಡ್ನಿ ಸಿಕ್ಸರ್ಸ್ ತಂಡವು 18.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 160 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿದೆ.
ಮೆಲ್ಬೋರ್ನ್ ಸ್ಟಾರ್ಸ್ ಪ್ಲೇಯಿಂಗ್ 11: ಥಾಮಸ್ ರೋಜರ್ಸ್ , ಡೇನಿಯಲ್ ಲಾರೆನ್ಸ್ , ಬ್ಯೂ ವೆಬ್‌ಸ್ಟರ್ , ಗ್ಲೆನ್ ಮ್ಯಾಕ್ಸ್‌ವೆಲ್ (ನಾಯಕ) , ಮಾರ್ಕಸ್ ಸ್ಟೊಯಿನಿಸ್ , ಪೀಟರ್ ಹ್ಯಾಂಡ್ಸ್‌ಕಾಂಬ್ (ವಿಕೆಟ್ ಕೀಪರ್) , ಹಿಲ್ಟನ್ ಕಾರ್ಟ್‌ರೈಟ್ , ಇಮಾದ್ ವಾಸಿಮ್ , ಜೊನಾಥನ್ ಮೆರ್ಲೋ , ಜೋಯಲ್ ಪ್ಯಾರಿಸ್ , ಸ್ಕಾಟ್ ಬೋಲ್ಯಾಂಡ್.
ಇದನ್ನೂ ಓದಿ: 147 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ ಟೀಮ್ ಇಂಡಿಯಾ
ಸಿಡ್ನಿ ಸಿಕ್ಸರ್ಸ್ ಪ್ಲೇಯಿಂಗ್ 11: ಜೋಶ್ ಫಿಲಿಪ್ (ವಿಕೆಟ್ ಕೀಪರ್) , ಜೇಮ್ಸ್ ವಿನ್ಸ್ , ಡೇನಿಯಲ್ ಹ್ಯೂಸ್ , ಮೋಸೆಸ್ ಹೆನ್ರಿಕ್ಸ್ , ಜೋರ್ಡಾನ್ ಸಿಲ್ಕ್ , ಟಾಮ್ ಕರನ್ , ಜ್ಯಾಕ್ ಎಡ್ವರ್ಡ್ಸ್ , ಸೀನ್ ಅಬಾಟ್ , ಬೆನ್ ದ್ವಾರ್ಶುಯಿಸ್ , ಟಾಡ್ ಮರ್ಫಿ , ಸ್ಟೀವ್ ಓಕೀಫ್.