TNPL 2023 Final: ಚಾಂಪಿಯನ್ ಪಟ್ಟಕ್ಕೇರಿದ ಲೈಕಾ ಕೋವೈ ಕಿಂಗ್ಸ್; ಲೀಗ್ನಲ್ಲಿ 17 ಬಲಿ ಪಡೆದ ಶಾರುಖ್ ಖಾನ್!
TNPL 2023 Final: ತಮಿಳುನಾಡು ಪ್ರೀಮಿಯರ್ ಲೀಗ್ ಪಂದ್ಯಾವಳಿ ಫೈನಲ್ ಪಂದ್ಯದಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ ತಂಡವನ್ನು 104 ರನ್ಗಳಿಂದ ಮಣಿಸಿದ ಲೈಕಾ ಕೋವೈ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ತಮಿಳುನಾಡು ಪ್ರೀಮಿಯರ್ ಲೀಗ್ (Tamil Nadu Premier League) ಪಂದ್ಯಾವಳಿ ಫೈನಲ್ ಪಂದ್ಯದಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ (Lyca Kovai Kings vs Nellai Royal Kings) ತಂಡವನ್ನು 104 ರನ್ಗಳಿಂದ ಮಣಿಸಿದ ಲೈಕಾ ಕೋವೈ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಕೋವೈ ಕಿಂಗ್ಸ್‌ನ ಈ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ಶಾರುಖ್ ಖಾನ್ (Shahrukh Khan) ಪ್ರಮುಖ ಮೂರು ವಿಕೆಟ್ ಉರುಳಿಸಿ ನೆಲ್ಲೈ ರಾಯಲ್ ಕಿಂಗ್ಸ್ ತಂಡ ಕೇವಲ 101 ರನ್ಗಳಿಗೆ ಆಲೌಟ್ ಆಗುವಂತೆ ಮಾಡಿದರು. ಇಡೀ ಪಂದ್ಯಾವಳಿಯಲ್ಲಿ ಬಲಿಷ್ಠ ತಂಡಗಳೆನಿಸಿಕೊಂಡಿದ್ದ ಕೋವೈ ಕಿಂಗ್ಸ್ ಮತ್ತು ರಾಯಲ್ ಕಿಂಗ್ಸ್ ತಂಡಗಳು ನಿರೀಕ್ಷೆಯಂತೆ ಫೈನಲ್ಗೆ ಲಗ್ಗೆ ಇಟ್ಟಿದ್ದವು. ಹೀಗಿರುವಾಗ ಉಭಯ ತಂಡಗಳ ನಡುವಿನ ಫೈನಲ್ ಪಂದ್ಯ ಸಾಕಷ್ಟು ರೋಚಕತೆ ಹುಟ್ಟಿಸಿತ್ತು. ಆದರೆ ಲೈಕಾ ಕೋವೈ ಕಿಂಗ್ಸ್ ತಂಡದ ಮಾರಕ ಬೌಲಿಂಗ್ಗೆ ಧೂಳಿಪಟವಾದ ನೆಲ್ಲೈ ರಾಯಲ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು.
205 ರನ್ಗಳ ಟಾರ್ಗೆಟ್
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶಾರುಖ್ ಖಾನ್ ನೇತೃತ್ವದ ಲೈಕಾ ಕೋವೈ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಿಗೆ ಐದು ವಿಕೆಟ್ ಕಳೆದುಕೊಂಡು 205 ರನ್ ಕಲೆಹಾಕಿತು. ತಂಡದ ಪರ ಒಟ್ಟು ಮೂರು ಅರ್ಧಶತಕಗಳು ಸಿಡಿದವು. ಮೊದಲನೆಯದಾಗಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಸುರೇಶ್ ಕುಮಾರ್ 33 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 57 ರನ್ ಕಲೆಹಾಕಿದರು. ಆ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಮುಕಿಲೇಶ್ 40 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 51 ರನ್ ಬಾರಿಸಿದರು.
TNPL 2023: w,w,w,w,w! ಟಿಎನ್ಪಿಎಲ್ನಲ್ಲಿ ದಾಖಲೆ ಬರೆದ ಯುವ ವೇಗಿ; ವಿಡಿಯೋ ನೋಡಿ
ಇವರೊಂದಿಗೆ ಕೆಳಕ್ರಮಾಂಕದಲ್ಲಿ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಅತೀಕ್ ಉರ್ ರೆಹಮಾನ್ ಕೇವಲ 21 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಂತೆ 50 ರನ್ ಕಲೆಹಾಕಿದರು. ಇನ್ನು ನೆಲ್ಲೈ ರಾಯಲ್ ಕಿಂಗ್ಸ್ ತಂಡದ ಪರ ಸೋನು ಯಾದವ್ ಹಾಗೂ ಸಂದೀಪ್ ವಾರಿಯರ್ ತಲಾ ಎರಡು ವಿಕೆಟ್ ಪಡೆದರು.
அரசனுக்கெல்லாம் அரசன்!?#TNPL2023?#GethuKaatuvoma#sekkalisingamla#TNPLonstarsports#TNPLonfancode#NammaAatamAarambam?#NammaOoruNammaGethu?? pic.twitter.com/K9rsCYl2Gx
— TNPL (@TNPremierLeague) July 13, 2023
And the party? mood starts!❤️#TNPL2023?#GethuKaatuvoma#sekkalisingamla#TNPLonstarsports#TNPLonfancode#NammaAatamAarambam?#NammaOoruNammaGethu?? pic.twitter.com/ygqBBSACxg
— TNPL (@TNPremierLeague) July 12, 2023
ತತ್ತರಿಸಿದ ನೆಲ್ಲೈ ರಾಯಲ್ ಕಿಂಗ್ಸ್ ಬ್ಯಾಟಿಂಗ್
205 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ನೆಲ್ಲೈ ರಾಯಲ್ ಕಿಂಗ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಆರಂಭಿಕ ಆಟಗಾರ ನಿರಂಜನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಮತ್ತೊಬ್ಬ ಆರಂಭಿಕ ಅರುಣ್ ಕಾರ್ತಿಕ್ 27 ರನ್ ಬಾರಿಸಿದರೆ, ಲಕ್ಷ್ಮೇಶ ಸೂರ್ಯಪ್ರಕಾಶ್ 22 ರನ್ಗಳ ಇನ್ನಿಂಗ್ಸ್ ಆಡಿದರು. ಇನ್ನುಳಿದಂತೆ ತಂಡದ ಪರ ಯಾರು ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಹೀಗಾಗಿ ನೆಲ್ಲೈ ರಾಯಲ್ ಕಿಂಗ್ಸ್ ತಂಡ ಕೇವಲ 101 ರನ್ಗಳಿಗೆ ಆಲೌಟ್ ಆಗಿ, 104 ರನ್ಗಳ ಹೀನಾಯ ಸೋಲು ಕಂಡಿತು.
17 ವಿಕೆಟ್ ಪಡೆದ ಶಾರುಖ್
ಲೈಕಾ ಕೋವೈ ಕಿಂಗ್ಸ್ ತಂಡದ ಪರ ಮಾರಕ ದಾಳಿ ನಡೆಸಿದ ಜಾತವೇಧ್ ಸುಬ್ರಮಣ್ಯನ್ ಪ್ರಮುಖ 4 ವಿಕೆಟ್ ಪಡೆದು ಮಿಂಚಿದರೆ, ಇವರಿಗೆ ಸಾಥ್ ನೀಡಿದ ನಾಯಕ ಶಾರುಖ್ ಖಾನ್ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಶಾರುಖ್, ಟಿಎನ್‌ಪಿಎಲ್ 2023 ರಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ ಎನಿಸಿಕೊಂಡರು. ಈ ಲೀಗ್ನಲ್ಲಿ 9 ಪಂದ್ಯಗಳನ್ನಾಡಿದ ಶಾರುಖ್ ಒಟ್ಟು 17 ವಿಕೆಟ್‌ಗಳನ್ನು ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ