AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TNPL 2024: ಕೋವೈ ಕಿಂಗ್ಸ್ vs ದಿಂಡಿಗಲ್ ಡ್ರಾಗನ್ಸ್ ನಡುವೆ ಇಂದು ಫೈನಲ್ ಫೈಟ್

TNPL 2024: ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯುತ್ತವೆ. ಈ ತಂಡಗಳಲ್ಲಿ ಈ ಬಾರಿ ಲೈಕಾ ಕೋವೈ ಕಿಂಗ್ಸ್, ತಿರುಪ್ಪೂರ್ ತಮಿಳನ್ಸ್, ಚೆಪಾಕ್ ಸೂಪರ್ ಗಿಲ್ಲೀಸ್ ಮತ್ತು ದಿಂಡಿಗಲ್ ಡ್ರಾಗನ್ಸ್ ಟೀಮ್​ಗಳು ಪ್ಲೇಆಫ್ ಹಂತಕ್ಕೇರಿತ್ತು. ಇದೀಗ ಈ ನಾಲ್ಕು ತಂಡಗಳಲ್ಲಿ ಎರಡು ಟೀಮ್ ಫೈನಲ್​ನಲ್ಲಿ ಮುಖಾಮುಖಿಯಾಗುತ್ತಿದೆ.

TNPL 2024: ಕೋವೈ ಕಿಂಗ್ಸ್ vs ದಿಂಡಿಗಲ್ ಡ್ರಾಗನ್ಸ್ ನಡುವೆ ಇಂದು ಫೈನಲ್ ಫೈಟ್
TNPL 2024 Final
ಝಾಹಿರ್ ಯೂಸುಫ್
|

Updated on: Aug 04, 2024 | 9:44 AM

Share

ತಮಿಳುನಾಡು ಪ್ರೀಮಿಯರ್ ಲೀಗ್​ನ (TNPL 2024) ಫೈನಲ್ ಪಂದ್ಯದಲ್ಲಿ ಲೈಕಾ ಕೋವೈ ಕಿಂಗ್ಸ್ vs ದಿಂಡಿಗಲ್ ಡ್ರಾಗನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇಂದು (ಆಗಸ್ಟ್​ 4) ನಡೆಯಲಿದ್ದು, ಈ ಮೂಲಕ ಬಲಿಷ್ಠ ಎರಡು ತಂಡಗಳು ಟ್ರೋಫಿಗಾಗಿ ಸೆಣಸಲಿದೆ. ಇದಕ್ಕೂ ಮುನ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಐಡಿರೀಮ್ ತಿರುಪ್ಪೂರ್ ತಮಿಳನ್ಸ್ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಲೈಕಾ ಕೋವೈ ಕಿಂಗ್ಸ್ ಫೈನಲ್​ಗೆ ಪ್ರವೇಶಿಸಿತ್ತು.

ಹಾಗೆಯೇ ಚೆಪಾಕ್ ಸೂಪರ್ ಗಿಲ್ಲೀಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 4 ವಿಕೆಟ್​ಗಳ ಜಯ ಸಾಧಿಸಿದ ದಿಂಡಿಗಲ್ ಡ್ರಾಗನ್ಸ್ ತಂಡವು ಎರಡನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆದುಕೊಂಡಿತು. ಅದರಂತೆ ಕ್ವಾಲಿಫೈಯರ್-2 ಪಂದ್ಯದಲ್ಲಿ ತಿರುಪ್ಪೂರ್ ತಮಿಳನ್ಸ್ ತಂಡವನ್ನು 9 ಮಣಿಸಿ ರವಿಚಂದ್ರನ್ ಅಶ್ವಿನ್ ನಾಯಕತ್ವದ ದಿಂಡಿಗಲ್ ಡ್ರಾಗನ್ಸ್ ತಂಡವು ಫೈನಲ್​ಗೆ ಎಂಟ್ರಿ ಕೊಟ್ಟಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ತಮಿಳುನಾಡು ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯವನ್ನು ಜಿಯೋ ಸಿನಿಮಾ ಆ್ಯಪ್​ನಲ್ಲಿ ವೀಕ್ಷಿಸಬಹುದು. ಹಾಗೆಯೇ ಫ್ಯಾನ್ ಕೋಡ್ ಅಪ್ಲಿಕೇಶನ್​ನಲ್ಲೂ ಲೈವ್ ಸ್ಟ್ರೀಮಿಂಗ್ ಇರಲಿದೆ.

ಉಭಯ ತಂಡಗಳು:

ದಿಂಡಿಗಲ್ ಡ್ರಾಗನ್ಸ್ ತಂಡ: ವಿಮಲ್ ಖುಮಾರ್, ರವಿಚಂದ್ರನ್ ಅಶ್ವಿನ್(ನಾಯಕ), ಶಿವಂ ಸಿಂಗ್, ಬಾಬಾ ಇಂದ್ರಜಿತ್(ವಿಕೆಟ್ ಕೀಪರ್), ಭೂಪತಿ ಕುಮಾರ್, ಎಸ್ ದಿನೇಶ್ ರಾಜ್, ವರುಣ್ ಚಕ್ರವರ್ತಿ, ಸುಬೋತ್ ಭಾಟಿ, ವಿಪಿ ದಿರನ್, ಪಿ ವಿಘ್ನೇಶ್, ಸಂದೀಪ್ ವಾರಿಯರ್, ಆದಿತ್ಯ ಗಣೇಶ್, ರೋಹನ್ ರಾಜು, ಅಫ್ಫಾನ್ ಖಾದರ್, ಜಿ ಕಿಶೂರ್, ರಾಕಿ ಭಾಸ್ಕರ್, ಸಿ ಶರತ್ ಕುಮಾರ್, ಕೆ ಓಂ ನಿತಿನ್, ಕೆ ಆಶಿಕ್.

ಇದನ್ನೂ ಓದಿ: IPL 2025: RCB ತಂಡದಿಂದ ಗ್ಲೆನ್ ಮ್ಯಾಕ್ಸ್​ವೆಲ್ ಔಟ್?

ಲೈಕಾ ಕೋವೈ ಕಿಂಗ್ಸ್ ತಂಡ: ಎಸ್ ಸುಜಯ್, ಜಯರಾಮನ್ ಸುರೇಶ್ ಕುಮಾರ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಶಾರುಖ್ ಖಾನ್ (ನಾಯಕ), ಯು ಮುಕಿಲೇಶ್, ಜಿವಿ ವಿಘ್ನೇಶ್, ಎಂ ಮೊಹಮ್ಮದ್, ಜಾತವೇಧ್ ಸುಬ್ರಮಣ್ಯನ್, ಮಣಿಮಾರನ್ ಸಿದ್ಧಾರ್ಥ್, ವಲ್ಲಿಯಪ್ಪನ್ ಯುಧೀಶ್ವರನ್, ಗೌತಮ್ ತಾಮರೈ ಕಣ್ಣನ್, ಆರ್ ದಿವಾಕರ್, ಅಥೀ ಉರ್ ರೆಹಮಾನ್, ಪಿ ಹೇಮಚರಣ್, ಕೆಎಂ ಓಂ ಪ್ರಕಾಶ್, ರಾಮ್ ಅರವಿಂದ್, ಪಿ ವಿದ್ಯುತ್, ಬಾಲಸುಬ್ರಮಣ್ಯಂ ಸಚಿನ್, ಎಂ ರಾಹಿಲ್ ರೆಹಮಾನ್, ಮನೀಶ್ ಜಿಆರ್.

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್