Virat Test Debut: ವಿರಾಟ್ ಟೆಸ್ಟ್ ಬದುಕಿಗೆ ಭರ್ತಿ 11 ವರ್ಷ! ಟೆಸ್ಟ್ ಕ್ರಿಕೆಟ್​ನಲ್ಲಿ ಕೊಹ್ಲಿಯ ಅವಿಸ್ಮರಣೀಯ ಇನ್ನಿಂಗ್ಸ್​ಗಳಿವು

| Updated By: ಪೃಥ್ವಿಶಂಕರ

Updated on: Jun 20, 2022 | 6:52 PM

Virat Kohli Test Debut: ಭಾರತೀಯ ಕ್ರಿಕೆಟ್​ನಲ್ಲಿ ಜೂನ್ 20ರ ಹಿರಿಮೆಯೇ ಬೇರೆ. ವರ್ಷವು ವಿಭಿನ್ನವಾಗಿದ್ದರೂ, ಈ ದಿನದಂದು ಭಾರತದ ಟೆಸ್ಟ್ ಕ್ರಿಕೆಟ್‌ಗೆ ಮೂವರು ಶ್ರೇಷ್ಠ ಆಟಗಾರರು ಪದಾರ್ಪಣೆ ಮಾಡಿದ್ದರು. ಆ ಮೂವರು ದಿಗ್ಗಜರೆಂದರೆ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ.

Virat Test Debut: ವಿರಾಟ್ ಟೆಸ್ಟ್ ಬದುಕಿಗೆ ಭರ್ತಿ 11 ವರ್ಷ! ಟೆಸ್ಟ್ ಕ್ರಿಕೆಟ್​ನಲ್ಲಿ ಕೊಹ್ಲಿಯ ಅವಿಸ್ಮರಣೀಯ ಇನ್ನಿಂಗ್ಸ್​ಗಳಿವು
ವಿರಾಟ್ ಕೊಹ್ಲಿ
Follow us on

ಭಾರತೀಯ ಕ್ರಿಕೆಟ್​ನಲ್ಲಿ ಜೂನ್ 20ರ ಹಿರಿಮೆಯೇ ಬೇರೆ. ವರ್ಷವು ವಿಭಿನ್ನವಾಗಿದ್ದರೂ, ಈ ದಿನದಂದು ಭಾರತದ ಟೆಸ್ಟ್ ಕ್ರಿಕೆಟ್‌ಗೆ ಮೂವರು ಶ್ರೇಷ್ಠ ಆಟಗಾರರು ಪದಾರ್ಪಣೆ ಮಾಡಿದ್ದರು. ಆ ಮೂವರು ದಿಗ್ಗಜರೆಂದರೆ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ (Sourav Ganguly, Rahul Dravid and Virat Kohli). ಮೊದಲ ಇಬ್ಬರು ಈಗಾಗಲೇ ಬಹಳ ಹಿಂದೆಯೇ ಕ್ರಿಕೆಟ್​ನಿಂದ ನಿವೃತ್ತರಾದರು. ಅದರಲ್ಲಿ ಒಬ್ಬರು ಭಾರತೀಯ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾದರೆ, ಇನ್ನೊಬ್ಬರು ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ವಿರಾಟ್ ಕೊಹ್ಲಿ ವಿಷಯದಲ್ಲಿ ದಿನದ ಪ್ರಸ್ತುತತೆ ಹೆಚ್ಚು. 2011 ರಲ್ಲಿ ಈ ದಿನದಂದು ವೆಸ್ಟ್ ಇಂಡೀಸ್ ವಿರುದ್ಧ ವಿರಾಟ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು. ಉದ್ಘಾಟನಾ ಟೆಸ್ಟ್ ಸ್ಮರಣೀಯವಲ್ಲದಿದ್ದರೂ, ವಿರಾಟ್ ನಂತರ ಈ ಸ್ವರೂಪದಲ್ಲಿ ಪ್ರಸ್ತುತ ಕ್ರಿಕೆಟ್ ಪ್ರಪಂಚದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಸಾಭೀತುಪಡಿಸಿದರು. ಕೊಹ್ಲಿ 11 ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದು, ಇತ್ತೀಚೆಗೆ ತಮ್ಮ 100 ನೇ ಟೆಸ್ಟ್ ಕೂಡ ಆಡಿದ್ದಾರೆ. ಅವರ ನಾಯಕತ್ವದಲ್ಲಿ, ಭಾರತ ತವರಿನಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಳ್ಳದ ದಾಖಲೆಯನ್ನು ಸಹ ಹೊಂದಿದೆ.

ಪ್ರಸ್ತುತ ಪರಿಸ್ಥಿತಿ ತುಂಬಾ ವಿಭಿನ್ನವಾಗಿದೆ. ಕೊಹ್ಲಿಗೆ ತನ್ನ ಖ್ಯಾತಿಗೆ ತಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ವಿರಾಟ್ ಕೊನೆಯ ಬಾರಿಗೆ ಈಡನ್ ಗಾರ್ಡನ್ಸ್‌ನಲ್ಲಿ ಬಿಳಿ ಜೆರ್ಸಿಯಲ್ಲಿ ಶತಕ ಗಳಿಸಿದ್ದರು. ಅಂದಿನಿಂದ ರನ್ ಮಷಿನ್ ಬ್ಯಾಟ್ ಮೌನವಾಗಿದೆ. ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ಬ್ಯಾಟ್​ನಿಂದ ಅಭಿಮಾನಿಗಳು ಶತಕವನ್ನು ನೋಡಲು ಕಾಯುತ್ತಿದ್ದಾರೆ. ಆದರೂ ಕೂಡ ಅವರು ತಮ್ಮ ನೆಚ್ಚಿನ ಕ್ರಿಕೆಟಿಗನ ಮೇಲಿನ ನಂಬಿಕೆಯನ್ನು ಕಳೆದುಕೊಂಡಿಲ್ಲ. ಮುಂದೊಂದು ದಿನ ಬೃಹತ್ ಬ್ಯಾಟ್ ಮತ್ತೆ ಬೆಳಗಲಿದೆ ಎಂದು ಕೊಹ್ಲಿ ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ. ಅದಕ್ಕೂ ಮೊದಲು ರೆಡ್ ಬಾಲ್ ಫಾರ್ಮ್ಯಾಟ್‌ನಲ್ಲಿರುವ ಕೊಹ್ಲಿಯ ಅದ್ಭುತ ಸ್ಮರಣೀಯ ಇನ್ನಿಂಗ್ಸ್​ಗಳಿವು.

ಇದನ್ನೂ ಓದಿ:Virat Kohli: ಮಡದಿ, ಮಗಳೊಂದಿಗೆ ರಜೆ ಮುಗಿಸಿ ಬಂದ ಕೊಹ್ಲಿ ಸೀದಾ ಹೋಗಿದ್ದು ಆಸ್ಪತ್ರೆಗೆ..! ಕಾರಣವೇನು?

ಇದನ್ನೂ ಓದಿ
ವಿಶ್ವಕಪ್​ನಲ್ಲಿ ಸಚಿನ್- ಸೆಹ್ವಾಗ್ ವಿಕೆಟ್ ಕಬಳಿಸಿದ್ದ ಸ್ಟಾರ್ ಬೌಲರ್​ ಕ್ರಿಕೆಟ್​ಗೆ ಹಠಾತ್ ವಿದಾಯ..!
T20 World Cup: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಲು ಐಸಿಸಿ ಗಡುವು; ಈ 4 ಸರಣಿಗಳಿಂದ ತಂಡ ಕಟ್ಟಬೇಕಿದೆ ಕೋಚ್ ರಾಹುಲ್
IND vs SA: ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾದಲ್ಲಿದ್ದ ಸಮಸ್ಯೆಗಳಿಗೆ ಸಿಕ್ಕ ಪರಿಹಾರಗಳಿವು

1. 254 ರನ್, ಎದುರಾಳಿ ದಕ್ಷಿಣ ಆಫ್ರಿಕಾ; ಕ್ರಿಕೆಟ್‌ನ ಸುದೀರ್ಘ ಸ್ವರೂಪದಲ್ಲಿ ಕೊಹ್ಲಿಯ ನೆಚ್ಚಿನ ಎದುರಾಳಿ ದಕ್ಷಿಣ ಆಫ್ರಿಕಾ. ಅವರು ಈ ಪ್ರೋಟಿಯಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ಸ್ಕೋರ್ ಹೊಂದಿದ್ದಾರೆ. 2019ರಲ್ಲಿ ಪುಣೆಯಲ್ಲಿ ಅಜೇಯ 254 ರನ್‌ಗಳ ಇನ್ನಿಂಗ್ಸ್‌ ಕೊಹ್ಲಿ ಅವರ ಬ್ಯಾಟ್‌ನಿಂದ ಬಂದಿತ್ತು.

2. ದಕ್ಷಿಣ ಆಫ್ರಿಕಾ ವಿರುದ್ಧ 119 ರನ್; 2013 ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಕೊಹ್ಲಿ ಶತಕದಿಂದ ಸರಣಿ ಆರಂಭವಾಯಿತು.

3.105 ರನ್, ನ್ಯೂಜಿಲೆಂಡ್ ವಿರುದ್ಧ; ಬ್ರೆಂಡನ್ ಮೆಕಲಮ್ ಹಾಗೂ ಬಿಜೆ ವಾಟ್ಲಿಂಗ್ ಜೋಡಿಯು 2014 ರಲ್ಲಿ ಭಾರತ ವಿರುದ್ಧದ ಟೆಸ್ಟ್​ನಲ್ಲಿ ಪ್ರಬಲ ಸಾಧಿಸಿತ್ತು. ಆದರೆ ಅಂದು ಕೊಹ್ಲಿಯ ಕ್ಲಾಸ್ ಇನ್ನಿಂಗ್ಸ್ ಆ ದಿನ ತಂಡದ ಒತ್ತಡವನ್ನು ಕಡಿಮೆ ಮಾಡಿ ಟೆಸ್ಟ್ ಡ್ರಾಗೆ ಕಾರಣವಾಯಿತು.

4. 114 ರನ್, ಎದುರಾಳಿ ಆಸ್ಟ್ರೇಲಿಯಾ; ನಾಯಕ ಕೊಹ್ಲಿ 2014 ರಲ್ಲಿ ಆಸೀಸ್ ವಿರುದ್ಧ ಮೊದಲ ಟೆಸ್ಟ್ ಶತಕ ಸಿಡಿಸಿದರು. ಅಡಿಲೇಡ್‌ನಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದರು. ಆಸ್ಟ್ರೇಲಿಯ ನೀಡಿದ 364 ರನ್‌ಗಳ ಸವಾಲಿಗೆ ಕೊಹ್ಲಿ ರಕ್ಷಾಕವಚವಾಗಿದ್ದರು.

5. 235 ರನ್, ಇಂಗ್ಲೆಂಡ್ ವಿರುದ್ಧ; 2016 ರಲ್ಲಿ, ಭಾರತ ತಂಡವು ವಿಶ್ವದ ನಂಬರ್ ಒನ್ ಟೆಸ್ಟ್ ತಂಡವಾಗಿತ್ತು. ವಾಂಖೆಡೆಯಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಸರಾಸರಿ 400 ರನ್ ಗಳಿಸಿತ್ತು. ಎಂಟನೇ ವಿಕೆಟ್​ಗೆ ಜಯಂತ್ ಯಾದವ್ ಜೊತೆಗೂಡಿ ಕೊಹ್ಲಿ ಹೋರಾಟ ಶುರುವಾಯಿತು. ಮೊದಲ ಇನಿಂಗ್ಸ್‌ನ ಅಂತ್ಯಕ್ಕೆ ಕೊಹ್ಲಿ ದ್ವಿಶತಕ ಸಿಡಿಸಿದ್ದರು.

7. 149 ರನ್, ಎದುರಾಳಿ ಇಂಗ್ಲೆಂಡ್; 2016 ಕೊಹ್ಲಿಗೆ ಉತ್ತಮ ವರ್ಷವಾಗಿತ್ತು. ಆ ವರ್ಷ ದಕ್ಷಿಣ ಆಫ್ರಿಕಾ ನೆಲದಲ್ಲಿ ಏಕದಿನ ಸರಣಿ ಗೆದ್ದ ದೇಶದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದರ ಬೆನ್ನಲ್ಲೇ ಇಂಗ್ಲೆಂಡ್ ಪ್ರವಾಸವೂ ನಡೆಯಿತು. ಅಂದು ನಡೆದ ಸರಣಿಯ ಮೊದಲ ಟೆಸ್ಟ್‌ನಲ್ಲಿ ಕೊಹ್ಲಿ 149 ರನ್‌ಗಳ ಇನ್ನಿಂಗ್ಸ್‌ ಆಡಿದರು.