ಏಕದಿನ ವಿಶ್ವಕಪ್​ನಿಂದ ಟೀಮ್ ಇಂಡಿಯಾದ ಇಬ್ಬರು ಸ್ಟಾರ್ ಆಟಗಾರರು ಔಟ್?

ನ್ಯೂಝಿಲೆಂಡ್ ವಿರುದ್ಧದ ವೈಟ್-ಬಾಲ್ ಸರಣಿಗಾಗಿ ಪ್ರಕಟಿಸಲಾದ ಟೀಮ್ ಇಂಡಿಯಾದಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿ ಹಾಗೂ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಸ್ಥಾನ ಪಡೆದಿಲ್ಲ. ಭಾರತ ತಂಡದ ದೈತ್ಯ ಮ್ಯಾಚ್ ವಿನ್ನರ್‌ಗಳಾಗಿರುವ ಇವರಿಬ್ಬರನ್ನು ಮುಂಬರುವ 2027ರ ವಿಶ್ವಕಪ್ ಯೋಜನೆಗಳಿಂದಲೂ ದೂರ ಇಡಲಾಗುತ್ತಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.

ಏಕದಿನ ವಿಶ್ವಕಪ್​ನಿಂದ ಟೀಮ್ ಇಂಡಿಯಾದ ಇಬ್ಬರು ಸ್ಟಾರ್ ಆಟಗಾರರು ಔಟ್?
Team India
Image Credit source: BCCI

Updated on: Oct 17, 2026 | 12:23 PM

2027ರಲ್ಲಿ ಆಫ್ರಿಕಾ ಮಣ್ಣಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಟ್ರೋಫಿ ಮುಡಿಗೇರಿಸಿಕೊಳ್ಳಲು ಬಿಸಿಸಿಐ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಜಂಟಿಯಾಗಿ ಭವಿಷ್ಯದ ಬ್ಲೂಪ್ರಿಂಟ್ ಸಿದ್ಧಪಡಿಸುತ್ತಿದ್ದಾರೆ. ಈ ಮಹತ್ವದ ಪರಿವರ್ತನೆಯ ಭಾಗವಾಗಿ, ಭಾರತೀಯ ಕ್ರಿಕೆಟ್‌ನ ಇಬ್ಬರು ದಿಗ್ಗಜರಾದ ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಅವರಿಗೆ 2027ರ ವಿಶ್ವಕಪ್ ಯೋಜನೆಗಳಿಂದ ಕೈ ಬಿಟ್ಟಿದ್ದಾರೆ ಎಂಬ ಆಘಾತಕಾರಿ ಸುದ್ದಿ ಬಿಸಿಸಿಐನ ಉನ್ನತ ಮೂಲಗಳಿಂದ ಹೊರಬಿದ್ದಿದೆ.

ರವೀಂದ್ರ ಜಡೇಜಾ ಕಥೆ ಮುಗಿಯಿತೇ?

ಬಿಸಿಸಿಐ ಮೂಲಗಳ ಪ್ರಕಾರ, ಸ್ಪಿನ್ ಆಲ್ ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಸದ್ಯ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಟೀಮ್ ಮ್ಯಾನೇಜ್‌ಮೆಂಟ್ ಈಗ ಅವರಿಗಿಂತ ಹೆಚ್ಚಾಗಿ ಕೆಳಗಿನ ಆಟಗಾರರ ಮೇಲೆ ನಂಬಿಕೆ ಇಟ್ಟಿದೆ.

  • ಅಕ್ಷರ್ ಪಟೇಲ್‌ಗೆ ಮೊದಲ ಆದ್ಯತೆ: ಜಡೇಜಾ ಅವರ ಜಾಗದಲ್ಲಿ ಎಡಗೈ ಸ್ಪಿನ್ ಆಲ್ ರೌಂಡರ್ ಆಗಿ ಅಕ್ಷರ್ ಪಟೇಲ್ ಅವರನ್ನೇ ಮೊದಲ ಆಯ್ಕೆಯಾಗಿ ಬೆಳೆಸಲಾಗುತ್ತಿದೆ.
  • ರೇಸ್‌ನಲ್ಲಿರುವ ಇತರರು: ವಾಷಿಂಗ್ಟನ್ ಸುಂದರ್, ಹರ್ಷ್ ದುಬೆ ಮತ್ತು ನಮನ್ ಧೀರ್ ಅವರಂತಹ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ.

ಶಮಿ ‘ಕೆರಿಯರ್​​’ಗೆ ಬ್ರೇಕ್?

2023ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ (55 ವಿಕೆಟ್) ಪಡೆದಿದ್ದರೂ, ವಯಸ್ಸು ಮತ್ತು ಫಿಟ್‌ನೆಸ್ ಕಾರಣಗಳಿಂದಾಗಿ ಮೊಹಮ್ಮದ್ ಶಮಿ ಅವರನ್ನು 2027ರ ಯೋಜನೆಗಳಿಂದ ದೂರ ಇಡಲಾಗುತ್ತಿದೆ ಎನ್ನಲಾಗಿದೆ.

  • ಯುವ ವೇಗಿಗಳ ದಂಡು: ಜಸ್ಪ್ರಿತ್ ಬುಮ್ರಾ ಅವರೊಂದಿಗೆ ಜೋಡಿಯಾಗಲು, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಪ್ರಸಿದ್ಧ್ ಕೃಷ್ಣ ಅವರಂತಹ ಯುವ ವೇಗಿಗಳನ್ನು ಈಗಿನಿಂದಲೇ ಸಜ್ಜುಗೊಳಿಸಲಾಗುತ್ತಿದೆ.

ರೋಹಿತ್-ವಿರಾಟ್ ಮಾತ್ರ ಸೇಫ್!

ಕುತೂಹಲಕಾರಿ ವಿಷಯವೆಂದರೆ, ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಮಾತ್ರ 2027ರ ಏಕದಿನ ವಿಶ್ವಕಪ್ ಆಡುವ ಭಾರತದ ಯೋಜನೆಗಳಲ್ಲಿ ಇನ್ನೂ ಮುಂಚೂಣಿಯಲ್ಲಿದ್ದಾರೆ.

ಸೌತ್ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ 2027ರ ವಿಶ್ವಕಪ್‌ಗೆ ಭಾರತವು ಸಂಪೂರ್ಣ ಯುವ ಮತ್ತು ಬಲಿಷ್ಠ ತಂಡವನ್ನು ಕಟ್ಟಲು ನಿರ್ಧರಿಸಿರುವುದರಿಂದ, ಜಡೇಜಾ ಮತ್ತು ಶಮಿ ಅವರ ಏಕದಿನ ಕೆರಿಯರ್‌ಗೆ ಬಹುತೇಕ ತೆರೆಬಿದ್ದಂತೆಯೇ ಕಾಣುತ್ತಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದ 37 ಆಟಗಾರರಲ್ಲಿ ಮೂವರು ಕನ್ನಡಿಗರು

ಒಟ್ಟಾರೆಯಗಿ ಹೇಳುವುದಾದರೆ, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಅವರನ್ನು ತಂಡದಿಂದ ದೂರ ಇಡುವುದು ಸುಲಭದ ಮಾತಲ್ಲ. ಇಬ್ಬರೂ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆ ಮತ್ತು ಗೆಲ್ಲಿಸಿಕೊಟ್ಟ ಪಂದ್ಯಗಳು ಇತಿಹಾಸದ ಪುಟಗಳಲ್ಲಿ ಸದಾ ಅಮರ. ಆದರೆ, ಕ್ರಿಕೆಟ್‌ನಲ್ಲಿ ಬದಲಾವಣೆ ಎನ್ನುವುದು ಅನಿವಾರ್ಯ. ಈ ಬದಲಾವಣೆಯೊಂದಿಗೆ ಇದೀಗ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧದ ಸರಣಿಗಾಗಿ ಸಜ್ಜಾಗಬೇಕಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us