U19 World Cup 2024 Final: ಭಾರತದ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ

India U19 vs Australia U19 Final: ಸೆಮಿಫೈನಲ್​ನಲ್ಲಿ ಸೌತ್ ಆಫ್ರಿಕಾ ವಿರುದ್ಧ 2 ವಿಕೆಟ್​ಗಳ ರೋಚಕ ಜಯ ಸಾಧಿಸಿ ಭಾರತ ತಂಡವು ಫೈನಲ್​ಗೆ ಪ್ರವೇಶಿಸಿತ್ತು. ಹಾಗೆಯೇ ಪಾಕಿಸ್ತಾನ್ ವಿರುದ್ಧ 1 ವಿಕೆಟ್​ನ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಇದೀಗ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಫೈನಲ್​ನಲ್ಲಿ ಮುಖಾಮುಖಿಯಾಗಿದೆ.

U19 World Cup 2024 Final: ಭಾರತದ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ
IND vs AUS
Edited By:

Updated on: Feb 11, 2024 | 1:09 PM

ಸೌತ್ ಆಫ್ರಿಕಾದ ವಿಲೋಮೂರ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್ (U19 World Cup 2024) ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡದ ನಾಯಕ ಹಗ್ ವೈಬ್ಜೆನ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಫೈನಲ್ ಪಂಧ್ಯದಲ್ಲಿನ ಟೀಮ್ ಇಂಡಿಯಾ ಮೊದಲು ಬೌಲಿಂಗ್ ಮಾಡಲಿದ್ದಾರೆ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್:

ಭಾರತ U19 (ಪ್ಲೇಯಿಂಗ್ XI): ಆದರ್ಶ್ ಸಿಂಗ್, ಅರ್ಶಿನ್ ಕುಲಕರ್ಣಿ, ಮುಶೀರ್ ಖಾನ್, ಉದಯ್ ಸಹರಾನ್(ನಾಯಕ), ಪ್ರಿಯಾಂಶು ಮೊಲಿಯಾ, ಸಚಿನ್ ದಾಸ್, ಅರವೆಲ್ಲಿ ಅವನೀಶ್ (ವಿಕೆಟ್ ಕೀಪರ್), ಮುರುಗನ್ ಅಭಿಷೇಕ್, ರಾಜ್ ಲಿಂಬಾನಿ, ನಮನ್ ತಿವಾರಿ, ಸೌಮಿ ಪಾಂಡೆ.

ಆಸ್ಟ್ರೇಲಿಯಾ U19 (ಪ್ಲೇಯಿಂಗ್ XI): ಹ್ಯಾರಿ ಡಿಕ್ಸನ್, ಸ್ಯಾಮ್ ಕಾನ್ಸ್ಟಾಸ್, ಹಗ್ ವೈಬ್ಜೆನ್(ನಾಯಕ), ಹರ್ಜಸ್ ಸಿಂಗ್, ರಿಯಾನ್ ಹಿಕ್ಸ್(ವಿಕೆಟ್ ಕೀಪರ್), ಆಲಿವರ್ ಪೀಕ್, ರಾಫ್ ಮ್ಯಾಕ್‌ಮಿಲನ್, ಚಾರ್ಲಿ ಆಂಡರ್ಸನ್, ಟಾಮ್ ಸ್ಟ್ರಾಕರ್, ಮಾಹ್ಲಿ ಬಿಯರ್ಡ್‌ಮನ್, ಕ್ಯಾಲಮ್ ವಿಡ್ಲರ್.

ಹೆಡ್ ಟು ಹೆಡ್:

ಕಿರಿಯರ ವಿಶ್ವಕಪ್​ ಫೈನಲ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಎರಡು ಬಾರಿ ಮುಖಾಮುಖಿಯಾಗಿವೆ. 2012 ರಲ್ಲಿ ಮೊದಲ ಬಾರಿ ಮುಖಾಮುಖಿಯಾಗಿತ್ತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ ಓವರ್‌ನಲ್ಲಿ 225 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 6 ವಿಕೆಟ್​ಗಳ ಜಯ ಸಾಧಿಸಿತ್ತು.

ಇನ್ನು 2018 ರ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 2ನೇ ಬಾರಿ ಮುಖಾಮುಖಿಯಾಗಿತ್ತು. ಈ ವೇಳೆ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 216 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡವು 2 ವಿಕೆಟ್ ಕಳೆದುಕೊಂಡು 220 ರನ್ ಬಾರಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದೀಗ ಆರು ವರ್ಷಗಳ ನಂತರ, ಭಾರತ ತಂಡವು ಮತ್ತೊಮ್ಮೆ ಆಸ್ಟ್ರೇಲಿಯಾ ತಂಡವನ್ನು ಫೈನಲ್​ನಲ್ಲಿ ಎದುರಿಸುತ್ತಿರುವುದು ವಿಶೇಷ.

ಭಾರತ U19 ತಂಡ: ಆದರ್ಶ್ ಸಿಂಗ್, ಅರ್ಶಿನ್ ಕುಲಕರ್ಣಿ, ಮುಶೀರ್ ಖಾನ್, ಉದಯ್ ಸಹರಾನ್ (ನಾಯಕ), ಪ್ರಿಯಾಂಶು ಮೊಲಿಯಾ, ಸಚಿನ್ ಧಾಸ್, ಅರವೆಲ್ಲಿ ಅವನೀಶ್ (ವಿಕೆಟ್ ಕೀಪರ್), ಮುರುಗನ್ ಅಭಿಷೇಕ್, ರಾಜ್ ಲಿಂಬಾನಿ, ನಮನ್ ತಿವಾರಿ, ಸೌಮಿ ಪಾಂಡೆ, ಆರಾಧ್ಯ ಶುಕ್ಲಾ, ಅಂಶ್ ಗೋಸಾಯಿ ಗೌಡ, ರುದ್ರ ಪಟೇಲ್, ಪ್ರೇಮ್ ದೇವ್ಕರ್, ಮೊಹಮ್ಮದ್ ಅಮಾನ್, ಇನ್ನೇಶ್ ಮಹಾಜನ್.

ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿಯ ರಿಎಂಟ್ರಿ ಯಾವಾಗ? ಇಲ್ಲಿದೆ ಮಾಹಿತಿ

ಆಸ್ಟ್ರೇಲಿಯಾ U19 ತಂಡ: ಹ್ಯಾರಿ ಡಿಕ್ಸನ್, ಸ್ಯಾಮ್ ಕಾನ್ಸ್ಟಾಸ್, ಹಗ್ ವೈಬ್ಜೆನ್(ನಾಯಕ), ಹರ್ಜಾಸ್ ಸಿಂಗ್, ರಿಯಾನ್ ಹಿಕ್ಸ್(ವಿಕೆಟ್ ಕೀಪರ್), ಆಲಿವರ್ ಪೀಕ್, ಟಾಮ್ ಕ್ಯಾಂಪ್‌ಬೆಲ್, ರಾಫ್ ಮ್ಯಾಕ್‌ಮಿಲನ್, ಟಾಮ್ ಸ್ಟ್ರಾಕರ್, ಮಾಹ್ಲಿ ಬಿಯರ್ಡ್‌ಮ್ಯಾನ್, ಕ್ಯಾಲಮ್ ವಿಡ್ಲರ್, ಲಾಚ್ಲಾನ್ ಐಟ್ಕೆನ್, ಚಾರ್ಲಿ ಆಂಡರ್ಸನ್, ಹರ್ಕಿರತ್ ಬಾಜ್ವಾ, ಕೋರೆ ವಾಸ್ಲಿ, ಏಡನ್ ಒ ಕಾನರ್.

 

Published On - 1:06 pm, Sun, 11 February 24

Follow Us