ಅಂಡರ್-19 ವಿಶ್ವಕಪ್: ಗೆಲುವಿನ ಬಳಿಕ ಮೈದಾನದಲ್ಲೇ ಹುಡುಗರ ಹೊಡೆದಾಟ!

ಇದೆ ಮೊದಲ ಬಾರಿಗೆ ಬಾಂಗ್ಲಾದೇಶ ಅಂಡರ್ ನೈಂಟೀನ್ ವಿಶ್ವಕಪ್ ಗೆದ್ದು ಬೀಗಿದೆ. ಅದು ಭಾರತದಂತ ಬಲಿಷ್ಟ ತಂಡವನ್ನ ಮಣಿಸಿ ಅನ್ನೋದು ಬಾಂಗ್ಲಾಗೆ ನಿಜಕ್ಕೂ ಪ್ರತಿಷ್ಟೆಯ ವಿಷ್ಯವೇ. ಬಾಂಗ್ಲಾ ಹುಡುಗರು ಚಾಂಪಿಯನ್ ಪಟ್ಟ ಅಲಂಕರಿಸಿದ್ದಕ್ಕೆ ಯಾರ ಪ್ರತಿರೋಧವೂ ಇಲ್ಲ. ಆದ್ರೆ ಬಾಂಗ್ಲಾ ಕ್ರಿಕೆಟಿಗರು ತಮ್ಮ ಗೆಲುವನ್ನ ತೀರಾ ಅತಿರೇಕದಿಂದ ಸಂಭ್ರಮಿಸಿದ್ರು. ಕ್ರೀಡೆ ಅಂದ್ಮೇಲೆ ಸೋಲು ಗೆಲುವು ಇದ್ದಿದ್ದೆ. ಆದ್ರೆ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ಕ್ರಿಕೆಟಿಗರು ತೋರಿಸಿದ ಭಂಡಾಟ. ನಿಜಕ್ಕೂ ತಲೆತಗ್ಗಿಸುವಂತಹದ್ದು. ಭಾರತ-ಪಾಕಿಸ್ತಾನ ಪಂದ್ಯ ನಡೆದ್ರೂ ಆ ಮಟ್ಟದ ವೈರತ್ವ […]

ಅಂಡರ್-19 ವಿಶ್ವಕಪ್: ಗೆಲುವಿನ ಬಳಿಕ ಮೈದಾನದಲ್ಲೇ ಹುಡುಗರ ಹೊಡೆದಾಟ!
Follow us
ಸಾಧು ಶ್ರೀನಾಥ್​
|

Updated on: Feb 10, 2020 | 10:22 AM

ಇದೆ ಮೊದಲ ಬಾರಿಗೆ ಬಾಂಗ್ಲಾದೇಶ ಅಂಡರ್ ನೈಂಟೀನ್ ವಿಶ್ವಕಪ್ ಗೆದ್ದು ಬೀಗಿದೆ. ಅದು ಭಾರತದಂತ ಬಲಿಷ್ಟ ತಂಡವನ್ನ ಮಣಿಸಿ ಅನ್ನೋದು ಬಾಂಗ್ಲಾಗೆ ನಿಜಕ್ಕೂ ಪ್ರತಿಷ್ಟೆಯ ವಿಷ್ಯವೇ. ಬಾಂಗ್ಲಾ ಹುಡುಗರು ಚಾಂಪಿಯನ್ ಪಟ್ಟ ಅಲಂಕರಿಸಿದ್ದಕ್ಕೆ ಯಾರ ಪ್ರತಿರೋಧವೂ ಇಲ್ಲ. ಆದ್ರೆ ಬಾಂಗ್ಲಾ ಕ್ರಿಕೆಟಿಗರು ತಮ್ಮ ಗೆಲುವನ್ನ ತೀರಾ ಅತಿರೇಕದಿಂದ ಸಂಭ್ರಮಿಸಿದ್ರು.

ಕ್ರೀಡೆ ಅಂದ್ಮೇಲೆ ಸೋಲು ಗೆಲುವು ಇದ್ದಿದ್ದೆ. ಆದ್ರೆ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ಕ್ರಿಕೆಟಿಗರು ತೋರಿಸಿದ ಭಂಡಾಟ. ನಿಜಕ್ಕೂ ತಲೆತಗ್ಗಿಸುವಂತಹದ್ದು. ಭಾರತ-ಪಾಕಿಸ್ತಾನ ಪಂದ್ಯ ನಡೆದ್ರೂ ಆ ಮಟ್ಟದ ವೈರತ್ವ ಕಾಣಿಸೋದಿಲ್ಲ. ಆದ್ರೆ ಬಾಂಗ್ಲಾ ಬಾಲಕರು ಭಾರತದ ವಿರುದ್ಧ ಅಷ್ಟೊಂದು ವೈರತ್ವದ ಮನೋಭಾವನೆಯಿಂದ ಆಡಿದ್ರು.

ಆರಂಭದಿಂದಲೇ ಶುರುವಾಗಿದ್ದು ಬಾಂಗ್ಲಾ ಬಾಲಕರ ಭಂಡಾಟ: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡೋಕೆ ಬಂದ ಭಾರತದ ಆರಂಭಿಕರ ವಿರುದ್ಧ ಮೊದಲ ಓವರ್​ನಿಂದಲೇ ಸ್ಲೆಡ್ಜಿಂಗ್ ಮಾಡೋದಕ್ಕೆ ಶುರುಮಾಡಿದ್ರು. ಪ್ರತಿಯೊಬ್ಬ ಬೌಲರ್​ಗಳ ಕೂಡ ಭಾರತದ ಬ್ಯಾಟ್ಸ್​ಮನ್​ನನ್ನ ಗುರಾಯಿಸುತ್ತ ತಾಳ್ಮೆ ಕಡೆದುಕೊಳ್ಳೋ ಹಾಗೇ ಮಾಡ್ತಿದ್ದ.

ದಿವ್ಯಾಂಶ್ ಸಕ್ಸೇನಾನನ್ನ ಕೆಣಕಿದ ಬಾಂಗ್ಲಾದ ಸಕೀಬ್: ಬಾಂಗ್ಲಾದ ವೇಗಿ ಸಕೀಬ್ ಬೇಕು ಬೇಕು ಅಂತಲೇ ದಿವ್ಯಾಂಶ್ ಸಕ್ಸೇನಾನನ್ನ ಕೆಣಕೋಕೆ ಶುರುಮಾಡಿದ. ಒಮ್ಮೆ ಸಕ್ಸೇನಾಗೆ ಬಾಲ್ ಟಚ್ ಆಗಲಿ ಅಂತಾನೇ ಥ್ರೋ ಮಾಡಿದ. ಆದ್ರೆ ಬಗ್ಗಿದ ಸಕ್ಸೇನಾ ಭಾರಿ ಹೊಡೆತದಿಂದ ಪಾರಾಗಿದ್ದ. ಇಷ್ಟಕ್ಕೆ ನಿಲ್ಲದ ಸಕೀಬ್ ಬೇಕು ಬೇಕು ಅಂತಲೇ ಸಕ್ಸೇನಾ ಹತ್ತಿರಕ್ಕೆ ಬಂದು ಕೆಣಕುತ್ತಿದ್ದ.

ಇದೊಂದೇ ಅಲ್ಲ.. ಹೀಗೆ ಬಾಂಗ್ಲಾದ ಪ್ರತಿಯೊಬ್ಬ ಕ್ರಿಕೆಟಿಗನು ಭಾರತದ ವಿರುದ್ಧ ಏನೋ ದೊಡ್ಡ ವೈರತ್ವವಿದೆ ಅನ್ನೋ ಹಾಗೇ ಆಟವಾಡಿದ್ರು. ಆದ್ರೆ ಇದಕ್ಕ ನಮ್ ಹುಡುಗ್ರು ತಲೆಕೆಡಿಸಿಕೊಂಡಿರಲಿಲ್ಲ. ಹಾಗಿದ್ರೂ ಬಾಂಗ್ಲಾ ಬಾಲಕರು ಪಂದ್ಯದುದ್ದಕ್ಕೂ ತಮ್ಮ ಹಳೆ ಚಾಳಿಯನ್ನ ಮುಂದುವರಿಸಿಕೊಂಡು ಹೋದ್ರು.

ಬ್ಯಾಟಿಂಗ್ ಮಾಡುವಾಗಲೂ ತಾವೇ ಗೆಲ್ತೀವಿ ಅನ್ನೋ ಹುಮ್ಮಸ್ಸಿನಲ್ಲಿ, ಭಾರತೀಯ ಬೌಲರ್​ಗಳನ್ನ ಕೆಣಕೋಕೆ ಶುರುಮಾಡಿದ್ರು. ಒಂದೆಡೆ ಮೈದಾನದಲ್ಲಿ ಆಟಗಾರರು ಕಿರಿಕ್ ಮಾಡ್ತಿದ್ರೆ, ಮತ್ತೊಂದೆಡೆ ಬಾಂಗ್ಲಾ ಅಭಿಮಾನಿಗಳು ತೀರಾ ಅತಿರೇಕದಿಂದ ಸಂಭ್ರಮಾಚರಣೆ ಮಾಡ್ತಿದ್ರು. ಇದು ನಿಜಕ್ಕೂ ನಮ್ಮ ಹುಡುಗರ ಪಿತ್ತ ನೆತ್ತಿಗೇರುವಂತೆ ಮಾಡಿತು.

ಗೆಲುವಿನ ಬಳಿಕ ಭಂಡಾಟ ತೋರಿಸಿದ ಬಾಂಗ್ಲಾ ಬಾಲಕರು: ಇನ್ನು ಗೆಲುವು ದಾಖಲಿಸ್ತಿದ್ದಂತೆ ಬಾಂಗ್ಲಾ ಕ್ರಿಕೆಟಿಗರು ಮೈದಾನದಲ್ಲಿ ಧೂಳೆಬ್ಬಿಸಿಬಿಟ್ರು. ಗೆದ್ವಿ ಅನ್ನೋ ಸಂಭ್ರಮಾಚರಣೆ ಮಾಡೋದು ಬಿಟ್ಟು, ಭಾರತದ ಹುಡುಗರನ್ನ ಕಿಚಾಯಿಸೋದಕ್ಕೆ ಶುರುವಿಟ್ಕೊಂಡಿದ್ರು. ಮೊದಲೇ ಬಾಂಗ್ಲಾ ಬಾಲಕರ ಭಂಡಾಟಕ್ಕೆ ಬೇಸತ್ತಿದ್ದ ಪ್ರಿಯಂ ಪಡೆಯೂ ರೊಚ್ಚಿಗೆದ್ದಿತ್ತು. ಇಲ್ನೋಡಿ.. ನಮ ಹುಡುಗರ ಕೈ ಕುಲುಕಿ ಹೋಗಬೇಕಾದ ಬಾಂಗ್ಲಾ ಯುವ ಪಡೆ ಕೈ ಕೈ ಮಿಲಾಯಿಸೋದಕ್ಕೆ ಮುಂದಾಗಿತ್ತು.

ಇದು ವಿಕೋಪಕ್ಕೆ ಹೋಗುತ್ತೆ ಅನ್ನೋದು ಗೊತ್ತಾಗೇ, ಕೋಚ್ ಪಾರಸ್ ಮಾಂಬ್ರೆ ಪೆವಿಲಿಯನ್​ಗೆ ಬನ್ನಿ ಅಂತಾ ಕರೀತಾರೆ. ಕೋಚ್ ಮಾತಿಗೆ ಮನ್ನಣೆ ನೀಡಿದ ಪ್ರಿಯಂ ಪಡೆ ಮಾತಿಗೆ ಮಾತು ಬೆಳಸದೇ ವಾಪಸ್ ಆಗುತ್ತೆ.

ಇನ್ನು ಮೈದಾನದಲ್ಲಿ ಹುಡುಗರ ಹೊಡೆದಾಟ ಜೋರಾಗುತ್ತೆ ಅನ್ನೋದು ಗೊತ್ತಾಗೇ ಕ್ಯಾಮರಾವನ್ನ ಬೇರೆಡೆ ಪೋಕಸ್ ಮಾಡ್ತಾರೆ. ಆ ಬಳಿಕ ಏನಾಗಿದೆ ಅನ್ನೋದು ಯಾರಿಗೂ ಗೊತ್ತಾಗಿಲ್ಲ. ಆದ್ರೆ ತಪ್ಪು ಬಾಂಗ್ಲಾ ಬಾಲಕರದ್ದೇ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಫೈನಲ್​ನಲ್ಲಿ ಭಂಡಾಟವಾಡಿದ ಬಾಂಗ್ಲಾ ಆಟಗಾರರಿಗೆ ಐಸಿಸಿ ಬರೆ ಎಳೆಯುತ್ತಾ ಅನ್ನೋದನ್ನ ಕಾದು ನೋಡ್ಬೇಕು.

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ