AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಡರ್-19 ವಿಶ್ವಕಪ್ ತಂಡ ಪ್ರಕಟಿಸಿದ ಐಸಿಸಿ; ಭಾರತದ ಮೂವರಿಗೆ ಅವಕಾಶ

U19 World Cup Team of the Tournament revealed: ಭಾರತ U19 ತಂಡವು 2026ರ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿ ಆರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ 175 ರನ್‌ಗಳ ಅಮೋಘ ಇನ್ನಿಂಗ್ಸ್ ತಂಡದ ಗೆಲುವಿಗೆ ನಿರ್ಣಾಯಕವಾಯಿತು. ಇದೀಗ ಐಸಿಸಿ ಘೋಷಿಸಿರುವ ಅಂಡರ್-19 ವಿಶ್ವಕಪ್ ತಂಡದಲ್ಲಿ ವೈಭವ್ ಸೂರ್ಯವಂಶಿ, ಕನಿಷ್ಕ್ ಚೌಹಾಣ್ ಮತ್ತು ಹೆನಿಲ್ ಪಟೇಲ್ ಸೇರಿದಂತೆ ಮೂವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ.

ಅಂಡರ್-19 ವಿಶ್ವಕಪ್ ತಂಡ ಪ್ರಕಟಿಸಿದ ಐಸಿಸಿ; ಭಾರತದ ಮೂವರಿಗೆ ಅವಕಾಶ
U19 World Cup Team
ಪೃಥ್ವಿಶಂಕರ
|

Updated on: Feb 09, 2026 | 7:11 PM

Share

ಫೆಬ್ರವರಿ 6 ರಂದು ಹರಾರೆಯಲ್ಲಿ ನಡೆದ 2026 ರ ಅಂಡರ್-19 ವಿಶ್ವಕಪ್‌ (U19 World Cup) ಫೈನಲ್‌ನಲ್ಲಿ ಯುವ ಭಾರತ ತಂಡ, ಇಂಗ್ಲೆಂಡ್ (India vs England) ತಂಡವನ್ನು ಸೋಲಿಸಿ 6ನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತು. ಭಾರತ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸಿ ವಿಶ್ವಕಪ್ ಗೆದ್ದಿದ್ದು ಇದು ಸತತ ಎರಡನೇ ಬಾರಿ. ಭಾರತ ತಂಡದ ಈ ಐತಿಹಾಸಿಕ ಗೆಲುವಿನಲ್ಲಿ ತಂಡದ ಎಲ್ಲಾ ಆಟಗಾರರ ಕೊಡುಗೆ ಪ್ರಮುಖವಾಗಿತ್ತು. ಅದರಲ್ಲೂ ಫೈನಲ್ ಪಂದ್ಯದಲ್ಲಿ 175 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ವಿಶ್ವಕಪ್ ಮುಗಿದ ಮೂರು ದಿನಗಳ ಬಳಿಕ ಐಸಿಸಿ ಈ ಬಾರಿಯ ಅಂಡರ್-19 ವಿಶ್ವಕಪ್​ ತಂಡವನ್ನು ಘೋಷಿಸಿದೆ. ಈ ತಂಡದಲ್ಲಿ ಭಾರತದ ಮೂವರು ಆಟಗಾರರು ಕೂಡ ಸ್ಥಾನ ಪಡೆದಿದ್ದಾರೆ.

ಐಸಿಸಿ ವಿಶ್ವಕಪ್ ತಂಡದಲ್ಲಿ 12 ಆಟಗಾರರು

ಪ್ರತಿ ಐಸಿಸಿ ಈವೆಂಟ್ ಮುಗಿದ ಬಳಿಕ ಐಸಿಸಿ, ಟೂರ್ನಮೆಂಟ್ ತಂಡವನ್ನು ಪ್ರಕಟಿಸುತ್ತದೆ. ಆ ಪ್ರಕಾರ ಐಸಿಸಿ, ಅಂಡರ್-19 ವಿಶ್ವಕಪ್‌ನ ಅತ್ಯುತ್ತಮ ತಂಡವನ್ನು ಘೋಷಿಸಿದೆ. ಐಸಿಸಿ ಈ ತಂಡದಲ್ಲಿ ವೈಭವ್ ಸೂರ್ಯವಂಶಿ ಕೂಡ ಸ್ಥಾನ ಪಡೆದಿದ್ದಾರೆ. ವೈಭವ್ ಹೊರತುಪಡಿಸಿ ಇಡೀ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿದ 12 ಆಟಗಾರರನ್ನು ಆಯ್ಕೆ ಮಾಡಿ ಐಸಿಸಿ ತಂಡವನ್ನು ಪ್ರಕಟಿಸಿದೆ.

ಭಾರತದ ಮೂವರಿಗೆ ಸ್ಥಾನ

12 ಸದಸ್ಯರ ತಂಡವನ್ನು ಇಯಾನ್ ಬಿಷಪ್, ಆಂಡಿ ಫ್ಲವರ್ ಮತ್ತು ಟೆಲ್ಫೋರ್ಡ್ ವೈಸ್ ಅವರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯು ಆಯ್ಕೆ ಮಾಡಿದೆ. ವೈಭವ್ ಜೊತೆಗೆ, 12 ಸದಸ್ಯರ ತಂಡದಲ್ಲಿ ಇಬ್ಬರು ಭಾರತೀಯರಾದ ಕನಿಷ್ಕ್ ಚೌಹಾಣ್ ಮತ್ತು ಹೆನಿಲ್ ಪಟೇಲ್ ಕೂಡ ಇದ್ದಾರೆ. ಇಂಗ್ಲೆಂಡ್ ನಾಯಕ ಥಾಮಸ್ ರೆವ್ ಅವರನ್ನು ಟೂರ್ನಮೆಂಟ್ ತಂಡದ ನಾಯಕರನ್ನಾಗಿಯೂ ಆಯ್ಕೆ ಮಾಡಲಾಗಿದೆ.

ಭಾರತ- ಇಂಗ್ಲೆಂಡ್​ನಿಂದ ಅತ್ಯಧಿಕ ಆಟಗಾರರು

ಐಸಿಸಿ ಆಯ್ಕೆ ಮಾಡಿರುವ ತಂಡದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡದಿಂದ ತಲಾ 3 ಆಟಗಾರರು ಆಯ್ಕೆಯಾಗಿದ್ದಾರೆ. ಉಳಿದಂತೆ ಅಫ್ಘಾನಿಸ್ತಾನ ತಂಡದಿಂದ ಇಬ್ಬರು ಆಟಗಾರರು, ಶ್ರೀಲಂಕಾ, ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡದಿಂದ ತಲಾ ಒಬ್ಬರು ಆಟಗಾರರನ್ನು ಈ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅಚ್ಚರಿಯ ಸಂಗತಿಯೆಂದರೆ ಈ ತಂಡದಲ್ಲಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಂತಹ ತಂಡಗಳ ಒಬ್ಬ ಆಟಗಾರನ್ನು ಸ್ಥಾನ ಪಡೆದಿಲ್ಲ.

ಐಸಿಸಿ ಅಂಡರ್-19 ವಿಶ್ವಕಪ್ ತಂಡ

1. ವೈಭವ್ ಸೂರ್ಯವಂಶಿ (ಭಾರತ)

2. ವೀರನ್ ಚಾಮುದಿತ (ಶ್ರೀಲಂಕಾ)

3. ಫೈಸಲ್ ಖಾನ್ ಶಿನೋಜಾಡಾ (ಅಫ್ಘಾನಿಸ್ತಾನ)

4. ಥಾಮಸ್ ರೆವ್ (ನಾಯಕ, ವಿಕೆಟ್ ಕೀಪರ್) (ಇಂಗ್ಲೆಂಡ್)

5. ಆಲಿವರ್ ಪೀಕ್ (ಆಸ್ಟ್ರೇಲಿಯಾ)

6. ಬೆನ್ ಮೇಯಸ್ (ಇಂಗ್ಲೆಂಡ್)

7. ಕಾನಿಷ್ಕ್ ಚೌಹಾಣ್ (ಭಾರತ)

8. ನೂರಿಸ್ತಾನಿ ಒಮರ್ಜೈ (ಅಫ್ಘಾನಿಸ್ತಾನ)

9. ವಿಟೆಲ್ ಲಾವ್ಸ್ (ವೆಸ್ಟ್ ಇಂಡೀಸ್)

10. ಅಲಿ ರಜಾ (ಪಾಕಿಸ್ತಾನ)

11. ಮನ್ನಿ ಲುಮ್ಸ್ಡೆನ್ (ಇಂಗ್ಲೆಂಡ್)

12. ಹೆನಿಲ್ ಪಟೇಲ್ (ಭಾರತ).

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ
ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆಗೆ ಯತ್ನ: ವ್ಯಕ್ತಿಗೆ ಡಬಲ್​​ ಶಾಕ್​
ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆಗೆ ಯತ್ನ: ವ್ಯಕ್ತಿಗೆ ಡಬಲ್​​ ಶಾಕ್​
ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು
ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು
ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ
ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ
ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ
ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ