ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿದ ಆರು ಪ್ರಕರಣಗಳಲ್ಲಿ ಭಾಗಿ; ಯುಎಇ ಕ್ರಿಕೆಟಿಗನಿಗೆ 4 ವರ್ಷಗಳ ಕಾಲ ನಿಷೇಧದ ಶಿಕ್ಷೆ

ಯುಎಇ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಗುಲಾಂ ಶಬ್ಬೀರ್ ಅವರನ್ನು ನಾಲ್ಕು ವರ್ಷಗಳ ಕಾಲ ಕ್ರಿಕೆಟ್​ನಿಂದ ನಿಷೇಧಿಸಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಆತನನ್ನು ದೋಷಿ ಎಂದು ಪರಿಗಣಿಸಲಾಗಿದೆ.

ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿದ ಆರು ಪ್ರಕರಣಗಳಲ್ಲಿ ಭಾಗಿ; ಯುಎಇ ಕ್ರಿಕೆಟಿಗನಿಗೆ 4 ವರ್ಷಗಳ ಕಾಲ ನಿಷೇಧದ ಶಿಕ್ಷೆ
ಯುಎಇ ಕ್ರಿಕೆಟ್

ಯುಎಇ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಗುಲಾಂ ಶಬ್ಬೀರ್ ಅವರನ್ನು ನಾಲ್ಕು ವರ್ಷಗಳ ಕಾಲ ಕ್ರಿಕೆಟ್​ನಿಂದ ನಿಷೇಧಿಸಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಆತನನ್ನು ದೋಷಿ ಎಂದು ಪರಿಗಣಿಸಲಾಗಿದೆ. ಗುಲಾಂ ಶಬ್ಬೀರ್ ಆರು ಆರೋಪಗಳ ಮೇಲೆ ಶಿಕ್ಷೆಗೊಳಗಾಗಿದ್ದಾರೆ. ಜೊತೆಗೆ ಈ ಕ್ರಿಕೆಟಿಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಗುಲಾಂ ಶಬ್ಬೀರ್ ಯುಎಇ ಪರ 23 ಏಕದಿನ ಪಂದ್ಯಗಳಲ್ಲಿ 21.73 ರ ಸರಾಸರಿಯಲ್ಲಿ 500 ರನ್ ಗಳಿಸಿದರು ಮತ್ತು 30 ಕ್ಯಾಚ್ ಮತ್ತು ಎರಡು ಸ್ಟಂಪಿಂಗ್ ಮಾಡಿದ್ದಾರೆ. ಜೊತೆಗೆ 17 ಟಿ 20 ಪಂದ್ಯಗಳಲ್ಲಿ 18.90 ಸರಾಸರಿಯಲ್ಲಿ 208 ರನ್ ಗಳಿಸಿದ್ದಾರೆ. ಇಲ್ಲಿ 14 ಕ್ಯಾಚ್‌ಗಳು ಮತ್ತು ಒಂದು ಸ್ಟಂಪಿಂಗ್ ಅವರ ಹೆಸರಿನಲ್ಲಿದೆ.

ಐಸಿಸಿಯು ನೀಡಿದ ಹೇಳಿಕೆಯಲ್ಲಿ, ಶಬ್ಬೀರ್ ಸೆಕ್ಷನ್ 2.4.4 ನಿಯಮವನ್ನು ಅನುಸರಿಸಲಿಲ್ಲ ಮತ್ತು ಭ್ರಷ್ಟಾಚಾರ ವಿರೋಧಿ ಘಟಕಕ್ಕೆ 2019 ರ ಜನವರಿ-ಫೆಬ್ರವರಿ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಸ್ತಾಪದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿಲ್ಲ ಎಂದು ಹೇಳಲಾಗಿದೆ. ಇದರ ಹೊರತಾಗಿ, ಏಪ್ರಿಲ್ 2019 ರಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯ ಸಮಯದಲ್ಲಿ, ಅವರು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ. ಆದರೆ ಅವರು ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಜೊತೆಗೆ ಸಂಬಂಧಿಸಿದ ಮಾಹಿತಿಯನ್ನು ಮರೆಮಾಚುವ ಮೂಲಕ ತನಿಖೆಗೆ ಅಡ್ಡಿಪಡಿಸಿದ್ದಕ್ಕಾಗಿ ತಪ್ಪಿತಸ್ಥನೆಂದು ಕಂಡುಬಂದಿದೆ. ಗುಲಾಂ ಶಬ್ಬೀರ್ ಮೇಲಿನ ನಿಷೇಧ 20 ಆಗಸ್ಟ್ 2025 ಕ್ಕೆ ಕೊನೆಗೊಳ್ಳುತ್ತದೆ.

9 ತಿಂಗಳಲ್ಲಿ ಐವರು ಕ್ರಿಕೆಟಿಗರನ್ನು ನಿಷೇಧಿಸಲಾಗಿದೆ
ಯುಪಿಎ ಕ್ರಿಕೆಟಿಗನನ್ನು ನಿಷೇಧಿಸಿದ ಸುದ್ದಿ ಐಪಿಎಲ್ ಆರಂಭಕ್ಕೆ ಒಂದು ವಾರ ಮುಂಚೆಯೇ ಬಂದಿದೆ. ಇತ್ತೀಚಿನ ದಿನಗಳಲ್ಲಿ, ಅನೇಕ ಯುಎಇ ಕ್ರಿಕೆಟಿಗರು ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಎರಡು ತಿಂಗಳ ಹಿಂದೆ ಜುಲೈನಲ್ಲಿ, ಅಮೀರ್ ಹಯಾತ್ ಮತ್ತು ಅಶ್ಫಾಕ್ ಅಹ್ಮದ್ ಅವರು ಫಿಕ್ಸಿಂಗ್ ಪ್ರಯತ್ನಗಳಲ್ಲಿ ಭಾಗಿಯಾಗಿದ್ದಕ್ಕಾಗಿ ತಪ್ಪಿತಸ್ಥರೆಂದು ಕಂಡುಬಂದರು. ಇದರ ನಂತರ ಅವರನ್ನು 8 ವರ್ಷಗಳ ಕಾಲ ನಿಷೇಧಿಸಲಾಯಿತು. ಐಸಿಸಿ ಪ್ರಕಾರ, ಈ ಇಬ್ಬರು ಆಟಗಾರರು 2019 ರಲ್ಲಿ ತಮ್ಮ ದೇಶದಲ್ಲಿ ನಡೆದ ಟಿ 20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಭಾರತೀಯ ಬುಕ್ಕಿಯ ಸಂಪರ್ಕಕ್ಕೆ ಬಂದಿದ್ದರು. ಮೊನ್ನೆ ಮೊನ್ನೆ ಮೊಹಮ್ಮದ್ ನವೀದ್ ಮತ್ತು ಶೈಮಾನ್ ಅನ್ವರ್ ಬಟ್ 2019 ರಲ್ಲಿ ನಡೆದ ಟಿ 20 ವಿಶ್ವಕಪ್ ಅರ್ಹತಾ ಪಂದ್ಯಗಳ ಫಿಕ್ಸಿಂಗ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿತ್ತು.

ಐಸಿಸಿ ಜನರಲ್ ಮ್ಯಾನೇಜರ್ ಅಲೆಕ್ಸ್ ಮಾರ್ಷಲ್ ಗುಲಾಂ ಶಬ್ಬೀರ್ ಪ್ರಕರಣದಲ್ಲಿ ಶಬ್ಬೀರ್ ಯುಎಇ ಪರ 40 ಪಂದ್ಯಗಳನ್ನು ಆಡಿದ್ದಾರೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಅವರ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು. ಅವರು ಐಸಿಸಿಯ ಕನಿಷ್ಠ ಮೂರು ಭ್ರಷ್ಟಾಚಾರ ವಿರೋಧಿ ಶಿಕ್ಷಣ ಅವಧಿಗಳಲ್ಲಿ ಭಾಗವಹಿಸಿದರು. ಹಾಗಾಗಿ ಅವರು ಒಂದು ಬಾರಿ ಕೂಡ ವರದಿ ಮಾಡದಿರುವುದು ನಿರಾಶಾದಾಯಕವಾಗಿದೆ.

Click on your DTH Provider to Add TV9 Kannada