CPL 2021: ಮೈದಾನದಲ್ಲಿ ಕೋಪ-ತಾಪ: ಬ್ಯಾಟ್, ಹೆಲ್ಮೆಟ್ ಎಸೆದು ಆಕ್ರೋಶ ಹೊರಹಾಕಿದ ವಿಂಡೀಸ್ ಆಟಗಾರ

Sherfane Rutherford: ಸಿಪಿಎಲ್​ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಮತ್ತು ಸೇಂಟ್ ಲೂಸಿಯಾ ಕಿಂಗ್ಸ್ ಮುಖಾಮುಖಿಯಾಗಿತ್ತು.

CPL 2021: ಮೈದಾನದಲ್ಲಿ ಕೋಪ-ತಾಪ: ಬ್ಯಾಟ್, ಹೆಲ್ಮೆಟ್ ಎಸೆದು ಆಕ್ರೋಶ ಹೊರಹಾಕಿದ ವಿಂಡೀಸ್ ಆಟಗಾರ
Sherfane Rutherford

ಬ್ಯಾಟ್ಸ್​ಮನ್​ಗಳು ಕ್ರಿಕೆಟ್ ಮೈದಾನದಲ್ಲಿ ಔಟಾದ ಬಳಿಕ ಕೋಪ ತೋರಿಸುವುದು ಹೊಸ ವಿಷಯವಲ್ಲ. ದಿನಗಳ ಹಿಂದೆಯಷ್ಟೇ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ ಪಂದ್ಯದಲ್ಲಿ ವಿಕೆಟ್ ಒಪ್ಪಿಸಿದ ಟೀಮ್ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ಡ್ರೆಸ್ಸಿಂಗ್ ರೂಮಿನಲ್ಲಿ ಗೋಡೆಗೆ ಗುದ್ದುವ ತಮ್ಮ ಕೋಪವನ್ನು ಹೊರಹಾಕಿದ್ದರು. ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲೂ (CPL 2021) ಬ್ಯಾಟ್ಸ್​ಮನ್​ವೊಬ್ಬರು ಹೆಲ್ಮೆಟ್ ಬ್ಯಾಟ್ ಎಸೆದು ಸಹ ಆಟಗಾರನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ಸಿಪಿಎಲ್​ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಮತ್ತು ಸೇಂಟ್ ಲೂಸಿಯಾ ಕಿಂಗ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೇಂಟ್ ಕಿಟ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕ ಆಘಾತಕ್ಕೊಳಗಾದ ತಂಡವು 52 ರನ್​ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು.

ಇದಾಗ್ಯೂ ಸ್ಪೋಟಕ ಬ್ಯಾಟ್ಸ್​ಮನ್ ಶೆರ್ಫೇನ್ ರುದರ್ ಫೋರ್ಡ್ ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದ್ದರು. ಉತ್ತಮ ಫಾರ್ಮ್​ನಲ್ಲಿದ್ದ ರುದರ್ ಫೋರ್ಡ್​ ಎಚ್ಚರಿಕೆಯೊಂದಿಗೆ ಇನಿಂಗ್ಸ್​ ಆರಂಭಿಸಿದ್ದರು. 16 ಎಸೆತಗಳಲ್ಲಿ 14 ರನ್​ ಬಾರಿಸಿ ಕ್ರೀಸ್ ಕಚ್ಚಿ ನಿಂತಿದ್ದರು. ಆದರೆ ಪಂದ್ಯದ 10ನೇ ಓವರ್​ನಲ್ಲಿ ರುದರ್‌ ಫೋರ್ಡ್‌ ಹಾಗೂ ಆಸಿಫ್ ಅಲಿ ಬ್ಯಾಟಿಂಗ್ ಮಾಡುತ್ತಿದ್ದರು. ಓವರ್​ನ 2ನೇ ಎಸೆತವನ್ನು ಬಿರುಸಾಗಿ ಹೊಡೆದ ರುದರ್‌ ಫೋರ್ಡ್ ಎರಡನೇ ರನ್ ಕದಿಯಲು ಓಡಿದರು. ಆದರೆ ಇನ್ನೊಂದು ತುದಿಯಲ್ಲಿದ್ದ ಪಾಕಿಸ್ತಾನಿ ಬ್ಯಾಟ್ಸ್‌ಮನ್ ಅಲಿ ಓಡಲಿಲ್ಲ. ಇದರಿಂದ ರುದರ್‌ಫೋರ್ಡ್ ರನೌಟ್ ಆದರು.

ಸಹ ಆಟಗಾರನ ನಡೆಯಿಂದ ಕುಪಿತಗೊಂಡಿದ್ದ ರುದರ್‌ ಫೋರ್ಡ್‌ ಡಗೌಟ್​ನತ್ತ ತಲುಪುತ್ತಿದ್ದಂತೆ ರುದ್ರಾವತಾರ ತಾಳಿದರು. ತಮ್ಮ ಬ್ಯಾಟ್​ ಗ್ಲೌಸ್ ಹಾಗೂ ಹೆಲ್ಮೆಟ್ ಅನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ರುದರ್ ಫೋರ್ಡ್ ಅವರ ಈ ಕೋಪ-ತಾಪದ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ರುದರ್ ಫೋರ್ಡ್ ಔಟ್ ಆಗುತ್ತಿದ್ದಂತೆ ಕುಸಿತಕ್ಕೊಳಗಾದ ಸೇಂಟ್ ಕಿಟ್ಸ್ ತಂಡವು ಅಂತಿಮವಾಗಿ 19.3 ಓವರ್ ಗಳಲ್ಲಿ ಕೇವಲ 118 ರನ್ ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಸೇಂಟ್ ಲೂಸಿಯಾ ತಂಡವು 15.4 ಓವರ್‌ಗಳಲ್ಲಿ ಬೆನ್ನತ್ತಿ 6 ವಿಕೆಟ್‌ಗಳ ಜಯ ಸಾಧಿಸಿತು.

ಇದನ್ನೂ ಓದಿ: IPL 2021: ಈ ಸಲ ಕಪ್ ನಮ್ದೆ ಎಂದ RCB ತಂಡದ ಬಿಗ್ ಫ್ಯಾನ್

ಇದನ್ನೂ ಓದಿ: ಒಂದೇ ಒಂದು ರನ್ ನೀಡಲಿಲ್ಲ: 10 ಓವರ್ ಮೇಡನ್ ಮಾಡಿ ದಾಖಲೆ ಬರೆದ ಸ್ಪಿನ್ನರ್

ಇದನ್ನೂ ಓದಿ: ಮೊಬೈಲ್ ಬಳಕೆದಾರರ ಗಮನಕ್ಕೆ: ಇನ್ಮುಂದೆ ಈ ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ

(CPL 2021: Furious Sherfane Rutherford throws away cricketing gear)

Click on your DTH Provider to Add TV9 Kannada