Virat Kohli Century: ಕೊಹ್ಲಿ ಶತಕ ಗಳಿಸಲೆಂದು ವೈಡ್ ಕೊಡದೆ ಸಹಾಯ ಮಾಡಿಲ್ಲ ಅಂಪೈರ್: ಇಲ್ಲಿದೆ ನಿಜಾಂಶ
Umpire Kettleborough Controversy, India vs Bangladesh: ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ಗೆಲುವಿಗೆ 2 ರನ್‌ಗಳ ಅಗತ್ಯವಿದ್ದಾಗ, 97 ರನ್‌ಗಳಲ್ಲಿದ್ದ ಕೊಹ್ಲಿ ಶತಕ ಸಿಡಿಸಲು ಬೌಂಡರಿ ಹುಡುಕುತ್ತಿದ್ದರು. ಆಗ ನಸುಮ್ ಅಹ್ಮದ್ ಲೆಗ್ಸೈಡ್ ಬೌಲ್ ಮಾಡಿದರು. ಆದಾಗ್ಯೂ, ಅಂಪೈರ್ ರಿಚರ್ಡ್ ಕೆಟಲ್‌ಬರೋ ಇದನ್ನು ವೈಡ್ ಸಿಗ್ನಲ್ ಮಾಡಲಿಲ್ಲ. ಇದಕ್ಕೆ ಕಾರಣವಿದೆ.
ಐಸಿಸಿ ಏಕದಿನ ವಿಶ್ವಕಪ್‌ನ 17 ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಇದರ ಜೊತೆಗೆ ವಿವಾದ ಕೂಡ ಹುಟ್ಟುಕೊಂಡಿದೆ. ಭಾರತದ ಗೆಲುವಿಗೆ 2 ರನ್ ಬೇಕಿದ್ದಾಗ, ಕೊಹ್ಲಿ ಶತಕಕ್ಕೆ 3 ರನ್‌ಗಳ ಅವಶ್ಯಕತೆಯಿತ್ತು. ಆಗ ಅಂಪೈರ್ ತೆಗೆದುಕೊಂಡ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರತದ ಗೆಲುವಿಗೆ ಕೊನೆಯ 9 ಓವರ್‌ಗಳಲ್ಲಿ ಕೇವಲ 2 ರನ್‌ಗಳ ಅಗತ್ಯವಿತ್ತು. ನಸುಮ್ ಅಹ್ಮದ್ ಎಸೆದ 42ನೇ ಓವರ್‌ನಲ್ಲಿ ಕೊಹ್ಲಿ ಸ್ಟ್ರೈಕ್‌ನಲ್ಲಿದ್ದರು. ಈ ಸಂದರ್ಭ ಮೊದಲ ಬಾಲ್ ಲೆಗ್ ಸೈಡ್ನಲ್ಲಿ ಹಾದು ಹೋದರೂ ಅಂಪೈರ್ ವೈಡ್ ಎಂಬ ತೀರ್ಮಾನ ಪ್ರಕಟಿಸಿಲ್ಲ.
ಗೆಲುವಿಗೆ 2 ರನ್‌ಗಳ ಅಗತ್ಯವಿದ್ದಾಗ, 97 ರನ್‌ಗಳಲ್ಲಿದ್ದ ಕೊಹ್ಲಿ ಶತಕ ಸಿಡಿಸಲು ಬೌಂಡರಿ ಹುಡುಕುತ್ತಿದ್ದರು. ಆದಾಗ್ಯೂ, ನಸುಮ್ ಅಹ್ಮದ್ ತಮ್ಮ ಮೊದಲ ಎಸೆತವನ್ನು ಲೆಗ್ ಸೈಡ್ ಕೆಳಗೆ ಬೌಲ್ ಮಾಡಿದ್ದು, ಇದು ಸ್ಪಷ್ಟವಾಗಿ ವೈಡ್ ಎಂದು ಕಾಣುತ್ತಿತ್ತು. ಹೀಗಿದ್ದರೂ, ಅಂಪೈರ್ ರಿಚರ್ಡ್ ಕೆಟಲ್‌ಬರೋ ಇದನ್ನು ವೈಡ್ ಸಿಗ್ನಲ್ ಮಾಡಲಿಲ್ಲ. ಇದು ಬಾಂಗ್ಲಾ ಆಟಗಾರರನ್ನು ಮಾತ್ರವಲ್ಲದೆ ಭಾರತೀಯ ಡ್ರೆಸ್ಸಿಂಗ್ ಕೋಣೆಯನ್ನು ಸಹ ಆಶ್ಚರ್ಯಗೊಳಿಸಿತು. ಕೊಹ್ಲಿ ನಂತರ ಡೀಪ್ ಮಿಡ್ ವಿಕೆಟ್‌ನಲ್ಲಿ ಸಿಕ್ಸರ್‌ನೊಂದಿಗೆ ಆಟವನ್ನು ಮುಗಿಸಿ ಶತಕವನ್ನು ಕೂಡ ಪೂರ್ಣಗೊಳಿಸಿದರು.
ವಿವಾದಕ್ಕೆ ಕಾರಣವಾಗಿರುವ ರಿಚರ್ಡ್ ಕೆಟಲ್‌ಬರೋ ನಿರ್ಧಾರದ ವಿಡಿಯೋ ನೋಡಿ:
Virat kohli fans says that – Bcci don’t want Virat kohli to break Sachin Tendulkar records see this video clip hypocrites fanclub..what will you say now..in Ipl same incident happened when gayle was on 99 and kohli was on non strike..that was given wide but not this #Shameless pic.twitter.com/Ys6Czjdik2
— Sachin (@Gambhir_0705) October 19, 2023
ನಿಯಮದಲ್ಲಿ ಏನಿದೆ?:
ಅಂಪೈರ್‌ನಿಂದ ಈ ಬಗ್ಗೆ ಅಧಿಕೃತ ಸ್ಪಷ್ಟನೆ ಇಲ್ಲ. ಆದರೆ ಕೆಟಲ್‌ಬರೋ ಆ ಸಂದರ್ಭದಲ್ಲಿ ವೈಡ್ ನೀಡದಿರಲು ಕಾರಣವಿರಬಹುದು. ಕಳೆದ ವರ್ಷ ಕಾನೂನುಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. MCC ಲಾಸ್ ಆಫ್ ಕ್ರಿಕೆಟ್ನಲ್ಲಿ ವೈಡ್ ಅನ್ನು ಹೇಗೆ ನಿರ್ಣಯಿಸಬೇಕು ಎಂದು ಹೇಳುವ ಕಾನೂನು 22.1.1 ಆಗಿದೆ. ಈ ಕಾನೂನಿನ ಪ್ರಕಾರ, “ಬೌಲರ್ ನೋ ಬಾಲ್ ಆಗದೆ ಚೆಂಡನ್ನು ಬೌಲ್ ಮಾಡಿದರೆ, ಅಂಪೈರ್ ಅದನ್ನು ವೈಡ್ ಎಂದು ನಿರ್ಣಯಿಸುತ್ತಾರೆ.”
IND vs BAN, ICC World Cup: ಪೋಸ್ಟ್ ಮ್ಯಾಚ್ನಲ್ಲಿ ಕೊಹ್ಲಿ ಶತಕದ ಬಗ್ಗೆ ಒಂದೂ ಮಾತನಾಡದ ರೋಹಿತ್
ಷರತ್ತು 22.1.2 ಪ್ರಕಾರ “ಸಾಮಾನ್ಯ ಕ್ರಿಕೆಟ್ ಸ್ಟ್ರೋಕ್ ಮೂಲಕ ಬ್ಯಾಟ್‌ನಿಂದ ಹೊಡೆಯಲು ಸಾಧ್ಯವಾಗುವಷ್ಟು ದೂರದಿಂದ ಚೆಂಡು ಹಾದುಹೋದರೂ ಅದು ವೈಡ್ ಎಂದು ಪರಿಗಣಿಸಲಾಗುತ್ತದೆ.” ಹೀಗೆ ಕಳೆದ ವರ್ಷ ಮಾರ್ಚ್‌ನಲ್ಲಿ, MCC ಹೊಸ ಕಾನೂನು ಸಂಹಿತೆಯನ್ನು ಘೋಷಿಸಿದೆ.
ಕಾನೂನು 22.1 ಅನ್ನು ತಿದ್ದುಪಡಿ ಮಾಡಲಾಗಿದ್ದು, ಇದರಲ್ಲಿ ಬ್ಯಾಟರ್ ನಿಂತಿರುವ ಸ್ಥಳಕ್ಕೆ ಮಾತ್ರ ವೈಡ್ ಅನ್ವಯಿಸುತ್ತದೆ. ಈಗ, ನಸುಮ್-ಕೊಹ್ಲಿ ವಿಷಯಕ್ಕೆ ಬಂದರೆ, ಇಲ್ಲಿ ಕೊಹ್ಲಿ ಬೌಂಡರಿ ಬಾರಿಸಲು ಕಾದುಕುಳಿತಿದ್ದರಿಂದ ಲೆಗ್ ಸ್ಟಂಪ್‌ನ ಹೊರಗೆ ಬಲಗಾಲನ್ನು ಇರಿಸಿದ್ದರು. ನಸುಮ್ ಬೌಂಡರಿ ಮತ್ತು ಸಿಕ್ಸರ್ ಹೊಡೆಯುವುದನ್ನು ತಪ್ಪಿಸಲು ಕೊಹ್ಲಿಗೆ ಬೌಲಿಂಗ್ ಮಾಡಲು ಪ್ರಯತ್ನಿಸಿದರು. ಆಗ ಚೆಂಡನ್ನು ಲೆಗ್ ಸೈಡ್‌ನಿಂದ ಹಾಕಿದಾಗ ಕೊಹ್ಲಿ ನಾರ್ಮಲ್ ಪೊಸಿಷನ್ಗೆ ಮರಳಿದ್ದಾರೆ. ಹೀಗಾಗಿ ಕಾನೂನಿನ ಬದಲಾವಣೆಯಿಂದ ಅಂಪೈರ್ ಕೆಟಲ್‌ಬರೋ ಅದನ್ನು ವೈಡ್ ಅಲ್ಲ ಎಂದು ನೀಡದಿರುವ ಸಾಧ್ಯತೆಯಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ