Umran Malik: ಮೂರೇ ಮೂರು ಮ್ಯಾಚ್​ನಲ್ಲಿ ಶತಕ ಪೂರೈಸಿದ ಉಮ್ರಾನ್ ಮಲಿಕ್

Umran Malik: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್​ನ ಕೊರತೆಯನ್ನು ಉಮ್ರಾನ್ ಮಲಿಕ್ ಸರಿದೂಗಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು.

Umran Malik: ಮೂರೇ ಮೂರು ಮ್ಯಾಚ್​ನಲ್ಲಿ ಶತಕ ಪೂರೈಸಿದ ಉಮ್ರಾನ್ ಮಲಿಕ್
Umran Malik
Updated By: ಝಾಹಿರ್ ಯೂಸುಫ್

Updated on: Jul 12, 2022 | 3:55 PM

ಟೀಮ್ ಇಂಡಿಯಾದ ಯುವ ಸ್ಪೀಡ್ ಮಾಸ್ಟರ್ ಉಮ್ರಾನ್ ಮಲಿಕ್ (Umran Malik) ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಏಕೆಂದರೆ ಯುವ ವೇಗಿಯ ವೇಗಕ್ಕೆ ಈಗಾಗಲೇ ಖ್ಯಾತ ಕ್ರಿಕೆಟಿಗರು ಮಾರು ಹೋಗಿದ್ದಾರೆ. ಅದರಲ್ಲೂ ಐಪಿಎಲ್​ನಲ್ಲಿ ಶ್ರೇಷ್ಠ ಆಟಗಾರರನ್ನು ಕೂಡ ಕಂಗೆಡಿಸುವಂತೆ ಮಲಿಕ್ ಬೌಲಿಂಗ್ ಮಾಡಿದ್ದರು. ಪರಿಣಾಮ ಎಸ್​ಆರ್​ಹೆಚ್​ ಪರ 14 ಪಂದ್ಯಗಳಲ್ಲಿ 22 ವಿಕೆಟ್ ಉರುಳಿಸಿ ಮಿಂಚಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಟೀಮ್ ಇಂಡಿಯಾದಲ್ಲಿ ಚಾನ್ಸ್​ ಲಭಿಸಿತು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಮಲಿಕ್ ಎಡವುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಆಡಿರುವ 3 ಪಂದ್ಯಗಳಲ್ಲಿ ಉಮ್ರಾನ್ ಮಲಿಕ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ.

ಐರ್ಲೆಂಡ್ ವಿರುದ್ದದ ಪಂದ್ಯದ ಮೂಲಕ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ಮಲಿಕ್​ಗೆ ಮೊದಲ ಪಂದ್ಯದಲ್ಲಿ ಸಿಕ್ಕಿದ್ದು ಕೇವಲ 1 ಓವರ್ ಮಾತ್ರ. ಮಳೆಬಾಧಿತ ಈ ಪಂದ್ಯದಲ್ಲಿ ಒಂದು ಓವರ್ ಬೌಲಿಂಗ್ ಮಾಡಿದ್ದ ಯುವ ವೇಗಿ 14 ರನ್ ನೀಡಿದ್ದರು. ಇದಾಗ್ಯೂ ಚೊಚ್ಚಲ ಪಂದ್ಯದಲ್ಲಿ ವಿಕೆಟ್ ಪಡೆಯುವಲ್ಲಿ ಸಫಲರಾಗಿರಲಿಲ್ಲ.

ಇನ್ನು ಐರ್ಲೆಂಡ್ ವಿರುದ್ದದ 2ನೇ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಕೊನೆಯ ಓವರ್​ ಮೂಲಕ ಗಮನ ಸೆಳೆದಿದ್ದರು. ಈ ಪಂದ್ಯದ ಅಂತಿಮ ಓವರ್​ನಲ್ಲಿ ಐರ್ಲೆಂಡ್​ಗೆ  17 ರನ್ ಬೇಕಿತ್ತು. ಈ ವೇಳೆ ಭರ್ಜರಿ ಬೌಲಿಂಗ್ ಮಾಡಿದ್ದ ಮಲಿಕ್ ಕೇವಲ 12 ರನ್​ ನೀಡಿ ಟೀಮ್ ಇಂಡಿಯಾಗೆ 4 ರನ್​ಗಳ ಜಯ ತಂದುಕೊಟ್ಟಿದ್ದರು. ಆದರೆ ಈ ಪಂದ್ಯದಲ್ಲಿ 4 ಓವರ್​ಗಳಲ್ಲಿ 1 ವಿಕೆಟ್ ಪಡೆದರೂ ನೀಡಿದ್ದು ಬರೋಬ್ಬರಿ 42 ರನ್​ಗಳು.

ಇದನ್ನೂ ಓದಿ
Virat Kohli: ವಿರಾಟ್ ಕೊಹ್ಲಿಯ ಫಾರ್ಮ್​ ಬಗ್ಗೆ ಟೀಕೆ ಮಾಡುವ ಮುನ್ನ ಈ ಅಂಕಿ ಅಂಶಗಳನ್ನೊಮ್ಮೆ ನೋಡಿ..!
Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!
Cricket Records: ಕ್ರಿಕೆಟ್ ಇತಿಹಾಸದ ಈ ಅದ್ಭುತ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ!
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!

ಹಾಗೆಯೇ ಇಂಗ್ಲೆಂಡ್ ವಿರುದ್ದದ 3ನೇ ಟಿ20 ಪಂದ್ಯದಲ್ಲಿ ಅವಕಾಶ ಪಡೆದ ಮಲಿಕ್ 1 ವಿಕೆಟ್ ಕಬಳಿಸಿದ್ದರು. ಆದರೆ ಮತ್ತೊಮ್ಮೆ ದುಬಾರಿಯಾಗುವ ಮೂಲಕ ನಿರಾಸೆ ಮೂಡಿಸಿದರು. ಅಂದರೆ ಇಂಗ್ಲೆಂಡ್ ವಿರುದ್ದ 4 ಓವರ್​ಗಳಲ್ಲಿ ಬರೋಬ್ಬರಿ 56 ರನ್ ಚಚ್ಚಿಸಿಕೊಂಡಿದ್ದರು. ಇಲ್ಲಿ ಮೂರು ಪಂದ್ಯಗಳನ್ನಾಡಿರುವ ಉಮ್ರಾನ್ ಮಲಿಕ್ 12 ಕ್ಕಿಂತ ಎಕಾನಮಿ ರೇಟ್​ನಲ್ಲಿ ರನ್​ ಬಿಟ್ಟುಕೊಟ್ಟಿದ್ದಾರೆ.

ಅಂದರೆ ಆಡಿರುವ ಮೂರು ಪಂದ್ಯಗಳ ಒಟ್ಟು 112 ರನ್​ಗಳನ್ನು ನೀಡಿದ್ದಾರೆ. ಅದು ಕೂಡ 12.44 ಎಕಾನಮಿ ರೇಟ್​ನಲ್ಲಿ. ಇನ್ನು ಪಡೆದಿರುವುದು ಕೇವಲ 2 ವಿಕೆಟ್ ಮಾತ್ರ. ಇಲ್ಲಿ ಉಮ್ರಾನ್ ಮಲಿಕ್ ಅವರನ್ನು ಮುಂಬರುವ ಟಿ20 ವಿಶ್ವಕಪ್​ ಅನ್ನು ಮುಂದಿಟ್ಟುಕೊಂಡು ಟೀಮ್ ಇಂಡಿಯಾಗೆ ಆಯ್ಕೆ ಮಾಡಲಾಗಿದೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್​ನ ಕೊರತೆಯನ್ನು ಉಮ್ರಾನ್ ಮಲಿಕ್ ಸರಿದೂಗಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೀಗ ವಿದೇಶಿ ಪಿಚ್​ಗಳಲ್ಲಿ ದುಬಾರಿ ಎನಿಸಿಕೊಳ್ಳುವ ಮೂಲಕ ಉಮ್ರಾನ್ ಮಲಿಕ್ ಆರಂಭದಲ್ಲೇ ನಿರಾಸೆ ಮೂಡಿಸಿದ್ದಾರೆ. ಇದಾಗ್ಯೂ ಮುಂಬರುವ ವೆಸ್ಟ್ ಇಂಡೀಸ್ ಟಿ20 ಸರಣಿಗೆ ಮಲಿಕ್ ಆಯ್ಕೆಯಾಗುವ ಸಾಧ್ಯತೆಯಿದೆ. ಈ ವೇಳೆಯೂ ದುಬಾರಿಯಾದರೆ ಟಿ20 ವಿಶ್ವಕಪ್​ಗೆ ಆಯ್ಕೆಯಾಗುವುದು ಅನುಮಾನ ಎಂದೇ ಹೇಳಬಹುದು.