AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England, 1st ODI, Live Score: ಟೀಮ್ ಇಂಡಿಯಾಗೆ ಭರ್ಜರಿ ಜಯ

IND Vs ENG 1st ODI Match Live Updates: ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಬುಮ್ರಾ ಬೌಲಿಂಗ್​ಗೆ ತತ್ತರಿಸಿತು. ಪರಿಣಾಮ ಕೇವಲ 110 ರನ್​ಗಳಿಗೆ ಆಲೌಟ್ ಆಗಿದೆ. ಟೀಮ್ ಇಂಡಿಯಾ ಪರ ಬುಮ್ರಾ 19 ರನ್​ಗೆ 6 ವಿಕೆಟ್ ಪಡೆದರೆ, ಶಮಿ 3 ವಿಕೆಟ್ ಕಬಳಿಸಿದರು.

India vs England, 1st ODI, Live Score: ಟೀಮ್ ಇಂಡಿಯಾಗೆ ಭರ್ಜರಿ ಜಯ
India vs England, 1st ODI
TV9 Web
| Updated By: ಝಾಹಿರ್ ಯೂಸುಫ್|

Updated on:Jul 12, 2022 | 9:49 PM

Share

ಕಿಯಾ ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 110 ರನ್​ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಟೀಮ್ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ವಿಕೆಟ್ ನಷ್ಟವಿಲ್ಲದೆ ಚೇಸ್ ಮಾಡುವ ಮೂಲಕ 10 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟರು. ಟೀಮ್ ಇಂಡಿಯಾ ಪರ 7.2 ಓವರ್​ಗಳಲ್ಲಿ 19 ರನ್ ನೀಡಿ 6 ವಿಕೆಟ್ ಪಡೆದ ಜಸ್​ಪ್ರೀತ್ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಭಾರತ (ಪ್ಲೇಯಿಂಗ್ 11): ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ

ಇಂಗ್ಲೆಂಡ್ (ಪ್ಲೇಯಿಂಗ್ 11): ಜೇಸನ್ ರಾಯ್, ಜಾನಿ ಬೈರ್‌ಸ್ಟೋ, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಕ್ರೇಗ್ ಓವರ್‌ಟನ್, ಡೇವಿಡ್ ವಿಲ್ಲಿ, ಬ್ರೈಡನ್ ಕಾರ್ಸೆ, ರೀಸ್ ಟೋಪ್ಲಿ

ಉಭಯ ತಂಡಗಳು ಹೀಗಿವೆ:

ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ) , ಜೇಸನ್ ರಾಯ್ , ಜಾನಿ ಬೈರ್‌ಸ್ಟೋವ್ , ಜೋ ರೂಟ್ , ಲಿಯಾಮ್ ಲಿವಿಂಗ್‌ಸ್ಟೋನ್ , ಬೆನ್ ಸ್ಟೋಕ್ಸ್ , ಮೊಯಿನ್ ಅಲಿ , ಡೇವಿಡ್ ವಿಲ್ಲಿ , ಬ್ರೈಡನ್ ಕಾರ್ಸೆ , ಮ್ಯಾಥ್ಯೂ ಪಾರ್ಕಿನ್ಸನ್ , ರೀಸ್ ಟೋಪ್ಲಿ , ಕ್ರೇಗ್ ಓವರ್ಟನ್ , ಸ್ಯಾಮ್ ಬ್ರೋಕ್ಟ್

ಭಾರತ ತಂಡ: ರೋಹಿತ್ ಶರ್ಮಾ (ನಾಯಕ) , ರಿಷಭ್ ಪಂತ್, ಶಿಖರ್ ಧವನ್ , ಇಶಾನ್ ಕಿಶನ್, ವಿರಾಟ್ ಕೊಹ್ಲಿ , ಸೂರ್ಯಕುಮಾರ್ ಯಾದವ್ , ಹಾರ್ದಿಕ್ ಪಾಂಡ್ಯ , ರವೀಂದ್ರ ಜಡೇಜಾ , ಶಾರ್ದೂಲ್ ಠಾಕೂರ್ , ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ , ಯುಜ್ವೇಂದ್ರ ಚಾಹಲ್ , ಅಕ್ಷರ್ ಪಟೇಲ್ , ಶ್ರೇಯಸ್ ಅಯ್ಯರ್, ಪ್ರಸಿದ್ಧ್ ಕೃಷ್ಣ, ಹರ್ಷಲ್ ಪಟೇಲ್ , ಮೊಹಮ್ಮದ್ ಸಿರಾಜ್ , ಅರ್ಷದೀಪ್ ಸಿಂಗ್

LIVE NEWS & UPDATES

The liveblog has ended.
  • 12 Jul 2022 09:27 PM (IST)

    ಭಾರತಕ್ಕೆ 10 ವಿಕೆಟ್​ಗಳ ಜಯ

    ಕಿಯಾ ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

  • 12 Jul 2022 09:26 PM (IST)

    ಟೀಮ್ ಇಂಡಿಯಾಗೆ ಭರ್ಜರಿ ಜಯ

    ENG 110 (25.2)

    IND 114/0 (18.4)

  • 12 Jul 2022 09:23 PM (IST)

    ರೋಹಿತ್-ಶಿಖರ್ ಶತಕದ ಜೊತೆಯಾಟ

    IND 101/0 (18)

      

  • 12 Jul 2022 09:17 PM (IST)

    ಹಿಟ್​ಮ್ಯಾನ್ ಹಿಟ್

    ಕಾರ್ಸೆ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ

    IND 95/0 (16.5)

     

  • 12 Jul 2022 09:15 PM (IST)

    ಅರ್ಧಶತಕ ಪೂರೈಸಿದ ಹಿಟ್​ಮ್ಯಾನ್

    ಕಾರ್ಸೆ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ 49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ

    IND 85/0 (16.2)

     

  • 12 Jul 2022 08:58 PM (IST)

    ಹಿಟ್​ಮ್ಯಾನ್ ಹಿಟ್

    ಕಾರ್ಸೆ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ರೋಹಿತ್ ಶರ್ಮಾ

    IND 68/0 (12.1)

      

  • 12 Jul 2022 08:54 PM (IST)

    ಗಬ್ಬರ್ ದರ್ಬಾರ್

    ಓವರ್​ಟನ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಪುಲ್ ಶಾಟ್ ಬಾರಿಸಿದ ಶಿಖರ್ ಧವನ್…ಫೋರ್

    IND 63/0 (11.4)

      

  • 12 Jul 2022 08:46 PM (IST)

    ಹಿಟ್​ಮ್ಯಾನ್

    ಓವರ್​ಟನ್ ಎಸೆತಕ್ಕೆ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ

    IND 58/0 (10)

      

  • 12 Jul 2022 08:37 PM (IST)

    ಬ್ಯೂಟಿಫುಲ್ ಶಾಟ್

    ಓವರ್​ಟನ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

    IND 44/0 (7.3)

     

  • 12 Jul 2022 08:32 PM (IST)

    ಧವನ್ ಬ್ಯೂಟಿ

    ಟೋಪ್ಲಿ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಆಕರ್ಷಕ ಕವರ್​ ಡ್ರೈವ್ ಫೋರ್ ಬಾರಿಸಿದ ಶಿಖರ್ ಧವನ್

    IND 33/0 (6.4)

     

  • 12 Jul 2022 08:29 PM (IST)

    6 ಓವರ್ ಮುಕ್ತಾಯ

    ENG 110 (25.2)

    IND 21/0 (6)

      

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ-ಶಿಖರ್ ಧವನ್ ಬ್ಯಾಟಿಂಗ್
  • 12 Jul 2022 08:24 PM (IST)

    ಭರ್ಜರಿ ಸಿಕ್ಸ್

    ವಿಲ್ಲಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ

    IND 14/0 (4.3)

      

  • 12 Jul 2022 08:22 PM (IST)

    4 ಓವರ್ ಮುಕ್ತಾಯ

    IND 8/0 (4)

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ-ಶಿಖರ್ ಧವನ್ ಬ್ಯಾಟಿಂಗ್

      

  • 12 Jul 2022 08:14 PM (IST)

    ಮೊದಲ ಫೋರ್

    ರೀಸ್ ಟೋಪ್ಲಿ ಬೌನ್ಸರ್​ಗೆ ಹಿಂಬದಿಯತ್ತ ಫೋರ್ ಬಾರಿಸಿದ ರೋಹಿತ್ ಶರ್ಮಾ

    IND 7/0 (2)

      

  • 12 Jul 2022 08:09 PM (IST)

    ಮೊದಲ ಓವರ್

    ಮೊದಲ ಓವರ್: ಡೇವಿಡ್ ವಿಲ್ಲಿ

    ಆರಂಭಿಕರು: ಶಿಖರ್ ಧವನ್, ರೋಹಿತ್ ಶರ್ಮಾ

  • 12 Jul 2022 07:39 PM (IST)

    ಟೀಮ್ ಇಂಡಿಯಾಗೆ 111 ರನ್​ಗಳ ಟಾರ್ಗೆಟ್

    ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಬುಮ್ರಾ ಬೌಲಿಂಗ್​ಗೆ ತತ್ತರಿಸಿತು. ಪರಿಣಾಮ ಕೇವಲ 110 ರನ್​ಗಳಿಗೆ ಆಲೌಟ್ ಆಗಿದೆ. ಟೀಮ್ ಇಂಡಿಯಾ ಪರ ಬುಮ್ರಾ 19 ರನ್​ಗೆ 6 ವಿಕೆಟ್ ಪಡೆದರೆ, ಶಮಿ 3 ವಿಕೆಟ್ ಕಬಳಿಸಿದರು.

  • 12 Jul 2022 07:37 PM (IST)

    ಬುಮ್ರಾ ಬೆಂಕಿ ಬೌಲಿಂಗ್

    ಕೇವಲ 19 ರನ್​ ನೀಡಿ 6 ವಿಕೆಟ್ ಉರುಳಿಸಿದ ಜಸ್​ಪ್ರೀತ್ ಬುಮ್ರಾ

    ENG 110 (25.2)

     

  • 12 Jul 2022 07:35 PM (IST)

    ಇಂಗ್ಲೆಂಡ್ ಆಲೌಟ್

    ENG 110 (25.2)

     

  • 12 Jul 2022 07:34 PM (IST)

    ಭರ್ಜರಿ ಸಿಕ್ಸ್

    ಚಹಾಲ್ ಎಸೆತಕ್ಕೆ ಭರ್ಜರಿ ಸಿಕ್ಸ್ ಸಿಡಿಸಿದ ಟೋಪ್ಲಿ

    ENG 110/9 (25)

      

  • 12 Jul 2022 07:27 PM (IST)

    5 ವಿಕೆಟ್ ಉರುಳಿಸಿದ ಜಸ್​ಪ್ರೀತ್ ಬುಮ್ರಾ

    ಬುಮ್ರಾ ಯಾರ್ಕರ್​ಗೆ ಕಾರ್ಸೆ (15) ಕ್ಲೀನ್ ಬೌಲ್ಡ್​

    ENG 103/9 (23.2)

      

  • 12 Jul 2022 07:21 PM (IST)

    ವಿಲ್ಲಿ ಭರ್ಜರಿ ಬ್ಯಾಟಿಂಗ್

    ಬುಮ್ರಾ ಎಸೆತದಲ್ಲಿ  ಬ್ಯಾಕ್ ಟು ಬ್ಯಾಕ್ ಭರ್ಜರಿ  ಬೌಂಡರಿ ಬಾರಿಸಿದ ಡೇವಿಡ್ ವಿಲ್ಲಿ

    ENG 100/8 (21.5)

      

      

  • 12 Jul 2022 07:11 PM (IST)

    ವೆಲ್ಕಂ ಬೌಂಡರಿ

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಆಫ್​ಸೈಡ್​ನತ್ತ ಫೋರ್ ಬಾರಿಸಿದ ಕಾರ್ಸೆ

    ENG 83/8 (19.3)

     

  • 12 Jul 2022 07:09 PM (IST)

    19 ಓವರ್ ಮುಕ್ತಾಯ

    ENG 79/8 (19)

      

    ಕ್ರೀಸ್​ನಲ್ಲಿ ಕಾರ್ಸೆ-ವಿಲ್ಲಿ ಬ್ಯಾಟಿಂಗ್

  • 12 Jul 2022 06:56 PM (IST)

    8ನೇ ವಿಕೆಟ್ ಪತನ

    ಮೊಹಮ್ಮದ್ ಶಮಿ ಎಸೆತದಲ್ಲಿ ಕ್ರೇಗ್ ಓವರ್​ಟನ್ (8) ಕ್ಲೀನ್ ಬೌಲ್ಡ್

    ENG 68/8 (16.3)

      

  • 12 Jul 2022 06:53 PM (IST)

    ಆಕರ್ಷಕ ಫೋರ್

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಲೆಗ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಓವರ್​ಟನ್

    ENG 63/7 (15.5)

      

  • 12 Jul 2022 06:50 PM (IST)

    15 ಓವರ್ ಮುಕ್ತಾಯ

    ENG 59/7 (15)

      

    ಕ್ರೀಸ್​ನಲ್ಲಿ ಡೇವಿಡ್ ವಿಲ್ಲಿ-ಓವರ್​ಟನ್ ಬ್ಯಾಟಿಂಗ್

  • 12 Jul 2022 06:48 PM (IST)

    ಬಟ್ಲರ್ ಔಟ್

    ಮೊಹಮ್ಮದ್ ಶಮಿ ಎಸೆತದಲ್ಲಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್​ನಲ್ಲಿ ಸೂರ್ಯಕುಮಾರ್ ಯಾದವ್ ಉತ್ತಮ ಕ್ಯಾಚ್.  ಜೋಸ್ ಬಟ್ಲರ್ ಔಟ್

    30 ರನ್​ಗಳಿಸಿ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದ್ದ ಜೋಸ್ ಬಟ್ಲರ್..ಸಂಕಷ್ಟದಲ್ಲಿ ಇಂಗ್ಲೆಂಡ್ ತಂಡ

    ENG 59/7 (14.3)

      

  • 12 Jul 2022 06:46 PM (IST)

    ಭರ್ಜರಿ ಬಟ್ಲರ್

    ಮೊಹಮ್ಮದ್ ಶಮಿ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಬಟ್ಲರ್

    ENG 59/6 (14.2)

      

  • 12 Jul 2022 06:45 PM (IST)

    14 ಓವರ್ ಮುಕ್ತಾಯ

    ENG 53/6 (14)

      

    ಕ್ರೀಸ್​ನಲ್ಲಿ ಜೋಸ್ ಬಟ್ಲರ್ ಹಾಗೂ ಡೇವಿಡ್ ವಿಲ್ಲಿ ಬ್ಯಾಟಿಂಗ್

  • 12 Jul 2022 06:41 PM (IST)

    ಇಂಗ್ಲೆಂಡ್ 6ನೇ ವಿಕೆಟ್ ಪತನ

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ನೇರವಾಗಿ ಬೌಲರ್​ಗೆ ಕ್ಯಾಚ್ ನೀಡಿದ ಮೊಯೀನ್ ಅಲಿ (14)

    ENG 53/6 (13.5)

      

  • 12 Jul 2022 06:39 PM (IST)

    ಅರ್ಧಶತಕ ಪೂರೈಸಿದ ಇಂಗ್ಲೆಂಡ್

    5 ವಿಕೆಟ್ ನಷ್ಟಕ್ಕೆ ಅರ್ಧಶತಕ ಪೂರೈಸಿದ ಇಂಗ್ಲೆಂಡ್

    ENG 53/5 (13.3)

      

  • 12 Jul 2022 06:30 PM (IST)

    ಬಟ್ಲರ್ ಹಿಟ್

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಆಫ್​ ಸೈಡ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಜೋಸ್ ಬಟ್ಲರ್

    ENG 46/5 (11.1)

      

  • 12 Jul 2022 06:28 PM (IST)

    ವಾಟ್ ಎ ಶಾಟ್

    ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಜೋಸ್ ಬಟ್ಲರ್

    ENG 42/5 (11)

      

  • 12 Jul 2022 06:24 PM (IST)

    ಮೊದಲ 10 ಓವರ್​ ಮುಕ್ತಾಯ

    ಮೊದಲ 10 ಓವರ್​ಗಳಲ್ಲಿ ಟೀಮ್ ಇಂಡಿಯಾ ಭರ್ಜರಿ ಬೌಲಿಂಗ್

    4 ವಿಕೆಟ್ ಉರುಳಿಸಿದ ಜಸ್​ಪ್ರೀತ್ ಬುಮ್ರಾ

    1 ವಿಕೆಟ್ ಪಡೆದ ಮೊಹಮ್ಮದ್ ಶಮಿ

    ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರರಾದ ಜೇಸನ್ ರಾಯ್, ಜೋ ರೂಟ್, ಬೆನ್ ಸ್ಟೋಕ್ಸ್​, ಜಾನಿ ಬೈರ್​ಸ್ಟೋವ್, ಲಿಯಾಮ್ ಲಿವಿಂಗ್​ಸ್ಟೋನ್ ಔಟ್

    ENG 30/5 (10)

      

  • 12 Jul 2022 06:19 PM (IST)

    ಇಂಗ್ಲೆಂಡ್ 5 ವಿಕೆಟ್ ಪತನ

    ENG 27/5 (9)

      

    ಕ್ರೀಸ್​ನಲ್ಲಿ ಜೋಸ್ ಬಟ್ಲರ್-ಮೊಯೀನ್ ಅಲಿ ಬ್ಯಾಟಿಂಗ್

  • 12 Jul 2022 06:11 PM (IST)

    ಬುಮ್ರಾ ಭರ್ಜರಿ ಬೌಲಿಂಗ್

    ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಲಿಯಾಮ್ ಲಿವಿಂಗ್​ಸ್ಟೋನ್ (0)

    ENG 26/5 (7.5)

      

  • 12 Jul 2022 06:06 PM (IST)

    ವೆಲ್ಕಂ ಬೌಂಡರಿ

    ಮೊಹಮ್ಮದ್ ಶಮಿ ಎಸೆತದಲ್ಲಿ ಲೆಗ್​ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಜೋಸ್ ಬಟ್ಲರ್

    ENG 26/4 (6.3)

      

  • 12 Jul 2022 06:04 PM (IST)

    6 ಓವರ್ ಮುಕ್ತಾಯ

    ENG 22/4 (6)

      

    ಕ್ರೀಸ್​ನಲ್ಲಿ ಜೋಸ್ ಬಟ್ಲರ್-ಲಿಯಾಮ್ ಲಿವಿಂಗ್​ಸ್ಟೋನ್ ಬ್ಯಾಟಿಂಗ್

  • 12 Jul 2022 06:00 PM (IST)

    ಪಂತ್ ಸೂಪರ್ ಕ್ಯಾಚ್

    ಬುಮ್ರಾ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಜಾನಿ ಬೈರ್​ಸ್ಟೋವ್ (7)..ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ರಿಷಭ್ ಪಂತ್

    ENG 17/4 (5.3)

      

  • 12 Jul 2022 05:57 PM (IST)

    5 ಓವರ್ ಮುಕ್ತಾಯ

    ENG 17/3 (5)

      

    ಕ್ರೀಸ್​ನಲ್ಲಿ ಜೋಸ್ ಬಟ್ಲರ್-ಜಾನಿ ಬೈರ್​ಸ್ಟೋವ್ ಬ್ಯಾಟಿಂಗ್

  • 12 Jul 2022 05:48 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಮೊಹಮ್ಮದ್ ಶಮಿಯ 3ನೇ ಓವರ್​ನ 5 ಮತ್ತು 6ನೇ ಎಸೆತಗಳಲ್ಲಿ ಬೌಂಡರಿ ಬಾರಿಸಿದ ಜೋಸ್ ಬಟ್ಲರ್

    ENG 15/3 (3)

      

  • 12 Jul 2022 05:46 PM (IST)

    ಶಮಿ ಮ್ಯಾಜಿಕ್

    ಮೊಹಮ್ಮದ್ ಶಮಿ ಭರ್ಜರಿ ಬೌನ್ಸರ್…ಸ್ಟೋಕ್ಸ್ ಬ್ಯಾಟ್ ಸವರಿ ಚೆಂಡು ವಿಕೆಟ್ ಕೀಪರ್​ನತ್ತ..ಭರ್ಜರಿ ಡೈವಿಂಗ್ ಕ್ಯಾಚ್ ಹಿಡಿದ ರಿಷಭ್ ಪಂತ್..ಬೆನ್ ಸ್ಟೋಕ್ಸ್​ (0) ಔಟ್

    ENG 7/3 (2.4)

      

  • 12 Jul 2022 05:41 PM (IST)

    ರೈಟ್ ಹೇಳಿದ ರೂಟ್

    ಬುಮ್ರಾ ಬೌನ್ಸ್​…ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ಜೋ ರೂಟ್ (0)

    ಒಂದೇ ಓವರ್​ನಲ್ಲಿ 2 ವಿಕೆಟ್ ಪಡೆದ ಬುಮ್ರಾ

    ENG 6/2 (2)

      

  • 12 Jul 2022 05:39 PM (IST)

    ಬೂಮ್ ಬೂಮ್ ಬುಮ್ರಾ

    ಬುಮ್ರಾ ಎಸೆತದಲ್ಲಿ ಜೇಸನ್ ರಾಯ್ (0) ಬೌಲ್ಡ್​

    ಭಾರತಕ್ಕೆ ಮೊದಲ ಯಶಸ್ಸು

    ENG 6/1 (1.4)

      

  • 12 Jul 2022 05:35 PM (IST)

    ಮೊದಲ ಬೌಂಡರಿ

    ಶಮಿ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಜಾನಿ ಬೈರ್​ಸ್ಟೋವ್

    ENG 6/0 (1)

      

  • 12 Jul 2022 05:31 PM (IST)

    ಇಂಗ್ಲೆಂಡ್ ಇನಿಂಗ್ಸ್ ಆರಂಭ

    ಮೊದಲ ಓವರ್​: ಮೊಹಮ್ಮದ್ ಶಮಿ

    ಆರಂಭಿಕರು: ಜೇಸನ್ ರಾಯ್, ಜಾನಿ ಬೈರ್​ಸ್ಟೋವ್

  • 12 Jul 2022 05:13 PM (IST)

    ಕಣಕ್ಕಿಳಿಯುವ ಕಲಿಗಳು

    ಭಾರತ (ಪ್ಲೇಯಿಂಗ್ 11): ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ

  • 12 Jul 2022 05:12 PM (IST)

    ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್

    ಇಂಗ್ಲೆಂಡ್ (ಪ್ಲೇಯಿಂಗ್ 11): ಜೇಸನ್ ರಾಯ್, ಜಾನಿ ಬೈರ್‌ಸ್ಟೋ, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಕ್ರೇಗ್ ಓವರ್‌ಟನ್, ಡೇವಿಡ್ ವಿಲ್ಲಿ, ಬ್ರೈಡನ್ ಕಾರ್ಸೆ, ರೀಸ್ ಟೋಪ್ಲಿ

  • 12 Jul 2022 05:06 PM (IST)

    ಟೀಮ್ ಇಂಡಿಯಾ ಪ್ಲೇಯಿಂಗ್ 11

    ಭಾರತ (ಪ್ಲೇಯಿಂಗ್ 11): ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ

  • 12 Jul 2022 05:05 PM (IST)

    ವಿರಾಟ್ ಕೊಹ್ಲಿ ಅಲಭ್ಯ

    ಗಾಯಗೊಂಡಿರುವ ವಿರಾಟ್ ಕೊಹ್ಲಿ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಸ್ಥಾನ ಪಡೆದಿದ್ದಾರೆ.

  • 12 Jul 2022 05:04 PM (IST)

    ಟಾಸ್ ಗೆದ್ದ ರೋಹಿತ್ ಶರ್ಮಾ

    ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡಲಿದೆ.

  • 12 Jul 2022 05:00 PM (IST)

    ಕಿಯಾ ಓವಲ್​ನಲ್ಲಿ ನಡೆಯಲಿರುವ ಮೊದಲ ಪಂದ್ಯ

    ಭಾರತೀಯ ಸಮಯ ಸಂಜೆ 5.30 ಕ್ಕೆ ಶುರು

  • 12 Jul 2022 04:58 PM (IST)

    ಇಂದಿನಿಂದ ಏಕದಿನ ಸರಣಿ ಶುರು

Published On - Jul 12,2022 4:55 PM