Unmukt Chand: 15 ಬೌಂಡರಿ, 7 ಸಿಕ್ಸರ್‌.. 22 ಎಸೆತಗಳಲ್ಲಿ 102 ರನ್! ಅಮೇರಿಕಾದಲ್ಲಿ ಉನ್ಮುಕ್ತ್ ಚಾಂದ್ ರನ್ ಸುನಾಮಿ

Unmukt Chand: 20 ಓವರ್‌ಗಳ ಆಟದಲ್ಲಿ ಆಡಿದ ಈ ಇನಿಂಗ್ಸ್‌ನಲ್ಲಿ ಅವರು ಕೇವಲ 22 ಎಸೆತಗಳಲ್ಲಿ ಬೌಂಡರಿಗಳಿಂದ 102 ರನ್ ಗಳಿಸಿದರು.

Unmukt Chand: 15 ಬೌಂಡರಿ, 7 ಸಿಕ್ಸರ್‌.. 22 ಎಸೆತಗಳಲ್ಲಿ 102 ರನ್! ಅಮೇರಿಕಾದಲ್ಲಿ ಉನ್ಮುಕ್ತ್ ಚಾಂದ್ ರನ್ ಸುನಾಮಿ
ಉನ್ಮುಕ್ತ್ ಚಾಂದ್
Updated By: ಪೃಥ್ವಿಶಂಕರ

Updated on: Sep 27, 2021 | 4:51 PM

ಅಮೆರಿಕ ಇನ್ನೂ ಕ್ರಿಕೆಟ್​ನಲ್ಲಿ ಈಗ ತಾನೇ ಕಣ್ಣು ಬಿಡುತ್ತಿರುವ ದೇಶವಾಗಿದೆ. ಹಾಗಾಗಿ ಈ ದೇಶದಲ್ಲಿ ಈಗ ಟಿ 20 ಯ ರೋಮಾಂಚನ ಪ್ರಾರಂಭವಾಗಿದೆ. ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳ ಕ್ರಿಕೆಟಿಗರು ಅಲ್ಲಿಗೆ ಹೋಗಿ ಆಡುವ ಕಾರಣದಿಂದಲೇ ಇದು ಸಾಧ್ಯವಾಗಿದೆ. ತಮ್ಮ ದೇಶದಲ್ಲಿ ಅವಕಾಶಗಳನ್ನು ಪಡೆಯದ ಆಟಗಾರರು ಅಮೆರಿಕದ ಪಿಚ್‌ಗಳನ್ನು ತಮ್ಮ ಕ್ರಿಕೆಟ್ ಕೆಲಸದ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. ಇವರಲ್ಲಿ ಒಬ್ಬರು ಭಾರತದ ಉನ್ಮುಕ್ತ್ ಚಾಂದ್, ಅಲ್ಲಿ ಆಡುತ್ತಿರುವ ಮೈನರ್ ಕ್ರಿಕೆಟ್ ಲೀಗ್‌ನಲ್ಲಿ ಸುನಾಮಿ ಸೃಷ್ಟಿಸಿದ್ದಾರೆ. ಅವರು 20 ಓವರ್‌ಗಳ ಆಟದಲ್ಲಿ ಕೇವಲ 22 ಎಸೆತಗಳಲ್ಲಿ 102 ರನ್ಗಳನ್ನು ಲೂಟಿ ಮಾಡಿದರು.

ಅಮೆರಿಕದಲ್ಲಿ ನಡೆಯುತ್ತಿರುವ ಮೈನರ್ ಲೀಗ್ ಕ್ರಿಕೆಟ್​ನಲ್ಲಿ, ಪಂದ್ಯವು ಆಸ್ಟಿನ್ ಅಥ್ಲೆಟಿಕ್ಸ್ ಮತ್ತು ಸಿಲ್ಕೆನ್ ವ್ಯಾಲಿ ಸ್ಟ್ರೈಕರ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ, ಉನ್ಮುಕ್ತ್ ಚಾಂದ್ ಸಿಲ್ಕೆನ್ ವ್ಯಾಲಿ ಸ್ಟ್ರೈಕರ್ಸ್‌ನ ಭಾಗವಾಗಿದ್ದರು. ಆಸ್ಟಿನ್ ಅಥ್ಲೆಟಿಕ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್​ಗಳಲ್ಲಿ 9 ವಿಕೆಟ್​ಗೆ 184 ರನ್ ಗಳಿಸಿತು. ಉತ್ತರವಾಗಿ, ಉನ್ಮುಕ್ತ್ ಚಾಂದ್ ಅಬ್ಬರದ ಬ್ಯಾಟಿಂಗ್​ನಿಂದಾಗಿ ಸಿಲ್ಕೆನ್ ವ್ಯಾಲಿ 3 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.

ಭಾರತದ ಉನ್ಮುಕ್ತ್ ಚಾಂದ್ ಅಮೆರಿಕದಲ್ಲಿ ಪ್ರಾಬಲ್ಯ
ಉನ್ಮುಕ್ತ್ ಚಾಂದ್ ಈ ಪಂದ್ಯದಲ್ಲಿ 191.30 ರ ಸ್ಟ್ರೈಕ್ ರೇಟ್​ನಲ್ಲಿ ಶತಕ ಗಳಿಸಿದರು. ಜೊತೆಗೆ ಕೊನೆಯವರೆಗೂ ಅಜೇಯರಾಗಿ ಉಳಿದರು ಮತ್ತು 69 ಎಸೆತಗಳಲ್ಲಿ 132 ರನ್ ಗಳಿಸಿದರು. ಆದರೆ, 20 ಓವರ್‌ಗಳ ಆಟದಲ್ಲಿ ಆಡಿದ ಈ ಇನಿಂಗ್ಸ್‌ನಲ್ಲಿ ಅವರು ಕೇವಲ 22 ಎಸೆತಗಳಲ್ಲಿ ಬೌಂಡರಿಗಳಿಂದ 102 ರನ್ ಗಳಿಸಿದರು. ವಾಸ್ತವವಾಗಿ, ಬೌಲರ್‌ಗಳ ಹೆಡೆಮುರಿ ಕಟ್ಟಿದ ಉನ್ಮುಕ್ತ್ ಚಂದ್ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಮತ್ತು 7 ಸಿಕ್ಸರ್‌ಗಳು ಸೇರಿವೆ.

ಅಮೆರಿಕದಲ್ಲಿ ಇಲ್ಲಿಯವರೆಗೆ ಚಾಂದ್, 14 ಟಿ 20, 534 ರನ್, 1 ಶತಕ
ಉನ್ಮುಕ್ತ್ ಚಾಂದ್ ಅವರ ಬಿರುಗಾಳಿಯ ಇನಿಂಗ್ಸ್​ನಿಂದಾಗಿ, ಸಿಲ್ಕೆನ್ ವ್ಯಾಲಿ ಸ್ಟ್ರೈಕರ್ಸ್ ಪಂದ್ಯವನ್ನು 6 ವಿಕೆಟ್ ಗಳಿಂದ ಗೆದ್ದರು. ಸಿಲ್ಕೆನ್ ವ್ಯಾಲಿ ಸ್ಟ್ರೈಕರ್ಸ್‌ಗೆ ಸೇರಿದ ನಂತರ ಇದು ಯುಎಸ್‌ನಲ್ಲಿ ಅವರ 14 ನೇ ಪಂದ್ಯವಾಗಿದೆ. ಈ ಸಮಯದಲ್ಲಿ, ಅವರು 434 ಎಸೆತಗಳನ್ನು ಎದುರಿಸಿದ್ದಾರೆ ಮತ್ತು 53.20 ರ ಸರಾಸರಿಯಲ್ಲಿ 534 ರನ್ ಮತ್ತು 122.58 ಸ್ಟ್ರೈಕ್ ರೇಟ್ ಗಳಿಸಿದ್ದಾರೆ. ಈ 14 ಪಂದ್ಯಗಳಲ್ಲಿ ಅವರ ಬ್ಯಾಟ್ 18 ಸಿಕ್ಸರ್ ಮತ್ತು 52 ಬೌಂಡರಿಗಳನ್ನು ಕಂಡಿದೆ. ಉನ್ಮುಕ್ತ್ ಅವರ ಇನ್ನಿಂಗ್ಸ್ 132 ರನ್ ಅಮೆರಿಕದಲ್ಲಿ ತಮ್ಮ ಹೊಸ ತಂಡಕ್ಕಾಗಿ ಆಡಿದ 14 ಪಂದ್ಯಗಳಲ್ಲಿ ಅವರ ಮೊದಲ ಶತಕವಾಗಿದೆ. ಇದಲ್ಲದೇ, ಅವರು 3 ಅರ್ಧ ಶತಕಗಳನ್ನು ಗಳಿಸಿದ್ದಾರೆ.

Published On - 4:49 pm, Mon, 27 September 21