Kuldeep Yadav: ಕುಲ್ದೀಪ್ ಯಾದವ್ಗೆ ಇಂಜುರಿ! ಯುಎಇಯಿಂದ ಭಾರತಕ್ಕೆ ವಾಪಸ್; 6 ತಿಂಗಳು ಕ್ರಿಕೆಟ್ನಿಂದ ದೂರ
Kuldeep Yadav: ಭಾರತೀಯ ಚೈನಮನ್ ಬೌಲರ್ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು, ಪಂದ್ಯಾವಳಿಯ ಮಧ್ಯದಿಂದ ಭಾರತಕ್ಕೆ ಮರಳಿದ್ದಾರೆ.

ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ 2021 ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗೆ ಉತ್ತಮ ಆರಂಭ ಸಿಕ್ಕಿದೆ. ಯುಎಇಯಲ್ಲಿ, ತಂಡವು ಇಲ್ಲಿಯವರೆಗೆ ಆಡಿರುವ 3 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದೆ. ಆದರೆ ಈ ಮಧ್ಯೆ ಒಂದು ಆಘಾತಕ್ಕಾರಿ ಸುದ್ದಿ ಈ ತಂಡದಿಂದ ಹೊರಬಿದ್ದಿದೆ. ತಂಡದ ಸ್ಟಾರ್ ಭಾರತೀಯ ಸ್ಪಿನ್ನರ್ ಕುಲ್ದೀಪ್ ಯಾದವ್ ಗಾಯಗೊಂಡಿದ್ದಾರೆ. ಮಾಹಿತಿಯ ಪ್ರಕಾರ, ಭಾರತೀಯ ಚೈನಮನ್ ಬೌಲರ್ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು, ಪಂದ್ಯಾವಳಿಯ ಮಧ್ಯದಿಂದ ಭಾರತಕ್ಕೆ ಮರಳಿದ್ದಾರೆ. ಕುಲದೀಪ್ ಗಾಯದ ಸ್ಥಿತಿಯೆಂದರೆ ಅವರು ಮುಂದಿನ ಹಲವು ತಿಂಗಳುಗಳ ಕಾಲ ಕ್ರಿಕೆಟ್ ಮೈದಾನಕ್ಕೆ ಮರಳುವ ನಿರೀಕ್ಷೆಯಿಲ್ಲ.
ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಕೆಲವು ದಿನಗಳ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ತರಬೇತಿ ಅವಧಿಯಲ್ಲಿ ಕುಲ್ದೀಪ್ ಈ ಗಾಯಕ್ಕೆ ತುತ್ತಾಗಿದ್ದರು. ಬಿಸಿಸಿಐ ಅಧಿಕಾರಿ ನೀಡಿದ ಮಾಹಿತಿಯಲ್ಲಿ, ಹೌದು ಯುಎಇಯಲ್ಲಿನ ಅಭ್ಯಾಸದ ಅವಧಿಯಲ್ಲಿ ಕುಲ್ದೀಪ್ ಮೊಣಕಾಲಿಗೆ ಗಂಭೀರ ಗಾಯವಾಗಿದೆ ಎಂದು ನಮಗೆ ಮಾಹಿತಿ ಸಿಕ್ಕಿದೆ. ಬಹುಶಃ ಫೀಲ್ಡಿಂಗ್ ಸಮಯದಲ್ಲಿ ಅವರ ಮೊಣಕಾಲಿಗೆ ಗಾಯವಾಗಿದೆ ಎಂದು ಊಹಿಸಲಾಗಿದೆ. ಈ ಗಾಯವು ತುಂಬಾ ಗಂಭೀರವಾಗಿ ಕಾಣುತ್ತದೆ. ಹೀಗಾಗಿ ಅವರು ಐಪಿಎಲ್‌ನಲ್ಲಿ ಮತ್ತಷ್ಟು ಆಡುವ ಸಾಧ್ಯತೆಯಿಲ್ಲ. ಆದ್ದರಿಂದ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ ಎಂದಿದ್ದಾರೆ.
4-6 ತಿಂಗಳು ವಿಶ್ರಾಂತಿ ಬೇಕು ಮಾಹಿತಿಯ ಪ್ರಕಾರ, ಎಡಗೈ ಭಾರತೀಯ ಸ್ಪಿನ್ನರ್ ಮುಂಬೈನಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಮತ್ತೆ ಮೈದಾನಕ್ಕೆ ಮರಳಲು 6 ತಿಂಗಳವರೆಗೆ ತೆಗೆದುಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ, ಮುಂದಿನ ತಿಂಗಳು ಆರಂಭವಾಗುವ ದೇಶೀಯ ಋತುವಿನಲ್ಲಿ ಆಡುವ ಅವರ ಭರವಸೆಯೂ ಕೊನೆಗೊಂಡಿದೆ.
ಕೆಕೆಆರ್-ಬಿಸಿಸಿಐ ಮೌನ ಕುಲ್‌ದೀಪ್ ಟಿ 20 ವಿಶ್ವಕಪ್‌ಗೆ ಆಯ್ಕೆಯಾದ ಭಾರತೀಯ ತಂಡದ ಭಾಗವಾಗಿಲ್ಲ. ಹಾಗಾಗಿ ಅವರು ತಮ್ಮ ಉತ್ತರ ಪ್ರದೇಶವನ್ನು ಹೋಮ್ ಸೀಸನ್‌ನಲ್ಲಿ ಪ್ರತಿನಿಧಿಸಿದ್ದರು. ಇದರೊಂದಿಗೆ ಫಾರ್ಮ್‌ಗೆ ಮರಳಲು ಪ್ರಯತ್ನಿಸಿದರು, ಆದರೆ ಅಲ್ಲಿ ಅವರು ಮಿಂಚಲಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್, ಈ ಭಾರತೀಯ ಆಟಗಾರನ ಗಾಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಜೊತೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಎರಡು ವರ್ಷಗಳಿಂದ ಐಪಿಎಲ್‌ನಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ 26 ವರ್ಷ ವಯಸ್ಸಿನ ಕುಲ್ದೀಪ್, ಭಾರತ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ 174 ವಿಕೆಟ್ಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಮತ್ತು ಟಿ 20 ಸರಣಿಯಲ್ಲಿ ಭಾಗವಹಿಸಿದ್ದರು. ಆದರೆ ಅಲ್ಲಿ ಅವರ ಪ್ರದರ್ಶನವೂ ವಿಶೇಷವಾಗಿರಲಿಲ್ಲ ಮತ್ತು 4 ರಲ್ಲಿ ಕೇವಲ 4 ವಿಕೆಟ್ಗಳು ಅವರ ಖಾತೆಯಲ್ಲಿ ಬಂದವು. ಐಪಿಎಲ್ 2021 ಋತುವಿನಲ್ಲಿ ಕುಲ್ದೀಪ್ ಒಂದೇ ಒಂದು ಪಂದ್ಯದಲ್ಲಿ ಅವಕಾಶ ಪಡೆಯಲಿಲ್ಲ. 2019 ರ ಸೀಸನ್‌ನಿಂದ ಇಲ್ಲಿಯವರೆಗೆ, ಅವರು ಕೇವಲ 14 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಕೇವಲ 5 ವಿಕೆಟ್ ಪಡೆದರು.