SRH vs RR, IPL 2021: ಸತತ ಸೋಲಿನಿಂದ ಹೊರಬಂದ ಸನ್ರೈಸರ್ಸ್: RR ವಿರುದ್ದ SRH ಗೆ 7 ವಿಕೆಟ್ಗಳ ಭರ್ಜರಿ ಜಯ
Sunrisers Hyderabad vs Rajasthan Royals Live Score: ಉಭಯ ತಂಡಗಳು ಇದುವರೆಗೆ ಐಪಿಎಲ್ನಲ್ಲಿ 14 ಬಾರಿ ಮುಖಾಮುಖಿ ಆಗಿದೆ. ಅದರಲ್ಲಿ ಸನ್ರೈಸರ್ಸ್ ಹೈದರಾಬಾದ್ 7 ಹಾಗೂ ರಾಜಸ್ಥಾನ್ ರಾಯಲ್ಸ್ ಕೂಡ 7 ಪಂದ್ಯಗಳಲ್ಲಿ ಗೆಲುವು ಕಂಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) 40ನೇ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ (Kane Williamson) ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ತಂಡ ಸಂಜು ಸ್ಯಾಮ್ಸನ್ (Sanju Samson) ನೇತೃತ್ವದ ರಾಜಸ್ಥಾನ್ ರಾಯಲ್ಸ್ (SRH vs RR) ವಿರುದ್ದ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಸ್ಯಾಮ್ಸನ್ (82) ಅವರ ಅರ್ಧಶತಕದ ನೆರವನಿಂದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್ನಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ ಪೇರಿಸಿತು.
165 ರನ್ಗಳ ಗುರಿ ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಜೇಸನ್ ರಾಯ್ (60) ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಭರ್ಜರಿ ಬ್ಯಾಟಿಂಗ್ ಮಾಡಿದ ನಾಯಕ ಕೇನ್ ವಿಲಿಯಮ್ಸನ್ ಅಜೇಯ 51 ರನ್ಗಳಿಸುವ ಮೂಲಕ ಸನ್ರೈಸರ್ಸ್ ತಂಡವನ್ನು 18.3 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 165 ರನ್ಗಳ ಗುರಿ ಮುಟ್ಟಿಸಿದರು. ಸತತ ಐದು ಸೋಲಿನಿಂದ ಕಂಗೆಟ್ಟಿದ್ದ ಎಸ್ಆರ್ಹೆಚ್ ತಂಡವು ಈ ಜಯದೊಂದಿಗೆ ಗೆಲುವಿನ ಲಯಕ್ಕೆ ಮರಳಿದೆ.
ಸಂಕ್ಷಿಪ್ತ ಸ್ಕೋರ್ ವಿವರ:
RR 164/5 (20)
ಸಂಜು ಸ್ಯಾಮ್ಸನ್-82
ಜೈಸ್ವಾಲ್- 36
ಸಿದ್ದಾರ್ಥ್ ಕೌಲ್- 36/2
SRH 167/3 (18.3)
ಜೇಸನ್ ರಾಯ್- 60
ಕೇನ್ ವಿಲಿಯಮ್ಸನ್- 51
ಮುಸ್ತಫಿಜುರ್- 26/1
ಉಭಯ ತಂಡಗಳು ಈವರೆಗೆ ಐಪಿಎಲ್ನಲ್ಲಿ 15 ಬಾರಿ ಮುಖಾಮುಖಿ ಆಗಿದ್ದು, ಇದರಲ್ಲಿ ಸನ್ರೈಸರ್ಸ್ ಹೈದರಾಬಾದ್ 8 ಹಾಗೂ ರಾಜಸ್ಥಾನ್ ರಾಯಲ್ಸ್ ಕೂಡ 7 ಪಂದ್ಯಗಳಲ್ಲಿ ಗೆಲುವು ಕಂಡಿದೆ.
ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಚೇತನ್ ಸಕಾರಿಯಾ, ಜಯದೇವ್ ಉನದ್ಕಟ್, ಮುಸ್ತಫಿಜುರ್ ರಹಮಾನ್
ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಾಹ, ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ
LIVE NEWS & UPDATES
-
ಗೆಲುವಿನ ಸಂಭ್ರಮ
???#SRHvRR #VIVOIPL https://t.co/TN3tS5tx56 pic.twitter.com/ZiKBBT1MuW
— IndianPremierLeague (@IPL) September 27, 2021
-
SRH ಗೆ 7 ವಿಕೆಟ್ಗಳ ಭರ್ಜರಿ ಜಯ
That's that from Match 40.#SRH win by 7 wickets.
FIFTY for the Skipper and their second win in #VIVOIPL 2021.
Scorecard – https://t.co/3wrjO70JvR #SRHvRR #VIVOIPL pic.twitter.com/P5GCVzGKe6
— IndianPremierLeague (@IPL) September 27, 2021
-
-
ಸನ್ರೈಸರ್ಸ್ ಹೈದರಾಬಾದ್ಗೆ 7 ವಿಕೆಟ್ಗಳ ಭರ್ಜರಿ ಜಯ
RR 164/5 (20)
SRH 167/3 (18.3)
-
ವಾವ್ಹ್…!
ಮುಸ್ತಫಿಜುರ್ ಫುಲ್ ಟಾಸ್ ಎಸೆತ…ಮಿಡ್ ವಿಕೆಟ್ನತ್ತ ವಿಲಿಯಮ್ಸನ್ ಆಕರ್ಷಕ ಹೊಡೆತ ಬೌಂಡರಿ
-
6 ರನ್ಗಳ ಅವಶ್ಯಕತೆ
SRH 159/3 (18)
ಸನ್ ರೈಸರ್ಸ್ ಹೈದರಾಬಾದ್ ಗೆ 12 ಎಸೆತಗಳಲ್ಲಿ 6 ರನ್ ಬೇಕಿದೆ. -
-
ಫ್ಲಿಕ್-ಫೋರ್
ಚೇತನ್ ಸಕರಿಯಾ ಎಸೆತದಲ್ಲಿ ಲೆಗ್ಸೈಡ್ನತ್ತ ಫ್ಲಿಕ್ ಮಾಡಿದ ಕೇನ್ ವಿಲಿಯಮ್ಸನ್-ಫೋರ್
-
ಅಬ್ಬಾಬ್ಬ…ಅಭಿ
ಚೇತನ್ ಸಕರಿಯಾ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಅಭಿಷೇಕ್ ಶರ್ಮಾ
-
17 ಓವರ್ ಮುಕ್ತಾಯ
SRH 143/3 (17)
ಸನ್ ರೈಸರ್ಸ್ ಹೈದರಾಬಾದ್ ಗೆ 18 ಎಸೆತಗಳಲ್ಲಿ 22 ರನ್ಗಳ ಅವಶ್ಯಕತೆ -
26 ರನ್ಗಳ ಅವಶ್ಯಕತೆ
SRH 139/3 (16)
ಸನ್ ರೈಸರ್ಸ್ ಹೈದರಾಬಾದ್ ಗೆ 24 ಎಸೆತಗಳಲ್ಲಿ 26 ರನ್ಗಳ ಅವಶ್ಯಕತೆ -
15 ಓವರ್ ಮುಕ್ತಾಯ
RR 164/5 (20)
SRH 131/3 (15)
-
ಅಭಿಷೇಕ್ ಮೊದಲ ಬೌಂಡರಿ
ಕ್ರಿಸ್ ಮೊರಿಸ್ ಎಸೆತವನ್ನು ಬ್ಯಾಕ್ ವರ್ಡ್ ಲೆಗ್ನತ್ತ ಬಾರಿಸಿದ ಅಭಿಷೇಕ್- ಫೋರ್
-
ಪ್ರಿಯಂ ಗರ್ಗ್ ಔಟ್
ಮುಸ್ತಫಿಜುರ್ ಎಸೆತದಲ್ಲಿ ಬೌಲರ್ಗೆ ಸುಲಭ ಕ್ಯಾಚ್ ನೀಡಿ ಹೊರ ನಡೆದ ಪ್ರಿಯಂ ಗರ್ಗ್ (0)
-
ಬ್ಯೂಟಿಫುಲ್ ಫೋರ್
ಮುಸ್ತಫಿಜುರ್ ಎಸೆತದಲ್ಲಿ ಓವರ್ ಎಕ್ಸ್ಟ್ರಾ ಕವರ್ನತ್ತ ಬ್ಯೂಟಿಫುಲ್ ಶಾಟ್… ಕೇನ್ ವಿಲಿಯಮ್ಸನ್ ಬ್ಯಾಟ್ನಿಂದ ಫೋರ್
-
ಜೇಸನ್ ರಾಯ್ ಔಟ್
ಚೇತನ್ ಸಕರಿಯಾ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಜೇಸನ್ ರಾಯ್ (60)
RR 164/5 (20)
SRH 114/2 (12)
-
ಜೇಸನ್ ರಾಯ್ ಸಿಡಿಲಬ್ಬರ
ಅರ್ಧಶತಕ ಪೂರೈಸಿದ ಜೇಸನ್ ರಾಯ್
ತಿವಾಠಿಯಾ ಓವರ್ನಲ್ಲಿ 21 ರನ್ ಬಾರಿಸಿದ ಜೇಸನ್ ರಾಯ್
-
ಜೇಸನ್ ಅಬ್ಬರ
ತಿವಾಠಿಯಾ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್ನತ್ತ ಸೂಪರ್ ಶಾಟ್…ಜೇಸನ್ ರಾಯ್ ಬ್ಯಾಟ್ನಿಂದ ಫೋರ್
-
ಜೇ-ಸಿಕ್ಸ್
ವಾಟ್ ಎ ಶಾಟ್…ತಿವಾಠಿಯಾ ಎಸೆತದಲ್ಲಿ ಲೆಗ್ ಸೈಡ್ನತ್ತ ಸೂಪರ್ ಸಿಕ್ಸ್ ಬಾರಿಸಿದ ಜೇಸನ್ ರಾಯ್
-
10 ಓವರ್ ಮುಕ್ತಾಯ
RR 164/5 (20)
SRH 91/1 (10.1)
ಕ್ರೀಸ್ನಲ್ಲಿ ಜೇಸನ್ ರಾಯ್ ಹಾಗೂ ಕೇನ್ ವಿಲಿಯಮ್ಸನ್ ಬ್ಯಾಟಿಂಗ್
-
ವಿಲಿಯಮ್ಸನ್ ಸಿಕ್ಸ್
ಲೊಮರರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕೇನ್ ವಿಲಿಯಮ್ಸನ್
SRH 90/1 (10)
-
9 ಓವರ್ ಮುಕ್ತಾಯ
SRH 81/1 (9)
ಕ್ರೀಸ್ನಲ್ಲಿ ಜೇಸನ್ ರಾಯ್ ಹಾಗೂ ಕೇನ್ ವಿಲಿಯಮ್ಸನ್ ಬ್ಯಾಟಿಂಗ್
-
ಕ್ರೀಸ್ನಲ್ಲಿ ಜೇಸನ್ ರಾಯ್ ಹಾಗೂ ಕೇನ್ ವಿಲಿಯಮ್ಸನ್ ಬ್ಯಾಟಿಂಗ್
RR 164/5 (20)
SRH 76/1 (8.1)
-
ಕೇನ್ ಬೌಂಡರಿ
ಆಫ್ ಸೈಡ್ನತ್ತ ಭರ್ಜರಿ ಬೌಂಡರಿ ಬಾರಿಸಿದ ರನ್ ಖಾತೆ ತೆರೆದ ಕೇನ್ ವಿಲಿಯಮ್ಸನ್
-
ಸಾಹ ಸ್ಟಂಪ್ ಔಟ್
ಲೊಮರರ್ ಎಸೆತದಲ್ಲಿ ಮುನ್ನುಗ್ಗಿ ಹೊಡೆಯುವ ಪ್ರಯತ್ನ…ಚೆಂಡು ನೇರವಾಗಿ ಕೀಪರ್ ಕೈಗೆ.. ವೃದ್ದಿಮಾನ್ ಸಾಹ (18) ಸ್ಟಂಪ್ ಔಟ್
-
ಕ್ರಿಸ್ ಮೊರಿಸ್ ಬೆಂಡೆತ್ತಿದ ಜೇಸನ್ ರಾಯ್
ಕ್ರಿಸ್ ಮೊರಿಸ್ ಎಸೆದ 5ನೇ ಓವರ್ನಲ್ಲಿ 18 ರನ್ ಕಲೆಹಾಕಿದ ಜೇಸನ್ ರಾಯ್
-
ಬ್ಯಾಕ್ ಟು ಬ್ಯಾಕ್ ಫೋರ್
ಮೊರಿಸ್ ಎಸೆತವನ್ನು ಡೀಪ್ ಮಿಡ್ ವಿಕೆಟ್ನತ್ತ ಬಾರಿಸಿದ ಜೇಸನ್ ರಾಯ್…ಫೋರ್
SRH 57/0 (5)
-
ಲೆಗ್ ಬೈ-ಫೋರ್
ಕ್ರಿಸ್ ಮೊರಿಸ್ ಎಸೆತದಲ್ಲಿ ಜೇಸನ್ ರಾಯ್ ಪ್ಯಾಡ್ಗೆ ಬಡಿದು ಚೆಂಡು ಹಿಂಬದಿಯತ್ತ…ಲೆಗ್ ಬೈ ಫೋರ್
-
ವಾಟ್ ಎ ಶಾಟ್
ಕ್ರಿಸ್ ಮೊರಿಸ್ ಎಸೆತವನ್ನು ಡೀಪ್ ಥರ್ಡ್ಮ್ಯಾನ್ನತ್ತ ಆಕರ್ಷಕವಾಗಿ ಬಾರಿಸಿದ ಜೇಸನ್ ರಾಯ್
-
ಜೇಸನ್ ಹಿಟ್
ಮುಸ್ತಫಿಜುರ್ ಎಸೆತದಲ್ಲಿ ಜೇಸನ್ ರಾಯ್ ಪಂಚಿಂಗ್ ಹಿಟ್…ಚೆಂಡು ಬೌಂಡರಿಯತ್ತ…ಫೋರ್
SRH 39/0 (4)
-
ಕಳಪೆ ಕೀಪಿಂಗ್
ಮುಸ್ತಫಿಜುರ್ ಎಸೆತವನ್ನು ಹಿಡಿಯುವಲ್ಲಿ ಎಡವಿದ ಸಂಜು ಸ್ಯಾಮ್ಸನ್…ಬೈಸ್..ಫೋರ್
-
ರಾಯ್ ಸ್ಟ್ರೈಲ್
ಮುಸ್ತಫಿಜುರ್ ರಹಮಾನ್ ಎಸೆತದಲ್ಲಿ ಸೂಪರ್ ಬೌಂಡರಿ ಸಿಡಿಸಿದ ಜೇಸನ್ ರಾಯಲ್
-
ಸಾಹ ಸೂಪರ್ ಶಾಟ್
ಜಯದೇವ್ ಶಾಟ್ ಬಾಲ್ ಅನ್ನು ಡೀಪ್ ಎಕ್ಸ್ಟ್ರಾ ಕವರ್ನತ್ತ ಬಾರಿಸಿದ ಸಾಹ…ಫೋರ್
SRH 26/0 (3)
-
ಸಾಹ ಸಿಕ್ಸ್
ಜಯದೇವ್ ಉನದ್ಕಟ್ ಎಸೆತದಲ್ಲಿ ಸಾಹ ಬ್ಯಾಟ್ನಿಂದ ಸೂಪರ್ ಸಿಕ್ಸ್
-
2 ಓವರ್ ಮುಕ್ತಾಯ
SRH 14/0 (2)
-
ಮೊದಲ ಓವರ್ ಮುಕ್ತಾಯ
ಸಾಹ ಸೂಪರ್ ಶಾಟ್….ಡೀಪ್ ಮಿಡ್ ವಿಕೆಟ್ನತ್ತ ಬೌಂಡರಿ.
SRH 8/0 (1)
-
ಮೊದಲ ಓವರ್: ಜಯದೇವ್ ಉನದ್ಕಟ್
ಎಸ್ಆರ್ಹೆಚ್ ಆರಂಭಿಕರು:
ವೃದ್ದಿಮಾನ್ ಸಾಹ
ಜೇಸನ್ ರಾಯ್
-
ಸನ್ರೈಸರ್ಸ್ಗೆ 165 ರನ್ಗಳ ಟಾರ್ಗೆಟ್ ನೀಡಿದ ರಾಜಸ್ಥಾನ್ ರಾಯಲ್ಸ್
Skipper Sanju got his Abu Dhabi form to Dubai. Over to our bowlers now. ?#RoyalsFamily | #SRHvRR | #IPL2021 | #HallaBol | @IamSanjuSamson pic.twitter.com/Ngj7ni1Tia
— Rajasthan Royals (@rajasthanroyals) September 27, 2021
-
ಟಾರ್ಗೆಟ್ 165
Innings Break!
A superb knock of 82 from the #RR Captain propels them to a total of 164/5 on the board.#SRH chase coming up shortly.
Scorecard – https://t.co/3wrjO6J87h #SRHvRR #VIVOIPL pic.twitter.com/ajSu25YkEq
— IndianPremierLeague (@IPL) September 27, 2021
-
ರಾಜಸ್ಥಾನ್ ರಾಯಲ್ಸ್- RR 164/5 (20)
20ನೇ ಓವರ್ನಲ್ಲಿ ಕೇವಲ 4 ರನ್ ನೀಡಿ 2 ವಿಕೆಟ್ ಪಡೆದ ಸಿದ್ಧಾರ್ಥ್ ಕೌಲ್
-
ಗುಡ್ ಕ್ಯಾಚ್-ಜೇಸನ್ ರಾಯ್
ಸಿದ್ಧಾರ್ಥ್ ಕೌಲ್ ಎಸೆತದಲ್ಲಿ ರಿಯಾನ್ ಪರಾಗ್ ಭರ್ಜರಿ ಹೊಡೆತ…ಬೌಂಡರಿ ಲೈನ್ನಲ್ಲಿ ಜೇಸನ್ ರಾಯ್ ಉತ್ತಮ ಕ್ಯಾಚ್
-
ಸಂಜು ಸ್ಯಾಮ್ಸನ್ ಔಟ್
57 ಎಸೆತಗಳಲ್ಲಿ 82 ರನ್ ಬಾರಿಸಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಸಂಜು ಸ್ಯಾಮ್ಸನ್- ಸಿದ್ದಾರ್ಥ್ ಕೌಲ್ಗೆ ಮೊದಲ ವಿಕೆಟ್
-
ಕ್ಯಾಚ್ ಡ್ರಾಪ್
ಹೋಲ್ಡರ್ ಎಸೆತದಲ್ಲಿ ಲೊಮರರ್ ಬ್ಯಾಟ್ ಎಡ್ಜ್…ಆಕಾಶದತ್ತ ಚಿಮ್ಮಿದ ಚೆಂಡು…ಹಿಂದೆಜ್ಜೆ ಹಾಕಿ ಹಿಡಿಯುವಲ್ಲಿ ಸಂದೀಪ್ ಶರ್ಮಾ ವಿಫಲ…ಕ್ಯಾಚ್ ಡ್ರಾಪ್
RR 153/3 (18)
-
ಸ್ಯಾಮ್ಸನ್ ಸೂಪರ್ ಬ್ಯಾಟಿಂಗ್
ಜೇಸನ್ ಹೋಲ್ಡರ್ ಎಸೆತದಲ್ಲಿ ಸೂಪರ್ ಬೌಂಡರಿ ಸಿಡಿಸಿದ ಸಂಜು ಸ್ಯಾಮ್ಸನ್
-
17 ಓವರ್ ಮುಕ್ತಾಯ
RR 143/3 (17)
ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಲೊಮರರ್ ಬ್ಯಾಟಿಂಗ್
-
ಸ್ಟನ್ನಿಂಗ್ ಶಾಟ್
ಮುಂದುವರೆದ ಸ್ಯಾಮ್ಸನ್ ಅಬ್ಬರ…ಭುವಿ ಎಸೆತದಲ್ಲಿ ಬ್ಯೂಟಿಫುಲ್ ಬೌಂಡರಿ
-
ಮತ್ತೊಂದು ಸಿಕ್ಸರ್
ಕೌಲ್ ಬೆಂಡೆತ್ತಿದ ಸಂಜು ಸ್ಯಾಮ್ಸನ್…ಮತ್ತೊಂದು ಸಿಕ್ಸ್
16ನೇ ಓವರ್ನಲ್ಲಿ 20 ರನ್
RR 133/3 (16)
-
ಸ್ಟ್ರೈಟ್ ಹಿಟ್
ಸಂಜು ಸ್ಯಾಮ್ಸನ್ ಸ್ಟ್ರೈಟ್ ಹಿಟ್….ಸಿದ್ದಾರ್ಥ್ ಕೌಲ್ ಎಸೆತಕ್ಕೆ ಸೂಪರ್ ಸಿಕ್ಸ್ ಉತ್ತರ
RR 125/3 (15.3)
-
ಅರ್ಧಶತಕ ಪೂರೈಸಿದ ಸಂಜು ಸ್ಯಾಮ್ಸನ್
ಸಿದ್ಧಾರ್ಥ್ ಕೌಲ್ ಎಸೆತದಲ್ಲಿ ಕವರ್ಸ್ನತ್ತ ಭರ್ಜರಿ ಬೌಂಡರಿ
41 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್
-
ರಶೀದ್ ಟು ಸ್ಯಾಮ್ಸನ್
ರಶೀದ್ ಖಾನ್ ಎಸೆತಕ್ಕೆ ಮುನ್ನುಗ್ಗಿ ಹೊಡೆದ ಸಂಜು ಸ್ಯಾಮ್ಸನ್…88 ಮೀಟರ್ ಸಿಕ್ಸ್
-
RR 102/3 (14)
And, that's a 50-run partnership between @IamSanjuSamson & @yashasvi_j ??
Live – https://t.co/3wrjO6J87h #SRHvRR #VIVOIPL pic.twitter.com/GNz9PE3wj2
— IndianPremierLeague (@IPL) September 27, 2021
-
100 ರನ್ ಪೂರೈಸಿದ ರಾಜಸ್ಥಾನ್ ರಾಯಲ್ಸ್
ಜೇಸನ್ ಹೋಲ್ಡರ್ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಮಹಿಪಾಲ್ ಲೊಮರರ್
RR 101/3 (13.5)
-
12 ಓವರ್ ಮುಕ್ತಾಯ
RR 83/3 (12)
ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಮಹಿಪಾಲ್ ಲೊಮರರ್ ಬ್ಯಾಟಿಂಗ್
-
ವಾಟ್ ಎ ಕ್ಯಾಚ್- ಅಬ್ದುಲ್ ಸಮದ್
ರಶೀದ್ ಖಾನ್ ಎಸೆತದಲ್ಲಿ ಬಿಗ್ ಹಿಟ್ಗೆ ಮುಂದಾದ ಲಿವಿಂಗ್ಸ್ಟೋನ್… ಬೌಂಡರಿ ಲೈನ್ನಿಂದ ಓಡಿ ಬಂದು ಅತ್ಯುತ್ತಮ ಕ್ಯಾಚ್ ಹಿಡಿದ ಅಬ್ದುಲ್ ಸಮದ್.
-
ಸ್ಯಾಮ್ಸನ್ ಬ್ಯೂಟಿ
ವಾಟ್ ಎ ಶಾಟ್… ಅಭಿಷೇಕ್ ಶರ್ಮಾ ಎಸೆತದಲ್ಲಿ ಕವರ್ನತ್ತ ಸ್ಯಾಮ್ಸನ್ ಸೂಪರ್ ಶಾಟ್…ಫೋರ್
RR 75/2 (9.4)
-
ವಿಕೆಟ್ ಕೈಚೆಲ್ಲಿದ ಜೈಸ್ವಾಲ್–ಬೌಲ್ಡ್
ಸಂದೀಪ್ ಶರ್ಮಾ ಎಸೆತದಲ್ಲಿ ಮುನ್ನುಗ್ಗಿ ಹೊಡೆಯುವ ಪ್ರಯತ್ನ…ಬ್ಯಾಟ್ ತಾಗಿ ಚೆಂಡು ವಿಕೆಟ್ಗೆ- ಯಶಸ್ವಿ ಜೈಸ್ವಾಲ್ (36) ಬೌಲ್ಡ್
-
ಸಿಕ್ಸರ್ ಜೈಸ್ವಾಲ್
ಸಂದೀಪ್ ಶರ್ಮಾ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಸ್ಟನ್ನಿಂಗ್ ಹಿಟ್…ಲಾಂಗ್ ಆಫ್ನತ್ತ ಸಿಕ್ಸ್
-
8 ಓವರ್ ಮುಕ್ತಾಯ: ರಾಜಸ್ಥಾನ್ ಉತ್ತಮ ಬ್ಯಾಟಿಂಗ್
RR 60/1 (8)
-
ಚೀಕಿ ಶಾಟ್
ರಶೀದ್ ಖಾನ್ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಚೀಕಿ ಶಾಟ್…ಬ್ಯಾಕ್ವರ್ಡ್ ಪಾಯಿಂಟ್ ಫೀಲ್ಡರ್ ವಂಚಿಸಿ ಚೆಂಡು ಬೌಂಡರಿಗೆ-ಫೋರ್
RR 57/1 (7)
-
RR 52/1 (6.4)
7ನೇ ಓವರ್ನಲ್ಲಿ 50 ರನ್ ಪೂರೈಸಿದ ರಾಜಸ್ಥಾನ್ ರಾಯಲ್ಸ್
-
ಪವರ್ಪ್ಲೇ ಮುಕ್ತಾಯ: ಆರ್ಆರ್ ಉತ್ತಮ ಆರಂಭ
RR 49/1 (6)
ಮೊದಲ 6 ಓವರ್ನಲ್ಲಿ 49 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್
ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್
-
ಬ್ಯಾಕ್ ಟು ಬ್ಯಾಕ್ ಬೌಂಡರಿ
ಸಿದ್ದಾರ್ಥ್ ಕೌಲ್ ಎಸೆತದಲ್ಲಿ ಮತ್ತೊಂದು ಬ್ಯೂಟಿಫುಲ್ ಬೌಂಡರಿ ಬಾರಿಸಿದ ಸ್ಯಾಮ್ಸನ್
-
ಎಕ್ಸ್ಟ್ರಾ ಫೋರ್
ಸಿದ್ದಾರ್ಥ್ ಕೌಲ್ ಟು ಸಂಜು ಸ್ಯಾಮ್ಸನ್…. ಎಕ್ಸ್ಟ್ರಾ ಕವರ್ನತ್ತ ಬೌಂಡರಿ
-
ಫೈನ್ಲೆಗ್ ಫೋರ್
ಭುವನೇಶ್ವರ್ ಕುಮಾರ್ ಎಸೆತವನ್ನು ಶಾರ್ಟ್ ಫೈನ್ಲೆಗ್ನತ್ತ ಬಾರಿಸಿದ ಯಶಸ್ವಿ ಜೈಸ್ವಾಲ್- ಫೋರ್
RR 33/1 (4)
-
ವಾಟ್ ಎ ಶಾಟ್
ಭುವಿ ಸ್ವಿಂಗ್ಗೆ ಸಂಜು ಸ್ಯಾಮ್ಸನ್ ಭರ್ಜರಿ ಉತ್ತರ…ಪಾಯಿಂಟ್ ಮೂಲಕ ಸೂಪರ್ ಫೋರ್ ಬಾರಿಸಿದ ಸಂಜು ಸ್ಯಾಮ್ಸನ್
-
ಯಶಸ್ವಿ ಶಾಟ್
ಸಂದೀಪ್ ಶರ್ಮಾ ಎಸೆತದಲ್ಲಿ ಮತ್ತೊಂದು ಬೌಂಡರಿ…ಆನ್ಸೈಡ್ನತ್ತ ಭರ್ಜರಿಯಾಗಿ ಹೊಡೆತ ಯಶಸ್ವಿ ಜೈಸ್ವಾಲ್…ಫೋರ್
RR 22/1 (3)
-
ಸ್ಕ್ವೇರ್ ಕಟ್….ಬೌಂಡರಿ
ಸಂದೀಪ್ ಶರ್ಮಾ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಬ್ಯಾಟ್ನಿಂದ ಸೂಪರ್ ಸ್ಕ್ವೇರ್ ಕಟ್…ಫೋರ್
-
ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್-ಯಶಸ್ವಿ ಜೈಸ್ವಾಲ್
RR 12/1 (2.1)
-
ರಾಜಸ್ಥಾನ್ ರಾಯಲ್ಸ್ ಮೊದಲ ವಿಕೆಟ್ ಪತನ
ರಾಜಸ್ಥಾನ್ ರಾಯಲ್ಸ್ ಮೊದಲ ವಿಕೆಟ್ ಪತನ
ಭುವನೇಶ್ವರ್ ಕುಮಾರ್ ಎಸೆತದಲ್ಲಿ ಸಮದ್ಗೆ ಕ್ಯಾಚ್ ನೀಡಿ ಹೊರ ನಡೆದ ಎವಿನ್ ಲೂಯಿಸ್ (6)
-
ಮೊದಲ ಓವರ್ನಲ್ಲೇ ಬೌಂಡರಿ ಖಾತೆ ತೆರೆದ ಎವಿನ್
ಮೊದಲ ಓವರ್ನಲ್ಲೇ ಬೌಂಡರಿ ಖಾತೆ ತೆರೆದ ಎವಿನ್ ಲೂಯಿಸ್
ಸಂದೀಪ್ ಶರ್ಮಾ ಮೊದಲ ಓವರ್ನಲ್ಲಿ ಎರಡು ಬೌಂಡರಿ
ಮೊದಲ ಓವರ್ನಲ್ಲಿ 11 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್
-
ಟಾಸ್ ವಿಡಿಯೋ
.@rajasthanroyals have won the toss and they will bat first against #SRH.
Live – https://t.co/hhKTGSojjm #SRHvRR #VIVOIPL pic.twitter.com/P9INTsd6RB
— IndianPremierLeague (@IPL) September 27, 2021
-
ಕಣಕ್ಕಿಳಿಯುವ ಕಲಿಗಳು
A look at the Playing XI for #SRHvRR
Live – https://t.co/ok6FRQ5VHf #SRHvRR #VIVOIPL pic.twitter.com/yt3Ra4KbKs
— IndianPremierLeague (@IPL) September 27, 2021
-
ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್
ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಾಹ, ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ
-
ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್
ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಚೇತನ್ ಸಕಾರಿಯಾ, ಜಯದೇವ್ ಉನದ್ಕಟ್, ಮುಸ್ತಫಿಜುರ್ ರಹಮಾನ್
-
ತಂಡದಿಂದ ಹೊರಬಿದ್ದ ಮನೀಷ್ ಪಾಂಡೆ
ಸನ್ರೈಸರ್ಸ್ ಆಡುವ ಬಳಗದಿಂದ ಮನೀಷ್ ಪಾಂಡೆ ಹಾಗೂ ಕೇದರ್ ಜಾಧವ್ ಔಟ್. ಬದಲಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅಭಿಷೇಕ್ ಶರ್ಮಾ ಹಾಗೂ ಪ್ರಿಯಂ ಗರ್ಗ್ಗೆ ಸ್ಥಾನ.
-
ಡೇವಿಡ್ ವಾರ್ನರ್ ಔಟ್
ಸನ್ರೈಸರ್ಸ್ ಹೈದರಾಬಾದ್ ತಂಡದಿಂದ ಡೇವಿಡ್ ವಾರ್ನರ್ ಔಟ್…ಆರಂಭಿಕನಾಗಿ ಕಣಕ್ಕಿಳಿಯಲಿರುವ ಜೇಸನ್ ರಾಯ್ (ಇಂಗ್ಲೆಂಡ್)
-
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್: ಬ್ಯಾಟಿಂಗ್ ಆಯ್ಕೆ
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್, ಬ್ಯಾಟಿಂಗ್ ಆಯ್ಕೆ
-
ಲಂಕಾ ಲೆಜೆಂಡ್ಸ್ ಮೀಟ್: ಕುಮಾರ್ ಸಂಗಾಕ್ಕರ-ಮುತ್ತಯ್ಯ ಮುರಳೀಧರನ್
Pre-match chat between the legends ? ?#VIVOIPL #SRHvRR pic.twitter.com/pjOvVKrpEh
— IndianPremierLeague (@IPL) September 27, 2021
-
ರಾಜಸ್ಥಾನ್ ರಾಯಲ್ಸ್ ಆಗಮನ
? Matchday mood. ? ➡️ ?#PadengeBhaari | #HallaBol | #SRHvRR | @goelpipes pic.twitter.com/tcsau1rKky
— Rajasthan Royals (@rajasthanroyals) September 27, 2021
-
ಆರೆಂಜ್ ಆರ್ಮಿ
We head back to the Dubai International Stadium for tonight’s match against the Royals.#SRHvRR #OrangeArmy #OrangeOrNothing #IPL2021 pic.twitter.com/NxhhyHVKcQ
— SunRisers Hyderabad (@SunRisers) September 27, 2021
-
ಉಭಯ ತಂಡಗಳ ಮುಖಾಮುಖಿ ಅಂಕಿ ಅಂಶಗಳು
Hello & welcome from Dubai for Match 40 of the #VIVOIPL ?
The Kane Williamson-led @SunRisers square off against @IamSanjuSamson's @rajasthanroyals. ? ? #SRHvRR
Which team will come out on top tonight? ? ? pic.twitter.com/WDaGiDKEWY
— IndianPremierLeague (@IPL) September 27, 2021
-
SRH vs RR ಕದನಕ್ಕೆ ದುಬೈ ಕ್ರಿಕೆಟ್ ಸ್ಟೇಡಿಯಂ ಸಜ್ಜು
The stage is set ?️#VIVOIPL #SRHvRR pic.twitter.com/IwMzcEmBQD
— IndianPremierLeague (@IPL) September 27, 2021
Published On - Sep 27,2021 6:19 PM