Usman Khawaja: ಶತಕ ಸಿಡಿಸಿದಾಗ ಬ್ಯಾಟ್ ಅನ್ನು ಬಿಸಾಡಿದ ಉಸ್ಮಾನ್ ಖ್ವಾಜಾ: ವೈರಲ್ ಆಗುತ್ತಿದೆ ವಿಡಿಯೋ
Ashes, ENG vs AUS: ಉಸ್ಮಾನ್ ಖ್ವಾಜಾ ಶತಕ ಸಿಡಿಸುತ್ತಿದ್ದಂತೆ ಅವರ ಸಂಭ್ರಮ ವಿಶೇಷವಾಗಿತ್ತು. ಬ್ಯಾಟ್ ಅನ್ನು ಮೇಲಕ್ಕೆ ಎಸೆದು ಆಕ್ರೋಶದಿಂದ ಸಂಭ್ರಮಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ (England vs Australia) ನಡುವಣ ಪ್ರತಿಷ್ಠಿತ ಆ್ಯಶಸ್ (Ashes) ಟೆಸ್ಟ್ ಸರಣಿ ಕುತೂಹಲ ಮೂಡಿಸಿದೆ. ಬರ್ಮಿಂಗ್ಹ್ಯಾಮ್ನ ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಉಸ್ಮಾನ್ ಖ್ವಾಜಾ (Usman Khawaja) ಅವರ ಅಜೇಯ ಶತಕದ ನೆರವಿನಿಂದ ಆಂಗ್ಲರಿಗೆ ಕಠಿಣ ಪೈಪೋಟಿ ನೀಡಿದೆ. ಇಂಗ್ಲೆಂಡ್ ಅಚ್ಚರಿ ಎಂಬಂತೆ ಪ್ರಥಮ ದಿನವೇ 393 ರನ್ ಗಳಿಸಿ ಡಿಕ್ಲೇರ್ ಘೋಷಿಸಿ ಕಾಂಗರೂ ಪಡೆಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿತ್ತು. ಆದರೆ, ಆಸೀಸ್ ಪ್ರಮುಖ ಬ್ಯಾಟರ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೆ ಬೇಗನೆ ಔಟಾದರೆ ಇತ್ತ ಆರಂಭದಿಂದಲೂ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಖ್ವಾಜಾ 199 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ತಂಡದ ಮೊತ್ತವನ್ನು 250 ಗಡಿ ದಾಟಿಸಿದರು.
ಖ್ವಾಜಾ ಶತಕ ಸಿಡಿಸುತ್ತಿದ್ದಂತೆ ಅವರ ಸಂಭ್ರಮ ವಿಶೇಷವಾಗಿತ್ತು. ಬ್ಯಾಟ್ ಅನ್ನು ಮೇಲಕ್ಕೆ ಎಸೆದು ಆಕ್ರೋಶದಿಂದ ಸಂಭ್ರಮಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಶೇಷ ಎಂದರೆ ಇದು ಇಂಗ್ಲೆಂಡ್ ನೆಲದಲ್ಲಿ ಉಸ್ಮಾನ್ ಖ್ವಾಜಾ ಬಾರಿಸಿದ ಮೊದಲ ಶತಕವಾಗಿದೆ. ಹಾಗೆಯೇ 8 ವರ್ಷಗಳ ಬಳಿಕ ಆಸ್ಟ್ರೇಲಿಯಾ ಆರಂಭಿಕನಿಂದ ಮೂಡಿಬಂದ ಮೊದಲ ಸೆಂಚುರಿ ಇದಾಗಿದೆ. 2015 ರಲ್ಲಿ ಲಾರ್ಡ್ಸ್‌ನಲ್ಲಿ ಕ್ರಿಸ್ ರೋಜರ್ಸ್ 173 ರನ್ ಗಳಿಸಿದ್ದರು.
MPL: 11 ಬೌಂಡರಿ, 4 ಸಿಕ್ಸರ್; ಟಿ20ಯಲ್ಲಿ ಚೊಚ್ಚಲ ಶತಕ ಸಿಡಿಸಿ 2 ದಾಖಲೆ ಬರೆದ ಅಂಕಿತ್..!
A magnificent ? from Usman Khawaja ?
The south-paw fights against all odds to get Australia back in the game ?#SonySportsNetwork #RivalsForever #ENGvAUS #Ashes2023 pic.twitter.com/yaz1Y7gIt1
— Sony Sports Network (@SonySportsNetwk) June 17, 2023
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಂಗ್ಲರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇಂಗ್ಲೆಂಡ್ ಪರ ಜಾಕ್ ಕ್ರಾವ್ಲಿ (61) ಹಾಗೂ ಒಲಿ ಪೋಪ್ (31) 70 ರನ್ಗಳ ಜೊತೆಯಾಟ ಆಡಿದರು. ನಂತರ ಜೋ ರೂಟ್ ಜೊತೆಗೂಡಿ ಹ್ಯಾರಿ ಬ್ರೂಕ್ (37 ಎಸೆತಗಳಲ್ಲಿ 32 ರನ್) ಭರ್ಜರಿ ಬ್ಯಾಟ್ ಬೀಸಿದರು. ಬ್ರೂಕ್ 32 ರನ್ಗೆ ಔಟಾದರೆ, ನಾಯಕ ಬೆನ್ ಸ್ಟೋಕ್ಸ್ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿದರು. ಜಾನಿ ಬೇರ್ಸ್ಟೋವ್ (78 ಎಸೆತಗಳಲ್ಲಿ 78 ರನ್) ಮತ್ತು ಜೋ ರೂಟ್ 121 ರನ್ಗಳ ಜತೆಯಾಟ ನೀಡಿದರು. ರೂಟ್ 152 ಎಸೆತಗಳಲ್ಲಿ 7 ಫೋರ್, 4 ಸಿಕ್ಸರ್ನೊಂದಿಗೆ ಅಜೇಯ 118 ರನ್ ಚಚ್ಚಿದರು. ಇಂಗ್ಲೆಂಡ್ 78 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 393 ರನ್ ಗಳಿಸಿದಾಗ ಡಿಕ್ಲೇರ್ ಘೋಷಿಸಿತು.
ಇತ್ತ ತನ್ನ ಪ್ರಥಮ ಇನಿಂಗ್ಸ್ ಆರಂಭದಲ್ಲಿ ಆಸೀಸ್ ಡೇವಿಡ್ ವಾರ್ನರ್ (9) ವಿಕೆಟ್ ಕಳೆದುಕೊಂಡಿತಯ. ಮಧ್ಯಮ ಕ್ರಮಾಂಕದಲ್ಲಿ ಕೂಡ ಅನುಭವಿ ಆಟಗಾರರಿಂದ ನಿರೀಕ್ಷೆಗೆ ತಕ್ಕ ಆಟ ಬರಲಿಲ್ಲ. 67 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಟ್ರೇವಿಸ್ ಹೆಡ್ (50) ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಆಧರಿಸಿ ಔಟಾದರು. ಕ್ಯಾಮರೂನ್ ಗ್ರೀನ್ 38 ರನ್ ಮಾಡಿದರೆ ಉಸ್ಮಾನ್ ಖ್ವಾಜಾ ಇಂಗ್ಲಿಷರ ನಾಡಲ್ಲಿ ಚೊಚ್ಚಲ ಅಜೇಯ ಶತಕ (126) ಸಾಧನೆ ಮಾಡಿದರು. ಅಲೆಕ್ಸ್ ಕ್ಯಾರಿ 52 ರನ್ ಮಾಡಿ ಹಾಗೂ ಖ್ವಾಜಾ 126 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸೀಸ್ 5 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದೆ. 82 ರನ್ಗಳ ಹಿನ್ನಡೆಯಲ್ಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ