‘ನನಗಿಂತ ಉತ್ತಮವಾಗಿದೆ’; ವೈಭವ್ ಬೌಲಿಂಗ್ ಹೊಗಳಿದ ಯುವರಾಜ್

Yuvraj Singh praise Vaibhav Sooryavanshi: ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ 92 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ಮಿಂಚಿದ್ದಾರೆ. ಇದಕ್ಕೂ ಮೊದಲು ಕ್ವಾರ್ಟರ್ ಫೈನಲ್‌ನಲ್ಲಿ 2 ವಿಕೆಟ್ ಕಬಳಿಸಿ ಆಲ್‌ರೌಂಡರ್ ಸಾಮರ್ಥ್ಯ ತೋರಿದ್ದರು. ಅವರ ಈ ಅದ್ಭುತ ಪ್ರದರ್ಶನಕ್ಕೆ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ವೈಭವ್ ಬೌಲಿಂಗ್ ಶೈಲಿ ನನ್ನದಕ್ಕಿಂತ ಉತ್ತಮ ಎಂದಿದ್ದಾರೆ. ಯುವ ಆಟಗಾರನ ಆಲ್‌ರೌಂಡ್ ಆಟ ಎಲ್ಲರ ಗಮನ ಸೆಳೆದಿದೆ.

‘ನನಗಿಂತ ಉತ್ತಮವಾಗಿದೆ’; ವೈಭವ್ ಬೌಲಿಂಗ್ ಹೊಗಳಿದ ಯುವರಾಜ್
Yuvraj, Vaibhav

Updated on: Aug 31, 2026 | 10:48 PM

ದುಲೀಪ್ ಟ್ರೋಫಿ ಸೆಮಿಫೈನಲ್​ನಲ್ಲಿ ( Duleep Trophy semifinal) ಪೂರ್ವ ವಲಯ ತಂಡದ ನಾಯಕನಾಗಿರುವ 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಮೊದಲ ಇನ್ನಿಂಗ್ಸ್​ನಲ್ಲಿ 92 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಇದಕ್ಕೂ ಮೊದಲು ಅಂದರೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವೈಭವ್ ಬ್ಯಾಟಿಂಗ್‌ ಬದಲಿ ಬೌಲಿಂಗ್‌ನಲ್ಲಿ ಮಿಂಚಿದ್ದರು. ಆ ಪಂದ್ಯದಲ್ಲಿ ವೈಭವ್ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು. ವೈಭವ್ ಅವರ ಈ ಆಲ್‌ರೌಂಡರ್ ಆಟ ಎಲ್ಲರನ್ನು ಅಚ್ಚರಿಗೊಳಿಸಿತ್ತು. ಇದೀಗ ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್, ವೈಭವ್ ಅವರ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ವೈಭವ್ ಅವರ ಬೌಲಿಂಗ್ ಶೈಲಿ ನನ್ನ ಬೌಲಿಂಗ್ ಶೈಲಿಗಿಂತ ಉತ್ತಮವಾಗಿದೆ’ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

3 ಓವರ್‌ಗಳಲ್ಲಿ 2 ವಿಕೆಟ್ ಪಡೆದಿದ್ದ ವೈಭವ್

ಮೇಲೆ ಹೇಳಿದಂತೆ ಈಶಾನ್ಯ ವಲಯ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವೈಭವ್ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ, ಆದರೆ ತಮ್ಮ ಬೌಲಿಂಗ್ ಮ್ಯಾಜಿಕ್‌ನಿಂದ ಮಿಂಚಿದರು. ಕೇವಲ 3 ಓವರ್‌ಗಳನ್ನು ಬೌಲಿಂಗ್ ಮಾಡಿದ ವೈಭವ್ 11 ರನ್‌ಗಳನ್ನು ನೀಡಿ 2 ವಿಕೆಟ್‌ಗಳನ್ನು ಪಡೆದರು. ಪಂದ್ಯದ ನಂತರ ಮಾತನಾಡಿದ್ದ ವೈಭವ್ ವಿಕೆಟ್ ಪಡೆದ ರೀತಿಗೆ ಸಂತೋಷ ವ್ಯಕ್ತಪಡಿಸಿದ್ದಲ್ಲದೆ ನಾನು ವಿಕೆಟ್ ತೆಗೆದುಕೊಳ್ಳುವ ಬೌಲರ್ ಕೂಡ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದರು. ಆರಂಭದಲ್ಲಿ ನಾಯಕ ಇಶಾನ್ ಕಿಶನ್ ನನಗೆ ಬೌಲಿಂಗ್ ಅವಕಾಶ ನೀಡಲು ಸ್ವಲ್ಪ ಹಿಂಜರಿದಿದ್ದರು. ಆದರೆ ಬೌಲಿಂಗ್ ಮಾಡಲು ಅವಕಾಶ ಸಿಕ್ಕ ತಕ್ಷಣ ವೈಭವ್ ಎರಡು ನಿರ್ಣಾಯಕ ವಿಕೆಟ್‌ ಪಡೆಯುವ ಮೂಲಕ ಕಿಶನ್​ಗೆ ತಿರುಗೇಟು ನೀಡಿದ್ದರು.

ಸೆಮಿಫೈನಲ್‌ನಲ್ಲಿ ವೈಭವ್ ಅಬ್ಬರದ ಬ್ಯಾಟಿಂಗ್

ಸೆಂಟ್ರಲ್ ಜೋನ್ ವಿರುದ್ಧದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 81 ಎಸೆತಗಳಲ್ಲಿ 7 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ 92 ರನ್ ಕಲೆಹಾಕಿದರು. ಆದರೆ ವೈಭವ್ ಶತಕಕ್ಕೆ 8 ರನ್ ದೂರದಲ್ಲಿರುವಾಗ ಹರ್ಷ್ ದುಬೆ ಬೌಲಿಂಗ್‌ನಲ್ಲಿ ಔಟಾದರು. ವೈಭವ್ ಸೂರ್ಯವಂಶಿ ಇದುವರೆಗೆ 9 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್ ಅವರ ವೃತ್ತಿಜೀವನದ 10 ನೇ ಪಂದ್ಯವಾಗಿದೆ. ಅವರು ಇಲ್ಲಿಯವರೆಗೆ ಆಡಿದ 13 ಇನ್ನಿಂಗ್ಸ್‌ಗಳಲ್ಲಿ 215 ರನ್ ಗಳಿಸಿದ್ದಾರೆ, ಅವರ ಅತ್ಯಧಿಕ ಸ್ಕೋರ್ 93 ರನ್‌ಗಳಾಗಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us