AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni Bike Collection: ಭಾರತದ ಯಾವುದೇ ಶೋರೂಮ್​ನಲ್ಲಿ ಇಷ್ಟು ಬೈಕ್ ಇರಲ್ಲ: ಧೋನಿಯ ಬೈಕ್ ಕಲೆಕ್ಷನ್ ಕಂಡು ವೆಂಕಿ ಶಾಕ್

ಧೋನಿಯ ಬೈಕ್ ಪ್ರೀತಿ ನಮಗೆಲ್ಲ ಗೊತ್ತೇ ಇದೆ, ಆದರೆ ಮೊದಲ ಬಾರಿಗೆ ಅವರ ಬಳಿ ಇರುವ ಬೈಕ್, ಕಾರುಗಳ ವಿಡಿಯೋ ಜಗತ್ತಿನ ಮುಂದೆ ಬಂದಿದೆ. ಭಾರತದ ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಧೋನಿ ಶೋರೂಮ್​ನ ವಿಡಿಯೋವನ್ನು ತೆರೆದಿಟ್ಟಿದ್ದಾರೆ.

MS Dhoni Bike Collection: ಭಾರತದ ಯಾವುದೇ ಶೋರೂಮ್​ನಲ್ಲಿ ಇಷ್ಟು ಬೈಕ್ ಇರಲ್ಲ: ಧೋನಿಯ ಬೈಕ್ ಕಲೆಕ್ಷನ್ ಕಂಡು ವೆಂಕಿ ಶಾಕ್
MS Dhoni Car, Bike collection
Vinay Bhat
|

Updated on: Jul 18, 2023 | 1:17 PM

Share

ಮಹೇಂದ್ರ ಸಿಂಗ್ ಧೋನಿ (MS Dhono) ಬಳಿ ಎಷ್ಟು ಬೈಕ್‌ಗಳಿವೆ?, ಧೋನಿ ಬಳಿ ಎಷ್ಟು ಕಾರುಗಳಿವೆ?, ಯಾವ್ಯಾವ ಬೈಕ್‌ಗಳಿವೆ?, ಯಾವ ವಾಹನಗಳಿವೆ? ಎಂಬ ಕುತೂಹಲ ಪ್ರತಿಯಬ್ಬ ಅಭಿಮಾನಿಗಳಿಗಿತ್ತು. ಇದೀಗ ಮೊಟ್ಟಮೊದಲ ಬಾರಿಗೆ ಎಂಎಸ್ ಧೋನಿಯ ಗ್ಯಾರೇಜ್ ಜಗತ್ತಿನ ಮುಂದೆ ಬಂದಿದೆ. ಧೋನಿ ಅವರ ಗ್ಯಾರೇಜ್‌ನಲ್ಲಿ ಇರುವಷ್ಟು ಬೈಕ್‌ಗಳು (Bikes) ಭಾರತದ ಯಾವುದೇ ಶೋರೂಂನಲ್ಲಿಲ್ಲ. ಇತ್ತೀಚಿನ ದಿನಗಳಲ್ಲಿ ರಸ್ತೆಯಲ್ಲಿ ಕಾಣದ ಕೆಲ ಕಾರುಗಳ ಸಂಗ್ರಹ ಧೋನಿ ಬಳಿಯಿದೆ. ಇದನ್ನು ಕಂಡು ಧೋನಿಯ ಅಭಿಮಾನಿಗಳು (Dhoni Fans) ಮಾತ್ರವಲ್ಲದೆ ಅನೇಕರು ಶಾಕ್ ಆಗಿದ್ದಾರೆ.

ಧೋನಿಯ ಬೈಕ್ ಪ್ರೀತಿ ನಮಗೆಲ್ಲ ಗೊತ್ತೇ ಇದೆ, ಆದರೆ ಮೊದಲ ಬಾರಿಗೆ ಅವರ ಬಳಿ ಇರುವ ಬೈಕ್, ಕಾರುಗಳ ವಿಡಿಯೋ ಜಗತ್ತಿನ ಮುಂದೆ ಬಂದಿದೆ. ಭಾರತದ ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಧೋನಿ ಶೋರೂಮ್​ನ ವಿಡಿಯೋವನ್ನು ತೆರೆದಿಟ್ಟಿದ್ದಾರೆ. 90 ರ ದಶಕದಲ್ಲಿ ಭಾರತ ಪರ ಆಡಿದ ಆಟಗಾರರು ರಾಂಚಿಗೆ ತೆರಳಿದ್ದ ಸಂದರ್ಭ ಧೋನಿಯ ಫಾರ್ಮ್ ಹೌಸ್​ಗೂ ಭೇಟಿ ನೀಡಿದ್ದಾರೆ. ಅಲ್ಲಿ ಧೋನಿ ಗ್ಯಾರೇಜ್ ನೋಡಿದ ವೆಂಕಿ ಹಾಗೂ ಜೋಶಿಗೆ ಶಾಕ್ ಆಗಿದೆ.

ಇದನ್ನೂ ಓದಿ
Image
Virat Kohli: ರೋಹಿತ್, ಕೊಹ್ಲಿ ಫ್ಯಾನ್ಸ್​ಗೆ ಶಾಕಿಂಗ್ ನ್ಯೂಸ್: ಇನ್ನುಂದೆ ಟಿ20 ಯಲ್ಲಿ ಆಡಲ್ಲ ಇವರಿಬ್ಬರು?
Image
Yashasvi Jaiswal: ಯಶಸ್ವಿ ಜೈಸ್ವಾಲ್ ಪಾನಿಪುರಿ ಮಾರುತ್ತಿದ್ದರು ಎಂಬುದು ಶುದ್ಧ ಸುಳ್ಳು: ಶಾಕಿಂಗ್ ವಿಚಾರ ಬಹಿರಂಗ
Image
IND vs WI 2nd Test: ಟ್ರಿನಿಡಾಡ್​ಗೆ ತಲುಪಿದ ಟೀಮ್ ಇಂಡಿಯಾ: ದ್ವಿತೀಯ ಟೆಸ್ಟ್​ಗೆ ಇಂದಿನಿಂದ ಅಭ್ಯಾಸ
Image
KL Rahul: ಟೀಮ್ ಇಂಡಿಯಾಗೆ ಶುಭ ಸುದ್ದಿ: ಅಭ್ಯಾಸ ಆರಂಭಿಸಿದ ಕೆಎಲ್ ರಾಹುಲ್

RCB ಯಾಕೆ ಕಪ್ ಗೆಲ್ಲುತ್ತಿಲ್ಲ? ಯುಜ್ವೇಂದ್ರ ಚಹಲ್ ಉತ್ತರ ಹೀಗಿದೆ

ವೆಂಕಟೇಶ್ ಪ್ರಸಾದ್ ಅವರು ಒಂದು ನಿಮಿಷ 49 ಸೆಕಂಡ್​ಗಳ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಧೋನಿ ಅವರ ಪತ್ನಿ ಸಾಕ್ಷಿ, ಧೋನಿಯ ಫಾರ್ಮ್‌ಹೌಸ್‌ ತೋರಿಸುತ್ತಿರುವುದು ಸೆರೆ ಆಗಿದೆ. ಧೋನಿ ಬೈಕ್, ಕಾರುಗಳ ಕಲೆಕ್ಷರ್ ಇದರಲ್ಲಿದೆ. ಈ ಬಗ್ಗೆ ಬರೆದುಕೊಂಡಿರುವ ವೆಂಕಿ, “ಧೋನಿಯವರಲ್ಲಿ ನಾನು ನೋಡಿದ ಅದಮ್ಯ ಉತ್ಸಾಹ ಇದು. ಅಬ್ಬಾ ಏನು ಈ ಕಲೆಕ್ಷನ್. ಧೋನಿ ಒಬ್ಬ ದೊಡ್ಡ ಸಾಧಕ ಮತ್ತು ವಿಶೇಷವಾದ ವ್ಯಕ್ತಿ. ಇದು ಧೋನಿಯ ರಾಂಚಿ ಮನೆಯಲ್ಲಿ ಇರುವ ಬೈಕ್ ಮತ್ತು ಕಾರುಗಳ ಸಂಗ್ರಹದ ವಿಡಿಯೋದೆ,” ಎಂದು ಪ್ರಸಾದ್ ಟ್ವೀಟ್ ಮಾಡಿದ್ದಾರೆ.

ಧೋನಿ ಗ್ಯಾರೇಜ್‌ನಲ್ಲಿ ಹೊಸ ಮತ್ತು ಹಳೆಯ ಬೈಕ್‌ಗಳ ಸಂಗ್ರಹ ಕಂಡುಬಂದಿದೆ. ಪ್ರತಿಯೊಂದು ಬ್ರಾಂಡ್‌ನ ಬೈಕ್‌ಗಳು ಒಂದೊಂದು ವಿಶೇಷತೆ ಹೊಂದಿದೆಯಂತೆ. ಬೈಕ್‌ಗಳ ವ್ಯಾಪಕ ಸಂಗ್ರಹದ ಹೊರತಾಗಿ, ಧೋನಿ ವಿಂಟೇಜ್ ಕಾರುಗಳನ್ನು ಸಹ ಹೊಂದಿದ್ದಾರೆ. ಇವುಗಳಲ್ಲಿ ಕೆಲವು ಧೋನಿ ಆಮದು ಮಾಡಿಕೊಂಡ ಕಾರುಗಳಾಗಿದ್ದರೆ ಇನ್ನೂ ಕೆಲವು ಅವರು ಭಾರತೀಯ ಸೇನೆಯಿಂದ ಖರೀದಿಸಿದ್ದಾರೆ. ಪ್ರಮುಖ ವಿಚಾರ ಎಂದರೆ ಸ್ವತಃ ಧೋನಿ ಅವರೇ ಈ ಗ್ಯಾರೇಜ್‌ನಲ್ಲಿರುವ ಎಲ್ಲಾ ಬೈಕ್‌ಗಳನ್ನು ನೋಡಿಕೊಳ್ಳುತ್ತಾರೆ, ಅವುಗಳನ್ನು ಸರ್ವಿಸ್ ಮಾಡುತ್ತಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ