KL Rahul: ಟೀಮ್ ಇಂಡಿಯಾಗೆ ಶುಭ ಸುದ್ದಿ: ಅಭ್ಯಾಸ ಆರಂಭಿಸಿದ ಕೆಎಲ್ ರಾಹುಲ್
Asia Cup 2023: ಆಗಸ್ಟ್ 31 ರಿಂದ ಏಷ್ಯಾಕಪ್ ಶುರುವಾಗಲಿದ್ದು, ಅದಕ್ಕೂ ಮುನ್ನ ಸಂಪೂರ್ಣ ಫಿಟ್ನೆಸ್ ಸಾಧಿಸಲು ರಾಹುಲ್ ಮುಂದಾಗಿದ್ದಾರೆ.
ಐಪಿಎಲ್ ವೇಳೆ ಗಾಯಗೊಂಡಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ (KL Rahul) 3 ತಿಂಗಳುಗಳ ಬಳಿಕ ಮತ್ತೆ ನೆಟ್ಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ಸಿಬಿ ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಮಂಡಿರಜ್ಜುಗೆ ಗಾಯವಾಗಿತ್ತು. ಹೀಗಾಗಿ ಅವರು ಲಂಡನ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಕೆಎಲ್ ರಾಹುಲ್ ಮತ್ತೆ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರೊಂದಿಗೆ ಕನ್ನಡಿಗ ಶೀಘ್ರದಲ್ಲೇ ಟೀಮ್ ಇಂಡಿಯಾಗೆ ಮರಳುವುದು ಕೂಡ ಖಚಿತವಾಗಿದೆ.
? Loading ⏳⌛#WeAreSuperGiants | #KLRahul pic.twitter.com/OUinRsVrlg
— SuperGiantsArmy™ — LSG FC (@LucknowIPLCover) July 17, 2023
ಸದ್ಯ ನೆಟ್ಸ್ನಲ್ಲಿ ಬೆವರಿಳಿಸಲಾರಂಭಿಸಿರುವ ಕೆಎಲ್ ರಾಹುಲ್ ಏಷ್ಯಾಕಪ್ ವೇಳೆ ಟೀಮ್ ಇಂಡಿಯಾಗೆ ಮರಳುವ ನಿರೀಕ್ಷೆಯಿದೆ. ಆಗಸ್ಟ್ 31 ರಿಂದ ಏಷ್ಯಾಕಪ್ ಶುರುವಾಗಲಿದ್ದು, ಅದಕ್ಕೂ ಮುನ್ನ ಸಂಪೂರ್ಣ ಫಿಟ್ನೆಸ್ ಸಾಧಿಸಲು ರಾಹುಲ್ ಮುಂದಾಗಿದ್ದಾರೆ.
ಅತ್ತ ಈ ಬಾರಿಯ ಏಷ್ಯಾಕಪ್ ಏಕದಿನ ಸ್ವರೂಪದಲ್ಲಿ ನಡೆಯಲಿದೆ. ಹೀಗಾಗಿ ಕೆಎಲ್ ರಾಹುಲ್ ಅವರ ಆಗಮನವು ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ.
ಇದನ್ನೂ ಓದಿ: Yuvraj Singh: ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲೋದು ಡೌಟ್: ಯುವರಾಜ್ ಸಿಂಗ್
ಏಕೆಂದರೆ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನ ಖಾಲಿಯಿದ್ದು, ರಾಹುಲ್ ಆಗಮನದೊಂದಿಗೆ ಮಧ್ಯಮ ಕ್ರಮಾಂಕ ಹಾಗೂ ವಿಕೆಟ್ ಕೀಪರ್ ಎರಡೂ ಸ್ಥಾನಗಳನ್ನು ಸರಿದೂಗಿಸಬಹುದು. ಹೀಗಾಗಿಯೇ ಕೆಎಲ್ ರಾಹುಲ್ ಕಂಬ್ಯಾಕ್ ಟೀಮ್ ಇಂಡಿಯಾವನ್ನು ಮತ್ತಷ್ಟು ಬಲಿಷ್ಠಗೊಳಿಸುವುದರಲ್ಲಿ ಅನುಮಾನವೇ ಇಲ್ಲ.
ಕೆಎಲ್ ರಾಹುಲ್ ಏಕದಿನ ಅಂಕಿ ಅಂಶಗಳು:
ಟೀಮ್ ಇಂಡಿಯಾ ಪರ ಇದುವರೆಗೆ 54 ಏಕದಿನ ಪಂದ್ಯಗಳನ್ನಾಡಿರುವ ಕೆಎಲ್ ರಾಹುಲ್ 1986 ರನ್ ಕಲೆಹಾಕಿದ್ದಾರೆ. ಈ ವೇಳೆ 5 ಶತಕಗಳನ್ನು ಹಾಗೂ 13 ಅರ್ಧಶತಕಗಳನ್ನು ಕೂಡ ಸಿಡಿಸಿದ್ದಾರೆ. ಅಂದರೆ ಟೀಮ್ ಇಂಡಿಯಾ ಪರ 45.14 ಸರಾಸರಿಯಲ್ಲಿ ರನ್ ಕಲೆಹಾಕಿರುವ ಕೆಎಲ್ ರಾಹುಲ್ ಅವರ ಪುನರಾಗಮನವು ಏಕದಿನ ವಿಶ್ವಕಪ್ಗೂ ಟೀಮ್ ಇಂಡಿಯಾಗೆ ಶುಭ ಸೂಚನೆ ಎನ್ನಬಹುದು.