
ಬೆಂಗಳೂರು (ಜೂ. 06): ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಪ್ರಶಸ್ತಿ ಗೆಲ್ಲುವಲ್ಲಿ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಪ್ರಮುಖ ಪಾತ್ರ ವಹಿಸಿದರು. ಈಗ ಇಂಡಿಯನ್ ಪ್ರೀಮಿಯರ್ ಲೀಗ್ 2025 ಟೂರ್ನಿ ಮುಗಿದ ನಂತರ, ಜಿತೇಶ್ ವಿದರ್ಭ ಪ್ರೊ ಟಿ20 ಲೀಗ್‌ನಲ್ಲಿ ಆಡಲಿದ್ದಾರೆ. ವಿಶೇಷ ಎಂದರೆ ಇಲ್ಲಿ ಇವರು ಎನ್‌ಇಸಿಒ ಮಾಸ್ಟರ್ ಬ್ಲಾಸ್ಟರ್ ತಂಡವನ್ನು ಮುನ್ನಡೆಸಲಿದ್ದಾರೆ, ಅಂದರೆ ಇವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಸಂಜಯ್ ರಾಮಸ್ವಾಮಿ ಈ ತಂಡದ ಉಪನಾಯಕರಾಗಿರುತ್ತಾರೆ. ಜಿತೇಶ್ ಈಗಾಗಲೇ ನಾಯಕತ್ವದ ಅನುಭವ ಹೊಂದಿದ್ದು, ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ತಂಡದ ನಾಯಕತ್ವ ವಹಿಸಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ತಂಡವು ಜೂನ್ 6 ರಂದು ತಮ್ಮ ಮೊದಲ ಪಂದ್ಯವನ್ನು ಆಡಲಿದೆ
ಜಿತೇಶ್ ಶರ್ಮಾ ತಂಡವು ಜೂನ್ 6 ರಂದು ಭಾರತ್ ರೇಂಜರ್ಸ್ ವಿರುದ್ಧ NECO ಮಾಸ್ಟರ್ ಬ್ಲಾಸ್ಟರ್ ಲೀಗ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 2:45 ಕ್ಕೆ ಪ್ರಾರಂಭವಾಗಲಿದೆ. ವಿದರ್ಭ ಪ್ರೊ ಟಿ20 ಲೀಗ್‌ನ ಆರಂಭಿಕ ಪಂದ್ಯದಲ್ಲಿ, ಪಗೇರಿಯಾ ಸ್ಟ್ರೈಕರ್ಸ್ ನಾಗ್ಪುರ ಟೈಟಾನ್ಸ್ ಅನ್ನು ಎದುರಿಸಲಿದೆ.
ಜಿತೇಶ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದಾರೆ
ಜಿತೇಶ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು 2025 ರ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅವರು ಐಪಿಎಲ್‌ನ 15 ಪಂದ್ಯಗಳಲ್ಲಿ 261 ರನ್ ಗಳಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 33 ಎಸೆತಗಳಲ್ಲಿ 85 ರನ್ ಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಇದರಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ಗಳು ಇತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲಲು ಪ್ರಮುಖ ಕಾರಣವಾಗಿದ್ದೇ ಜಿತೇಶ್ ಶರ್ಮಾ. ಇದಲ್ಲದೆ, ಜಿತೇಶ್ ಫೈನಲ್‌ನಲ್ಲಿ 10 ಎಸೆತಗಳಲ್ಲಿ 24 ರನ್ ಗಳಿಸಿದರು. ಅವರು ಆರ್‌ಸಿಬಿ ತಂಡಕ್ಕೆ ಅಗತ್ಯ ಇರುವ ಸಂದರ್ಭ ಉಪಯುಕ್ತ ಇನ್ನಿಂಗ್ಸ್ ಆಡಿದ್ದಾರೆ.
RCB, IPL 2026: ಚಾಂಪಿಯನ್ ಆರ್‌ಸಿಬಿ ತಂಡದಿಂದ ಈ 5 ಆಟಗಾರರು ಹೊರಕ್ಕೆ?
ಲೈವ್ ಸ್ಟ್ರೀಮಿಂಗ್ ಅನ್ನು ಹೀಗೆ ವೀಕ್ಷಿಸಬಹುದು?
ಜಿತೇಶ್ ಶರ್ಮಾ ಅವರಂತಹ ನಾಯಕರು ತಂಡವನ್ನು ಮುನ್ನಡೆಸುತ್ತಿರುವುದು ನಮಗೆ ಹೆಮ್ಮೆ ತಂದಿದೆ ಮತ್ತು ಸ್ಫೂರ್ತಿ. ಹೊಸ ಯುವ ಆಟಗಾರರು ತುಂಬಿರುವ ಋತುವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು NECO ಮಾಸ್ಟರ್ ಬ್ಲಾಸ್ಟರ್ಸ್ ಮಾಲೀಕ ಆನಂದ್ ಜೈಸ್ವಾಲ್ ಹೇಳಿದರು. ವಿದರ್ಭ ಪ್ರೊ ಟಿ20 ಲೀಗ್ ಜಿಯೋ ಸಿನಿಮಾ, ಫ್ಯಾನ್‌ಕೋಡ್ ಮತ್ತು ವೇವ್ಸ್‌ನಲ್ಲಿ ನೇರ ಪ್ರಸಾರ ಕಾಣಲಿದೆ. ಅಭಿಮಾನಿಗಳು ಡಿಡಿ ಸ್ಪೋರ್ಟ್ಸ್‌ನಲ್ಲಿಯೂ ಸಹ ಪಂದ್ಯಗಳನ್ನು ಲೈವ್ ಮೂಲಕ ವೀಕ್ಷಿಸಬಹುದು.
ವಿದರ್ಭ ಪ್ರೊ ಟಿ20 ಲೀಗ್‌ನಲ್ಲಿ NECO ಮಾಸ್ಟರ್ ಬ್ಲಾಸ್ಟರ್ಸ್ ತಂಡ:
ಜಿತೇಶ್ ಶರ್ಮಾ, ಆರ್ ಸಂಜಯ್, ಆರ್ಯನ್ ಮೆಶ್ರಮ್, ಅಡ್ಯಾನ್ ದಗಾ, ಅಡ್ಯಾನ್ ರೌತಮ್, ಆಕಾಶ್ ಕೊಮ್ಡೆ, ವೇದಾಂತ್ ದಿಘಡೆ, ಗೌರವ್ ಧೋಬ್ಲೆ, ಅಂಕುಶ್ ತಮ್ಮಿವಾರ್, ಆದಿತ್ಯ ಖಿಲೋಟೆ, ಆರ್ಯ ದುರುಗ್ಕರ್, ಪ್ರಥಮ್ ಮಹೇಶ್ವರಿ, ಪ್ರಫುಲ್ಲ ಹಿಂಗೆ, ಅನನ್ಮಯ್ ಜೈಸ್ವಾಲ್, ಸಾರ್ಥಕ ದೇಶ್‌ಗಮ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ