AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB, IPL 2026: ಚಾಂಪಿಯನ್ ಆರ್‌ಸಿಬಿ ತಂಡದಿಂದ ಈ 5 ಆಟಗಾರರು ಹೊರಕ್ಕೆ?

Royal Challengers Bengaluru: ಐಪಿಎಲ್ 2025 ರಲ್ಲಿ ಆರ್‌ಸಿಬಿ ಬಲಿಷ್ಠ ತಂಡದೊಂದಿಗೆ ಮೈದಾನಕ್ಕೆ ಪ್ರವೇಶಿಸಿತು, ಆದರೆ ಇದರ ಹೊರತಾಗಿಯೂ, ಮುಂದಿನ ಋತುವಿನಲ್ಲಿ ಆರ್ಸಿಬಿ ಈ ಬಾರಿ ತಂಡದಲ್ಲಿದ್ದ ಕೆಲ ಆಟಗಾರರನ್ನು ಬಿಡುಗಡೆ ಮಾಡುವುದು ಖಚಿತ. ಅಂತಹ ಪ್ಲೇಯರ್ಸ್ ಯಾರು ಎಂಬುದನ್ನು ನೋಡೋಣ.

RCB, IPL 2026: ಚಾಂಪಿಯನ್ ಆರ್‌ಸಿಬಿ ತಂಡದಿಂದ ಈ 5 ಆಟಗಾರರು ಹೊರಕ್ಕೆ?
Rcb (34)
Vinay Bhat
|

Updated on: Jun 06, 2025 | 8:16 AM

Share

ಬೆಂಗಳೂರು (ಜೂ. 06): ಐಪಿಎಲ್ 2025 ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡವು ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದು ಆರ್‌ಸಿಬಿಗೆ ಮೊದಲ ಐಪಿಎಲ್ ಪ್ರಶಸ್ತಿಯಾಗಿತ್ತು. ಸದ್ಯ ಚಾಂಪಿಯನ್ ಆದ ನಂತರ, ಮುಂದಿನ ಋತುವಿನಲ್ಲಿ ಈ ಟ್ರೋಫಿಯನ್ನು ಹೇಗೆ ಉಳಿಸಿಕೊಳ್ಳುವುದು ಎಂಬುದು ಆರ್‌ಸಿಬಿಗೆ ದೊಡ್ಡ ಸವಾಲಾಗಿದೆ. ಐಪಿಎಲ್ 2025 ರಲ್ಲಿ ಆರ್‌ಸಿಬಿ ಬಲಿಷ್ಠ ತಂಡದೊಂದಿಗೆ ಮೈದಾನಕ್ಕೆ ಪ್ರವೇಶಿಸಿತು, ಆದರೆ ಇದರ ಹೊರತಾಗಿಯೂ, ಮುಂದಿನ ಋತುವಿನಲ್ಲಿ ಆರ್​ಸಿಬಿ ಈ ಬಾರಿ ತಂಡದಲ್ಲಿದ್ದ ಕೆಲ ಆಟಗಾರರನ್ನು ಬಿಡುಗಡೆ ಮಾಡುವುದು ಖಚಿತ. ಅಂತಹ ಪ್ಲೇಯರ್ಸ್ ಯಾರು ಎಂಬುದನ್ನು ನೋಡೋಣ.

ಲಿವಿಂಗ್‌ಸ್ಟೋನ್ ಕೈಬಿಡುವ ಸಾಧ್ಯತೆ

ಐಪಿಎಲ್ 2025 ರಲ್ಲಿ ಆರ್‌ಸಿಬಿ ತಂಡ ಮೊದಲು ಬಿಡುಗಡೆ ಮಾಡಲು ಬಯಸುವ ಆಟಗಾರ ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟೋನ್ ಆಗಿರಬಹುದು. ಮೆಗಾ ಹರಾಜಿನಲ್ಲಿ ಲಿವಿಂಗ್‌ಸ್ಟೋನ್ ಅವರನ್ನು ಆರ್‌ಸಿಬಿ ತಮ್ಮ ತಂಡಕ್ಕಾಗಿ 8.75 ಕೋಟಿ ರೂ.ಗಳ ಬೃಹತ್ ಬೆಲೆಗೆ ಖರೀದಿಸಿತು, ಆದರೆ ಅವರು ಪರಿಣಾಮಕಾರಿಯಾಗಿರಲಿಲ್ಲ. ಆರ್‌ಸಿಬಿ ಪರ ಲಿವಿಂಗ್‌ಸ್ಟೋನ್ ಒಟ್ಟು 10 ಪಂದ್ಯಗಳನ್ನು ಆಡಿದರು, ಇದರಲ್ಲಿ ಅವರು 112 ರನ್ ಗಳಿಸಿದರು ಮತ್ತು 2 ವಿಕೆಟ್‌ಗಳನ್ನು ಪಡೆದರು. ಈ ನಿರಾಶಾದಾಯಕ ಪ್ರದರ್ಶನದ ನಂತರ, ಆರ್‌ಸಿಬಿ ತಂಡವು ಐಪಿಎಲ್ 2026 ರಲ್ಲಿ ಲಿವಿಂಗ್‌ಸ್ಟೋನ್ ಜೊತೆ ಕಣಕ್ಕಿಳಿಯಲು ಬಯಸುವುದಿಲ್ಲ.

ಇದನ್ನೂ ಓದಿ
Image
ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಎಚ್ಚರಿಕೆ ನೀಡಿದ ಕೋಚ್
Image
ಇಂಗ್ಲೆಂಡ್ ಪ್ರವಾಸದ ಬಗ್ಗೆ ಗಿಲ್, ಗಂಭೀರ್ ಮಾತು
Image
ಬೆಂಗಳೂರಿನಲ್ಲಿ ನಡೆದದ್ದು ನೋವಿನ ಸಂಗತಿ ಎಂದ ಗಂಭೀರ್
Image
ಮಧ್ಯಪ್ರದೇಶ ಲೀಗ್‌ ಉದ್ಘಾಟಿಸಿದ ಜ್ಯೋತಿರಾದಿತ್ಯ ಸಿಂಧಿಯಾ

ಲುಂಗಿ ಎನ್‌ಗಿಡಿಯನ್ನೂ ಬಿಡುಗಡೆ ಮಾಡಬಹುದು

ಈ ಪಟ್ಟಿಯಲ್ಲಿರುವ ಎರಡನೇ ಹೆಸರು ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್‌ಗಿಡಿ ಆಗಿರಬಹುದು. ಆರ್‌ಸಿಬಿ ಲುಂಗಿ ಎನ್‌ಗಿಡಿ ಅವರನ್ನು ಮೆಗಾ ಹರಾಜಿನಲ್ಲಿ 1 ಕೋಟಿ ರೂ.ಗೆ ಖರೀದಿಸಿತು, ಆದರೆ ಐಪಿಎಲ್ 2025 ರಲ್ಲಿ ಅವರಿಗೆ ಕೇವಲ 2 ಪಂದ್ಯಗಳನ್ನು ಆಡಲು ಅವಕಾಶ ಸಿಕ್ಕಿತು, ಅದರಲ್ಲಿ ಅವರು ಕೇವಲ 2 ವಿಕೆಟ್‌ಗಳನ್ನು ಮಾತ್ರ ಪಡೆದರು. ಅಂತಹ ಪರಿಸ್ಥಿತಿಯಲ್ಲಿ, ಮುಂದಿನ ಋತುವಿನಲ್ಲಿ ಆರ್‌ಸಿಬಿ ಲುಂಗಿ ಎನ್‌ಗಿಡಿಗಿಂತ ಉತ್ತಮ ಆಯ್ಕೆಯನ್ನು ಕಂಡುಕೊಳ್ಳಲು ಬಯಸಬಹುದು.

IND vs ENG: ಗೆಲುವು ಖಚಿತವಿಲ್ಲ..! ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ಗೌತಮ್ ‘ಗಂಭೀರ’ ಮಾತು

ಟಿಮ್ ಡೇವಿಡ್ ಕೂಡ ಆರ್‌ಸಿಬಿಗೆ ನಿರಾಸೆ ಮೂಡಿಸಿದರು

ಮುಂದಿನ ಋತುವಿನಲ್ಲಿ ಆರ್‌ಸಿಬಿ ತಮ್ಮೊಂದಿಗೆ ಇಟ್ಟುಕೊಳ್ಳಲು ಬಯಸದ ಆಟಗಾರರ ಪಟ್ಟಿಯಲ್ಲಿ ಟಿಮ್ ಡೇವಿಡ್ ಹೆಸರೂ ಇರಬಹುದು. ಐಪಿಎಲ್ 2025 ಗಾಗಿ ಟಿಮ್ ಡೇವಿಡ್ ಅವರನ್ನು ಆರ್‌ಸಿಬಿ 3 ಕೋಟಿಗೆ ಖರೀದಿಸಿತು, ಆದರೆ ಅವರು 12 ಪಂದ್ಯಗಳಲ್ಲಿ ಕೇವಲ 180 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು, ಅದರಲ್ಲಿ ಒಂದು ಅರ್ಧಶತಕ ಇತ್ತಷ್ಟೆ.

ಟಿಮ್ ಸಿರ್ವೆಟ್‌ಗಿಂತ ಉತ್ತಮ ಆಯ್ಕೆಯನ್ನು ಕಂಡುಕೊಳ್ಳಬಹುದು

ಈ ಪಟ್ಟಿಯಲ್ಲಿರುವ ನಾಲ್ಕನೇ ಆಟಗಾರ ಟಿಮ್ ಸೀಫರ್ಟ್ ಆಗಿರಬಹುದು. ಐಪಿಎಲ್ 2025 ಗಾಗಿ ಟಿಮ್ ಸೀಫರ್ಟ್ ಅವರನ್ನು ಆರ್‌ಸಿಬಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ 2 ಕೋಟಿ ರೂ.ಗೆ ಖರೀದಿಸಿತು, ಆದರೆ ಅವರಿಗೆ ಆ ಋತುವಿನಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಏಕೆಂದರೆ ಜಿತೇಶ್ ಶರ್ಮಾ ವಿಕೆಟ್ ಕೀಪರ್ ಪಾತ್ರದಲ್ಲಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಮುಂದಿನ ಋತುವಿನಲ್ಲಿ ಆರ್‌ಸಿಬಿ ಸೀಫರ್ಟ್ ಬದಲಿಗೆ ಬೇರೆ ಆಟಗಾರನ ಮೇಲೆ ಪಣತೊಡಬಹುದು.

ನುವಾನ್ ತುಷಾರಗೆ ಸ್ಥಾನವಿಲ್ಲ

ಐಪಿಎಲ್ 2025 ರಲ್ಲಿ, ನುವಾನ್ ತುಷಾರಗೆ ಋತುವಿನ ದ್ವಿತೀಯಾರ್ಧದಲ್ಲಿ ಆಡಲು ಅವಕಾಶ ಸಿಕ್ಕಿತು. ಆದರೆ ಮುಂದಿನ ಋತುವಿನಲ್ಲಿ ಈ ಶ್ರೀಲಂಕಾದ ವೇಗಿಯನ್ನು ಆರ್‌ಸಿಬಿ ತಮ್ಮೊಂದಿಗೆ ಇಟ್ಟುಕೊಳ್ಳಲು ಬಯಸುವುದಿಲ್ಲ. ಐಪಿಎಲ್ 2025 ರಲ್ಲಿ ತುಷಾರ ಆರ್‌ಸಿಬಿ ಪರ ಕೇವಲ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರಷ್ಟೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು