AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಬಿಗೆ ಶುಭ ಹಾರೈಸಿದ ವಿಜಯ್ ಮಲ್ಯ.. ಸರ್ ಭಾರತಕ್ಕೆ ಬನ್ನಿ ಎಂದ SBI; ವೈರಲ್ ಫೋಟೋ ಅಸಲಿಯತ್ತೇನು?

Vijay Mallya Congratulates RCB IPL Win: ವಿಜಯ್ ಮಲ್ಯ ಅವರ ಈ ಪೋಸ್ಟ್ ಅನ್ನು ಸುಮಾರು 6 ಲಕ್ಷ ಜನರು ವೀಕ್ಷಿಸಿದ್ದು, ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಮೆಂಟ್ ಮಾಡಿದೆ ಎನ್ನಲಾಗಿರುವ ಫೋಟೋವೊಂದು ವೈರಲ್ ಆಗುತ್ತಿದ್ದು,  ಅದರಲ್ಲಿ, ‘ಸರ್, ಭಾರತಕ್ಕೆ ಹಿಂತಿರುಗಿ. ಒಟ್ಟಿಗೆ ಆಚರಿಸೋಣ’ ಎಂದು ಬರೆಯಲಾಗಿದೆ. ಆದರೆ ಈ ವೈರಲ್ ಫೋಟೋದ ಹಿಂದಿರುವ ಸತ್ಯಾಂಶದ ಹಿಂದೆ ಬಿದ್ದಾಗ ತಿಳಿದಿದ್ದು, ಇದು ಕೇವಲ ಎಡಿಟೆಡ್ ಫೋಟೋ ಆಗಿದೆ ಎಂದು ತಿಳಿದುಬಂದಿದೆ.

ಆರ್​ಸಿಬಿಗೆ ಶುಭ ಹಾರೈಸಿದ ವಿಜಯ್ ಮಲ್ಯ.. ಸರ್ ಭಾರತಕ್ಕೆ ಬನ್ನಿ ಎಂದ SBI; ವೈರಲ್ ಫೋಟೋ ಅಸಲಿಯತ್ತೇನು?
Vijay Mallya
ಪೃಥ್ವಿಶಂಕರ
|

Updated on:Jun 05, 2025 | 9:36 PM

Share

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೊನೆಗೂ ಐಪಿಎಲ್ (IPL 2025) ಚಾಂಪಿಯನ್ ಆಗಿದೆ. ಬರೋಬ್ಬರಿ 17 ವರ್ಷಗಳ ಬಳಿಕ ಪ್ರಶಸ್ತಿ ಬರ ನೀಗಿಸಿಕೊಂಡಿರುವ ಆರ್​ಸಿಬಿಗೆ ಇಡೀ ಕ್ರಿಕೆಟ್ ಜಗತ್ತೇ ಶುಭಾಶಯಗಳ ಮಳೆಗರೆಯುತ್ತಿದೆ. ಭಾರತ ಮಾತ್ರವಲ್ಲ, ವಿದೇಶಿ ಕ್ರಿಕೆಟಿಗರು ಕೂಡ ಆರ್​ಸಿಬಿಗೆ ಶುಭ ಹಾರೈಸಿದ್ದಾರೆ. ಹೀಗಿರುವಾಗ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ (Vijay Mallya) ಅವರಿಂದ ಶುಭಾಶಯ ಬರದಿದ್ದರೆ ಹೇಗೆ? ಎಲ್ಲರ ನಿರೀಕ್ಷೆಯಂತೆ ಮದ್ಯದ ದೊರೆ ಖ್ಯಾತಿಯ ವಿಜಯ ಮಲ್ಯ ತನ್ನ ಮಾಜಿ ತಂಡಕ್ಕೆ ತಮ್ಮ ಎಕ್ಸ್​ ಖಾತೆಯಲ್ಲಿ ಶುಭಾಶಯ ಕೋರಿದ್ದಾರೆ. ಇದೀಗ ವಿಜಯ್ ಮಲ್ಯ ಅವರ ಪೋಸ್ಟ್​ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಕಾಮೆಂಟ್ ಮಾಡಿದೆ ಎಂಬ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಒಂದು ಸಮಯದಲ್ಲಿ ಕುಭೇರನಾಗಿ ಮೆರೆಯುತ್ತಿದ್ದ ವಿಜಯ್ ಮಲ್ಯ ವಿಲಾಸಿ ಜೀವನಕ್ಕೆ ಜೋತು ಬಿದ್ದು, ಭಾರತದ ಹಲವಾರು ಬ್ಯಾಂಕುಗಳಿಂದ ಸಾಲ ಪಡೆದು, ಆ ಸಾಲವನ್ನು ಮರು ಪಾವತಿಸದೆ ಎಲ್ಲಾ ಬ್ಯಾಂಕುಗಳಿಗೆ ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಮಲ್ಯ, SBI ಸೇರಿದಂತೆ ಇತರ ಬ್ಯಾಂಕುಗಳಲ್ಲಿ ಸುಮಾರು 9,000 ಕೋಟಿ ರೂ.ಗಳಷ್ಟು ಸಾಲವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಪ್ರಸ್ತುತ ಲಂಡನ್‌ನಲ್ಲಿ ವಾಸಿಸುತ್ತಿರುವ ಮಲ್ಯ, ತಮ್ಮ X ನಲ್ಲಿ ಆರ್​ಸಿಬಿಗೆ ಶುಭಾಶಯ ತಿಳಿಸಿದ್ದಾರೆ.

ಮಲ್ಯ ಟ್ವೀಟ್​ನಲ್ಲಿ ಇದ್ದಿದ್ದೇನು?

‘ಕೊನೆಗೂ, 18 ವರ್ಷಗಳ ನಂತರ ಆರ್‌ಸಿಬಿ ಐಪಿಎಲ್ ಚಾಂಪಿಯನ್ ಆಗಿದೆ. 2025 ರ ಟೂರ್ನಮೆಂಟ್‌ನಲ್ಲಿ ಐಪಿಎಲ್ ತಂಡದ ಪ್ರದರ್ಶನ ಬಲಿಷ್ಠವಾಗಿತ್ತು. ಈ ತಂಡವು ಪಂದ್ಯಾವಳಿಯ ಉದ್ದಕ್ಕೂ ಜವಾಬ್ದಾರಿಯುತ ಆಟವನ್ನು ಆಡಿದ್ದು ಕಂಡುಬಂದಿದೆ. ಆಟಗಾರರಲ್ಲಿ ಸರಿಯಾದ ತರಬೇತಿ ಮತ್ತು ಸಮನ್ವಯ ಕಂಡುಬಂದಿದೆ. ಇಡೀ ತಂಡವಾಗಿ ಆಟವನ್ನು ಆಡಿದರು. ಈ ತಂಡಕ್ಕೆ ನನ್ನ ಶುಭಾಶಯಗಳು’ ಎಂದು ವಿಜಯ್ ಮಲ್ಯ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಭಾರತಕ್ಕೆ ಬನ್ನಿ ಸರ್ ಎಂದ ಎಸ್​ಬಿಐ; ನಿಜಾಂಶ ಏನು?

ವಿಜಯ್ ಮಲ್ಯ ಅವರ ಈ ಪೋಸ್ಟ್ ಅನ್ನು ಸುಮಾರು 6 ಲಕ್ಷ ಜನರು ವೀಕ್ಷಿಸಿದ್ದು, ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಮೆಂಟ್ ಮಾಡಿದೆ ಎನ್ನಲಾಗಿರುವ ಫೋಟೋವೊಂದು ವೈರಲ್ ಆಗುತ್ತಿದ್ದು,  ಅದರಲ್ಲಿ, ‘ಸರ್, ಭಾರತಕ್ಕೆ ಹಿಂತಿರುಗಿ. ಒಟ್ಟಿಗೆ ಆಚರಿಸೋಣ’ ಎಂದು ಬರೆಯಲಾಗಿದೆ. ಆದರೆ ಈ ವೈರಲ್ ಫೋಟೋದ ಹಿಂದಿರುವ ಸತ್ಯಾಂಶದ ಹಿಂದೆ ಬಿದ್ದಾಗ ತಿಳಿದಿದ್ದು, ಇದು ಕೇವಲ ಎಡಿಟೆಡ್ ಫೋಟೋ ಆಗಿದೆ. ಎಸ್​ಬಿಐ ಆ ರೀತಯಾಗಿ ಯಾವುದೇ ಕಾಮೆಂಟ್ ಮಾಡಿರುವುದು ಅಧಿಕೃತವಾಗಿ ತಿಳಿದುಬಂದಿಲ್ಲ. ಇದರರ್ಥ ವೈರಲ್ ಫೋಟೋದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದನ್ನು ಅರಿಯಬಹುದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:55 pm, Thu, 5 June 25

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?