Vidhwath Kaverappa: ವಿಧ್ವತ್ ಕಾವೇರಪ್ಪ ಬೆಂಕಿ ಬೌಲಿಂಗ್: ಕೇವಲ 60 ರನ್ಗೆ ಆಲೌಟ್
Deodhar Trophy 2023: ದಕ್ಷಿಣ ವಲಯ ಪರ ಕರಾರುವಾಕ್ ದಾಳಿ ಸಂಘಟಿಸಿದ ವಿಧ್ವತ್ ಕಾವೇರಪ್ಪ ಕೇವಲ 17 ರನ್ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
Deodhar Trophy 2023: ಪುದುಚೇರಿಯಲ್ಲಿ ನಡೆದ ದೇವಧರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ದಕ್ಷಿಣ ವಲಯ ತಂಡವು ಭರ್ಜರಿ ಜಯ ಸಾಧಿಸಿದೆ. ಉತ್ತರ ವಲಯ ವಿರುದ್ಧದ ಈ ಪಂದ್ಯದ ಗೆಲುವಿನ ರೂವಾರಿ ಕೊಡಗಿನ ಕುವರ ವಿಧ್ವತ್ ಕಾವೇರಪ್ಪ ಎಂಬುದು ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ವಲಯ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ರೋಹನ್ ಕುನ್ನುಮ್ಮಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 117 ರನ್ಗಳ ಜೊತೆಯಾಟವಾಡಿದ ಈ ಜೋಡಿ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. 61 ಎಸೆತಗಳನ್ನು ಎದುರಿಸಿದ ರೋಹನ್ 3 ಭರ್ಜರಿ ಸಿಕ್ಸ್, 8 ಫೋರ್ಗಳೊಂದಿಗೆ 70 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಇನ್ನೊಂದೆಡೆ ಮಯಾಂಕ್ ಅಗರ್ವಾಲ್ 68 ಎಸೆತಗಳಲ್ಲಿ 64 ರನ್ ಸಿಡಿಸಿದರು. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಕೇವಲ 17 ರನ್ಗಳಿಸಿ ನಿರಾಸೆ ಮೂಡಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಎನ್. ಜಗದೀಸನ್ 66 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 72 ರನ್ ಚಚ್ಚಿದರು. ಈ ಮೂಲಕ ತಂಡದ ಮೊತ್ತ 300 ರ ಗಡಿದಾಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ದಕ್ಷಿಣ ವಲಯ ತಂಡ 303 ರನ್ ಕಲೆಹಾಕಿತು.
304 ರನ್ಗಳ ಕಠಿಣ ಗುರಿ ಪಡೆದ ಉತ್ತರ ವಲಯ ತಂಡಕ್ಕೆ ಆರಂಭದಲ್ಲೇ ಕನ್ನಡಿಗ ವಿಧ್ವತ್ ಕಾವೇರಪ್ಪ ಆಘಾತ ನೀಡಿದರು. ಮೂರನೇ ಓವರ್ನಲ್ಲಿ ಅಭಿಷೇಕ್ ಶರ್ಮಾ (1) ಹಾಗೂ ಶುಭಂ ಖಜುರಿಯಾ (10) ವಿಕೆಟ್ ಉರುಳಿಸಿದ ವಿಧ್ವತ್ ದಕ್ಷಿಣ ವಲಯಕ್ಕೆ ಉತ್ತಮ ಆರಂಭ ಒದಗಿಸಿದರು.
ಇನ್ನು 5ನೇ ಓವರ್ನಲ್ಲಿ ವಿಧ್ವತ್ ಕಾವೇರಪ್ಪ ಪ್ರಭ್‌ಸಿಮ್ರಾನ್ ಸಿಂಗ್ (2) ಹಾಗೂ ನಾಯಕ ನಿತೀಶ್ ರಾಣಾ (4) ವಿಕೆಟ್ ಕಬಳಿಸಿದರು. ಹಾಗೆಯೇ ವಿವ್ರಾಂತ್ ಶರ್ಮಾ (4) ರನ್ನು ಔಟ್ ಮಾಡಿ ವಿ ಕೌಶಿಕ್ 5ನೇ ಯಶಸ್ಸು ತಂದುಕೊಟ್ಟರು.
ಇತ್ತ ಕೇವಲ 26 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಉತ್ತರ ವಲಯ ತಂಡ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಿತು. ಆ ಬಳಿಕ ಪಂದ್ಯ ಶುರುವಾದಾಗ ವಿಜೆಡಿ ನಿಯಮ ಅನ್ವಯ 35 ಓವರ್ಗಳಲ್ಲಿ 262 ರನ್ಗಳ ಟಾರ್ಗೆಟ್ ನೀಡಲಾಯಿತು.
ಆದರೆ ಅದಾಗಲೇ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ ದಕ್ಷಿಣ ವಲಯ ಪರ ವಿಜಯಕುಮಾರ್ ವೈಶಾಕ್ ಮತ್ತೆರಡು ವಿಕೆಟ್ ಪಡೆದರು. ಇನ್ನು ಸಂದೀಪ್ ಶರ್ಮಾ ವಿಕೆಟ್ ಕಬಳಿಸಿ ವಿಧ್ವತ್ ಕಾವೇರಪ್ಪ 5 ವಿಕೆಟ್ಗಳ ಸಾಧನೆ ಮಾಡಿದರು. ಪರಿಣಾಮ ಉತ್ತರ ವಲಯ ತಂಡವು ಕೇವಲ 60 ರನ್ಗಳಿಗೆ ಆಲೌಟ್ ಆಯಿತು.
ದಕ್ಷಿಣ ವಲಯ ಪರ ಕರಾರುವಾಕ್ ದಾಳಿ ಸಂಘಟಿಸಿದ ವಿಧ್ವತ್ ಕಾವೇರಪ್ಪ 6 ಓವರ್ಗಳಲ್ಲಿ 17 ರನ್ 5 ವಿಕೆಟ್ ಕಬಳಿಸಿ ಮಿಂಚಿದರು.
ಉತ್ತರ ವಲಯ (ಪ್ಲೇಯಿಂಗ್ XI): ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಮನ್‌ದೀಪ್ ಸಿಂಗ್, ನಿತೀಶ್ ರಾಣಾ (ನಾಯಕ), ಶುಭಂ ಖಜುರಿಯಾ, ವಿವ್ರಾಂತ್ ಶರ್ಮಾ, ಮಯಾಂಕ್ ಮಾರ್ಕಾಂಡೆ, ರಿಷಿ ಧವನ್, ಮಯಾಂಕ್ ದಾಗರ್, ಮಯಾಂಕ್ ಯಾದವ್, ಸಂದೀಪ್ ಶರ್ಮಾ.
ಇದನ್ನೂ ಓದಿ: Vidhwath Kaverappa: ದೇಶೀಯ ಅಂಗಳದಲ್ಲಿ ಕನ್ನಡಿಗ ಕಾವೇರಪ್ಪನ ಕರಾಮತ್ತು
ದಕ್ಷಿಣ ವಲಯ (ಪ್ಲೇಯಿಂಗ್ XI): ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಎನ್ ಜಗದೀಸನ್ (ವಿಕೆಟ್ ಕೀಪರ್), ಅರುಣ್ ಕಾರ್ತಿಕ್, ರಿಕಿ ಭುಯಿ, ವಾಷಿಂಗ್ಟನ್ ಸುಂದರ್, ರೋಹನ್ ಕುನ್ನುಮ್ಮಲ್, ಸಾಯಿ ಕಿಶೋರ್, ವಾಸುಕಿ ಕೌಶಿಕ್, ವಿಜಯ್‌ಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ.