Vijay Hazare Trophy 2021: ತಮಿಳುನಾಡು ವಿರುದ್ದ ಕರ್ನಾಟಕಕ್ಕೆ ಹೀನಾಯ ಸೋಲು

Vijay Hazare Trophy 2021-22: ರೋಹನ್-ಮನೀಷ್ ಜೋಡಿ 3ನೇ ವಿಕೆಟ್​ಗೆ 67 ರನ್​ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ 37 ರನ್​ಗಳಿಸಿದ್ದ ಕದಮ್ ವಾಷಿಂಗ್ಟನ್ ಸುಂದರ್​​ಗೆ ವಿಕೆಟ್ ಒಪ್ಪಿಸಿದರು.

Vijay Hazare Trophy 2021: ತಮಿಳುನಾಡು ವಿರುದ್ದ ಕರ್ನಾಟಕಕ್ಕೆ ಹೀನಾಯ ಸೋಲು
Tamil Nadu Team
Edited By:

Updated on: Dec 09, 2021 | 3:20 PM

ವಿಜಯ್ ಹಜಾರೆ ಟೂರ್ನಿಯಲ್ಲಿನ (Vijay Hazare Trophy 2021) 2ನೇ ಪಂದ್ಯದಲ್ಲಿ ಕರ್ನಾಟಕ ತಂಡವು ತಮಿಳುನಾಡುವ ವಿರುದ್ದ ಹೀನಾಯ ಸೋಲನುಭವಿಸಿದೆ. ಮೊದಲ ಪಂದ್ಯದಲ್ಲಿ ಪುದುಚೇರಿ ವಿರುದ್ದ 236 ರನ್​ಗಳ ಭರ್ಜರಿ ಜಯ ಸಾಧಿಸಿದ್ದ ಕರ್ನಾಟಕ ತಂಡವು ತಮಿಳುನಾಡುವ ವಿರುದ್ದ ಮುಗ್ಗರಿಸಿತು. ಟಾಸ್ ಗೆದ್ದ ನಾಯಕ ಮನೀಷ್ ಪಾಂಡೆ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್​ ಆರಂಭಿಸಿದ ಆರಂಭಿಕ ಆಘಾತಕ್ಕೆ ಒಳಗಾಯಿತು. ಮೊದಲ ಓವರ್​ನಲ್ಲೇ ರವಿಕುಮಾರ್ ಸಮರ್ಥ್ ಶೂನ್ಯಕ್ಕೆ ಔಟಾದರು. ಆ ಬಳಿಕ ಬಂದ ಸಿದ್ಧಾರ್ಥ್ (7) ಕೂಡ ಬೇಗನೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಆರಂಭಿಕ ರೋಹನ್ ಕದಮ್ ಜೊತೆಗೂಡಿದ ನಾಯಕ ಮನೀಷ್ ಪಾಂಡೆ ತಂಡಕ್ಕೆ ಆಸರೆಯಾದರು.

ಅದರಂತೆ ರೋಹನ್-ಮನೀಷ್ ಜೋಡಿ 3ನೇ ವಿಕೆಟ್​ಗೆ 67 ರನ್​ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ 37 ರನ್​ಗಳಿಸಿದ್ದ ಕದಮ್ ವಾಷಿಂಗ್ಟನ್ ಸುಂದರ್​​ಗೆ ವಿಕೆಟ್ ಒಪ್ಪಿಸಿದರು. ಇನ್ನು ತಂಡದ ಮೊತ್ತ 103 ರನ್ ಆಗಿದ್ದ ವೇಳೆ 40 ರನ್​ಗಳಿಸಿದ್ದ ಮನೀಷ್ ಪಾಂಡೆ ಕೂಡ ಔಟಾದರು. ನಾಲ್ಕು ವಿಕೆಟ್​ ನಷ್ಟಕ್ಕೆ 103 ರನ್​ಗಳಿಸಿದ್ದ ಕರ್ನಾಟಕ ಆ ಬಳಿಕ ದಿಢೀರ್ ಕುಸಿತಕ್ಕೊಳಗಾಯಿತು.

ಕರುಣ್ ನಾಯರ್ (9), ಶರತ್ (3), ಸುಚಿತ್ (0) ಹಾಗೂ ವೆಂಟಕೇಶ್ (2) ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಇನ್ನು ಅಂತಿಮವಾಗಿ ಬೌಲರುಗಳನ್ನು ಕ್ಷಣಾರ್ಧದಲ್ಲೇ ತಮಿಳುನಾಡು ತಂಡ ಔಟ್ ಮಾಡಿದರು. ಪರಿಣಾಮ ಕೇವಲ 19 ರನ್​ಗಳಿಸುವಷ್ಟರಲ್ಲಿ ಕರ್ನಾಟಕ ತಂಡವು 6 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ 36.3 ಓವರ್​ನಲ್ಲಿ ಕರ್ನಾಟಕ ತಂಡವು 122 ರನ್​ಗಳಿಗೆ ಸರ್ವಪತನ ಕಂಡಿತು. ತಮಿಳುನಾಡು ಪರ ಸಿದ್ದಾರ್ಥ್ 4 ವಿಕೆಟ್​ ಕಬಳಿಸಿದರೆ, ಸಾಯಿ ಕಿಶೋರ್ 3 ವಿಕೆಟ್ ಪಡೆದರು.

123 ರನ್​ಗಳ ಸಾಧಾರಣ ಗುರಿ ಪಡೆದ ತಮಿಳುನಾಡು ತಂಡವು ಎಚ್ಚರಿಕೆಯ ಆಟ ಪ್ರದರ್ಶಿಸಿದರು. ತಂಡದ ಮೊತ್ತ 58 ರನ್​ ವೇಳೆಗೆ ಇಬ್ಬರು ಆರಂಭಿಕರನ್ನು ಕರ್ನಾಟಕ ತಂಡವು ಔಟ್ ಮಾಡಿದರೂ, ಆ ಬಳಿಕ ಬಂದ ಬಾಬಾ ಇಂದ್ರಜಿತ್ ಅಜೇಯ ಅರ್ಧಶತಕ ಬಾರಿಸಿದರು. ಇನ್ನು ವಾಷಿಂಗ್ಟನ್ ಸುಂದರ್ 31 ರನ್​ಗಳ ಕಾಣಿಕೆ ನೀಡಿದರು. ಅದರಂತೆ ತಮಿಳುನಾಡು ತಂಡವು 28 ಓವರ್​ನಲ್ಲಿ 2 ವಿಕೆಟ್ ಕಳೆದುಕೊಂಡು 123 ರನ್​ಗಳ ಗುರಿ ಮುಟ್ಟಿತು. ಈ ಮೂಲಕ 8 ವಿಕೆಟ್​ ಭರ್ಜರಿ ಜಯ ಸಾಧಿಸಿತು.

ಇದನ್ನೂ ಓದಿ: World Record: ಬರೋಬ್ಬರಿ 15 ಸಿಕ್ಸ್​: ಕ್ರಿಕೆಟ್ ಇತಿಹಾಸದ ಅತೀ ವೇಗದ ಶತಕ

ಇದನ್ನೂ ಓದಿ: IPL 20222: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

ಇದನ್ನೂ ಓದಿ: Virat Kohli: ಭಾರತ ತಂಡ ಕಂಡ ಅತ್ಯಂತ ಯಶಸ್ವಿ ನಾಯಕ ವಿರಾಟ್ ಕೊಹ್ಲಿ…ಆದರೂ

(Vijay Hazare Trophy 2021: Tamil Nadu Beat Karnataka)