Vijay Hazare Trophy 2023: ವಿಜಯ್ ಹಜಾರೆ ಟ್ರೋಫಿ: ಸೆಮಿಫೈನಲ್ಗೆ 4 ತಂಡಗಳು ಎಂಟ್ರಿ
Vijay Hazare Trophy 2023: ಮೂರನೇ ಕ್ವಾರ್ಟರ್ ಫೈನಲ್ನಲ್ಲಿ ವಿದರ್ಭ ತಂಡಕ್ಕೆ ಸೋಲುಣಿಸಿ ಕರ್ನಾಟಕ ತಂಡವು ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದೆ. ನಾಲ್ಕನೇ ಕ್ವಾರ್ಟರ್ ಫೈನಲ್ನಲ್ಲಿ ಮುಂಬೈ ವಿರುದ್ಧ ಗೆದ್ದಿರುವ ತಮಿಳುನಾಡು ತಂಡವು ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.
ದೇಶೀಯ ಅಂಗಳದಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟೂರ್ನಿಯು ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಕ್ವಾರ್ಟರ್ ಫೈನಲ್ ಪಂದ್ಯಗಳು ಮುಗಿದಿದ್ದು, ಇದರಲ್ಲಿ ಗೆದ್ದಿರುವ ನಾಲ್ಕು ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಿದೆ. ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಂಗಾಲ್ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿ ಹರ್ಯಾಣ ತಂಡವು ಸೆಮಿಫೈನಲ್ಗೆ ಪ್ರವೇಶಿಸಿದೆ. ಹಾಗೆಯೇ 2ನೇ ಕ್ವಾರ್ಟರ್ ಫೈನಲ್ನಲ್ಲಿ ಕೇರಳ ವಿರುದ್ಧ ರಾಜಸ್ಥಾನ್ ತಂಡವು ಬರೋಬ್ಬರಿ 200 ರನ್ಗಳ ಭರ್ಜರಿ ಜಯ ಸಾಧಿಸಿ ನಾಕೌಟ್ ಹಂತಕ್ಕೇರಿದೆ.
ಇನ್ನು ಮೂರನೇ ಕ್ವಾರ್ಟರ್ ಫೈನಲ್ನಲ್ಲಿ ವಿದರ್ಭ ತಂಡಕ್ಕೆ ಸೋಲುಣಿಸಿ ಕರ್ನಾಟಕ ತಂಡವು ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದೆ. ನಾಲ್ಕನೇ ಕ್ವಾರ್ಟರ್ ಫೈನಲ್ನಲ್ಲಿ ಮುಂಬೈ ವಿರುದ್ಧ ಗೆದ್ದಿರುವ ತಮಿಳುನಾಡು ತಂಡವು ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.
ಇಲ್ಲಿ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ಹಾಗೂ ಹರ್ಯಾಣ ತಂಡಗಳು ಮುಖಾಮುಖಿಯಾದರೆ, ಎರಡನೇ ಸೆಮಿಫೈನಲ್ನಲ್ಲಿ ರಾಜಸ್ಥಾನ್ ಹಾಗೂ ಕರ್ನಾಟಕ ತಂಡಗಳು ಸೆಣಸಲಿದೆ.
ವಿಜಯ್ ಹಜಾರೆ ಟೂರ್ನಿ ಸೆಮಿಫೈನಲ್ ವೇಳಾಪಟ್ಟಿ:
- ಡಿಸೆಂಬರ್ 13- ಹರ್ಯಾಣ vs ತಮಿಳುನಾಡು (ಮೊದಲ ಸೆಮಿಫೈನಲ್ ಪಂದ್ಯ)
- ಡಿಸೆಂಬರ್ 14- ರಾಜಸ್ಥಾನ್ vs ಕರ್ನಾಟಕ (ಎರಡನೇ ಸೆಮಿಫೈನಲ್ ಪಂದ್ಯ)
ಈ ಎರಡೂ ಪಂದ್ಯಗಳು ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಸೆಮಿಫೈನಲ್ ಪ್ರವೇಶಿಸಿರುವ 4 ತಂಡಗಳು:
ಹರ್ಯಾಣ ತಂಡ: ಅಶೋಕ್ ಮೆನಾರಿಯಾ (ನಾಯಕ) ರೋಹಿತ್ ಪರ್ಮೋದ್ ಶರ್ಮಾ, ಅಮನ್ ಕುಮಾರ್ , ಮಯಾಂಕ್ ಶಾಂಡಿಲ್ಯ , ಕಪಿಲ್ ಹೂಡಾ , ಅಂಕಿತ್ ಕುಮಾರ್ , ಹರ್ಷಲ್ ಪಟೇಲ್ , ಯುಜ್ವೇಂದ್ರ ಚಹಲ್ , ರಾಹುಲ್ ತೆವಾಟಿಯಾ , ಸುಮಿತ್ ಕುಮಾರ್ , ನಿಶಾಂತ್ ಸಿಂಧು , , ಅಂಶುಲ್ ಕಾಂಬೋಜ್ , ಯುವರಾಜ್ ಸಿಂಗ್ , ಹಿಮಾಂಶು ರಾಣ.
ತಮಿಳುನಾಡು ತಂಡ: ದಿನೇಶ್ ಕಾರ್ತಿಕ್ (ನಾಯಕ) ವರುಣ್ ಚಕ್ರವರ್ತಿ , ಮಣಿಮಾರನ್ ಸಿದ್ಧಾರ್ಥ್ , ಕುಲದೀಪ್ ಸೇನ್ , ಸಂದೀಪ್ ವಾರಿಯರ್ , ರವಿಶ್ರೀನಿವಾಸನ್ ಸಾಯಿ ಕಿಶೋರ್ , ಟಿ ನಟರಾಜನ್ , ಸೋನು ಯಾದವ್ , ವಿಜಯ್ ಶಂಕರ್ , ಬಾಬಾ ಅಪರಾಜಿತ್ , ಶಾರುಖ್ ಖಾನ್ , ಸಾಯಿ ಸುದರ್ಶನ್ , ಪ್ರದೋಶ್ ಪಾಲ್ , ಎನ್ ಜಗದೀಸನ್ , ಬಾಬಾ ಇಂದ್ರಜಿತ್ , ನಿಧೀಶ್ ರಾಜಗೋಪಾಲ್.
ರಾಜಸ್ಥಾನ್ ತಂಡ: ದೀಪಕ್ ಹೂಡಾ (ನಾಯಕ), ಕುನಾಲ್ ಸಿಂಗ್ ರಾಥೋರ್, ಅಭಿಜೀತ್ ತೋಮರ್ , , ಮಹಿಪಾಲ್ ಲೊಮ್ರೋರ್ , ಖಲೀಲ್ ಅಹ್ಮದ್ , ದೀಪಕ್ ಚಾಹರ್ , ರಾಹುಲ್ ಚಾಹರ್ , ಅನಿಕೇತ್ ಚೌಧರಿ , ಕುಕ್ನಾ ಅಜಯ್ ಸಿಂಗ್ , ಅರಾಫತ್ ಖಾನ್ , ಸಾಹಿಲ್ ದಿವಾನ್ , ಸಲ್ಮಾನ್ ಖಾನ್ , ಯಶ್ ಸುಪಿತ್ ಕೊಠಾರಿ , ಸಮರವ್ ಕೊಠಾರಿ ಕರಣ್ ಲಂಬಾ , ರಾಮ್ ಮೋಹನ್ ಚೌಹಾಣ್.
ಇದನ್ನೂ ಓದಿ: RCB ತಂಡದ ಅತ್ಯಂತ ಕೆಟ್ಟ ಆಯ್ಕೆಗಳಾವುವು ಗೊತ್ತಾ?
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ) , ರವಿಕುಮಾರ್ ಸಮರ್ಥ್ , ನಿಕಿನ್ ಜೋಸ್ , ದೇವದತ್ ಪಡಿಕ್ಕಲ್ , ಮನೀಶ್ ಪಾಂಡೆ , ಶರತ್ ಬಿ ಆರ್ , ಕೃಷ್ಣನ್ ಶ್ರೀಜಿತ್ , ಮನೋಜ್ ಭಾಂಡಗೆ , ಕೃಷ್ಣಪ್ಪ ಗೌತಮ್ , ಶುಭಾಂಗ್ ಹೆಗ್ಡೆ , ಅಭಿನವ್ ಮನೋಹರ್ , ವಿಧ್ವತ್ ಕಾವೇರಪ್ಪ, ವಾಸುಕಿ ಕೌಶಿಕ್, ಜಗದೀಶ ಸುಚಿತ್, ವಿಜಯಕುಮಾರ್ ವೈಶಾಕ್, ಮುರಳೀಧರ ವೆಂಕಟೇಶ್.