
ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಹಾಗೂ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಹೊಸ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿದ ಕ್ರಿಕೆಟ್ ಜಗತ್ತು ಮತ್ತು ಅವರ ಅಭಿಮಾನಿಗಳನ್ನು ಆಘಾತಕ್ಕೊಳಗಾಗಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ವಿನೋದ್ ಕಾಂಬ್ಳಿ ವೃದ್ಧಾಶ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. 90 ರ ದಶಕದಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಎಲ್ಲರ ಮನಗೆದಿದ್ದ ಕಾಂಬ್ಳಿಯವರನ್ನು ಇಂತಹ ಸ್ಥಿತಿಯಲ್ಲಿ ನೋಡಿ ಅಭಿಮಾನಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ವಿನೋದ್ ಕಾಂಬ್ಳಿ ಸ್ವತಃ ವೃದ್ಧಾಶ್ರಮದ ಬಗ್ಗೆ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ. ವೀಡಿಯೊದಲ್ಲಿ, ಅವರು, ‘ನಾನು ಪ್ರಸ್ತುತ ‘ನಿಡಾನ್’ನಲ್ಲಿದ್ದೇನೆ. ಇಲ್ಲಿನ ಸೌಲಭ್ಯಗಳು ಅತ್ಯುತ್ತಮವಾಗಿವೆ ಎಂದು ನಾನು ಹೇಳಲು ಬಯಸುತ್ತೇನೆ. ಇಲ್ಲಿನ ಸ್ವಚ್ಛತೆ ಮತ್ತು ಉಳಿದೆಲ್ಲವೂ ಸಂಪೂರ್ಣವಾಗಿ ಅತ್ಯುತ್ತಮವಾಗಿದೆ. ಇಲ್ಲಿ ವಾಸಿಸುತ್ತಿರುವ ನನಗೆ ನಾನು ಮನೆಯಲ್ಲಿ ಇಲ್ಲ ಎಂದು ಎಂದಿಗೂ ಅನಿಸಿಲ್ಲ. ಇಲ್ಲಿನ ಜನರಿಂದ ನನಗೆ ತುಂಬಾ ಪ್ರೀತಿ ಮತ್ತು ಗೌರವ ಸಿಗುತ್ತಿದೆ’ ಎಂದಿದ್ದಾರೆ.
ಕಾಂಬ್ಳಿಯ ಈ ವಿಡಿಯೋ ನೋಡಿದ ಕ್ರಿಕೆಟ್ ಅಭಿಮಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಅವರ ಸ್ಥಿತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದರೆ, ಇತರರು ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ವಿನೋದ್ ಕಾಂಬ್ಳಿ ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಸಮಸ್ಯೆಗಳು, ಆರ್ಥಿಕ ತೊಂದರೆಗಳು ಮತ್ತು ವೈಯಕ್ತಿಕ ಏರಿಳಿತಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಈ ಹಿಂದೆ, ಅವರು ನಡೆಯಲು ಸಾಧ್ಯವಾಗದೆ ಮತ್ತು ಇತರರ ಬೆಂಬಲದೊಂದಿಗೆ ನಡೆಯಬೇಕಾದ ವೀಡಿಯೊಗಳು ವೈರಲ್ ಆಗಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಆಘಾತಗೊಳಿಸಿದ್ದವು. ಆ ನಂತರ ಮಾಜಿ ಕ್ರಿಕೆಟಿಗರ ನೆರವಿನಿಂದ ಕಾಂಬ್ಳಿ ಸಾವನ್ನು ಗೆದ್ದು ಬಂದಿದ್ದರು.
Vinod Kambli’s latest video, he is presently at an elderly care centre in Thane.
Praying for his recovery soon. pic.twitter.com/6k1plg1aCl
— Abhishek ✨ (@ImAbhishek7_) September 25, 2026
1991 ರ ಅಕ್ಟೋಬರ್‌ನಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕಾಂಬ್ಳಿ ತಮ್ಮ 21ನೇ ಜನ್ಮದಿನದಂದೇ ತಮ್ಮ ಮೊದಲ ಏಕದಿನ ಶತಕ ಬಾರಿಸಿದ್ದರು. ಏತನ್ಮಧ್ಯೆ, ಕಾಂಬ್ಳಿ ಅವರ ಟೆಸ್ಟ್ ವೃತ್ತಿಜೀವನವು ಕೇವಲ 24 ನೇ ವಯಸ್ಸಿನಲ್ಲಿ ಕೊನೆಗೊಂಡಿತು. ಅಂತಿಮವಾಗಿ 2000 ರಲ್ಲಿಯೇ ಕಾಂಬ್ಳಿಯವರ ಅಂತರರಾಷ್ಟ್ರೀಯ ವೃತ್ತಿಜೀವನ ಕೊನೆಗೊಂಡಿತು. ಭಾರತದ ಪರ 17 ಟೆಸ್ಟ್ ಪಂದ್ಯಗಳನ್ನಾಡಿರುವ ಕಾಂಬ್ಳಿ 54 ರ ಸರಾಸರಿಯಲ್ಲಿ 1,084 ರನ್ ಮತ್ತು ಆಡಿರುವ 104 ಏಕದಿನ ಪಂದ್ಯಗಳಲ್ಲಿ 32 ರ ಸರಾಸರಿಯಲ್ಲಿ 2,477 ರನ್‌ಗಳನ್ನು ಕಲೆಹಾಕಿದ್ದರು.
Published On - 6:44 pm, Fri, 25 September 26