‘ಕೊಹ್ಲಿ… ಕೊಹ್ಲಿ’.. ಆಸ್ಟ್ರೇಲಿಯಾದಲ್ಲಿ ಹೆಚ್ಚಿದ ವಿರಾಟ್ ಫೀವರ್; ಕೊಹ್ಲಿ ನೋಡಲು ಮುಗಿಬಿದ್ದ ಫ್ಯಾನ್ಸ್; ವಿಡಿಯೋ

T20 World Cup 2022: 6 ವರ್ಷಗಳ ನಂತರ ಮೆನ್ ಇನ್ ಬ್ಲೂ ತಂಡ ಟಿ20 ವಿಶ್ವಕಪ್‌ನ ಸೆಮಿಫೈನಲ್ ಆಡುತ್ತಿರುವುದರಿಂದ ಇಡೀ ಅಡಿಲೇಡ್ ಓವಲ್ ಭಾರತೀಯ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದೆ.

‘ಕೊಹ್ಲಿ... ಕೊಹ್ಲಿ'.. ಆಸ್ಟ್ರೇಲಿಯಾದಲ್ಲಿ ಹೆಚ್ಚಿದ ವಿರಾಟ್ ಫೀವರ್; ಕೊಹ್ಲಿ ನೋಡಲು ಮುಗಿಬಿದ್ದ ಫ್ಯಾನ್ಸ್; ವಿಡಿಯೋ
ಕೊಹ್ಲಿ ಹಿಂದೆ ಮುಗಿಬಿದ್ದ ಫ್ಯಾನ್ಸ್Image Credit source: Timesnow
Follow us
TV9 Web
| Updated By: ಪೃಥ್ವಿಶಂಕರ

Updated on:Nov 09, 2022 | 12:24 PM

ಟೀಂ ಇಂಡಿಯಾದ (Team India) ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ (Virat Kohli) ಸದ್ಯದ ಕ್ರಿಕೆಟ್ ಜಗತ್ತಿನ ಸಾಮ್ರಾಟನಾಗಿ ಮೆರೆಯುತ್ತಿದ್ದಾರೆ. ತಮ್ಮ ಅದ್ಭುತ ಬ್ಯಾಟಿಂಗ್ ಕಲೆಯಿಂದ ಕ್ರಿಕೆಟ್ ಪಂಡಿತರಿಂದ ಶಹಬ್ಬಾಸ್​ ಗಿರಿ ಪಡೆದಿರುವ ಕಿಂಗ್ ಕೊಹ್ಲಿಗೆ ಇಡೀ ವಿಶ್ವದಲ್ಲೇ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಹೀಗಾಗಿ ಕೊಹ್ಲಿ ಎಲ್ಲಿಗೆ ಹೋದರೂ, ಅಭಿಮಾನಿಗಳು ಅವರ ಆಟೋಗ್ರಾಫ್ ತೆಗೆದುಕೊಳ್ಳಲು ಅಥವಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿಳುತ್ತಾರೆ. ಮಂಗಳವಾರ (ನವೆಂಬರ್ 8) ರಾತ್ರಿ ದಕ್ಷಿಣ ಆಸ್ಟ್ರೇಲಿಯಾದಲ್ಲೂ ಇದೇ ರೀತಿಯ ಘಟನೆ ಮರುಕಳಿಸಿದೆ.

ನವೆಂಬರ್ 10 ರಂದು ಗುರುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ಗಾಗಿ ಭಾರತ ತಂಡ ಅಡಿಲೇಡ್‌ನಲ್ಲಿದೆ. ನಾಕೌಟ್ ಪಂದ್ಯದ ಮೊದಲು, ಕೋಚ್ ರಾಹುಲ್ ದ್ರಾವಿಡ್, ಕೊಹ್ಲಿ, ರಾಹುಲ್, ಸೂರ್ಯಕುಮಾರ್ ಯಾದವ್ ಮತ್ತು ಯುಜ್ವೇಂದ್ರ ಚಹಾಲ್​ರಂತಹ ದಿಗ್ಗಜರನ್ನು ಒಳಗೊಂಡ ಇಡೀ ಭಾರತ ತಂಡ ಅಡಿಲೇಡ್ ಬಳಿಯ ದಕ್ಷಿಣ ಆಸ್ಟ್ರೇಲಿಯಾದ ಟೊರೆನ್ಸ್‌ವಿಲ್ಲೆಯಲ್ಲಿರುವ ‘ಬ್ರಿಟಿಷ್ ರಾಜ್’ ರೆಸ್ಟೋರೆಂಟ್‌ಗೆ ಊಟಕ್ಕೆ ತೆರಳಿದೆ.

‘ಕೊಹ್ಲಿ… ಕೊಹ್ಲಿ’

ಈ ವೇಳೆ ಆಟಗಾರರು ಮತ್ತು ಮುಖ್ಯ ತರಬೇತುದಾರರು ರೆಸ್ಟೋರೆಂಟ್​ನಿಂದ ಊಟ ಮುಗಿಸಿ ಹೊರಬರುತ್ತಿದ್ದಂತೆ, ಅವರನ್ನು ನೋಡಲು ಅಭಿಮಾನಿಗಳ ಸಾಗರವೇ ರೆಸ್ಟೋರೆಂಟ್ ಮುಂದಿದೆ ನೆರೆದಿದೆ. ಅಭಿಮಾನಿಗಳು ದ್ರಾವಿಡ್, ರಾಹುಲ್ ಮತ್ತು ಚಹಾಲ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್‌ಗಳೊಂದಿಗೆ ರೆಸ್ಟೋರೆಂಟ್​ನಿಂದ ವಿರಾಟ್ ಕೊಹ್ಲಿ ಹೊರಗೆ ಬಂದ ಕೂಡಲೇ, ಅಭಿಮಾನಿಗಳು ಅವರ ಹಿಂದೆ ಮುಗಿಬಿದ್ದಿದ್ದಾರೆ. ಆದರೆ ಕೊಹ್ಲಿಯನ್ನು ಸೆಕ್ಯೂರಿಟಿಗಾರ್ಡ್​ಗಳು ಸುತ್ತುವರೆದುದರಿಂದ ಅಭಿಮಾನಿಗಳಿಗೆ ಕೊಹ್ಲಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ವಿರಾಟ್​ರನ್ನು ಕಂಡು ಪುಳಕಿತರಾದ ಅಭಿಮಾನಿಗಳು ‘ಕೊಹ್ಲಿ… ಕೊಹ್ಲಿ’ ಎಂದು ಕೂಗುತ್ತ ಅವರ ಹಿಂದೆ ಓಡಿದ್ದಾರೆ. ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಇದನ್ನೂ ಓದಿ: PAK Vs NZ: ಇಂದು ಪಾಕಿಸ್ತಾನದಲ್ಲಿ ರಜೆ ಘೋಷಣೆ; ಪಾಕ್- ಕಿವೀಸ್ ಸೆಮಿಫೈನಲ್‌ ಪಂದ್ಯಕ್ಕೆ ಮತ್ತಷ್ಟು ರಂಗು..!

6 ವರ್ಷಗಳ ನಂತರ ಮೆನ್ ಇನ್ ಬ್ಲೂ ತಂಡ ಟಿ20 ವಿಶ್ವಕಪ್‌ನ ಸೆಮಿಫೈನಲ್ ಆಡುತ್ತಿರುವುದರಿಂದ ಇಡೀ ಅಡಿಲೇಡ್ ಓವಲ್ ಭಾರತೀಯ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದೆ.

2022 ರ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿಯ ಸಾಧನೆ

ವಿರಾಟ್ ಕೊಹ್ಲಿ ಪ್ರಸ್ತುತ ಟಿ20 ವಿಶ್ವಕಪ್ 2022 ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಕೊಹ್ಲಿ ಅವರ ಬ್ಯಾಟ್ 5 ಪಂದ್ಯಗಳಲ್ಲಿ 246 ರನ್ ಗಳಿಸಿದೆ. ಅವರ ಬ್ಯಾಟಿಂಗ್ ಸರಾಸರಿ 123 ಮತ್ತು ಸ್ಟ್ರೈಕ್ ರೇಟ್ ಕೂಡ 140 ರ ಸಮೀಪದಲ್ಲಿದೆ. ವಿರಾಟ್ ಕೊಹ್ಲಿ ಅವರ ಬ್ಯಾಟ್ 3 ಅರ್ಧ ಶತಕ ಬಾರಿಸಿ ಮಿಂಚಿದೆ. ಅದ್ಭುತ ಸಂಗತಿಯೆಂದರೆ ಅಡಿಲೇಡ್‌ನಲ್ಲಿ ಈ ಆಟಗಾರನ ಬ್ಯಾಟ್ ಹೆಚ್ಚು ರನ್ ಮಾಡಿದೆ.

ಅಡಿಲೇಡ್​ನಲ್ಲಿ ವಿರಾಟ್ ದಾಖಲೆ

ಅಡಿಲೇಡ್‌ನಲ್ಲಿ ವಿರಾಟ್ ಕೊಹ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ ರನ್ ಗಳಿಸಿದ್ದಾರೆ. ವಿರಾಟ್ ಟೆಸ್ಟ್‌ನಲ್ಲಿ ಅಡಿಲೇಡ್ ಮೈದಾನದಲ್ಲಿ 63 ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ ಮತ್ತು 3 ಶತಕ ಮತ್ತು ಅರ್ಧ ಶತಕದ ಸಹಾಯದಿಂದ 509 ರನ್ ಗಳಿಸಿದ್ದಾರೆ. ಅಡಿಲೇಡ್‌ನಲ್ಲಿ, ವಿರಾಟ್ 4 ಏಕದಿನ ಪಂದ್ಯಗಳಲ್ಲಿ 61 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 244 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳು ಸೇರಿವೆ. ಟಿ20ಯಲ್ಲೂ ಅಡಿಲೇಡ್‌ನಲ್ಲಿ ಆಡಿರುವ 2 ಪಂದ್ಯಗಳಲ್ಲಿ ವಿರಾಟ್ 2 ಅರ್ಧಶತಕ ಬಾರಿಸಿದ್ದಾರೆ. ಈ ಮೈದಾನದಲ್ಲಿ ಅವರು 154 ಟಿ20 ರನ್ ಗಳಿಸಿದ್ದಾರೆ. ಅಡಿಲೇಡ್‌ನಲ್ಲಿ ವಿರಾಟ್ ತಮ್ಮ ಬ್ಯಾಟ್‌ನಿಂದ ಒಟ್ಟಾರೆ 5 ಶತಕ ಮತ್ತು 2 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Wed, 9 November 22

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ