AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAK Vs NZ: ಇಂದು ಪಾಕಿಸ್ತಾನದಲ್ಲಿ ರಜೆ ಘೋಷಣೆ; ಪಾಕ್- ಕಿವೀಸ್ ಸೆಮಿಫೈನಲ್‌ ಪಂದ್ಯಕ್ಕೆ ಮತ್ತಷ್ಟು ರಂಗು..!

T20 World Cup 2022: ಪಾಕಿಸ್ತಾನದಲ್ಲಿ ನವೆಂಬರ್ 9 ರ ರಜೆಯ ಬಗ್ಗೆ ಅಲ್ಲಿನ ಸರ್ಕಾರ ಮಂಗಳವಾರ ಘೋಷಣೆ ಮಾಡಿದೆ. ಇಕ್ಬಾಲ್ ದಿನದ ನಿಮಿತ್ತ ನವೆಂಬರ್ 9 ರಂದು ರಜೆ ನೀಡಲಾಗುವುದು ಎಂದು ಸರ್ಕಾರದಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ.

PAK Vs NZ: ಇಂದು ಪಾಕಿಸ್ತಾನದಲ್ಲಿ ರಜೆ ಘೋಷಣೆ; ಪಾಕ್- ಕಿವೀಸ್ ಸೆಮಿಫೈನಲ್‌ ಪಂದ್ಯಕ್ಕೆ ಮತ್ತಷ್ಟು ರಂಗು..!
ಪಾಕ್ ತಂಡ
TV9 Web
| Edited By: |

Updated on: Nov 09, 2022 | 11:47 AM

Share

ಇಂದು ಸಿಡ್ನಿ ಮೈದಾನದಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನದ (Pakistan Vs New Zealand) ನಡುವೆ ಟಿ20 ವಿಶ್ವಕಪ್​ನ (T20 World Cup 2022) ಮೊದಲ ಸೆಮಿಫೈನಲ್‌ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದವರು ನೇರವಾಗಿ ಫೈನಲ್​ಗೆ ಲಗ್ಗೆ ಇಡಲಿದ್ದಾರೆ. ನ್ಯೂಜಿಲೆಂಡ್ ತಂಡವು ಗ್ರೂಪ್ 1 ರಿಂದ ನಂಬರ್ ಒನ್ ಸ್ಥಾನದಲ್ಲಿ ಉಳಿಯುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ, ಪಾಕಿಸ್ತಾನ ಗ್ರೂಪ್ 2 ರಿಂದ ಸೆಮಿಫೈನಲ್ ಪ್ರವೇಶಿಸಿದೆ. ಕಳಪೆ ಆರಂಭದ ಹೊರತಾಗಿಯೂ, ಪಾಕಿಸ್ತಾನ ತಂಡ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಈಗ ಪಾಕಿಸ್ತಾನ-ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದು, ಈ ಪಂದ್ಯಕ್ಕೂ ಮುನ್ನ ಇಡೀ ಪಾಕಿಸ್ತಾನಕ್ಕೆ ರಜೆ ನೀಡುವ ಮೂಲಕ ಪಾಕ್ ಸರ್ಕಾರ ಈ ಪಂದ್ಯಕ್ಕೆ ಇನ್ನಷ್ಟು ರಂಗು ತಂದಿದೆ.

ನವೆಂಬರ್ 9 ರಂದು ಅಂದರೆ ಟಿ20 ವಿಶ್ವಕಪ್‌ನ ಮೊದಲ ಸೆಮಿಫೈನಲ್ ದಿನದಂದು, ಇಡೀ ಪಾಕಿಸ್ತಾನಕ್ಕೆ ರಜಾದಿನವಾಗಿದೆ. ವಾಸ್ತವವಾಗಿ ಇಂದು ಡಾ. ಅಲ್ಲಾಮ ಮೊಹಮ್ಮದ್ ಇಕ್ಬಾಲ್ ಅವರ 145 ನೇ ಜನ್ಮದಿನವಾಗಿದ್ದು, ಈ ವಿಶೇಷ ದಿನದಂದು ಪಾಕಿಸ್ತಾನದ ಪ್ರಧಾನಿ ಕಾರ್ಯಾಲಯ ಇಡೀ ದೇಶಕ್ಕೆ ರಜೆ ಘೋಷಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: T20 World Cup: ಸೆಮಿಫೈನಲ್‌ ನಡೆಯದಿದ್ದರೆ ನ್ಯೂಜಿಲೆಂಡ್- ಭಾರತಕ್ಕೆ ಲಾಭ; ಇಂಗ್ಲೆಂಡ್- ಪಾಕ್​ಗೆ ಸಂಕಷ್ಟ

ಇಂದು ಪಾಕಿಸ್ತಾನದಲ್ಲಿ ರಜಾದಿನ

ಪಾಕಿಸ್ತಾನದಲ್ಲಿ ನವೆಂಬರ್ 9 ರ ರಜೆಯ ಬಗ್ಗೆ ಅಲ್ಲಿನ ಸರ್ಕಾರ ಮಂಗಳವಾರ ಘೋಷಣೆ ಮಾಡಿದೆ. ಇಕ್ಬಾಲ್ ದಿನದ ನಿಮಿತ್ತ ನವೆಂಬರ್ 9 ರಂದು ರಜೆ ನೀಡಲಾಗುವುದು ಎಂದು ಸರ್ಕಾರದಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಸಿಡ್ನಿಯಲ್ಲಿ ಮುಖಾಮುಖಿ

ನವೆಂಬರ್ 9 ರಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಈ ಮೈದಾನದಲ್ಲಿ ಇದು ಉಭಯ ತಂಡಗಳ ಮೊದಲ ಟಿ20 ಮುಖಾಮುಖಿಯಾಗಿದೆ. ಟಿ20 ಕ್ರಿಕೆಟ್​ನಲ್ಲಿ ಎರಡೂ ತಂಡಗಳ ಒಟ್ಟಾರೆ ದಾಖಲೆಯನ್ನು ನಾವು ನೋಡಿದರೆ, ಇದುವರೆಗೆ ಆಡಿರುವ 28 ಪಂದ್ಯಗಳಲ್ಲಿ, ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ಧ ಮೇಲುಗೈ ಸಾಧಿಸಿದ್ದು, 17 ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಇನ್ನುಳಿದ11 ಪಂದ್ಯಗಳಲ್ಲಿ ಸೋಲುಂಡಿದೆ.

ಪಾಕ್ ಸರ್ಕಾರದ ಹೇಳಿಕೆ

ಆದರೆ, 2022 ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ತಂಡದ ವಿಚಾರಕ್ಕೆ ಬಂದರೆ, ಇಲ್ಲಿ ನ್ಯೂಜಿಲೆಂಡ್ ಪಾಕಿಸ್ತಾನಕ್ಕಿಂತ ಮುಂದಿದೆ. ಕಠಿಣ ಪರಿಶ್ರಮಕ್ಕಿಂತ ಹೆಚ್ಚಿನ ಅದೃಷ್ಟದೊಂದಿಗೆ ಪಾಕಿಸ್ತಾನ ತಂಡ ಸೆಮಿಫೈನಲ್‌ ತಲುಪಿದೆ. ಮತ್ತೊಂದೆಡೆ, ನ್ಯೂಜಿಲೆಂಡ್ ತಂಡ ಎಲ್ಲಾ ಬಲಿಷ್ಠ ತಂಡಗಳನ್ನು ಮಣಿಸಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಅಷ್ಟೇ ಅಲ್ಲದೆ ಸೆಮಿಫೈನಲ್ ಪಂದ್ಯ ನಡೆಯುತ್ತಿರುವ ಸಿಡ್ನಿ ಮೈದಾನದಲ್ಲಿ ಈ ಮೊದಲು ನ್ಯೂಜಿಲೆಂಡ್ ತಂಡ ಆತಿಥೇಯ ಆಸ್ಟ್ರೇಲಿಯಾವನ್ನು 89 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದ ದಾಖಲೆ ಹೊಂದಿದೆ. ಆದರೆ, ಇದೇ ಮೈದಾನದಲ್ಲಿ ಪಾಕಿಸ್ತಾನ ಕೂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಅಂದರೆ, ಈ ಉಭಯ ತಂಡಗಳ ನಡುವಿನ ಕದನ ರೋಚಕ ಘಟ್ಟ ತಲುಪುವುದಂತೂ ಖಚಿತವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಕೃಷಿಮೇಳದಲ್ಲಿ ಗಮನಸೆಳೆದ 25 ಲೀಟರ್ ಹಾಲು ಕೊಡುವ ಆನೆಯಂಥಾ ಎಮ್ಮೆ
ಕೃಷಿಮೇಳದಲ್ಲಿ ಗಮನಸೆಳೆದ 25 ಲೀಟರ್ ಹಾಲು ಕೊಡುವ ಆನೆಯಂಥಾ ಎಮ್ಮೆ
ಎಲ್ಲರ ಎದುರು ಪ್ರಿಯಾಂಕಾ ಉಪೇಂದ್ರಗೆ ಕ್ಷಮೆ ಕೇಳಿದ ನಿರ್ದೇಶಕ ಪುರುಷೋತ್ತಮ್
ಎಲ್ಲರ ಎದುರು ಪ್ರಿಯಾಂಕಾ ಉಪೇಂದ್ರಗೆ ಕ್ಷಮೆ ಕೇಳಿದ ನಿರ್ದೇಶಕ ಪುರುಷೋತ್ತಮ್
ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್
ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್
ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: ವಿದೇಶಕ್ಕೆ ರಫ್ತು
ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: ವಿದೇಶಕ್ಕೆ ರಫ್ತು
ಬೆಂಗಳೂರಿಗೆ ನಾನೇ ಲಾಸ್ಟ್ ಅನ್ ಡಿವೈಡೆಡ್ ಪೊಲೀಸ್ ಕಮಿಷನರ್: ಸೀಮಂತ್ ಕುಮಾರ್
ಬೆಂಗಳೂರಿಗೆ ನಾನೇ ಲಾಸ್ಟ್ ಅನ್ ಡಿವೈಡೆಡ್ ಪೊಲೀಸ್ ಕಮಿಷನರ್: ಸೀಮಂತ್ ಕುಮಾರ್
‘ಆಯುಷ್’ ಸಿನಿಮಾ ವಿವಾದ ಬಗೆಹರಿದಿದ್ದು ಹೇಗೆ? ವಿವರಿಸಿದ ಜಯಮಾಲಾ
‘ಆಯುಷ್’ ಸಿನಿಮಾ ವಿವಾದ ಬಗೆಹರಿದಿದ್ದು ಹೇಗೆ? ವಿವರಿಸಿದ ಜಯಮಾಲಾ
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಹಿತೇಂದ್ರ ಅಧಿಕಾರ ಸ್ವೀಕಾರ
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಹಿತೇಂದ್ರ ಅಧಿಕಾರ ಸ್ವೀಕಾರ
ಆಸಿಯಾ ಮೇಲೆ ಹಲ್ಲೆಗೆ ರೆಡಿಯಾದ ಸೌಂದರ್ಯಾ: ವಿಡಿಯೋ
ಆಸಿಯಾ ಮೇಲೆ ಹಲ್ಲೆಗೆ ರೆಡಿಯಾದ ಸೌಂದರ್ಯಾ: ವಿಡಿಯೋ
‘ಆಯುಷ್’ ಸಿನಿಮಾ ವಿವಾದ, ಸಂಧಾನ ಸಭೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು
‘ಆಯುಷ್’ ಸಿನಿಮಾ ವಿವಾದ, ಸಂಧಾನ ಸಭೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು
ಬಾಳಾಸಾಹೇಬ್ ಠಾಕ್ರೆ ಫೋಟೋ ಹರಿದ ಶಿವಸೇನೆ ನಾಯಕಿ; ಭುಗಿಲೆದ್ದ ವಿವಾದ
ಬಾಳಾಸಾಹೇಬ್ ಠಾಕ್ರೆ ಫೋಟೋ ಹರಿದ ಶಿವಸೇನೆ ನಾಯಕಿ; ಭುಗಿಲೆದ್ದ ವಿವಾದ