IND vs WI T20: ಕೊಹ್ಲಿ ಮಾತು ಕೇಳಿ ರಿವ್ಯೂ ತೆಗೆದುಕೊಂಡ ರೋಹಿತ್ ಶರ್ಮಾಗೆ ಶಾಕ್: ಅಷ್ಟಕ್ಕೂ ಆಗಿದ್ದೇನು ನೋಡಿ
Rohit Sharma Virat Kohli DRS Video: ಭಾರತ ವೆಸ್ಟ್ ಇಂಡೀಸ್ ಮೊದಲ ಟಿ20 ಪಂದ್ಯದಲ್ಲಿ ಡಿಆರ್ಎಸ್ ವಿಚಾರವಾಗಿ ರೋಹಿತ್- ಕೊಹ್ಲಿ ನಡುವಣ ಮಾತುಕತೆ ಕೂಡ ಸ್ಟಂಪ್ ಮೈಕ್ನಲ್ಲಿ ಸೆರೆಯಾಗಿದೆ. ಆದರೆ, ಈ ಬಾರಿ ಕೊಹ್ಲಿ ಮಾತು ಕೇಳಿ ರೋಹಿತ್ ತೆಗೆದುಕೊಂಡ ನಿರ್ಧಾರ ವಿಫಲವಾಯಿತು.
ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಣ ಮೊದಲ ಟಿ20 ಪಂದ್ಯ ಕೆಲ ವಿಶೇಷ ಘಟನೆಗಳಿಗೆ ಸಾಕ್ಷಿಯಾಯಿತು. ಅದರಲ್ಲಿ ವಿರಾಟ್ ಕೊಹ್ಲಿ (Virat Kohli) ಹಾಗೂ ನಾಯಕ ರೋಹಿತ್ ಶರ್ಮಾ ನಡುವೆ ಫೀಲ್ಡ್ನಲ್ಲಿ ನಡೆದ ಮಾತುಕತೆಯೂ ಒಂದು. ಮೈದಾನದಲ್ಲಿ ಪ್ಲೇಕ್ಷಕರಿಗೆ ಅನುಮತಿ ಇಲ್ಲದ ಕಾರಣ ಸ್ಟಂಪ್ ಮೈಕ್ನಲ್ಲಿ ಆಟಗಾರರು ಆಡುವ ಮಾತುಗಳು ಸ್ಪಷ್ಟವಾಗಿ ಕೇಳುತ್ತವೆ. ಮೊದಲ ಟಿ20 ಪಂದ್ಯದಲ್ಲಿ ಡಿಆರ್ಎಸ್ (DRS) ವಿಚಾರವಾಗಿ ರೋಹಿತ್– ಕೊಹ್ಲಿ ನಡುವಣ ಮಾತುಕತೆ ಕೂಡ ಸ್ಟಂಪ್ ಮೈಕ್ನಲ್ಲಿ ಸೆರೆಯಾಗಿದೆ. ಆದರೆ, ಈ ಬಾರಿ ಕೊಹ್ಲಿ ಮಾತು ಕೇಳಿ ರೋಹಿತ್ ತೆಗೆದುಕೊಂಡ ನಿರ್ಧಾರ ವಿಫಲವಾಯಿತು. ಅಷ್ಟಕ್ಕೂ ಏನಿದು ಘಟನೆ?, ಕೊಹ್ಲಿ ಅವರು ರೋಹಿತ್ಗೆ ಏನು ಹೇಳಿದರು? ಎಂಬ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಅದು ಪಂದ್ಯದ 8ನೇ ಓವರ್. ಕ್ರೀಸ್ನಲ್ಲಿ ವಿಂಡೀಸ್ ಬ್ಯಾಟರ್ ರಾಸ್ಟನ್ ಚೇಸ್ ಅವರಿದ್ದರು. ಇತ್ತ ಭಾರತ ಪರ ಪದಾರ್ಪಣೆ ಮಾಡಿದ ರವಿ ಬಿಷ್ಟೋಯ್ ಬೌಲಿಂಗ್ ಮಾಡಿದರು. ಇವರ ಗೂಗ್ಲಿ ಯನ್ನು ಸರಿಯಾಗಿ ಅರಿಯುವಲ್ಲಿ ವಿಫಲವಾದ ಚೇಸ್, ಚೆಂಡು ಅಂದುಕೊಂಡ ಮಟ್ಟಿಗೆ ಪಿಚ್ ಆಗದೆ, ಬ್ಯಾಟ್ ಬೀಸಿದರೂ ವಿಫಲವಾಗಿ ಲೆಗ್ ಸೈಡ್ನಿಂದ ವಿಕೆಟ್ ಕೀಪರ್ ಕೈಗೆ ಸೇರಿತು. ಬೌಲರ್ ಸೇರಿದಂತೆ ಭಾರತದ ಆಟಗಾರರು ಚೆಂಡು ಬ್ಯಾಟ್ಗೆ ತಾಗಿದೆ ಎಂದು ಬಾವಿಸಿ ಔಟ್ಗಾಗಿ ಮನವಿ ಮಾಡಿದರು. ಆದರೆ, ಅಂಪೈರ್ ಜಯರಾಮನ್ ವೈಡ್ ಸಿಗ್ನಲ್ ನೀಡಿದರು.
— Maqbool (@im_maqbool) February 16, 2022
ಆದರೆ, ಭಾರತಕ್ಕೆ ಇದು ಸಮಾಧಾನ ತರಲಿಲ್ಲ. ನಾಯಕ ರೋಹಿತ್ ಗೊಂದಲದಲ್ಲಿದ್ದರು. ಈ ಸಂದರ್ಭ ವಿರಾಟ್ ಕೊಹ್ಲಿ ಬಂದು, “ನನಗೆ ಎರಡು ಸೌಂಡ್ ಕೇಳಿಸಿದೆ. ನಾನು ಹೇಳುತ್ತಿದ್ದೇನೆ, ನೀನು ರಿವ್ಯೂ ತೆಗೆದುಕೊ”, ಎಂದು ರೋಹಿತ್ಗೆ ಹೇಳಿದರು. ಕೊಹ್ಲಿ ಮಾತಿನಂತೆ ರೋಹಿತ್ ರಿವ್ಯೂ ಕೇಳಿದ್ದಾರೆ. ಆದರೆ, ಥರ್ಡ್ ಅಂಪೈರ್ ವೀಕ್ಷಿಸಿದ ಬಳಿಕ ಚೆಂಡು ಬ್ಯಾಟ್ಗೆ ತಾಗಿರುವುದು ಗೋಚರಿಸಿಲ್ಲ. ಬ್ಯಾಟರ್ನ ಪ್ಯಾಡ್ಗೆ ಕೊಂಚ ತಗುಲಿ ಚೆಂಡು ಪಂತ್ ಕೈ ಸೇರಿತ್ತು. ಹೀಗಾಗಿ ನಾಟೌಟ್ ತೀರ್ಮಾನ ಪ್ರಕಟಿಸಲಾಯಿತು.
— Maqbool (@im_maqbool) February 16, 2022
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯವನ್ನು ಟೀಮ್ ಇಂಡಿಯಾ 6 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ನಿಕಲಸ್ ಪೂರನ್ 61, ನಾಯಕ ಪೊಲ್ಲಾರ್ಡ್ 24 ರನ್ ಹಾಗೂ ಮೇಯರ್ಸ್ 31 ರನ್ ಗಳಿಸಿ ಮಿಂಚಿದರು. ಭಾರತದ ಪರ ರವಿ ಬಿಷ್ಣೋಯ್, ಹರ್ಷಲ್ ಪಟೇಲ್ ತಲಾ 2ವಿಕೆಟ್ ಕಬಳಿಸಿದರು.
ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ರೋಹಿತ್-ಇಶಾನ್ ಕಿಶನ್ ಭರ್ಜರಿ ಆರಂಭ ಒದಗಿಸಿದರು. ಅದರಲ್ಲೂ ರೋಹಿತ್ ಶರ್ಮಾ ಹೊಡೆಬಡಿಯ ಆಟವಾಡಿ 19 ಎಸೆತಗಳಲ್ಲಿ 40 ರನ್ ಗಳಿಸಿದರು. ಇಶಾನ್ ಕಿಶನ್ 35 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 18 ಎಸೆತಗಳಲ್ಲಿ ಅಜೇಯ 34 ರನ್ ಗಳಿಸಿದರೆ, ವೆಂಕಟೇಶ್ ಅಯ್ಯರ್ 13 ಎಸೆತಗಳಲ್ಲಿ 24 ರನ್ ಗಳಿಸಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು. ಅಂತಿಮವಾಗಿ ಭಾರತ 18.5 ಓವರ್ ಗಳಲ್ಲಿ 4 ವಿಕೆಡಟ್ ನಷ್ಟಕ್ಕೆ 162 ರನ್ ಗಳಿಸಿ ಗೆಲುವಿನ ನಗೆ ಬೀರಿತು.
IND vs WI T20: ಪಂದ್ಯ ಮುಗಿದ ಬಳಿಕ ಇಶಾನ್ ಕಿಶನ್ಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಂಡ ರೋಹಿತ್ ಶರ್ಮಾ
Rohit Sharma: ರೋಚಕ ಗೆಲುವಿನ ಬಳಿಕ ರೋಹಿತ್ ಶರ್ಮಾ ಹೊಗಳಿದ್ದು ಮಾತ್ರ ಈ ಒಬ್ಬ ಆಟಗಾರನನ್ನು