ಇಂಗ್ಲೆಂಡ್ (England) ವಿರುದ್ಧದ ಟಿ20 ಸರಣಿ ಬಳಿಕ ಇದೀಗ ಏಕದಿನ ಸರಣಿಯಲ್ಲೂ ವಿರಾಟ್ ಕೊಹ್ಲಿ (Virat Kohli) ವೈಫಲ್ಯದಾಟ ಮುಂದುವರೆದಿದೆ. ಟೆಸ್ಟ್ನ ಎರಡು ಇನ್ನಿಂಗ್ಸ್ನಲ್ಲಿ 11 ಮತ್ತು 10 ರನ್ ಗಳಿಸಿ ಔಟಾಗಿದ್ದ ಕೊಹ್ಲಿ ಆಡಿದ ಎರಡು ಟಿ20 ಪಂದ್ಯಗಳಲ್ಲೂ 1 ಮತ್ತು 11 ರನ್ಗೆ ನಿರ್ಗಮಿಸಿದ್ದರು. ಇದೀಗ ಎರಡನೇ ಏಕದಿನ ಪಂದ್ಯದಲ್ಲೂ ಕೊಹ್ಲಿಯದ್ದು ಅದೇ ಆಟ ಮುಂದುವರೆದಿದೆ. ಗುರುವಾರ ನಡೆದ ಪಂದ್ಯದಲ್ಲಿ ಸಾಧಾರಣ ಮೊತ್ತವನ್ನು ಚೇಸ್ ಮಾಡಲಾಗದೆ ಭಾರತ (India) ಹೀನಾಯ ಸೋಲು ಕಂಡಿತು. ಒಂದು ಕಾಲದಲ್ಲಿ ಚೇಸಿಂಗ್ನಲ್ಲಿ ಮಾಸ್ಟರ್ ಆಗಿದ್ದ ಕೊಹ್ಲಿ ಆಡಲೇ ಬೇಕಾದ ಪಂದ್ಯದಲ್ಲಿ ಮತ್ತೆ ವಿಫಲರಾದರು. ಕೇವಲ 25 ಎಸೆತಗಳಲ್ಲಿ ಎದುರಿಸಿದ ಕೊಹ್ಲಿ ಗಳಿಸಿದ್ದು 16 ರನ್. ಕೊಹ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದ ನಂತರ ಅವರ ಮೇಲೆ ಟೀಕೆ ಮಾಡುವವರ ಸಂಖ್ಯೆ ಕೂಡ ಅಧಿಕವಾಗಿದೆ.
ವಿರಾಟ್ ಕೊಹ್ಲಿ ಕ್ರೀಸ್ಗೆ ಬಂದಾಗ ಭಾರತ 16 ರನ್ಗೆ 1 ವಿಕೆಟ್ ಕಳೆದುಕೊಂಡಿತ್ತು. ಆದರೆ, 11ನೇ ಓವರ್ ಆಗುವ ಹೊತ್ತಿಗೆ 29 ರನ್ಗೆ 3 ವಿಕೆಟ್ ಪತನಗೊಂಡವು. ಆರಂಭಿಕರು ಔಟಾದ ಬಳಿಕ ಎಚ್ಚರಿಕೆಯಿಂದ ಆಡಬೇಕಾದ ಕೊಹ್ಲಿ ಡೇವಿಡ್ ವಿಲ್ಲೆ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಕೊಹ್ಲಿ ಲೆಂತ್ ಬಾಲ್ ಅನ್ನು ಸರಿಯಾಗಿ ಅರಿಯುವಲ್ಲಿ ಮತ್ತೊಮ್ಮೆ ಎಡವಿದರು. ಕೊಹ್ಲಿ ಔಟಾದ ವಿಡಿಯೋ ವೈರಲ್ ಆಗುತ್ತಿದೆ.
This is some spell. Kohli departs…
Scorecard/clips: https://t.co/VpwTb5GMkV
??????? #ENGvIND ?? pic.twitter.com/E9eVd3AC9a
— England Cricket (@englandcricket) July 14, 2022
ಕೊಹ್ಲಿ ಬೆನ್ನಿಗೆ ನಿಂತ ರೋಹಿತ್:
ವಿರಾಟ್ ಕೊಹ್ಲಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೋಹಿತ್, “ಕೊಹ್ಲಿ ಅನೇಕ ಪಂದ್ಯಗಳನ್ನು ಆಡಿದ್ದಾರೆ. ಅನೇಕ ವರ್ಷಗಳಿಂದ ತಂಡಕ್ಕೆ ಕೊಡುಗೆ ನೀಡಿದ್ದಾರೆ. ಅಂಥಹ ಅದ್ಭುತ ಬ್ಯಾಟರ್ಗೆ ಯಾವುದೇ ಆಶ್ವಾಸನೆಯ ಅಗತ್ಯವಿಲ್ಲ. ಇದೇ ವಿಚಾರವನ್ನು ನಾನು ಕಳೆದ ಸುದ್ದಿಗೋಷ್ಠಿಯಲ್ಲೂ ಹೇಳಿದ್ದೆ. ಆಟಗಾರನ ಕ್ರಿಕೆಟ್ ಜೀವನದಲ್ಲಿ ಏಳು-ಬೀಳು ಇರುವುದು ಸಾಮಾನ್ಯ. ಅದು ಆಟದ ಒಂದು ಭಾಗ. ಕೊಹ್ಲಿಗೆ ಕಮ್ಬ್ಯಾಕ್ ಮಾಡಲು ಒಂದು ಅಥವಾ ಎರಡು ಪಂದ್ಯಗಳು ಬೇಕಷ್ಟೆ,” ಎಂದು ಹೇಳಿದರು.
ಭಾರತ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಇಂಗ್ಲೆಂಡ್ ಊಹಿಸಲಾಗದ ರೀತಿಯಲ್ಲಿ ಕಮ್ಬ್ಯಾಕ್ ಮಾಡಿದೆ. ದ್ವಿತೀಯ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಮಿಂಚಿದ ಆಂಗ್ಲರು ಬರೋಬ್ಬರಿ 100 ರನ್ಗಳ ಜಯ ತನ್ನದಾಗಿಸಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಜೇಸನ್ ರಾಯ್(23) ಹಾಗೂ ಜಾನಿ ಬೈರ್ಸ್ಟೋವ್(38) ಉಪಯುಕ್ತ ರನ್‌ಗಳಿಸಿದರು. ನಂತರ ದಿಢೀರ್ ಕುಸಿತ ಕಂಡರೂ ಲಿವಿಂಗ್‌ಸ್ಟೋನ್(33), ಮೊಯಿನ್ ಅಲಿ(47) ಹಾಗೂ ಡೇವಿಡ್ ವಿಲ್ಲಿ(41) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ 246 ರನ್ ಗಳಿಸಿತು.
ಟಾರ್ಗೆಟ್ ಬೆನ್ನತ್ತಿದ ಭಾರತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ 27 ರನ್, ಹಾರ್ದಿಕ್ ಪಾಂಡ್ಯ 29 ರನ್, ರವೀಂದ್ರ ಜಡೇಜಾ 29 ರನ್ ಹಾಗೂ ಮೊಹಮ್ಮದ್ ಶಮಿ 23 ರನ್ ಗಳಿಸಿದ್ದೇ ಹೆಚ್ಚು. ಭಾರತ 38.5 ಓವರ್ನಲ್ಲಿ 146 ರನ್ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ರೀಸ್ ಟೋಪ್ಲೆ 9.5 ಓವರ್ ಬೌಲಿಂಗ್ ಮಾಡಿ 24 ರನ್ ನೀಡಿ 6 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಬಾಜಿಕೊಂಡರು.
Published On - 11:07 am, Fri, 15 July 22