AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: ಹೀನಾಯ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಕ್ಕೆ ಮತ್ತೊಂದು ದೊಡ್ಡ ಶಾಕ್: ಏನದು?

IND vs ENG 2nd ODI: ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಹೀನಾಯವಾಗಿ ಸೋತ ಬೆನ್ನಲ್ಲೇ ಭಾರತ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ನಾಯಕ ರೋಹಿತ್ ಶರ್ಮಾ ಇಂಜುರಿಗೆ ತುತ್ತಾಗಿದ್ದು ಮೊಣಕೈಗೆ ಗಾಯ ಮಾಡಿಕೊಂಡಿದ್ದಾರೆ.

Rohit Sharma: ಹೀನಾಯ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಕ್ಕೆ ಮತ್ತೊಂದು ದೊಡ್ಡ ಶಾಕ್: ಏನದು?
Rohit Sharma IND vs ENG 2nd ODI
TV9 Web
| Updated By: Vinay Bhat|

Updated on:Jul 15, 2022 | 8:19 AM

Share

ಲಂಡನ್​ನ ಪ್ರತಿಷ್ಠಿತ ಲಾರ್ಡ್ಸ್​ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಆಂಗ್ಲರ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಲು ವಿಫಲವಾದ ಟೀಮ್ ಇಂಡಿಯಾ (Team India) 100 ರನ್​ಗಳ ಅಂತರದಿಂದ ಸೋಲುಂಡಿತು. ಬ್ಯಾಟರ್​​ಗಳ ವೈಫಲ್ಯ ಈ ಸೋಲಿಗೆ ಮುಖ್ಯ ಕಾರಣ. ಬೌಲರ್​ಗಳು ತಕ್ಕಮಟ್ಟಿಗೆ ಆಂಗ್ಲರನ್ನು ಕಟ್ಟಿ ಹಾಕಿದರೂ ಬ್ಯಾಟರ್​​ಗಳು ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ. ಒಬ್ಬರ ಹಿಂದೆ ಒಬ್ಬರಂತೆ ಟೀಮ್ ಇಂಡಿಯಾ ಬ್ಯಾಟರ್​ಗಳು ಪೆವಿಲಿಯನ್ ಸೇರಿಕೊಂಡರು. ಅದರಲ್ಲೂ ನಾಯಕ ರೋಹಿತ್ ಶರ್ಮಾ ಹಾಗೂ ರಿಷಭ್ ಪಂತ್ (Rishabh Pant) ಶೂನ್ಯಕ್ಕೆ ಔಟಾಗಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಈ ಸೋಲಿನ ಬೆನ್ನಲ್ಲೇ ಭಾರತ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಇಂಜುರಿಗೆ ತುತ್ತಾಗಿದ್ದು ಮೊಣಕೈಗೆ ಗಾಯ ಮಾಡಿಕೊಂಡಿದ್ದಾರೆ.

ಹೌದು, ಇಂಗ್ಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರೋಹಿತ್ ಶರ್ಮಾ ಚೆಂಡು ಹಿಡಿಯಲು ಹೋಗಿ ಗಾಯಕ್ಕೆ ತುತ್ತಾದರು. ಕವರ್ಸ್​ನಲ್ಲಿ ಫೀಲ್ಡಿಂಗ್ ನಿಂತಿದ್ದ ರೋಹಿತ್ ಚೆಂಡು ಹಿಡಿಯಲು ಮುಂದಾದರು. ಆದರೆ, ಅದು ಅವರು ಅಂದುಕೊಂಡ ರೀತಿ ಬರದೆ ಬೌನ್ಸ್ ಆಯಿತು. ಬಾಲ್ ಮೊಣಕೈಗೆ ಬಡಿದಿದ್ದರಿಂದ ನೋವು ತಾಳಲಾರದೆ ಒಂದು ಕ್ಷಣ ರೋಹಿತ್ ಕೈಯನ್ನು ಜೋರಾಗಿ ಹಿಡಿದುಕೊಂಡರು. ಹೀಗಿದ್ದರೂ ರೋಹಿತ್ ಫೀಲ್ಡಿಂಗ್ ಮುಂದುವರೆಸಿದ್ದಾರೆ. ಅಲ್ಲದೆ ನಂತರ ಬ್ಯಾಟಿಂಗ್ ಕೂಡ ಮಾಡಿದ್ದಾರೆ. ಹೀಗಾಗಿ ಗಾಯದ ಪ್ರಮಾಣ ಹೇಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ
Image
IND vs ENG: ರೀಸ್ ಟೋಪ್ಲೆ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಭಾರತ: ಇಂಗ್ಲೆಂಡ್​​ಗೆ 100 ರನ್​ಗಳ ಜಯ
Image
ಬಾಲಿವುಡ್ ನಟಿ ಸುಶ್ಮಿತಾ ಸೇನ್‌ ಜೊತೆ ಲಲಿತ್ ಮೋದಿ ಡೇಟಿಂಗ್
Image
India T20 Squad: ಟೀಮ್ ಇಂಡಿಯಾದಲ್ಲಿ 11 ಬೌಲರ್​ಗಳು, 4 ವಿಕೆಟ್​ ಕೀಪರ್​ಗಳು..!
Image
India vs England 2nd ODI Playing 11: ಕೊನೆ ಗಳಿಗೆಯಲ್ಲಿ ಕೊಹ್ಲಿಗೆ ಸ್ಥಾನ; ಭಾರತ ಬೌಲಿಂಗ್, ಹೀಗಿದೆ ಪ್ಲೇಯಿಂಗ್ XI

ಈಗಾಗಲೇ ರೋಹಿತ್ ಶರ್ಮಾ ಇಂಜುರಿಯಿಂದಾಗಿ ಅನೇಕ ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. ಇತ್ತೀಚೆಗಷ್ಟೆ ಕೋವಿಡ್ ಪಾಸಿಟಿವ್ ಬಂದಿದ್ದ ಕಾರಣ ಇಂಗ್ಲೆಂಡ್ ವಿರುದ್ಧ ಬಾಕಿ ಉಳಿದಿದ್ದ ಒಂದು ಟೆಸ್ಟ್​ ಪಂದ್ಯದಲ್ಲಿ ಆಡಿರಲಿಲ್ಲ. ಈ ಪಂದ್ಯ ಡ್ರಾ ಆಗಿತ್ತು. ಸದ್ಯ ರೋಹಿತ್ ಮತ್ತೊಮ್ಮೆ ಇಂಜುರಿಗೆ ತುತ್ತಾದರೆ ಅಂತಿಮ ನಿರ್ಣಾಯಕ ಏಕದಿನ ಪಂದ್ಯದಿಂದ ಹೊರಗುಳಿಯಬಹುದು. ಹೀಗಾದಲ್ಲಿ ರಿಷಭ್ ಪಂತ್ ನಾಯಕತ್ವದ ಜವಾಬ್ದಾರಿ ಹೊರುವ ಸಾಧ್ಯತೆ ಇದೆ.

ಇಂಗ್ಲೆಂಡ್ ಭರ್ಜರಿ ಕಮ್​ಬ್ಯಾಕ್:

ಭಾರತ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಇಂಗ್ಲೆಂಡ್ ಊಹಿಸಲಾಗದ ರೀತಿಯಲ್ಲಿ ಕಮ್​ಬ್ಯಾಕ್ ಮಾಡಿದೆ. ಲಂಡನ್​ನ ಲಾರ್ಡ್ಸ್​ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಮಿಂಚಿದ ಆಂಗ್ಲರು ಬರೋಬ್ಬರಿ 100 ರನ್​ಗಳ ಜಯ ತನ್ನದಾಗಿಸಿದೆ. ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್ ಪರ ಜೇಸನ್‌ ರಾಯ್‌(23) ಹಾಗೂ ಜಾನಿ ಬೈರ್ಸ್ಟೋವ್‌(38) ಉಪಯುಕ್ತ ರನ್‌ಗಳಿಸಿದರು. ನಂತರ ದಿಢೀರ್ ಕುಸಿತ ಕಂಡರೂ ಲಿವಿಂಗ್‌ಸ್ಟೋನ್‌(33), ಮೊಯಿನ್‌ ಅಲಿ(47) ಹಾಗೂ ಡೇವಿಡ್‌ ವಿಲ್ಲಿ(41) ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಇಂಗ್ಲೆಂಡ್‌ 246 ರನ್‌ ಗಳಿಸಿತು.

ಟಾರ್ಗೆಟ್‌ ಬೆನ್ನತ್ತಿದ ಭಾರತ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿತು. ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ 27 ರನ್, ಹಾರ್ದಿಕ್‌ ಪಾಂಡ್ಯ 29 ರನ್, ರವೀಂದ್ರ ಜಡೇಜಾ 29 ರನ್ ಹಾಗೂ ಮೊಹಮ್ಮದ್ ಶಮಿ 23 ರನ್ ಗಳಿಸಿದ್ದೇ ಹೆಚ್ಚು. ಭಾರತ 38.5 ಓವರ್​ನಲ್ಲಿ 146 ರನ್​ಗೆ ಆಲೌಟ್ ಆಯಿತು. ಇಂಗ್ಲೆಂಡ್‌ ಪರ ರೀಸ್ ಟೋಪ್ಲೆ 9.5 ಓವರ್ ಬೌಲಿಂಗ್ ಮಾಡಿ 24 ರನ್ ನೀಡಿ 6 ವಿಕೆಟ್ ಕಿತ್ತು ಮಿಂಚಿದರು.

Published On - 8:19 am, Fri, 15 July 22