IND vs ENG: ರೀಸ್ ಟೋಪ್ಲೆ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಭಾರತ: ಇಂಗ್ಲೆಂಡ್​​ಗೆ 100 ರನ್​ಗಳ ಜಯ

Reece Topley, ENG vs IND: ಲಂಡನ್​ನ ಲಾರ್ಡ್ಸ್​ ಕ್ರೀಡಾಂಗಣದಲ್ಲಿ ನಡೆದ ಭಾರತ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಮಿಂಚಿದ ಆಂಗ್ಲರು ಬರೋಬ್ಬರಿ 100 ರನ್​ಗಳ ಜಯ ತನ್ನದಾಗಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿ 1-1 ಅಂತರದ ಸಮಬಲ ಸಾಧಿಸಿದೆ.

IND vs ENG: ರೀಸ್ ಟೋಪ್ಲೆ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಭಾರತ: ಇಂಗ್ಲೆಂಡ್​​ಗೆ 100 ರನ್​ಗಳ ಜಯ
IND vs ENG 2nd ODI
Follow us
TV9 Web
| Updated By: Vinay Bhat

Updated on:Jul 15, 2022 | 7:22 AM

ಭಾರತ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಇಂಗ್ಲೆಂಡ್ (India vs England) ಊಹಿಸಲಾಗದ ರೀತಿಯಲ್ಲಿ ಕಮ್​ಬ್ಯಾಕ್ ಮಾಡಿದೆ. ಲಂಡನ್​ನ ಲಾರ್ಡ್ಸ್​ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಮಿಂಚಿದ ಆಂಗ್ಲರು ಬರೋಬ್ಬರಿ 100 ರನ್​ಗಳ ಜಯ ತನ್ನದಾಗಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿ 1-1 ಅಂತರದ ಸಮಬಲ ಸಾಧಿಸಿದೆ. ರೀಸ್ ಟೋಪ್ಲೆ (Reece Topley) ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಟೀಮ್ ಇಂಡಿಯಾ 247 ರನ್​ಗಳ ಟಾರ್ಗೆಟ್ ತಲುಪಲು ಸಾಧ್ಯವಾಗದೆ ಕೇವಲ 146 ರನ್​ಗೆ ಸರ್ವಪತನ ಕಂಡಿತು. ತಂಡದ ಯಾವೊಬ್ಬ ಬ್ಯಾಟರ್ ಕ್ರೀಸ್​​ ಕಚ್ಚಿ ನಿಲ್ಲಲಿಲ್ಲ. ಸ್ವತಃ ನಾಯಕ ರೋಹಿತ್ ಶರ್ಮಾ (Rohit Sharma) ಅವರೇ ಸೊನ್ನೆ ಸುತ್ತಿದ್ದು ತಂಡಕ್ಕೆ ಪ್ರಮುಖ ಹಿನ್ನಡೆಯಾಯಿತು. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಭಾರತ ಈ ರೀತಿ ಕುಸಿತ ಕಂಡಿರುವುದು ದೊಡ್ಡ ಆಘಾತವಾಗಿದೆ.

ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ ಪರ ಓಪನರ್​ಗಳಾಗಿ ಕಣಕ್ಕಿಳಿದ ಜೇಸನ್ ರಾಯ್ ಮತ್ತು ಜಾನಿ ಬೈರ್​​ಸ್ಟೋ ನಿಧಾನಗತಿಯಿಂದ ಇನ್ನಿಂಗ್ಸ್​ ಆರಂಭಿಸಿದರು. ಆದರೆ, ಇದು ಹೆಚ್ಚುಹೊತ್ತು ನಡೆಯಲಿಲ್ಲ. 33 ಎಸೆತಗಳಲ್ಲಿ 23 ರನ್ ಗಳಿಸಿ ರಾಯ್ ಔಟಾದರು. ನಂತರ ಜೋ ರೂಟ್ ಹಾಗೂ ಜಾನಿ ಒಂದಿಷ್ಟು ರನ್ ಕಲೆಹಾಕಿದರು. ಆದರೆ, 72-102 ರನ್​ಗಳ ಅಂತರದಲ್ಲಿ ಇಂಗ್ಲೆಂಡ್ ಮುಖ್ಯ 4 ವಿಕೆಟ್ ಕಳೆದುಕೊಂಡಿತು.

ಬೈರ್​​ಸ್ಟೋ 38 ರನ್ ಗಳಿಸಿದ್ದಾಗ ಚಹಲ್ ಬೌಲಿಂಗ್​ನಲ್ಲಿ ಬೌಲ್ಡ್ ಆದರೆ, ರೂಟ್ 11 ರನ್​ಗೆ ಬ್ಯಾಟ್ ಕೆಳಗಿಟ್ಟರು. ನಾಯಕ ಜೋಸ್ ಬಟ್ಲರ್ (4) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಬೆನ್ ಸ್ಟೋಕ್ಸ್​ 21 ರನ್​ಗೆ ಸುಸ್ತಾದರು. ಈ ಸಂದರ್ಭ ಕ್ರೀಸ್​ಗೆ ಬಂದ ಲಿಯಾಮ್ ಲಿವಿಂಗ್​ಸ್ಟೋನ್ 33 ರನ್​ಗಳ ಕಾಣಿಕೆ ನೀಡಿದರು. ನಂತರ ಮೊಯೀನ್ ಅಲಿ ಹಾಗೂ ಡೇವಿಡ್ ವಿಲ್ಲೆ ತಂಡದ ರನ್ ಗತಿಯನ್ನು ಏರಿಸಿ ಮೊತ್ತವನ್ನು 200ರ ಗಡಿ ದಾಟಿಸಿದರು. ಅಲಿ 47 ರನ್ ಹಾಗೂ ವಿಲ್ಲೆ 41 ರನ್ ಬಾರಿಸಿದರು. ಆದರೂ ಇಂಗ್ಲೆಂಡ್ 49 ಓವರ್​ನಲ್ಲಿ 246 ರನ್​ಗೆ ಆಲೌಟ್ ಆಯಿತು. ಭಾರತ ಪರ ಚಹಲ್ 4 ವಿಕೆಟ್ ಕಿತ್ತರೆ ಬುಮ್ರಾ ಮತ್ತು ಪಾಂಡ್ಯ ತಲಾ 2 ವಿಕೆಟ್ ಪಡೆದರು.

ಇದನ್ನೂ ಓದಿ
Image
ಬಾಲಿವುಡ್ ನಟಿ ಸುಶ್ಮಿತಾ ಸೇನ್‌ ಜೊತೆ ಲಲಿತ್ ಮೋದಿ ಡೇಟಿಂಗ್
Image
India T20 Squad: ಟೀಮ್ ಇಂಡಿಯಾದಲ್ಲಿ 11 ಬೌಲರ್​ಗಳು, 4 ವಿಕೆಟ್​ ಕೀಪರ್​ಗಳು..!
Image
India vs England 2nd ODI Playing 11: ಕೊನೆ ಗಳಿಗೆಯಲ್ಲಿ ಕೊಹ್ಲಿಗೆ ಸ್ಥಾನ; ಭಾರತ ಬೌಲಿಂಗ್, ಹೀಗಿದೆ ಪ್ಲೇಯಿಂಗ್ XI
Image
India vs England, 2nd ODI, Highlights: ಭಾರತದ ಕಳಪೆ ಬ್ಯಾಟಿಂಗ್; 2ನೇ ಏಕದಿನ ಪಂದ್ಯ ಗೆದ್ದ ಇಂಗ್ಲೆಂಡ್

ಇಂಗ್ಲೆಂಡ್‌ ನೀಡಿದ 247 ರನ್‌ಗಳ ಸಾಧಾರಣ ಟಾರ್ಗೆಟ್‌ ಬೆನ್ನತ್ತಿದ ಭಾರತ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿತು. ಆಂಗ್ಲರ ಆಕ್ರಮಣಕಾರಿ ಬೌಲಿಂಗ್‌ ದಾಳಿಗೆ ತತ್ತರಿಸಿದ ಭಾರತ 146ಕ್ಕೆ ಸರ್ವಪತನ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮ(0) ಹಾಗೂ ಧವನ್‌(9) ಬಹುಬೇಗನೆ ವಿಕೆಟ್‌ ಒಪ್ಪಿಸಿದರು. ಇಂಜುರಿಯಿಂದ ಗುಣಮುಖರಾಗಿ ಬಂದ ವಿರಾಟ್‌ ಕೊಹ್ಲಿ ಆಟ 16 ರನ್​ಗೆ ಅಂತ್ಯವಾಯಿತು. ರಿಷಬ್‌ ಪಂತ್ ಕೂಡ ಸೊನ್ನೆ ಸುತ್ತಿದರು.

ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ (27), ಹಾರ್ದಿಕ್‌ ಪಾಂಡ್ಯ (29), ರವೀಂದ್ರ ಜಡೇಜಾ (29) ಹಾಗೂ ಮೊಹಮ್ಮದ್ ಶಮಿ (23) ಗೆಲುವಿಗೆ ಹೋರಾಟ ನಡೆಸಿದರೂ ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ 38.5 ಓವರ್​ನಲ್ಲಿ 146 ರನ್​ಗೆ ಆಲೌಟ್ ಆಯಿತು. ಇಂಗ್ಲೆಂಡ್‌ ಪರ ರೀಸ್ ಟೋಪ್ಲೆ 9.5 ಓವರ್ ಬೌಲಿಂಗ್ ಮಾಡಿ 24 ರನ್ ನೀಡಿ 6 ವಿಕೆಟ್ ಕಿತ್ತರು. ಡೇವಿಡ್‌ ವಿಲ್ಲಿ, ಕಾರ್ಸ್‌, ಮೊಯಿನ್‌ ಹಾಗೂ ಲಿವಿಂಗ್‌ಸ್ಟೋನ್‌ ತಲಾ 1 ವಿಕೆಟ್‌ ತಮ್ಮದಾಗಿಸಿದರು.

Published On - 7:22 am, Fri, 15 July 22

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ