Virat Kohli or Rohit Sharma: ವಿರಾಟ್ ಅಥವಾ ರೋಹಿತ್…ಯಾರು ಬೆಸ್ಟ್​ ಎಂದು ಉತ್ತರಿಸಿದ ಪಾಕ್ ಕ್ರಿಕೆಟಿಗ

Virat Kohli or Rohit Sharma: ಪ್ರಸ್ತುತ ಸನ್ನಿವೇಶದಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಅವರು 2019 ರ ಬಳಿಕ ಒಂದೇ ಒಂದು ಶತಕ ಬಾರಿಸಿಲ್ಲ. ಇತ್ತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಲು ಮುಂದಾದರೂ ಮೂರಂಕಿ ಮೊತ್ತವಾಗಿಸಲು ಎಡವುತ್ತಿದ್ದಾರೆ.

Virat Kohli or Rohit Sharma: ವಿರಾಟ್ ಅಥವಾ ರೋಹಿತ್...ಯಾರು ಬೆಸ್ಟ್​ ಎಂದು ಉತ್ತರಿಸಿದ ಪಾಕ್ ಕ್ರಿಕೆಟಿಗ
Virat Kohli - Rohit Sharma
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 14, 2022 | 1:30 PM

ಟೀಮ್ ಇಂಡಿಯಾದ (Team India) ನಾಯಕ ಹಾಗೂ ಮಾಜಿ ನಾಯಕರಾಗಿ ಗುರುತಿಸಿಕೊಂಡಿರುವ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ನಡುವೆ ಆಗಾಗ್ಗೆ ಹೋಲಿಕೆಗಳು ನಡೆಯುತ್ತಿರುತ್ತವೆ. ಅದರಲ್ಲೂ ಕೆಲ ವಿದೇಶಿ ಆಟಗಾರರೇ ಈ ಇಬ್ಬರಿಗೂ ಅಭಿಮಾನಿಗಳಾಗಿ ಬದಲಾಗಿದ್ದಾರೆ. ಅಂತಹ ಅಭಿಮಾನಿಗಳಲ್ಲಿ ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ಕೂಡ ಒಬ್ಬರು. ಆದರೆ ಇಮಾಮ್ ಹಕ್ ಟೀಮ್ ಇಂಡಿಯಾದ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಶ್ರೇಷ್ಠ ಕ್ರಿಕೆಟಿಗ ಎಂದು ಆಯ್ಕೆ ಮಾಡಿದ್ದಾರೆ. ಪಾಕಿಸ್ತಾನಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಇಮಾಮ್, ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವಿನ ವ್ಯತ್ಯಾಸವನ್ನೂ ಹೇಳಿದರು. ಅಲ್ಲದೆ ತಮ್ಮ ಫೇವರೇಟ್ ಯಾರೆಂಬುದನ್ನು ಕೂಡ ಬಹಿರಂಗಪಡಿಸಿದ್ದಾರೆ.

ಟೀಮ್ ಇಂಡಿಯಾದ ಇಬ್ಬರು ಶ್ರೇಷ್ಠ ಆಟಗಾರರ ಬಗ್ಗೆ ಮಾತನಾಡಿದ ಇಮಾಮ್-ಉಲ್-ಹಕ್, ‘ರೋಹಿತ್ ಶರ್ಮಾ ಅವರಲ್ಲಿರುವ ಪ್ರತಿಭೆ ವಿರಾಟ್ ಕೊಹ್ಲಿಯಲ್ಲಿಲ್ಲ ಎಂದು ನಾನು ಭಾವಿಸುತ್ತೇನೆ. ಇಬ್ಬರೂ ಆಡುವುದನ್ನು ನಾನು ನೋಡಿದ್ದೇನೆ. ರೋಹಿತ್ ಶರ್ಮಾ ರೀಪ್ಲೇಗಳಲ್ಲಿ ಬ್ಯಾಟಿಂಗ್ ಮಾಡುತ್ತಿರುತ್ತಾರೆ ಎಂದೆನಿಸುತ್ತದೆ. ಅಂದರೆ ಚೆಂಡನ್ನು ಆಡಲು ಅವರು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಹಿಟ್​ಮ್ಯಾನ್ ಬ್ಯಾಟಿಂಗ್ ಮಾಡುವ ರೀತಿ ನೋಡಿಯೇ ನನಗೆ ಮೊದಲ ಬಾರಿಗೆ ಟೈಮಿಂಗ್ ಎಂದರೆ ಏನು ಎಂಬುದರ ಅರಿವಾಯಿತು ಎಂದು ಇಮಾಮ್ ಉಲ್ ಹಕ್ ಹೇಳಿದ್ದಾರೆ.

ಇನ್ನು ನಾನು ವಿರಾಟ್ ಕೊಹ್ಲಿ ಆಡುವುದನ್ನು ಕೂಡ ನಾನು ಹತ್ತಿರದಿಂದಲೇ ನೋಡಿದ್ದೇನೆ. ಆದರೆ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಶೈಲಿ​​ ದೇವರಿಂದ ಸಿಕ್ಕ ವಿಶೇಷ ಉಡುಗೊರೆ ಎಂದು ಭಾವಿಸುತ್ತೇನೆ. ಅವರು ಸೆಕೆಂಡ್‌ಗಳಲ್ಲಿ ಶಾಟ್​​ಗಳನ್ನು ಬದಲಾಯಿಸಬಲ್ಲ ಆಟಗಾರ. ರೋಹಿತ್ ಶರ್ಮಾ ಕ್ರೀಸ್‌ನಲ್ಲಿ ನೆಲೆಯೂರಿದಾಗ, ಅವರು ತಮ್ಮದೇ ಆದ ಇಚ್ಛೆಯ ಬಿಗ್ ಶಾಟ್​ಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿರುತ್ತಾರೆ. ಹೀಗಾಗಿ ನನ್ನ ಪ್ರಕಾರ ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಅವರೇ ಬೆಸ್ಟ್ ಎಂದಿದ್ದಾರೆ ಪಾಕ್ ಕ್ರಿಕೆಟಿಗ ಇಮಾಮ್ ಉಲ್ ಹಕ್.

ಇದನ್ನೂ ಓದಿ
Image
Virat Kohli: ವಿರಾಟ್ ಕೊಹ್ಲಿಯ ಫಾರ್ಮ್​ ಬಗ್ಗೆ ಟೀಕೆ ಮಾಡುವ ಮುನ್ನ ಈ ಅಂಕಿ ಅಂಶಗಳನ್ನೊಮ್ಮೆ ನೋಡಿ..!
Image
Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!
Image
Cricket Records: ಕ್ರಿಕೆಟ್ ಇತಿಹಾಸದ ಈ ಅದ್ಭುತ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ!
Image
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!

ಪ್ರಸ್ತುತ ಸನ್ನಿವೇಶದಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಅವರು 2019 ರ ಬಳಿಕ ಒಂದೇ ಒಂದು ಶತಕ ಬಾರಿಸಿಲ್ಲ. ಇತ್ತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಲು ಮುಂದಾದರೂ ಮೂರಂಕಿ ಮೊತ್ತವಾಗಿಸಲು ಎಡವುತ್ತಿದ್ದಾರೆ. ಇನ್ನೊಂದೆಡೆ ಇಂಗ್ಲೆಂಡ್​ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಬಾರಿಸುವ ಮೂಲಕ ರೋಹಿತ್ ಶರ್ಮಾ ಇದೀಗ ಫಾರ್ಮ್​ಗೆ ಮರಳಿರುವುದನ್ನು ಖಚಿತಪಡಿಸಿದ್ದಾರೆ. ಇತ್ತ ವಿರಾಟ್ ಕೊಹ್ಲಿ ಮುಂಬರುವ ಸರಣಿಗಳ ಮೂಲಕ ಫಾರ್ಮ್​​ಗೆ ಮರಳದಿದ್ದರೆ ಟಿ20 ವಿಶ್ವಕಪ್​ ತಂಡದಿಂದ ಹೊರಬೀಳುವ ಸಾಧ್ಯತೆಯಿದೆ.

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ