IND vs SA 1st Test: 7ನೇ ಬಾರಿಗೆ ಒಂದು ವರ್ಷದಲ್ಲಿ 2,000 ರನ್: ವಿರಾಟ್ ಕೊಹ್ಲಿಯಿಂದ ವಿಶ್ವದಾಖಲೆ
Virat Kohli 2000 runs Record: ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ಗೆ ಮೊದಲು, 2023 ರಲ್ಲಿ ವಿರಾಟ್ ಕೊಹ್ಲಿಗೆ (1934) 2000 ರನ್‌ಗಳನ್ನು ಪೂರ್ಣಗೊಳಿಸಲು 66 ರನ್‌ಗಳ ಅಗತ್ಯವಿತ್ತು. ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿ 28 ರನ್‌ಗಳನ್ನು ತಲುಪಿದ ತಕ್ಷಣ, ಆಧುನಿಕ-ದಿನದ ಶ್ರೇಷ್ಠ ಬ್ಯಾಟರ್ ಎನಿಸಿಕೊಂಡರು.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಗುರುವಾರ (ಡಿಸೆಂಬರ್ 28) ಮತ್ತೊಂದು ಬೃಹತ್ ದಾಖಲೆ ನಿರ್ಮಿಸಿದ್ದಾರೆ. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಮಹೇಲಾ ಜಯವರ್ಧನೆ, ಕುಮಾರ್ ಸಂಗಕ್ಕಾರ ಮತ್ತು ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಿ ನೂತನ ಸಾಧನೆ ಮಾಡಿದ್ದಾರೆ. ಇದೀಗ ವಿರಾಟ್ ಕೊಹ್ಲಿ ದಾಖಲೆಯ ಏಳನೇ ಬಾರಿಗೆ ಕ್ಯಾಲೆಂಡರ್ ವರ್ಷದಲ್ಲಿ 2000+ ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ಗೆ ಮೊದಲು, 2023 ರಲ್ಲಿ ವಿರಾಟ್ ಕೊಹ್ಲಿಗೆ (1934) 2000 ರನ್‌ಗಳನ್ನು ಪೂರ್ಣಗೊಳಿಸಲು 66 ರನ್‌ಗಳ ಅಗತ್ಯವಿತ್ತು. ಬಲಗೈ ಬ್ಯಾಟರ್ ಮೊದಲ ಇನ್ನಿಂಗ್ಸ್‌ನಲ್ಲಿ 38 ರನ್ ಗಳಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ 28 ರನ್‌ಗಳನ್ನು ತಲುಪಿದ ತಕ್ಷಣ, ಆಧುನಿಕ-ದಿನದ ಶ್ರೇಷ್ಠ ಬ್ಯಾಟರ್ ಎನಿಸಿಕೊಂಡರು.
ಒಂದು ವರ್ಷದಲ್ಲಿ 2000+ ರನ್‌ಗಳೊಂದಿಗೆ ಬ್ಯಾಟರ್‌ಗಳು:
- ವಿರಾಟ್ ಕೊಹ್ಲಿ – 7*
- ಕುಮಾರ ಸಂಗಕ್ಕಾರ – 6
- ಮಹೇಲಾ ಜಯವರ್ಧನೆ – 5
- ಸಚಿನ್ ತೆಂಡೂಲ್ಕರ್ – 5
- ಜಾಕ್ವೆಸ್ ಕಾಲಿಸ್ – 4
- ಮ್ಯಾಥ್ಯೂ ಹೇಡನ್ – 4
- ರಿಕಿ ಪಾಂಟಿಂಗ್ – 4
- ಸೌರವ್ ಗಂಗೂಲಿ – 4
2012 ರ ಕ್ಯಾಲೆಂಡರ್ ವರ್ಷದಲ್ಲಿ 2000 ಅಂತರರಾಷ್ಟ್ರೀಯ ರನ್ ಪೂರೈಸಿದ ಸಾಧನೆಯನ್ನು ಕೊಹ್ಲಿ ಮೊದಲ ಬಾರಿಗೆ ಮಾಡಿದ್ದರು. ಈ ಸಾಧನೆ ಮಾಡಿದ ಆರನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಇದೀಗ ಭಾರತದ ಮಾಜಿ ನಾಯಕ 2023 ರಲ್ಲಿ ಇದೇ ಮೈಲಿಗಲ್ಲನ್ನು ಸಾಧಿಸುವ ಮೊದಲು 2012, 2015, 2016, 2017 ಮತ್ತು 2019 ರಲ್ಲಿ ಐದು ಬಾರಿ ಈ ಸಾಧನೆ ಗೈದಿದ್ದರು.
The first player to cross 2⃣0⃣0⃣0⃣ International runs in 7⃣ different calendar years 👑@imVkohli, a class apart! 🙌#PlayBold #SAvIND #TeamIndia #ViratKohli pic.twitter.com/09DWp4yP8z
— Royal Challengers Bangalore (@RCBTweets) December 28, 2023
2017 ರಲ್ಲಿ 46 ಪಂದ್ಯಗಳಲ್ಲಿ 68.73 ಸರಾಸರಿಯಲ್ಲಿ 11 ಶತಕಗಳು ಮತ್ತು 10 ಅರ್ಧ ಶತಕಗಳನ್ನು ಒಳಗೊಂಡಂತೆ 2818 ರನ್‌ಗಳನ್ನು ಕಲೆಹಾಕಿ ವಿರಾಟ್ ಕೊಹ್ಲಿ ಪ್ರಸ್ತುತ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿದ ಭಾರತೀಯ ಎಂಬ ದಾಖಲೆಯನ್ನು ಹೊಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ