Happy Birthday Virat Kohli: ಕಿಂಗ್ ಕೊಹ್ಲಿಗೆ ಹುಟ್ಟುಹಬ್ಬದ ಸಂಭ್ರಮ: 33ನೇ ವಸಂತಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ನಾಯಕ ವಿರಾಟ್​

Virat Kohli Birthday: ನವೆಂಬರ್ 5, 1988 ರಂದು ನವದೆಹಲಿಯಲ್ಲಿ ಜನಿಸಿದ ವಿರಾಟ್ ಕೊಹ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಠಿಣ ಪರಿಶ್ರಮ, ಕೆಚ್ಚೆದೆಯ ನಡೆ ಅವರನ್ನು ವಿಶ್ವದ ಅತ್ಯುತ್ತಮ ಬ್ಯಾಟರ್​ಗಳ  ಸಾಲಿನಲ್ಲಿ ತಂದು ನಿಲ್ಲಿಸಿದೆ. ಕಿಂಗ್ ಕೊಹ್ಲಿ ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Happy Birthday Virat Kohli: ಕಿಂಗ್ ಕೊಹ್ಲಿಗೆ ಹುಟ್ಟುಹಬ್ಬದ ಸಂಭ್ರಮ: 33ನೇ ವಸಂತಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ನಾಯಕ ವಿರಾಟ್​
Virat Kohli BirthDay
Follow us
TV9 Web
| Updated By: Vinay Bhat

Updated on: Nov 05, 2021 | 8:06 AM

ಸಮಕಾಲೀನ ಕ್ರಿಕೆಟ್‌ ಜಗತ್ತಿನ ಅತ್ಯಂತ ಯಶಸ್ವಿ ಬ್ಯಾಟರ್, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ (Virat Kohli) 33ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ತಮ್ಮ ಜೀವನದ ಆರಂಭಿಕ ಕಾಲಘಟ್ಟದಲ್ಲಿ ಸಾಕಷ್ಟು ವೈಫಲ್ಯಗಳನ್ನು ಎದುರಿಸಿ ಇಂದು ವಿಶ್ವದ ಶ್ರೇಷ್ಠ ಕ್ರಿಕೆಟಿಗನಾಗಿ ಗುರುತಿಸಿಕೊಂಡಿರುವ ಕಿಂಗ್ ಕೊಹ್ಲಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕಠಿಣ ಪರಿಶ್ರಮ, ಕೆಚ್ಚೆದೆಯ ನಡೆ ಅವರನ್ನು ವಿಶ್ವದ ಅತ್ಯುತ್ತಮ ಬ್ಯಾಟರ್​ಗಳ  ಸಾಲಿನಲ್ಲಿ ತಂದು ನಿಲ್ಲಿಸಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಕೊಹ್ಲಿ ಬ್ಯಾಟ್​ನಿಂದ ನಿರೀಕ್ಷೆಗೆ ತಕ್ಕಂತೆ ರನ್ ಬರುತ್ತಿಲ್ಲವಾದರೂ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ (Sachin Tendulkar) ಹೆಸರಿನಲ್ಲಿರುವ ದಾಖಲೆಗಳನ್ನು ಮುರಿಯಲು ಸಾಧ್ಯವಿರುವ ಒಬ್ಬನೇ ಒಬ್ಬ ಬ್ಯಾಟರ್ ಕೊಹ್ಲಿ ಎಂದೇ ನಂಬಲಾಗಿದೆ.

ನವೆಂಬರ್ 5, 1988 ರಂದು ನವದೆಹಲಿಯಲ್ಲಿ ಜನಿಸಿದ ವಿರಾಟ್ ಕೊಹ್ಲಿ ಅವರ ತಂದೆ ಪ್ರೇಮ್ ಕೊಹ್ಲಿ ಮತ್ತು ತಾಯಿ ಸರೋಜ್ ಕೊಹ್ಲಿ. ಕೊಹ್ಲಿ ಪ್ರಾರಂಭಿಕ ದಿನಗಳಲ್ಲಿ ಕೋಚಿಂಗ್ ರಾಜ್ಕುಮಾರ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದರು. 2008ರಲ್ಲಿ 19 ವರ್ಷದ ವಯೋಮಿತಿಯ ವಿಶ್ವಕಪ್​ನಲ್ಲಿ ತನ್ನ ನಾಯಕತ್ವದಲ್ಲಿ ಭಾರತವನ್ನು ವಿಶ್ವ ಚಾಂಪಿಯನ್ ಮಾಡಿಸಿದ ಕೊಹ್ಲಿ ನಂತರ ನೇರವಾಗಿ ರಾಷ್ಟ್ರೀಯ ತಂಡಕ್ಕೆ ಎಂಟ್ರಿ ನೀಡಿದ್ದರು.

ಕ್ಲಾಸಿಕ್‌ ಹೊಡೆತಗಳಿಗೆ ಹೆಸರುವಾಸಿಯಾದ ವಿರಾಟ್‌, ರನ್‌ ಗಳಿಕೆಗೆ ಸಿಕ್ಸರ್‌ಗಳಿಗಿಂತಲೂ ಫೋರ್‌ಗಳ ಮೇಲೆ ಹೆಚ್ಚು ವಿಶ್ವಾಸ ಇಡುವಂತಹ ಬ್ಯಾಟರ್. ಅವರ ಕವರ್‌ ಡ್ರೈವ್‌ ಮತ್ತು ಫ್ಲಿಕ್‌ ಹೊಡೆತಗಳನ್ನು ನೋಡುವುದು ಕ್ರಿಕೆಟ್‌ ಪ್ರಿಯರ ಕಣ್ಣಿಗೆ ಹಬ್ಬವೇ ಸರಿ.

2013ನೇ ಇಸವಿಯಲ್ಲಿ ಅರ್ಜುನ ಪ್ರಶಸ್ತಿ, 2017ರಲ್ಲಿ ದೇಶದ ನಾಲ್ಕನೇ ಅತಿದೊಡ್ಡ ನಾಗರಿಕ ಪ್ರಶಸ್ತಿ ಪದ್ಮ ಶ್ರೀ ಮತ್ತು 2018ರಲ್ಲಿ ದೇಶದ ಅತ್ಯುನ್ನತ್ತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನವಾಗಿದ್ದಾರೆ. ಇದರ ಹೊರತಾಗಿ ಐಸಿಸಿ ವರ್ಷದ ಕ್ರಿಕೆಟಿಗ ಸರ್ ಗಾರ್‌ಫೀಲ್ಡ್ ಸೋಬರ್ಸ್ ಟ್ರೋಫಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿದ್ದಾರೆ.

2008ರಲ್ಲಿ ಟೀಮ್‌ ಇಂಡಿಯಾಗೆ ಪದಾರ್ಪಣೆ ಮಾಡಿದ ವಿರಾಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಈಗಾಗಗಲೇ 96 ಪಂದ್ಯಗಳಿಂದ 7,765 ರನ್‌ಗಳನ್ನು ಬಾರಿಸಿ 51.08ರ ಬ್ಯಾಟಿಂಗ್‌ ಸರಾಸರಿ ಹೊಂದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಎನಿಸಿಕೊಂಡಿದ್ದು, 12,169 ರನ್‌ಗಳನ್ನು ದಾಖಲಿಸಿದ್ದಾರೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ 3225 ರನ್ ಬಾರಿಸಿದ ಕೀರ್ತಿ ಕಿಂಗ್‌ ಕೊಹ್ಲಿ ಅವರದ್ದು. ಟೆಸ್ಟ್‌, ಒಡಿಐ ಮತ್ತು ಟಿ20 ಮೂರೂ ಮಾದರಿಗಳಲ್ಲಿ (51.08 ಟೆಸ್ಟ್‌, 59.07 ಒಡಿಐ, 52.01 ಟಿ20-ಐ) 50ಕ್ಕೂ ಹೆಚ್ಚಿನ ಬ್ಯಾಟಿಂಗ್‌ ಸರಾಸರಿ ಹೊಂದಿರುವ ಬ್ಯಾಟರ್ ಆಗಿದ್ದಾರೆ.

ವಿಶೇಷ ಎಂದರೆ 2016ರವರೆಗೂ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಂದು ಕೂಡ ದ್ವಿಶತಕ ಬಾರಿಸಿರಲಿಲ್ಲ. ಆದರೆ, 2017ರ ಅಂತ್ಯಕ್ಕೆ ಒಟ್ಟು 6 ದ್ವಿಶತಕ ಬಾರಿಸಿದ್ದರು. ದಕ್ಷಿಣ ಆಫ್ರಿಕಾ ಎದುರು 254 ರನ್‌ (ತಮ್ಮ ಟೆಸ್ಟ್‌ ವೃತ್ತಿಬದುಕಿನ ಶ್ರೇಷ್ಠ ಸ್ಕೋರ್‌) ಬಾರಿಸಿ ಈ ಸಂಖ್ಯೆಯನ್ನು 7ಕ್ಕೆ ವಿಸ್ತರಿಸಿಕೊಂಡಿದ್ದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ದ್ವಿಶತಕ ಸಿಡಿಸಿದವರ ಪಟ್ಟಿಯಲ್ಲಿ ಡಾನ್‌ ಬ್ರಾಡ್‌ಮನ್‌ (12), ಕುಮಾರ ಸಂಗಕ್ಕಾರ (11) ಮತ್ತು ಬ್ರಿಯಾನ್‌ ಲಾರಾ (9) ಮಾತ್ರವೇ ಕೊಹ್ಲಿಗಿಂತ ಮುಂದಿದ್ದಾರೆ.

ಟಿವಿ9 ಕನ್ನಡ ವೆಬ್ ವತಿಯಿಂದ ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

WI vs SL, T20 WC: ಹಾಲಿ ಚಾಂಪಿಯನ್ ವೆಸ್ಟ್​ ಇಂಡೀಸ್ ಟೂರ್ನಿಯಿಂದ ಔಟ್: ನಿವೃತ್ತಿ ಘೋಷಿಸಲು ಮುಂದಾದ ಡ್ವೇನ್ ಬ್ರಾವೋ

(Virat Kohli Birthday King Kohli has turned a year older and is celebrating his 33rd birthday today November 5)

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್