Virat Kohli: ಅಂಪೈರ್ ವಿರುದ್ದ ಕೆಂಡಕಾರಿದ ಕೊಹ್ಲಿ: ಕಾರಣವೇನು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Oct 12, 2021 | 4:34 PM

IPL 2021 Rcb: ಮೊದಲೇ ಎರಡು ತಪ್ಪು ಮಾಡಿದ್ದ ವಿರೇಂದರ್ ಶರ್ಮಾ ಬಗ್ಗೆ ಕೊಹ್ಲಿ ಕುಪಿತಗೊಂಡಿದ್ದರು. ಆದರೆ ಆರ್​ಸಿಬಿ ಮನವಿಯನ್ನು ಪುರಸ್ಕರಿಸದೇ ನಾಟೌಟ್ ಎಂದಿದ್ದು ಕೊಹ್ಲಿಯ ಕೋಪವನ್ನು ನೆತ್ತಿಗೇರಿಸಿತ್ತು.

Virat Kohli: ಅಂಪೈರ್ ವಿರುದ್ದ ಕೆಂಡಕಾರಿದ ಕೊಹ್ಲಿ: ಕಾರಣವೇನು ಗೊತ್ತಾ?
Virat Kohli-umpire fight
Follow us on

ಇಂಡಿಯನ್ ಪ್ರೀಮಿಯರ್​ ಲೀಗ್​ನ (IPL 2021) ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ (RCB) ಕೆಕೆಆರ್ (KKR) ವಿರುದ್ದ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ರೋಚಕ ಹೋರಾಟ ಮೂಡಿಬಂದಿತು. ಅದರ ಜೊತೆಗೆ ಪಂದ್ಯವು ಹೈಡ್ರಾಮಗಳಿಗೂ ಸಾಕ್ಷಿಯಾಯಿತು. ಅಂಪೈರ್ ನೀಡಿದ ತೀರ್ಪುಗಳ ಬಗ್ಗೆ ಕೊನೆಯ ಬಾರಿ ನಾಯಕನಾಗಿ ಮೈದಾನದಲ್ಲಿದ್ದ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅಂಪೈರ್​ ವಿರುದ್ದ ಕೆಂಡಕಾರಿದ ಕೊಹ್ಲಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಕೊಹ್ಲಿ ಕುಪಿತಗೊಳ್ಳಲು ಕಾರಣವೇನು ಎಂಬುದು ಅನೇಕರಿಗೆ ತಿಳಿದಿಲ್ಲ.

ಕೊಹ್ಲಿ ಮೈದಾನದಲ್ಲೇ ಕೋಪಗೊಳ್ಳಲು ಮುಖ್ಯ ಕಾರಣ ಫೀಲ್ಡ್​ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿರೇಂದರ್ ಶರ್ಮಾ. ಅವರು ನೀಡುತ್ತಿದ್ದ ತೀರ್ಪುಗಳ ವಿರುದ್ದ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಏಕೆಂದರೆ ನಿರ್ಣಾಯಕ ಪಂದ್ಯದಲ್ಲಿ ವಿರೇಂದರ್ ಶರ್ಮಾ ನೀಡಿದ ಮೂರು ತೀರ್ಪುಗಳು ತಪ್ಪಾಗಿತ್ತು. ಆ ಮೂರು ತೀರ್ಪುಗಳು ಆರ್​ಸಿಬಿ ವಿರುದ್ದವೇ ಆಗಿತ್ತು ಎಂಬುದು ವಿಶೇಷ.

ಆರ್​ಸಿಬಿ ಬ್ಯಾಟಿಂಗ್ ವೇಳೆ ಎರಡು ಬಾರಿ ವಿರೇಂದರ್ ಶರ್ಮಾ ತಪ್ಪು ತೀರ್ಪು ನೀಡಿದ್ದರು. ಮೊದಲು ಶಹಬಾಜ್ ಅಹ್ಮದ್ ಮತ್ತು ಹರ್ಷಲ್ ಪಟೇಲ್ ಅವರನ್ನೂ ಎಲ್​ಬಿಡ್ಲ್ಯೂ ಔಟೆಂದು ಬೆರಳೆತ್ತಿದ್ದರು. ಆದರೆ ಈ ವೇಳೆ ಆಟಗಾರರು ಡಿಆರ್​ಎಸ್​ ಮೊರೆ ಹೋಗಿದ್ದರು. 3ನೇ ಅಂಪೈರ್ ಪರಿಶೀಲನೆ ವೇಳೆ ಫೀಲ್ಡ್ ಅಂಪೈರ್ ತೀರ್ಪು ತಪ್ಪು ಎಂಬುದು ಸ್ಪಷ್ಟವಾಗಿತ್ತು. ಆ ಬಳಿಕ ವಿರೇಂದರ್ ಶರ್ಮಾ ತಮ್ಮ ತೀರ್ಪನ್ನು ಬದಲಿಸಿದ್ದರು.

ಇದಾದ ಬಳಿಕ ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಕೆಕೆಆರ್ ಇನಿಂಗ್ಸ್​ ವೇಳೆ ಕೂಡ ವಿರೇಂದರ್ ಶರ್ಮಾ ತಪ್ಪು ನಿರ್ಣಯ ಪುನಾವರ್ತನೆ ಆಗಿತ್ತು. ಚಹಲ್ ಬೌಲಿಂಗ್​ನಲ್ಲಿ ಕೆಕೆಆರ್ ಬ್ಯಾಟರ್ ರಾಹುಲ್ ತ್ರಿಪಾಠಿ ಎಲ್​ಬಿಡಬ್ಲ್ಯೂ ಆಗಿದ್ದರು. ಚಹಲ್ ಸೇರಿದಂತೆ ಆರ್​ಸಿಬಿ ಆಟಗಾರರು ಅಂಪೈರ್​ಗೆ ಬಲವಾದ ಮನವಿ ಮಾಡಿದರು. ಆದರೆ, ಅಂಪೈರ್ ನಾಟೌಟ್ ಎಂದು ತೀರ್ಪಿತ್ತರು. ಕೊನೆಗೆ ಆರ್​ಸಿಬಿ ನಾಯಕ ಡಿಆರ್​ಎಸ್ ಹೋದರು. 3ನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.

ಮೊದಲೇ ಎರಡು ತಪ್ಪು ಮಾಡಿದ್ದ ವಿರೇಂದರ್ ಶರ್ಮಾ ಬಗ್ಗೆ ಕೊಹ್ಲಿ ಕುಪಿತಗೊಂಡಿದ್ದರು. ಆದರೆ ಆರ್​ಸಿಬಿ ಮನವಿಯನ್ನು ಪುರಸ್ಕರಿಸದೇ ನಾಟೌಟ್ ಎಂದಿದ್ದು ಕೊಹ್ಲಿಯ ಕೋಪವನ್ನು ನೆತ್ತಿಗೇರಿಸಿತ್ತು. ಅದರಲ್ಲೂ ಗೆಲ್ಲಲೇಬೇಕಾದ ಪಂದ್ಯದಲ್ಲಿ ಅಂಪೈರ್ ನೀಡುತ್ತಿದ್ದ ತಪ್ಪು ನಿರ್ಧಾರ ಕ್ಯಾಪ್ಟನ್ ಕೊಹ್ಲಿಯನ್ನು ಇನ್ನಿಲ್ಲದಂತೆ ಕೆರಳಿಸಿತ್ತು. 3 ಬಾರಿ ಕೂಡ ಆರ್​ಸಿಬಿ ವಿರುದ್ದ ತಪ್ಪು ತೀರ್ಪು ನೀಡಿರುವ ಬಗ್ಗೆ ಕೊಹ್ಲಿ ಮೈದಾನದಲ್ಲೇ ಅಂಪೈರ್ ವಿರೇಂದರ್ ಶರ್ಮಾಗೆ ಬೆಂಡೆತ್ತಿದರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:  KL Rahul: ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ:ಟಿ20 ವಿಶ್ವಕಪ್ ಪಾಕ್ ತಂಡದಲ್ಲಿ ಪ್ರಮುಖ ಬದಲಾವಣೆ: 39 ವರ್ಷದ ಆಲ್​ರೌಂಡರ್ ಆಯ್ಕೆ 

ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್​ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!

 

(Virat Kohli involved in heated exchange with umpire during RCB vs KKR match)