T20 World Cup: ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ: ಟಿ20 ವಿಶ್ವಕಪ್​ಗಾಗಿ ಯುವ ಬೌಲರ್ ಆಯ್ಕೆ

TV9 Digital Desk

| Edited By: Zahir Yusuf

Updated on: Oct 12, 2021 | 6:07 PM

Avesh Khan: 24 ವರ್ಷದ ವೇಗದ ಅವೇಶ್ ಖಾನ್ ಐಪಿಎಲ್​ನಲ್ಲಿ ತನ್ನ ವೇಗ, ಬೌನ್ಸ್ ಮತ್ತು ನಿಖರ ದಾಳಿಯಿಂದ ಬ್ಯಾಟರುಗಳನ್ನು ಕಾಡಿದ್ದರು. ಅದರಲ್ಲೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಧೋನಿ ಸೇರಿದಂತೆ ಪ್ರಮುಖ ಬ್ಯಾಟರುಗಳ ವಿಕೆಟ್ ಉರುಳಿಸಿ ಮಿಂಚಿದ್ದರು.

T20 World Cup: ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ: ಟಿ20 ವಿಶ್ವಕಪ್​ಗಾಗಿ ಯುವ ಬೌಲರ್ ಆಯ್ಕೆ
Delhi Capitals
Follow us

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 14 (IPL 2021) ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್​ ಶುರುವಾಗಲಿದೆ. ಈ ಟೂರ್ನಿಗಾಗಿ ಈಗಾಗಲೇ ಎಲ್ಲಾ ತಂಡಗಳು ಭರ್ಜರಿ ತಯಾರಿಯಲ್ಲಿದೆ. ಇತ್ತ ಟೀಮ್ ಇಂಡಿಯಾ ಆಯ್ಕೆ ಸಮಿತಿ ಕೂಡ ತಂಡಕ್ಕೆ ಹೊಸ ಆಟಗಾರರನ್ನು ಸೇರ್ಪಡೆಗೊಳಿಸುತ್ತಿದೆ. ಇತ್ತೀಚೆಗಷ್ಟೇ ಸನ್​ರೈಸರ್ಸ್​ ಹೈದರಾಬಾದ್ ತಂಡದಲ್ಲಿದ್ದ ಯುವ ವೇಗದ ಅಸ್ತ್ರ ಉಮ್ರಾನ್ ಮಲಿಕ್ ಅವರನ್ನು ನೆಟ್​ ಬೌಲರ್ ಆಗಿ ಆಯ್ಕೆ ಮಾಡಲಾಗಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವೇಗಿ ಅವೇಶ್ ಖಾನ್ ಕೂಡ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಅವೇಶ್ ಕೂಡ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದು, ಹೀಗಾಗಿ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾವನ್ನು ಸೇರಲಿದ್ದಾರೆ.

24 ವರ್ಷದ ವೇಗದ ಅವೇಶ್ ಖಾನ್ ಐಪಿಎಲ್​ನಲ್ಲಿ ತನ್ನ ವೇಗ, ಬೌನ್ಸ್ ಮತ್ತು ನಿಖರ ದಾಳಿಯಿಂದ ಬ್ಯಾಟರುಗಳನ್ನು ಕಾಡಿದ್ದರು. ಅದರಲ್ಲೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಧೋನಿ ಸೇರಿದಂತೆ ಪ್ರಮುಖ ಬ್ಯಾಟರುಗಳ ವಿಕೆಟ್ ಉರುಳಿಸಿ ಮಿಂಚಿದ್ದರು. ಇದೇ ಕಾರಣದಿಂದ ಆಯ್ಕೆಗಾರರು ಅವೇಶ್​ರನ್ನು ಅಭ್ಯಾಸಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಇನ್ನು ಈ ಬಾರಿ 15 ಪಂದ್ಯಗಳಿಂದ 23 ವಿಕೆಟ್ ಉರುಳಿಸಿರುವ ಅವೇಶ್ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡವು 2ನೇ ಕ್ವಾಲಿಫೈಯರ್ ಆಡಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ಫೈನಲ್​ ಪ್ರವೇಶಿಸಲಿದೆ. ಹೀಗಾಗಿ ಮುಂದಿನ 2 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ವಿಕೆಟ್​ಗಳ ಸಂಖ್ಯೆಯನ್ನು ಹೆಚ್ಚಿಸುವ ಇರಾದೆಯಲ್ಲಿದ್ದಾರೆ ಅವೇಶ್ ಖಾನ್.

18ರ ಬಳಗದಲ್ಲೂ ಅವಕಾಶ: ಟೀಮ್ ಇಂಡಿಯಾ ಆಯ್ಕೆಗಾರರು ಅವೇಶ್ ಅವರನ್ನು ತಂಡದಲ್ಲಿ ಸೇರಿಸಲು ನಿರ್ಧರಿಸಿದ್ದಾರೆ. ಸದ್ಯಕ್ಕೆ, ಅವರನ್ನು ಕೇವಲ ನೆಟ್ ಬೌಲರ್ ಆಯ್ಕೆ ಮಾಡಲಾಗಿದೆ. ಒಂದು ವೇಳೆ ತಂಡದ ನಿರ್ವಹಣೆಗೆ ಅಗತ್ಯವಿದ್ದಲ್ಲಿ, ಅವರನ್ನು ಮೀಸಲು ಆಟಗಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗುವುದು ಎಂದು ತಿಳಿಸಿದೆ.

ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಅವೇಶ್: ಅವೇಶ್ ಅವರನ್ನು ಈ ಹಿಂದೆ ಇಂಗ್ಲೆಂಡ್ ವಿರುದ್ದದ ಟೆಸ್ಟ್​ ಸರಣಿಗೆ ಮೀಸಲು ಬೌಲರ್ ಆಗಿ ಆಯ್ಕೆ ಮಾಡಲಾಗಿತ್ತು. ಐಪಿಎಲ್‌ನ ಮೊದಲ ಭಾಗದಲ್ಲಿ ಉತ್ತಮ ಪ್ರದರ್ಶನದ ನಂತರ, ಅವರನ್ನು ಟೀಮ್ ಇಂಡಿಯಾಗೆ ಸ್ಟ್ಯಾಂಡ್ ಬೈ ಬೌಲರ್ ಆಗಿ ಸೇರಿಸಲಾಯಿತು. ಆದರೆ, ಸರಣಿಗೆ ಮುನ್ನ ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡು ಭಾರತಕ್ಕೆ ಮರಳಿದ್ದರು. ಇದೀಗ ಮತ್ತೊಮ್ಮೆ ಅವೇಶ್ ಖಾನ್​ಗೆ ಟೀಮ್ ಇಂಡಿಯಾ ಬಳಗದಲ್ಲಿ ಕಾಣಿಸಿಕೊಳ್ಳುವ ಅವಕಾಶ ಲಭಿಸಿದೆ.

ಇದನ್ನೂ ಓದಿ:  KL Rahul: ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ:ಟಿ20 ವಿಶ್ವಕಪ್ ಪಾಕ್ ತಂಡದಲ್ಲಿ ಪ್ರಮುಖ ಬದಲಾವಣೆ: 39 ವರ್ಷದ ಆಲ್​ರೌಂಡರ್ ಆಯ್ಕೆ 

ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್​ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!

(IPL 2021: Delhi Capitals fast bowler Avesh Khan to join Indian Team as Net Bowler for T20 World Cup)

ತಾಜಾ ಸುದ್ದಿ

Related Stories

Click on your DTH Provider to Add TV9 Kannada