AB de Villiers: RCB ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ ಎಬಿಡಿ
IPL 2021: ಯುಎಇನಲ್ಲಿ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಎಬಿಡಿ ಕ್ರಮವಾಗಿ 0(1), 12(11), 11(6), 4*(1), 23(18), 19*(13), 26(26) ಹಾಗೂ 11(9) ರನ್ ಮಾತ್ರ ಕಲೆಹಾಕಿದ್ದರು.
ಐಪಿಎಲ್ ಸೀಸನ್ 14 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಫೈನಲ್ ಪ್ರವೇಶಿಸಲಿದೆ ಎಂದು ಭಾವಿಸಿದ್ದ ಆರ್ಸಿಬಿ ಕೆಕೆಆರ್ ವಿರುದ್ದ ಮುಗ್ಗರಿಸಿ ಹೊರಬಿದ್ದಿದೆ. ಈ ಸೋಲಿನೊಂದಿಗೆ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರ ಬಹುಕಾಲ ಕಪ್ ಗೆಲ್ಲುವ ಕನಸು ಕೂಡ ಕಮರಿದೆ. ಇದೀಗ ಈ ಸೋಲಿನೊಂದಿಗೆ ಸ್ಪೋಟಕ ಬ್ಯಾಟರ್ ಎಬಿಡಿ ನೋವಿನೊಂದಿಗೆ ತವರಿಗೆ ಮರಳಲಿದ್ದಾರೆ. ಇದಕ್ಕೂ ಮುನ್ನ ಆರ್ಸಿಬಿ ಅಭಿಮಾನಿಗಳ ಬಳಿ ಎಬಿಡಿ ಕ್ಷಮೆಯಾಚಿಸಿದ್ದಾರೆ. ಆರ್ಸಿಬಿ ತಂಡವು ಅತ್ಯುತ್ತಮ ಅಭಿಮಾನಿ ಬಳಗವನ್ನು ಹೊಂದಿದೆ. ಇದಾಗ್ಯೂ ನಾವು ನಿರಾಸೆ ಮಾಡಿದೆವು. ಅವರಿಗಾಗಿ ನಾವು ಈ ಸಲ ಕೂಡ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆರ್ಸಿಬಿ ಫ್ಯಾನ್ಸ್ ನಮ್ಮನ್ನು ಕ್ಷಮಿಸಬೇಕೆಂದು ಕೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಮುಂದಿನ ಸೀಸನ್ನಲ್ಲಿ ಮತ್ತಷ್ಟು ಜೋಶ್ನೊಂದಿಗೆ ಬರಲಿದ್ದೇನೆ ಎಂದು ಎಬಿಡಿ ತಿಳಿಸಿದ್ದಾರೆ. ಈ ಮೂಲಕ ಮುಂದಿನ ಸೀಸನ್ ಐಪಿಎಲ್ ಆಡುವ ಇಂಗಿತವನ್ನು ಎಬಿಡಿ ವ್ಯಕ್ತಪಡಿಸಿದ್ದಾರೆ. ಮುಂದಿನ ಸೀಸನ್ನಲ್ಲಿ ಮೆಗಾ ಹರಾಜು ನಡೆಯಲಿದ್ದು, ಎಬಿಡಿಯನ್ನು ಆರ್ಸಿಬಿ ಉಳಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.
ಈ ಬಾರಿ ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಎಬಿಡಿ ಯುಎಇನಲ್ಲಿ ನಡೆದ ದ್ವಿತಿಯಾರ್ಧದಲ್ಲಿ ಲಯ ತಪ್ಪಿದ್ದರು. ಭಾರತದಲ್ಲಿ ನಡೆದ ಪಂದ್ಯಗಳಲ್ಲಿ ಆರ್ಸಿಬಿ ತಂಡದ ಗೆಲುವಿನಲ್ಲಿ ಡಿವಿಲಿಯರ್ಸ್ ಪ್ರಮುಖ ಪಾತ್ರವಹಿಸಿದ್ದರು. ಆದರೆ ದ್ವಿತಿಯಾರ್ಧದಲ್ಲಿ ಎಬಿಡಿ ಬ್ಯಾಟ್ನಿಂದ ಮೂಡಿಬಂದಿದ್ದು ಕೇವಲ 106 ರನ್ ಮಾತ್ರ.
ಯುಎಇನಲ್ಲಿ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಎಬಿಡಿ ಕ್ರಮವಾಗಿ 0(1), 12(11), 11(6), 4*(1), 23(18), 19*(13), 26(26) ಹಾಗೂ 11(9) ರನ್ ಮಾತ್ರ ಕಲೆಹಾಕಿದ್ದರು. ಹೀಗಾಗಿ ಯುಎಇನಲ್ಲಿ ಎಬಿಡಿ ಅಬ್ಬರಿಸದಿರುವುದು ಕೂಡ ಆರ್ಸಿಬಿ ಸೋಲಿಗೆ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ: KL Rahul: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ:ಟಿ20 ವಿಶ್ವಕಪ್ ಪಾಕ್ ತಂಡದಲ್ಲಿ ಪ್ರಮುಖ ಬದಲಾವಣೆ: 39 ವರ್ಷದ ಆಲ್ರೌಂಡರ್ ಆಯ್ಕೆ
ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!
(IPL 2021: AB de Villiers Apologises To RCB Fans After Loss To KKR In Eliminator)
Published On - 8:11 pm, Tue, 12 October 21