ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ ಟೀಮ್ ಇಂಡಿಯಾ ಸೇಡು ತೀರಿಸಿಕೊಳ್ಳಲು ಸಜ್ಜಾಗುತ್ತಿದೆ. ಇದಕ್ಕಾಗಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಕೂಡ ಕಾದು ಕುಳಿತಿದ್ದಾರೆ. ಪ್ರೋಟೀಸ್ ವೇಗಿ ನ್ಯಾಂಡ್ರೆ ಬರ್ಗರ್ ವಿರುದ್ಧ ಬ್ಯಾಟಿಂಗ್ ಸಿಮ್ಯುಲೇಶನ್‌ಗೆ ಒಳಗಾದ ಕೊಹ್ಲಿ ಹೊಸ ವರ್ಷದ ದಿನದಂದು ಸುದೀರ್ಘ ಅಭ್ಯಾಸವನ್ನು ನಡೆಸಿದರು. ಇಂಡೋ-ಆಫ್ರಿಕಾ ಅಂತಿಮ ಎರಡನೇ ಟೆಸ್ಟ್ ಪಂದ್ಯ ಜನವರಿ 3 ರಿಂದ ಕೇಪ್ಟೌನ್ನ ನ್ಯೂಲ್ಯಾಂಡ್ಸ್‌ನಲ್ಲಿ ಶುರುವಾಗಲಿದೆ. ಸರಣಿಯಲ್ಲಿ 0-1 ಹಿನ್ನಡೆಯಲ್ಲಿರುವ ಕಾರಣ ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಈ ಮಹತ್ವದ ಪದ್ಯಕ್ಕೆ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಉತ್ತಮಗೊಳಿಸಲು ನಿರ್ಧರಿಸಿದ್ದಾರೆ. ಅವರು ಕೇಪ್ ಟೌನ್‌ನಲ್ಲಿ ಪ್ರ್ಯಾಕ್ಟೀಸ್ ಸೆಷನ್ ವೇಳೆ ಒಂದು ಗಂಟೆ ಬ್ಯಾಟಿಂಗ್ ಮಾಡಿದರು. ಆರಂಭದಲ್ಲಿ, ಬೌಲರ್‌ಗಳೊಂದಿಗೆ ಅಭ್ಯಾಸ ನಡೆಸಿದರೆ ನಂತರ ದಕ್ಷಿಣ ಆಫ್ರಿಕಾ ವೇಗಿಗಳ ವೇಗದ ದಾಳಿಯನ್ನು ನಿಭಾಯಿಸಲು ಕೆಲವು ಗಂಭೀರವಾದ ಥ್ರೋಡೌನ್‌ಗಳನ್ನು ಎದುರಿಸಿದರು.
Allan donald: ದಕ್ಷಿಣ ಆಫ್ರಿಕಾದಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಭಾರತಕ್ಕೆ ಟಿಪ್ಸ್ ಕೊಟ್ಟ ಆಫ್ರಿಕಾ ಆಟಗಾರ
ಆದರೆ ವಿರಾಟ್ ಕೊಹ್ಲಿ ಅಭ್ಯಾಸದ ಪ್ರಮುಖ ಹೈಲೈಟ್ ಎಂದರೆ ಎಡಗೈ ವೇಗಿ ವಿರುದ್ಧ ಎದುರಿಸಲು ವಿಶೇಷ ತರಬೇತಿ. ನ್ಯಾಂಡ್ರೆ ಬರ್ಗರ್ ಅನ್ನು ಎದುರಿಸಲು ಕೊಹ್ಲಿಗೆ ಇದು ಉತ್ತಮ ಮಾರ್ಗವಾಗಿದೆ. ಇದಕ್ಕಾಗಿ ಆಫ್ರಿಕಾದ ಸ್ಥಳೀಯ ನೆಟ್ ಬೌಲರ್ ಅನ್ನು ಅಭ್ಯಾಸದ ಅವಧಿಗೆ ಕರೆತರಲಾಯಿತು. ಭಾರತೀಯ ತಂಡವು ಯಾವುದೇ ಎಡಗೈ ವೇಗಿಗಳನ್ನು ಹೊಂದಿಲ್ಲದ ಪರಿಣಾಮವಾಗಿ ಸ್ಥಳೀಯ ನೆಟ್ಸ್ ಬೌಲರ್ ಅನ್ನು ಕರೆಸಿ ಅಭ್ಯಾಸ ಮಾಡಿದ್ದಾರೆ.
Virat Kohli with the net bowler at Newlands, Capetown 🏟️#ViratKohli #SAvIND #IndianCricketTeam #CricketTwitter pic.twitter.com/lND7xVepxt
— InsideSport (@InsideSportIND) January 1, 2024
ಸೆಂಚುರಿಯನ್‌ನಲ್ಲಿ ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ 7 ವಿಕೆಟ್‌ಗಳನ್ನು ಉರುಳಿಸಿದ ನಂತರ ನ್ಯಾಂಡ್ರೆ ಬರ್ಗರ್ ಭಾರತೀಯ ಬ್ಯಾಟರ್‌ಗಳಿಗೆ ಅಪಾಯಕಾರಿ ಆಗಿದ್ದಾರೆ. ಯುವ ನೆಟ್ಸ್ ಬೌಲರ್ ಬರ್ಗರ್‌ಗಿಂತ ಕಡಿಮೆ ವೇಗವನ್ನು ಹೊಂದಿದ್ದರೂ, ಕೊಹ್ಲಿ ತನಗೆ ಸಿಕ್ಕಿ ಅವಕಾಶವನ್ನು ಉಪಯೋಗಿಸಿಕೊಂಡರು. ಕೊಹ್ಲಿ ಕವರ್ ಡ್ರೈವ್‌ಗಳ ಮೂಲಕ ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ಪ್ರ್ಯಾಕ್ಟೀಸ್ ನಡೆಸಿದರೆ, ರವಿ ಅಶ್ವಿನ್ ಬೌಲಿಂಗ್ನಲ್ಲಿ ಬೃಹತ್ ಸಿಕ್ಸರ್ ಸಿಡಿಸಿದ್ದು ಕಂಡುಬಂತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:14 am, Tue, 2 January 24