Virat Kohli: ಸಿರಾಜ್ ಇಂಜುರಿ, ಪೂಜಾರ-ರಹಾನೆ ಫಾರ್ಮ್, ಪಂತ್ ಶಾಟ್ ಆಯ್ಕೆ ಬಗ್ಗೆ ಕೊಹ್ಲಿ ಹೇಳಿದ್ದೇನು ಗೊತ್ತಾ?
Virat Kohli Press Conference: ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂದು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಮ್ಮ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಇದರಲ್ಲಿ ತಮ್ಮ ಫಿಟ್ನೆಸ್, ಚೇತೇಶ್ವರ ಪೂಜಾರ-ಅಜಿಂಕ್ಯ ರಹಾನೆ ಅವರ ಫಾರ್ಮ್, ಮೊಹಮ್ಮದ್ ಸಿರಾಜ್ ಅವರ ಫಿಟ್ನೆಸ್, ಎರಡನೇ ಟೆಸ್ಟ್‌ನಲ್ಲಿ ಕೆಎಲ್ ರಾಹುಲ್ ನಾಯಕತ್ವ, ರಿಷಬ್ ಪಂತ್ ಅವರ ಶಾಟ್ ಆಯ್ಕೆ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದರು.
ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂದು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಮ್ಮ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಇದರಲ್ಲಿ ತಮ್ಮ ಫಿಟ್ನೆಸ್, ಚೇತೇಶ್ವರ ಪೂಜಾರ-ಅಜಿಂಕ್ಯ ರಹಾನೆ ಅವರ ಫಾರ್ಮ್, ಮೊಹಮ್ಮದ್ ಸಿರಾಜ್ ಅವರ ಫಿಟ್ನೆಸ್, ಎರಡನೇ ಟೆಸ್ಟ್‌ನಲ್ಲಿ ಕೆಎಲ್ ರಾಹುಲ್ ನಾಯಕತ್ವ, ರಿಷಬ್ ಪಂತ್ ಅವರ ಶಾಟ್ ಆಯ್ಕೆ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದರು. ವಿರಾಟ್ ಕೊಹ್ಲಿ ಅವರು ಸಂಪೂರ್ಣ ಫಿಟ್ ಆಗಿದ್ದು, ಮೂರನೇ ಟೆಸ್ಟ್‌ನಲ್ಲಿ ಆಡಲು ಸಿದ್ಧ ಎಂದು ಹೇಳಿದ್ದಾರೆ. ಅಲ್ಲದೇ ಮೊಹಮ್ಮದ್ ಸಿರಾಜ್ ಸಂಪೂರ್ಣ ಫಿಟ್ ಆಗಿಲ್ಲದ ಕಾರಣ ಅವರು ಮೂರನೇ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಜನವರಿ 11ರಿಂದ ಆರಂಭವಾಗುತ್ತಿದ್ದು, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಪತ್ರಿಕಾಗೋಷ್ಠಿ ನಡೆಸಿದ ಕೊಹ್ಲಿ ಆ ಬಳಿಕ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಪತ್ರಿಕಾಗೋಷ್ಠಿಗೆ ಹಾಜರಾಗಿರಲಿಲ್ಲ. ಎರಡೂ ಪಂದ್ಯಗಳ ಆರಂಭಕ್ಕೂ ಮುನ್ನ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಗೈರುಹಾಜರಾದ ನಂತರ ಮಾಧ್ಯಮಗಳ ಮುಂದೆ ಏಕೆ ಕಾಣಿಸಿಕೊಳ್ಳುತ್ತಿಲ್ಲ ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಸಮಾವೇಶದಲ್ಲಿ ಮೂರನೇ ಪಂದ್ಯಕ್ಕೂ ಮುನ್ನ ತಂಡಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಕೊಹ್ಲಿ ಉತ್ತರಿಸಿದ್ದಾರೆ.
ಪೂಜಾರ-ರಹಾನೆಯನ್ನು ಸಮರ್ಥಿಸಿಕೊಂಡ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಭಾರತದ ಮಧ್ಯಮ ಕ್ರಮಾಂಕವನ್ನು ಸಮರ್ಥಿಸಿಕೊಂಡರು. ಕಳೆದ ಟೆಸ್ಟ್‌ನಲ್ಲಿ ಪೂಜಾರ ಹಾಗೂ ರಹಾನೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು ಎಂದಿದ್ದಾರೆ. ಅವರ ಅನುಭವ ನಮಗೆ ಅಮೂಲ್ಯ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅವರು ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ಅವರು ಆಸ್ಟ್ರೇಲಿಯಾದಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ನಾವು ಅವರ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ಒತ್ತೆಡ ಹೇರಿ ಯಾವುದೇ ಆಟಗಾರನನ್ನು ತೊಂದರೆಗೆ ಸಿಲುಕಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಎರಡನೇ ಟೆಸ್ಟ್‌ಗೆ ಹೊರಗುಳಿದಿರುವ ಬಗ್ಗೆ ಕೊಹ್ಲಿ ಹೇಳಿದ್ದೇನು? ಎರಡನೇ ಟೆಸ್ಟ್ ಆಡದಿದ್ದಕ್ಕೆ ತಪ್ಪಿತಸ್ಥ ಭಾವನೆ ಇದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ತರಬೇತಿ ಮತ್ತು ಕ್ರಿಕೆಟ್ ಆಡುವ ಸಮಯದಲ್ಲಿ ಇಂತಹ ಇಝುರಿಗಳು ಸಂಭವಿಸುವುದು ಸಹಜ. ಹೀಗೆ ಇಂಜುರಿಗೊಂಡಾಗಲೇ ನೀವು ಕ್ರಿಕೆಟ್ ಆಡುತ್ತಿದ್ದೀರಿ ಎಂಬುದು ಸಾಭೀತಾಗುವುದು. ನಾನು ಮನುಷ್ಯನೇ ಆಗಿರುವುದರಿಂದ ಇದೆಲ್ಲ ಸಹಜವಾಗಿಯೇ ಆಟದಲ್ಲಿ ಸಂಭವಿಸುತ್ತದೆ ಎಂದಿದ್ದಾರೆ.
ಕೆಎಲ್ ರಾಹುಲ್ ಉತ್ತಮ ನಾಯಕತ್ವ ನಿರ್ವಹಿಸಿದ್ದಾರೆ ಎರಡನೇ ಟೆಸ್ಟ್‌ನಲ್ಲಿ ಕೆಎಲ್ ರಾಹುಲ್ ನಾಯಕತ್ವವನ್ನು ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ. ರಾಹುಲ್ ತಂಡವನ್ನು ಗೆಲ್ಲಿಸಲು ಶಕ್ತಿಮೀರಿ ಪ್ರಯತ್ನಿಸಿದರು. ಆದರೆ ದಕ್ಷಿಣ ಆಫ್ರಿಕಾ ಉತ್ತಮವಾಗಿ ಚೇಸ್ ಮಾಡಿತು. ನಾನಿದ್ದಿದ್ದರೆ ಬೇರೆಯದೇ ಕೆಲಸ ಮಾಡುತ್ತಿದ್ದೆ ಆದರೆ ಎಲ್ಲರ ಪ್ರಯತ್ನ ಮಾತ್ರ ತಂಡದ ಗೆಲುವಿಗೆ ಮಾತ್ರ ಎಂದಿದ್ದಾರೆ.
ಟೀಮ್ ಮ್ಯಾನೇಜ್ ಮೆಂಟ್ ರಿಷಬ್ ಪಂತ್ ಜೊತೆ ಮಾತನಾಡಿದೆ ಟೀಮ್ ಮ್ಯಾನೇಜ್‌ಮೆಂಟ್ ರಿಷಬ್ ಪಂತ್ ಜೊತೆ ಮಾತನಾಡಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಅಭ್ಯಾಸದ ಸಮಯದಲ್ಲಿ ಅವರೊಂದಿಗೆ ಮಾತನಾಡಿದೆ. ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ. ಆದರೆ ಆ ತಪ್ಪುಗಳಿಂದ ಪಾಠ ಕಲಿಯುವ ಅಗತ್ಯವಿದೆ. ಯಾವ ಶಾಟ್ ಅನ್ನು ಯಾವಾಗ ಆಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆದರೆ ಸ್ವತಃ ರಿಷಬ್ ಕೂಡ ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಧೋನಿ ಸಲಹೆಯನ್ನು ನೆನಪಿಸಿಕೊಂಡ ಕೊಹ್ಲಿ ರಿಷಬ್ ಪಂತ್ ಅವರ ಶಾಟ್ ಆಯ್ಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಧೋನಿಯಿಂದ ಕಲಿತ ಪಾಠಗಳನ್ನು ನೆನಪಿಸಿಕೊಂಡರು. ಕೊಹ್ಲಿ ಪ್ರಕಾರ. ಎರಡು ತಪ್ಪುಗಳ ನಡುವೆ ಕನಿಷ್ಠ ಆರು-ಏಳು ತಿಂಗಳ ಅಂತರ ಇರಬೇಕು ಎಂದು ಧೋನಿ ಹೇಳಿದ್ದರು ಎಂಬುದನ್ನು ಕೊಹ್ಲಿ ನೆನಪಿಸಿಕೊಂಡಿದ್ದಾರೆ.
ವೇಗದ ಬೌಲರ್‌ಗಳಿಗೆ ಪ್ರಶಂಸೆ ನಾನು ಟೆಸ್ಟ್ ನಾಯಕನಾದಾಗ ತಂಡ ಏಳನೇ ಸ್ಥಾನದಲ್ಲಿತ್ತು ಎಂದು ನನಗೆ ನೆನಪಿದೆ. ಆದರೆ ಈಗ ನಾವು ತುಂಬಾ ಬಲಶಾಲಿಯಾಗಿದ್ದೇವೆ. ಇದು ತುಂಬಾ ಕಷ್ಟಕರವಾದ ಪ್ರಯಾಣವಾಗಿದೆ. ನೀವು ಉತ್ಸಾಹದಿಂದ ಆಡದಿದ್ದರೆ ಈ ರೀತಿಯ ಯಶಸ್ಸನ್ನು ಸಾಧಿಸುವುದು ಕಷ್ಟ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ನಮಗೆ ಬೇಕಾದ ಉತ್ಸಾಹ. ನಮ್ಮಲ್ಲಿ ಸಾಕಷ್ಟು ವೇಗದ ಬೌಲರ್‌ಗಳಿದ್ದಾರೆ. ಪ್ರತಿ ಪಂದ್ಯಕ್ಕೂ ಮುನ್ನ ನಾವು ಯಾರೊಂದಿಗೆ ಆಡಬೇಕು ಎಂಬ ಗೊಂದಲದಲ್ಲಿರುತ್ತೇವೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಇದು ಈ ವೇಗಿಗಳ ಕಠಿಣ ಪರಿಶ್ರಮದ ಫಲ. ಟೆಸ್ಟ್ ಕ್ರಿಕೆಟ್‌ನಲ್ಲಿ ನಮ್ಮ ಯಶಸ್ಸಿನ ದೊಡ್ಡ ಗುಟ್ಟು ಈ ವೇಗದ ಬೌಲರ್‌ಗಳು ಎಂದು ನಾನು ಯಾವಾಗಲೂ ಹೇಳುತ್ತೇನೆ ಎಂದಿದ್ದಾರೆ.