ಸ್ಮೃತಿ ಮಂಧಾನ (Smriti Mandhana) ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ 2024 ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್‌ಗಳ ಜಯ ಸಾಧಿಸಿ ಟ್ರೋಫಿ ಎತ್ತಿ ಹಿಡಿಯಿತು. ಆರ್ಸಿಬಿಗೆ ಗೆದ್ದ ತಕ್ಷಣ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ತಮ್ಮ 16 ವರ್ಷಗಳ ಆಸೆಯನ್ನು ಮಹಿಳಾ ತಂಡ ಈಡೇರಿಸಿದ ಖುಷಿ ಅಭಿಮಾನಿಗಳಲ್ಲಿ ಕಂಡುಬಂತು. ಬೆಂಗಳೂರಿನ ಬೀದಿಗಳಲ್ಲಿ ಕೂಡ ಸೆಲೆಬ್ರೇಷನ್ ಜೋರಾಗಿ ನಡೆಯಿತು.
ಸಾಮಾನ್ಯವಾಗಿ ಯೂರೋಪ್ ದೇಶಗಳಲ್ಲಿ ಫುಟ್ ಬಾಲ್ ಪಂದ್ಯ ಗೆದ್ದ ನಂತರ ಕಾಣುವ ಹಾಗೆ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹೆಸರಿನ ಪ್ರತಿಧ್ವನಿಸಿತು. ಆರ್‌ಸಿಬಿ ವಿಜಯವು ಬೆಂಗಳೂರಿನ ಬೀದಿಗಳಲ್ಲಿ ಭಾರಿ ಸಂಭ್ರಮಾಚರಣೆಗೆ ಕಾರಣವಾಯಿತು. ಇದರೊಂದಿಗೆ ಸ್ಟಾರ್ ಕ್ರಿಕೆಟಿಗರು ಕೂಡ ತಮ್ಮ ಶುಭಾಶಯಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಕೋರಿದ್ದಾರೆ. ವಿರಾಟ್ ಕೊಹ್ಲಿ , ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ಇತರರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದು ಇಲ್ಲಿದೆ.
ತನ್ನ ಬಾಯ್ಫ್ರೆಂಡ್ಗಿಂತಲೂ ಶ್ರೀಮಂತೆ ಸ್ಮೃತಿ ಮಂಧಾನ: ವರ್ಷಕ್ಕೆ ಕೋಟಿ ಕೋಟಿ ಹಣ
” Superwomen 🏆👏❤️ ”
Virat Kohli on IG#RCB pic.twitter.com/l8WHjDcvfE
— RCB Xtra. (@Rcb_Xtra) March 17, 2024
Congratulations to the @RCBTweets women’s team for bagging the @wplt20 title. Women’s cricket is well and truly on the rise in India. #TATAWPL #DCvRCB pic.twitter.com/JbbO7PbieC
— Sachin Tendulkar (@sachin_rt) March 17, 2024
Many congratulations RCB on winning the WPL. Great temperament shown in crunch situations and deserving winners. #WPLFinal pic.twitter.com/hbXOfQdZn9
— Virender Sehwag (@virendersehwag) March 17, 2024
RCB-W champions of WPL. Congrats on an outstanding season. Finally Ee Sala Cup Namdu. #WPLFinal @dafabet 🙌🏿
— Chris Gayle (@henrygayle) March 17, 2024
Aaarceeebeeee! ❤️💛
What a fantastic performance! Congratulations to all our girls! 🏆#WPLFinal pic.twitter.com/DzKCxD3por— DK (@DineshKarthik) March 17, 2024
You beauty @RCBTweets 👏👏👏👏👏👏 🏆 #WPL2024
— Glenn Maxwell (@Gmaxi_32) March 17, 2024
ಸ್ಮೃತಿ ಮಂಧಾನ ನೇತೃತ್ವದ ಆರ್‌ಸಿಬಿ ತಂಡ 114 ರನ್‌ಗಳ ಗುರಿಯನ್ನು 19.3 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ ಬೆನ್ನಟ್ಟಿತು. ಬೆಂಗಳೂರು ನಾಯಕಿ ಮಂಧಾನ 31 ರನ್ ಗಳಿಸಿದರು, ಸೋಫಿ ಡಿವೈನ್ 27 ಎಸೆತಗಳಲ್ಲಿ 32 ರನ್‌ಗಳ ಕೊಡುಗೆ ನೀಡಿದರು. ಎಲ್ಲಿಸ್ ಪೆರ್ರಿ 35 ರನ್‌ಗಳೊಂದಿಗೆ ಅಜೇಯರಾಗಿ ಉಳಿದರೆ, ರಿಚಾ ಘೋಷ್ 14 ಎಸೆತಗಳಲ್ಲಿ 17 ರನ್ ಗಳಿಸಿದರು.
ಆರ್‌ಸಿಬಿ ಗೆದ್ದ ತಕ್ಷಣ ಮಂಧಾನಗೆ ಬಂತು ಕೊಹ್ಲಿಯ ವಿಡಿಯೋ ಕಾಲ್: ಏನು ಮಾತಾಡಿದ್ರು?
ಆರ್‌ಸಿಬಿ ಪರ ಶ್ರೇಯಾಂಕಾ ಪಾಟೀಲ್ 3.3 ಓವರ್‌ಗಳಲ್ಲಿ 12 ರನ್ ನೀಡಿ 4 ವಿಕೆಟ್ ಕಬಳಿಸಿದರು ಮತ್ತು ಸೋಫಿ ಮೊಲಿನಿಕ್ಸ್ ನಾಲ್ಕು ಓವರ್‌ಗಳಲ್ಲಿ 20 ರನ್ ನೀಡಿ ಮೂವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಆಶಾ ಸೋಭಾನಾ ಬೌಲಿಂಗ್ನಲ್ಲಿ ಇಬ್ಬರು ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್‌ಗಳು ಔಟಾದರು. ಮಂಧಾನ ಈ ವರ್ಷ 10 ಪಂದ್ಯಗಳಲ್ಲಿ 300 ರನ್ ಗಳಿಸಿ ತಂಡದ ಸ್ಮರಣೀಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ