Virat Kohli: ನೀವು ಕೆಣಕಿದ್ರೆ ಮುಂದೈತೆ ಹಬ್ಬ: ಇಂಗ್ಲೆಂಡ್ ತಂಡಕ್ಕೆ ಕಿಂಗ್ ಕೊಹ್ಲಿ ಎಚ್ಚರಿಕೆ

| Updated By: ಝಾಹಿರ್ ಯೂಸುಫ್

Updated on: Aug 24, 2021 | 9:36 PM

India vs England 3rd Test: ಸಿರಾಜ್ ಅವರ ಪ್ರದರ್ಶನದ ಬಗ್ಗೆ ನನಗೆ ಯಾವುದೇ ಅಚ್ಚರಿಯಿಲ್ಲ. ಆಸ್ಟ್ರೇಲಿಯಾ ಸರಣಿಯಲ್ಲಿನ ಅವರ ಪ್ರದರ್ಶನದಿಂದ ಈಗ ಮತ್ತಷ್ಟು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.

Virat Kohli: ನೀವು ಕೆಣಕಿದ್ರೆ ಮುಂದೈತೆ ಹಬ್ಬ: ಇಂಗ್ಲೆಂಡ್ ತಂಡಕ್ಕೆ ಕಿಂಗ್ ಕೊಹ್ಲಿ ಎಚ್ಚರಿಕೆ
ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ 10 ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಬೇರೆ ಯಾವ ಭಾರತೀಯ ನಾಯಕನೂ ಕೂಡ ಇಷ್ಟೊಂದು ಗೆಲುವಿನ ಸಮೀಪ ತಲುಪಲು ಸಾಧ್ಯವಾಗಿಲ್ಲ ಎಂಬುದು ಇಲ್ಲಿ ವಿಶೇಷ. ಅಂದರೆ, ಇಂಗ್ಲೆಂಡ್​ ವಿರುದ್ದ ಭಾರತದ ಯಾವ ನಾಯಕ ಕೂಡ 5 ಟೆಸ್ಟ್‌ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಕೊಹ್ಲಿ ತಮ್ಮ ನಾಯಕತ್ವದಲ್ಲಿ ಇಂಗ್ಲೆಂಡ್ ವಿರುದ್ಧ ಒಟ್ಟು 18 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 10 ಪಂದ್ಯಗಳನ್ನು ಗೆದ್ದಿದ್ದಾರೆ. ಇನ್ನು 6 ಪಂದ್ಯಗಳನ್ನು ಸೋತಿದ್ದರೆ, 2 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.
Follow us on

ಲೀಡ್ಸ್​ನಲ್ಲಿ (Leeds) ಭಾರತ-ಇಂಗ್ಲೆಂಡ್ (India vs England)​ ನಡುವಣ 3ನೇ ಟೆಸ್ಟ್ ಪಂದ್ಯವು ಇದೀಗ ಕ್ರಿಕೆಟ್ ಪ್ರೇಮಿಗಳ ಕುತೂಹಲದ ಕೇಂದ್ರವಾಗಿ ಮಾರ್ಪಟ್ಟಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್​ನಲ್ಲಿ (The Lord’s) ಆತಿಥೇಯರನ್ನು ಬಗ್ಗು ಬಡಿದು ಟೀಮ್ ಇಂಡಿಯಾ (Team India) ಇದೀಗ ಆತ್ಮ ವಿಶ್ವಾಸದಿಂದ ಪುಟಿದೇಳುತ್ತಿದ್ದಾರೆ. ಅತ್ತ ಇಂಗ್ಲೆಂಡ್ (England) ತಂಡವು ಹೀನಾಯ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿಯೇ 3ನೇ ಪಂದ್ಯದಲ್ಲೂ ಉಭಯ ತಂಡಗಳಿಂದ ರೋಚಕ ಹೋರಾಟ ನಿರೀಕ್ಷಿಸಬಹುದು. ಅದರಲ್ಲೂ ಹೆಡಿಂಗ್ಲೆ (headingley) ಮೈದಾನದಲ್ಲೂ ಆಟಗಾರರ ನಡುವಣ ವಾಕ್ಸಮರ ಮುಂದುವರೆಯುವ ಸೂಚನೆ ನೀಡಿದ್ದಾರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli). 2ನೇ ಟೆಸ್ಟ್​ ಪಂದ್ಯದ ವೇಳೆ ಇಂಗ್ಲೆಂಡ್ ಆಟಗಾರರು ಟೀಮ್ ಇಂಡಿಯಾ ಪ್ಲೇಯರ್​ಗಳನ್ನು ಪದೇ ಪದೇ ಕೆಣಕುವ ಪ್ರಯತ್ನ ಮಾಡಿದ್ದರು. ಇದು ಹೆಡಿಂಗ್ಲೆಯಲ್ಲಿ ಮುಂದುವರೆದರೆ ತಕ್ಕ ಉತ್ತರ ನೀಡುವುದಾಗಿ ವಿರಾಟ್ ಕೊಹ್ಲಿ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಇಂಗ್ಲೆಂಡ್ ತಂಡವು ನಮ್ಮ ತಂಡವನ್ನು ಪ್ರಚೋದಿಸಿದರೆ ಖಂಡಿತವಾಗಿಯೂ ನಾವು ಹಿಂದೆ ಹೆಜ್ಜೆ ಇಡುವುದಿಲ್ಲ. ನಾವು ಕೂಡ ಗೆಲ್ಲಬೇಕೆಂದು ಆಡುತ್ತೇವೆ. ಯಾವುದೇ ವಿಚಾರವನ್ನು ನಾವು ಹಗುರವಾಗಿ ಪರಿಗಣಿಸುವುದಿಲ್ಲ. ನಾವು ಸಹ ಗೆಲ್ಲುವ ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ. ಅದಕ್ಕಾಗಿ ಅವರಂತೆ ನಾವು ಕೂಡ ತಕ್ಕ ಉತ್ತರ ನೀಡಲು ಸಿದ್ಧರಿರುತ್ತೇವೆ. ಈ ಮೂಲಕ ಇಂಗ್ಲೆಂಡ್ ಆಟಗಾರರು ಟೀಮ್ ಇಂಡಿಯಾವನ್ನು ಕೆಣಕಿದರೆ ಅವರದ್ದೇ ಭಾಷೆಯಲ್ಲಿ ಉತ್ತರ ನೀಡಲಿದ್ದೇವೆ ಎಂದು ಕಿಂಗ್ ಕೊಹ್ಲಿ ತಿಳಿಸಿದ್ದಾರೆ.

ಲಾರ್ಡ್ಸ್​ನಲ್ಲಿನ ಪಂದ್ಯದಲ್ಲಿ ಜೇಮ್ಸ್ ಅ್ಯಂಡರ್ಸನ್, ಓಲಿ ರಾಬಿನ್ಸನ್, ಮಾರ್ಕ್ ವುಡ್ ಹಾಗೂ ಜೋಸ್ ಬಟ್ಲರ್ ಟೀಮ್ ಇಂಡಿಯಾ ಆಟಗಾರರನ್ನು ಪದೇ ಪದೇ ಕೆಣಕ್ಕಿದ್ದರು. ಅದರಲ್ಲೂ ಕೊಹ್ಲಿಯನ್ನು ಅಂಡರ್ಸನ್ ಹಲವು ಬಾರಿ ಗುರಿಯಾಗಿಸಿಕೊಂಡಿದ್ದರು. ಇನ್ನು ಇಂಗ್ಲೆಂಡ್ ಪ್ರೇಕ್ಷಕರು ಸಹ ಕೆಎಲ್ ರಾಹುಲ್ ಮೇಲೆ ಬಾಟಲ್ ಕಾರ್ಕ್ ಎಸೆದು ದುರ್ವತನೆ ತೋರಿದ್ದರು. ಮೈದಾನದಲ್ಲಿ ಇಂತಹ ಕೆಣಕುವಿಕೆ ಮುಂದುವರೆದರೆ ನೀವು ಕೂಡ ಅದೇ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ವಿರಾಟ್ ಕೊಹ್ಲಿ ಪರೋಕ್ಷವಾಗಿ ತಿಳಿಸಿದ್ದಾರೆ.

ಇದೇ ವೇಳೆ ನಾವು ಯಾವುದೇ ತಂಡವನ್ನು ಎಲ್ಲಿ ಬೇಕಾದರೂ ಸೋಲಿಸಬಹುದು. ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ನ ಪ್ರದರ್ಶನವೂ ಉತ್ತಮವಾಗಿದೆ. ನಮ್ಮ ತಂಡ ಇಲ್ಲಿಯವರೆಗೆ ಹೆಡಿಂಗ್ಲೆ ಪಿಚ್​ನಲ್ಲಿ ಯಾವುದೇ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಆದರೆ ನಾವು ಜಗತ್ತಿನ ಯಾವುದೇ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸುವ ಸಾಮರ್ಥ್ಯ ನಮ್ಮ ತಂಡಕ್ಕಿದೆ. ಹೀಗಾಗಿ ಲೀಡ್ಸ್​ನಲ್ಲೂ ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಇಂಗ್ಲೆಂಡ್ ಪಿಚ್​ಗಳ ಬಗ್ಗೆ ಮಾತನಾಡಿದ ಕಿಂಗ್ ಕೊಹ್ಲಿ, ಆಂಗ್ಲರ ನಾಡಲಲ್ಲಿ ನಿಮ್ಮ ಅಹಂಕಾರವನ್ನು ಜೇಬಿನಲ್ಲಿ ಇಟ್ಟುಕೊಳ್ಳಬೇಕು. ಏಕೆಂದರೆ ಇಂಗ್ಲೆಂಡಿನಲ್ಲಿ ಯಾವುದಕ್ಕೂ ಖಾತರಿ ಇಲ್ಲ. ನೀವು ತಾಳ್ಮೆಯಿಂದಿರಬೇಕು. ನೀವು ಎಷ್ಟು ಅನುಭವಿ, ಎಷ್ಟು ರನ್ ಗಳಿಸಿದ್ದೀರಿ ಎಂಬುದು ಮುಖ್ಯವಲ್ಲ. ನೀವು ಮಾಡುವ ಸಣ್ಣ ತಪ್ಪಿನಿಂದ ಔಟ್ ಆಗುತ್ತೀರಿ. ಹೀಗಾಗಿ ಈ ಹಿಂದಿನ ದಾಖಲೆಗಳನ್ನು ಮರೆತು ಅಹಂ ಅನ್ನು ಅದುಮಿಟ್ಟು ಇಂಗ್ಲೆಂಡ್​ನಲ್ಲಿ ಆಡಬೇಕಾಗುತ್ತದೆ ಎಂದು ಟೀಮ್ ಇಂಡಿಯಾ ನಾಯಕ ತಿಳಿಸಿದರು.

ಇನ್ನು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ವಿರಾಟ್ ಕೊಹ್ಲಿ, ಸಿರಾಜ್ ಅವರ ಪ್ರದರ್ಶನದ ಬಗ್ಗೆ ನನಗೆ ಯಾವುದೇ ಅಚ್ಚರಿಯಿಲ್ಲ. ಆಸ್ಟ್ರೇಲಿಯಾ ಸರಣಿಯಲ್ಲಿನ ಅವರ ಪ್ರದರ್ಶನದಿಂದ ಈಗ ಮತ್ತಷ್ಟು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಇದರಿಂದ ಅವರ ಬೌಲಿಂಗ್ ಗುಣಮಟ್ಟ ಕೂಡ ಹೆಚ್ಚಾಗಿದೆ ಎಂದು ಕೊಹ್ಲಿ ತಿಳಿಸಿದರು.

ಇದನ್ನೂ ಓದಿ: India vs England 3rd Test: ಪಿಚ್ ನೋಡಿ ಕೊಹ್ಲಿಗೆ ಶಾಕ್: ತಂಡದಲ್ಲಿ ಪ್ರಮುಖ ಬದಲಾವಣೆ ಸಾಧ್ಯತೆ

ಇದನ್ನೂ ಓದಿ: IPL 2021: ಮುಂಬೈ ಇಂಡಿಯನ್ಸ್​ ಸೇರಿದಂತೆ ನಾಲ್ಕು ತಂಡಗಳು ಫೈನಲ್

ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!

(virat kohli says team will not take a backward step when provoked)