Virat Kohli: ಶ್ರೇಯಸ್ ಅಯ್ಯರ್ ಔಟ್ ಮಾಡಲು ಎದುರಾಳಿ ತಂಡದ ಬೌಲರ್​ಗೆ ಟಿಪ್ಸ್ ನೀಡಿದ ಕೊಹ್ಲಿ

| Updated By: Vinay Bhat

Updated on: Jun 24, 2022 | 9:09 AM

India vs Leicestershire: ಭಾರತ ಹಾಗೂ ಲೀಸೆಸ್ಟರ್ಷೈರ್ ನಡುವಣ ಅಭ್ಯಾಸ ಪಂದ್ಯದಲ್ಲಿ ವಿಶೇಷ ಘಟನೆಯೊಂದು ನಡೆಯಿತು. ವಿರಾಟ್ ಕೊಹ್ಲಿ ತನ್ನದೇ ತಂಡದ ಬ್ಯಾಟರ್ ಅನ್ನು ಔಟ್ ಮಾಡಲು ಎದುರಾಳಿ ಬೌಲರ್​ಗೆ ಕೆಲ ಟಿಪ್ಸ್ ನೀಡಿದರು. ಇದರ ವಿಡಿಯೋ ವೈರಲ್ ಆಗುತ್ತಿದೆ.

Virat Kohli: ಶ್ರೇಯಸ್ ಅಯ್ಯರ್ ಔಟ್ ಮಾಡಲು ಎದುರಾಳಿ ತಂಡದ ಬೌಲರ್​ಗೆ ಟಿಪ್ಸ್ ನೀಡಿದ ಕೊಹ್ಲಿ
Virat Kohli Prasidh Krishna and Shreyas
Follow us on

ಮರುನಿಗದಿಯಾಗಿರುವ ಭಾರತ ಹಾಗೂ ಇಂಗ್ಲೆಂಡ್ (IND vs ENG) ನಡುವಣ ಐದನೇ ಟೆಸ್ಟ್ ಪಂದ್ಯ ಜುಲೈ 1 ರಿಂದ ಪ್ರಾರಂಭವಾಗಲಿದ್ದು ಇದಕ್ಕೂ ಮುನ್ನ ಟೀಮ್ ಇಂಡಿಯಾ (Team India) ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಇಂಗ್ಲೆಂಡ್ ವಾತಾವರಣವನ್ನು ಅರಿಯಲು ಲೀಸೆಸ್ಟರ್ಷೈರ್ ವಿರುದ್ಧ ರೋಹಿತ್ ಶರ್ಮಾ ಪಡೆ ನಾಲ್ಕು ದಿನಗಳ ಪ್ರ್ಯಾಕ್ಟೀಸ್ ಮ್ಯಾಚ್ ಶುರುವಾಗಿದ್ದು ಮೊದಲ ದಿನವೇ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಅನುಭವಿ ಸ್ಟಾರ್ ಆಟಗಾರರು ಪೆವಿಲಿಯನ್ ಸೇರಿಕೊಂಡರೆ ಏಕಾಂಗಿ ಹೋರಾಟ ನಡೆಸಿದ ಶ್ರೀಕರ್ ಭರತ್ (KS Bharat) 111 ಎಸೆತಗಳಲ್ಲಿ 8 ಫೋರ್, 1 ಸಿಕ್ಸರ್​​ನೊಂದಿಗೆ 70 ರನ್ ಗಳಿಸಿ ಕ್ರೀಸ್​​ನಲ್ಲಿದ್ದರೆ, ಶಮಿ 26 ಎಸೆತಗಳಲ್ಲಿ 18 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ದಿನದಾಟದ ಅಂತ್ಯಕ್ಕೆ 60.2 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 246 ರನ್ ಕಲೆಹಾಕಿದೆ.

ಇದರ ನಡುವೆ ಈ ಪಂದ್ಯದಲ್ಲಿ ವಿಶೇಷ ಘಟನೆಯೊಂದು ನಡೆಯಿತು. ವಿರಾಟ್ ಕೊಹ್ಲಿ ತನ್ನದೇ ತಂಡದ ಬ್ಯಾಟರ್ ಅನ್ನು ಔಟ್ ಮಾಡಲು ಎದುರಾಳಿ ಬೌಲರ್​ಗೆ ಕೆಲ ಟಿಪ್ಸ್ ನೀಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಪಂದ್ಯದಲ್ಲಿ ಭಾರತದ ವಿಕೆಟ್‌ಕೀಪರ್ ರಿಷಭ್ ಪಂತ್, ಚೇತೇಶ್ವರ್ ಪೂಜಾರ, ಜಸ್‌ಪ್ರೀತ್ ಬೂಮ್ರಾ ಮತ್ತು ಪ್ರಸಿದ್ಧ ಕೃಷ್ಣ ಅವರು ಲೀಸಿಸ್ಟರ್ ತಂಡವನ್ನು ಪ್ರತಿನಿಧಿಸಿದ್ದಾರೆ. ಪಂದ್ಯದ 19ನೇ ಓವರ್​ ಅಂತ್ಯದ ವೇಳೆ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಕ್ರೀಸ್​ನಲ್ಲಿದ್ದರು. 20ನೇ ಓವರ್ ಬೌಲಿಂಗ್ ಮಾಡಲು ಪ್ರಸಿದ್ಧ್ ತಯಾರಿ ನಡೆಸುತ್ತಿದ್ದರು.

ಇದನ್ನೂ ಓದಿ
ENG vs NED: ಮುಟ್ಟಿದ್ದೆಲ್ಲ ಚಿನ್ನ; ಧೋನಿ ಹೆಸರಿನಲ್ಲಿದ್ದ 17 ವರ್ಷಗಳ ಹಳೆಯ ದಾಖಲೆ ಮುರಿದ ಬಟ್ಲರ್..!
IND vs LEI: ಜೋ ರೂಟ್ ಮ್ಯಾಜಿಕ್ ಕಾಪಿ ಮಾಡುವಲ್ಲಿ ಕೊಹ್ಲಿ ವಿಫಲ; ವಿಡಿಯೋ ಸಖತ್ ವೈರಲ್
Tribute: ಅಗಲಿದ ಪಂಜಾಬಿ ಗಾಯಕ ಸಿಧು ಮೂಸೇವಾಲಗೆ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಿದ ಸರ್ಫರಾಜ್; ವಿಡಿಯೋ
Ranji Trophy Final 2022: ಎರಡನೇ ದಿನದಾಟ ಅಂತ್ಯ; ಸರ್ಫರಾಜ್ ಶತಕ, ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದ ಮಧ್ಯಪ್ರದೇಶ

KS Bharat: ಭಾರತದ ಮಾನ ಉಳಿಸಿದ ಭರತ್: ಕೊಹ್ಲಿ-ರೋಹಿತ್ ವೈಫಲ್ಯದ ನಡುವೆ ತೊಡೆತಟ್ಟಿನಿಂತ ಶ್ರೀಕರ್

ಈ ಸಂದರ್ಭ ನಾನ್ ಸ್ಟ್ರೈಕರ್​ನಲ್ಲಿದ್ದ ಕೊಹ್ಲಿ ಪ್ರಸಿದ್ಧ್ ಕೃಷ್ಣ ಅವರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಅಯ್ಯರ್ ಅವರನ್ನು ಔಟ್ ಮಾಡಲು ಹೀಗೆ ಮಾಡು ಎಂಬ ಟ್ರಿಕ್ ಹೇಳಿಕೊಟ್ಟಿದ್ದಾರೆ. ಇಲ್ಲಿ ಅಚ್ಚರಿ ಎಂಬಂತೆ ಮುಂದಿನ ಎಸೆತದಲ್ಲೇ ಶ್ರೇಯಸ್ ಅವರು ಕೃಷ್ಣ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಮೂಲಕ ಅಯ್ಯರ್ ಸೊನ್ನೆ ಸುತ್ತಿದರು. ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು ಕೊಹ್ಲಿ ಸಲಹೆಯಿಂದಲೇ ಅಯ್ಯರ್ ಔಟಾಗಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

 

ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಓಪನರ್​​ಗಳಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಮೊದಲ ವಿಕೆಟ್​ಗೆ 35 ರನ್​ಗಳ ಕಾಣಿಕೆ ನೀಡಿದರಷ್ಟೆ. 28 ಎಸೆತಗಳಲ್ಲಿ 21 ರನ್ ಗಳಿಸಿ ಗಿಲ್ ಔಟಾದರೆ, 47 ಎಸೆತಗಳಲ್ಲಿ 25 ರನ್ ಗಳಿಸಿ ಹಿಟ್​ಮ್ಯಾನ್ ಪೆವಿಲಿಯನ್ ಸೇರಿಕೊಂಡರು. ಹನುಮಾ ವಿಹಾರಿ ಆಟ ಕೇವಲ 3 ರನ್​ಗೆ ಅಂತ್ಯವಾಯಿತು. ಭರವಸೆ ಮೂಡಿಸಿದ್ದ ವಿರಾಟ್ ಕೊಹ್ಲಿ 69 ಎಸೆತಗಳನ್ನು ಎದುರಿಸಿದ ಕೊಹ್ಲಿ 4 ಫೋರ್, 1 ಸಿಕ್ಸರ್​ನೊಂದಿಗೆ 33 ರನ್​ಗೆ ಔಟಾದರು.

ಶ್ರೇಯಸ್ ಅಯ್ಯರ್ ಕಳಪೆ ಫಾರ್ಮ್ ಮುಂದುವರೆಸಿ ಸೊನ್ನೆ ಸುತ್ತಿದರು. ರವೀಂದ್ರ ಜಡೇಜಾ ಕೂಡ 13 ರನ್​​ಗೆ ಸುಸ್ತಾದರು. ಈ ಸಂದರ್ಭ ಕ್ರೀಸ್​ಗೆ ಬಂದ ಶ್ರೀಕರ್ ಭರತ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ಆದರೆ, ಶಾರ್ದೂಲ್ ಥಾಕೂರ್(6) ಇವರಿಗೆ ಸಾಥ್ ನೀಡಲಿಲ್ಲ. ಉಮೇಶ್ ಯಾದವ್ 23 ರನ್ ಗಳಿಸಿ ಕೆಲಹೊತ್ತು ಕ್ರೀಸ್​​ನಲ್ಲಿದ್ದರು. ಇದೀಗ ಮೊಹಮ್ಮದ್ ಶಮಿ (18*) ಜೊತೆಯಾಗಿರುವ ಭರತ್ (70*)​ ಭಾರತಕ್ಕೆ ರನ್ ಕೊಡುಗೆ ನೀಡುತ್ತಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 8 ವಿಕೆಟ್ ನಷ್ಟಕ್ಕೆ 246 ರನ್ ಕಲೆಹಾಕಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:09 am, Fri, 24 June 22