Virender Sehwag: ಜಡೇಜಾರನ್ನು ನಾಯಕನಾಗಿ ಮಾಡಿದ್ದು ಸಿಎಸ್​ಕೆಯ ತಪ್ಪು ನಿರ್ಧಾರ ಎಂದ ಸೆಹ್ವಾಗ್

| Updated By: Vinay Bhat

Updated on: May 06, 2022 | 12:09 PM

CSK, IPL 2022: ಸಿಎಸ್​ಕೆ ನಾಯಕತ್ವದಲ್ಲಿ ಮಾಡಿದ ಬದಲಾವಣೆ ಕುರಿತು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ (Virender Sehwag) ಮಾತನಾಡಿದ್ದು, ಜಡೇಜಾ ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದು ಮ್ಯಾನೇಜ್​ಮೆಂಟ್​ ಮಾಡಿದ ಮೊದಲ ತಪ್ಪು ಎಂದು ಹೇಳಿದ್ದಾರೆ.

Virender Sehwag: ಜಡೇಜಾರನ್ನು ನಾಯಕನಾಗಿ ಮಾಡಿದ್ದು ಸಿಎಸ್​ಕೆಯ ತಪ್ಪು ನಿರ್ಧಾರ ಎಂದ ಸೆಹ್ವಾಗ್
Virender Sehwag MS Dhoni and Jadeja
Follow us on

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಚೆನ್ನೈ ಸೂಪರ್ ಕಿಂಗ್ಸ್​ (Chennai Super Kings) ತಂಡ ಬಹುತೇಕ ಹೊರಬಿದ್ದಿದೆ. ಪ್ಲೇ ಆಫ್​ಗೇರಲು ಉಳಿದಿರುವ ಎಲ್ಲ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆದ್ದರೆ ಮಾತ್ರ ಸಾಲದು. ಇತರೆ ತಂಡಗಳ ಸೋಲು-ಗೆಲುವಿನ ಲೆಕ್ಕಚಾರದ ಮೇಲೆ ಸಿಎಸ್​ಕೆ ಭವಿಷ್ಯ ನಿಂತಿದೆ. ಅದು ಅಸಾಧ್ಯ ಎಂದೇ ಹೇಳಬಹುದು. ಚೆನ್ನೈ ತಂಡ ಟೂರ್ನಿ ಆರಂಭಕ್ಕೆ ಒಂದು ದಿನ ಇರುವಾಗ ಬಹುದೊಡ್ಡ ಬದಲಾವಣೆ ಮಾಡಿತು. ಇದುವೇ ತಂಡದ ಹಿನ್ನಡೆಗೆ ಕಾರಣವಾಯಿತು ಎಂಬುದು ಅನೇಕರ ವಾದ. ಎಂಎಸ್ ಧೋನಿ (MS Dhoni) ನಾಯಕತ್ವದಿಂದ ಕೆಳಗಿಳಿದು ರವೀಂದ್ರ ಜಡೇಜಾ ಕ್ಯಾಪ್ಟನ್ ಪಟ್ಟ ತೊಟ್ಟರು. ಆದರೆ, ಇವರ ನಾಯಕತ್ವದಲ್ಲಿ ಸಿಎಸ್​ಕೆ ಬರೀ ಸೋಲನ್ನೇ ಕಂಡಿತು.  ಇದೀಗ ಸೂಪರ್ ಕಿಂಗ್ಸ್​ ನಾಯಕತ್ವದಲ್ಲಿ ಮಾಡಿದ ಬದಲಾವಣೆ ಕುರಿತು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ (Virender Sehwag) ಮಾತನಾಡಿದ್ದು, ಜಡೇಜಾ ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದು ಮ್ಯಾನೇಜ್​ಮೆಂಟ್​ ಮಾಡಿದ ಮೊದಲ ತಪ್ಪು ಎಂದು ಹೇಳಿದ್ದಾರೆ.

ಕ್ರಿಕ್ ಬುಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಸೆಹ್ವಾಗ್, “ಟೂರ್ನಿ ಆರಂಭದಲ್ಲಿ ಎಂಎಸ್ ಧೋನಿ ನಾಯಕರಾಗುವುದಿಲ್ಲ. ರವೀಂದ್ರ ಜಡೇಜಾ ನೂತನ ನಾಯಕ ಎಂದು ಘೋಷಿಸುವ ಮೂಲಕ ಚೆನ್ನೈ ಮೊದಲ ತಪ್ಪು ಮಾಡಿತು. ನನ್ನ ಪ್ರಕಾರ ಒಂದು ವೇಳೆ ರವೀಂದ್ರ ಜಡೇಜಾ ಅವರನ್ನೇ ನಾಯಕ ಎಂದು ತೀರ್ಮಾನಿಸಿದ್ದಾರೆ ಎಂದ ಮೇಲೆ ಇನ್ನುಳಿದ ಪಂದ್ಯಗಳಲ್ಲೂ ಜಡೇಜಾ ಅವರೇ ನಾಯಕರಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಬೇಕಿತ್ತು,” ಎಂಬುದು ಸೆಹ್ವಾಗ್ ಮಾತು.

“ಸಿಎಸ್‌ಕೆಗೆ ಸೆಟಲ್ ಪ್ಲೇಯಿಂಗ್ ಇಲೆವೆನ್ ಇರಲಿಲ್ಲ. ಆರಂಭದಲ್ಲಿ ರುತುರಾಜ್ ಗಾಯಕ್ವಾಡ್ ರನ್ ಗಳಿಸಲಿಲ್ಲ. ಉಳಿದ ಬ್ಯಾಟರ್‌ಗಳು ರನ್ ಗಳಿಸಲಿಲ್ಲ. ಒಂದು ಪಂದ್ಯದಲ್ಲಿ ಎಂಎಸ್ ಧೋನಿ ಸ್ಕೋರ್ ಮಾಡಿದರು, ಇನ್ನೊಂದು ಪಂದ್ಯದಲ್ಲಿ ಗಾಯಕ್ವಾಡ್ ಸ್ಕೋರ್ ಮಾಡಿದರು. ಕೊನೆಯ ಪಂದ್ಯದಲ್ಲಿ ಧೋನಿ ಬೌಂಡರಿ ಬಾರಿಸಿದ ಪಂದ್ಯ, ಕಳಪೆಯಾಗಿ ಶುರುಮಾಡಿದ್ದರು. ಬಹುತೇಕ ಸೋತಿತ್ತು, ಆದರೆ ಅದೃಷ್ಟದಿಂದ ಗೆಲುವು ಸಾಧಿಸಿತು. ಸೀಸನ್‌ನ ಆರಂಭದಿಂದಲೂ ಎಂಎಸ್ ಧೋನಿ ನಾಯಕನಾಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಮತ್ತು ಬಹುಶಃ ಸಿಎಸ್‌ಕೆಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ,” ಎಂದು ಸೆಹ್ವಾಗ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ
IPL 2022 Points Table: ಐದನೇ ಸ್ಥಾನಕ್ಕೆ ಜಿಗಿದ ಡೆಲ್ಲಿ: ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?
ಕರ್ನಾಟಕ ಹಾಕಿ ತಂಡಕ್ಕೆ ಹಾಸನದ ಏಳು ಆಟಗಾರ್ತಿಯರು ಆಯ್ಕೆ
GT vs MI, IPL 2022: ಗುಜರಾತ್​ಗೆ ಶಾಕ್ ನೀಡುತ್ತಾ ಮುಂಬೈ?: ಅರ್ಜುನ್ ತೆಂಡೂಲ್ಕರ್ ಪದಾರ್ಪಣೆ ಸಾಧ್ಯತೆ
Kane Williamson: ಡೆಲ್ಲಿ ವಿರುದ್ಧದ ಪಂದ್ಯದ ಬಳಿಕ ಕೇನ್ ವಿಲಿಯಮ್ಸನ್ ಸೋಲಿಗೆ ನೀಡಿದ ಕಾರಣವೇನು ಗೊತ್ತೇ?

15ನೇ ಆವೃತ್ತಿಯ ಐಪಿಎಲ್‌ನ ಆರಂಭಿಕ 8 ಪಂದ್ಯಗಳಲ್ಲಿ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. 8 ಪಂದ್ಯಗಳಲ್ಲಿ ಸಿಎಸ್‌ಕೆ ಕೇವಲ 2 ಪಂದ್ಯಗಳಲ್ಲಿ ಮಾತ್ರ ಜಯ ಗಳಿಸಿತ್ತು. ಇದರ ಬೆನ್ನಲ್ಲೇ ಆಟದ ಮೇಲೆ ಗಮನ ಕೊಡುವ ಉದ್ದೇಶದಿಂದ ರವೀಂದ್ರ ಜಡೇಜಾ ತಮ್ಮ ನಾಯಕತ್ವವನ್ನು ಧೋನಿಗೆ ವರ್ಗಾಯಿಸಿದ್ದರು. ಧೋನಿ ನೇತೃತ್ವದಲ್ಲಿ ಸಿಎಸ್‌ಕೆ ಎರಡು ಪಂದ್ಯಗಳನ್ನಾಡಿ ಒಂದು ಗೆಲುವು ಹಾಗೂ ಒಂದು ಸೋಲು ಕಂಡಿದೆ. ಅತ್ತ ಜಡೇಜಾ ತಮ್ಮ ವೈಯಕ್ತಿಕ ಆಟದ ಮೇಲೆ ಕೇಂದ್ರೀಕರಿಸಲು ಈ ನಿರ್ಧಾರ ತೆಗೆದುಕೊಂಡರೂ ಮತ್ತೆ ವಿಫಲರಾಗುತ್ತಿದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:08 pm, Fri, 6 May 22